HD Devegowda: ಸುಮಲತಾ ಜ್ಯೋತಿಷಿಯ ಜೆಡಿಎಸ್​ ಭವಿಷ್ಯ ನುಡಿಯೋಕೆ; ಎಚ್​ಡಿ ದೇವೇಗೌಡ

ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಇದೇ ಸುದ್ದಿಯನ್ನ ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುವ ರೀತಿ ಇದೆ. ಇದನ್ನೇ ಒಂದು ಅಸ್ತ್ರ ಮಾಡಿಕೊಂಡಿದ್ದಾರೆ.

ಹೆಚ್.ಡಿ. ದೇವೇಗೌಡ

ಹೆಚ್.ಡಿ. ದೇವೇಗೌಡ

  • Share this:
    ಬೆಂಗಳೂರು (ಜು. 7): ಸಂಸದೆ ಸುಮಲತಾ ಮತ್ತು ಮಾಜಿ ಸಿಎಂ ಕುಮಾರಸ್ವಾಮಿ ನಡುವಿನ ವಾಕ್ಸಮರ ಮುಂದುವರೆದಿದ್ದು, ಇಬ್ಬರ ನಡುವೆ ಇದೀಗ ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಕೂಡ ಮಾತನಾಡಿದ್ದಾರೆ. ಮಾಜಿ ಪ್ರಧಾನಿ ಎಚ್​ಡಿ ದೇವೇಗೌಡ ಅವರು ಕಷ್ಟ ಪಟ್ಟು ಕಟ್ಟಿರುವ ಪಕ್ಷವನ್ನು ಉಳಿಸುವುದು ಕೇವಲ ಸಂಸದ ಪ್ರಜ್ವಲ್​ ರೇವಣ್ಣ ಮಾತ್ರ. ಹಾಸನ ಸಂಸದರನ್ನು ನೋಡಿ ಮಾಜಿ ಸಿಎಂ ಸಂಸ್ಕಾರ ಕಲಿಯಬೇಕು ಎಂದು ಸುಮಲತಾ ಕುಮಾರಸ್ವಾಮಿಗೆ ತಿವಿದಿದ್ದರು. ಇದಕ್ಕೆ ತಿರುಗೇಟು ನೀಡಿರುವ ಜೆಡಿಎಸ್​ ವರಿಷ್ಠ ದೇವೇಗೌಡ ಅವರು, ಸಂಸದೆ ಸುಮಲತಾ ಏನು ಜ್ಯೊತಿಷಿನಾ ಪಕ್ಷದ ಭವಿಷ್ಯದ ಬಗ್ಗೆ ಮಾತನಾಡಲು ಎಂದು ಪ್ರಶ್ನಿಸಿದ್ದಾರೆ. ಅಲ್ಲದೇ ಅವರು, ಜ್ಯೋತಿಷಿ ಆಗಿದ್ದರೆ ಅವರ ಮಾತು ಕೇಳಬಹುದಿತ್ತು ಎಂದು ತಿರುಗೇಟು ನೀಡಿದ್ದಾರೆ.

    ಇಬ್ಬರ ವಾಕ್ಸಮರದ ಕುರಿತು ಮಾತನಾಡಿರುವ ಅವರು, ನಾನು ಈ ಮಧ್ಯೆ ಮಾತನಾಡುವುದಿಲ್ಲ. ನನಗೆ ಎಲ್ಲ ವಿಚಾರವೂ ಗೊತ್ತಿದೆ. ಅಕ್ರಮ ಗಣಿಗಾರಿಕೆ, ಜಲಾಶಯದ ಬಿರುಕು ಕುರಿತು ನಾನು ಯಾವುದೇ ಹೇಳಿಕೆ ನೀಡುವುದಿಲ್ಲ. ಚುನಾವಣೆ ಇನ್ನೂ ಸಾಕಷ್ಟು ದೂರ ಇದೆ. ಈಗಲೇ ಆ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದಿದ್ದಾರೆ.

    ಇದೇ ವೇಳೆ ಕೇಂದ್ರ ಸಚಿವ ಸಂಪುಟ ವಿಸ್ತರಣೆ ನಡೆಯುತ್ತಿದ್ದು, ರಾಜ್ಯದ ನಾಲ್ವರು ಮೋದಿ ಸಂಪುಟದಲ್ಲಿ ಸ್ಥಾನ ಪಡೆಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಅವರು, ರಾಜ್ಯದ ಸಂಸದರಿಗೆ ಅವಕಾಶ ಕೊಟ್ಟಿದ್ದ ಒಳ್ಳೆಯದು, ಅವರು ಕೆಲಸ ಮಾಡಲಿ ಎಂದು ಹಾರೈಸಿದರು.

    ಮೊದಲು ಸಂಸದರಾಗಿ ಜವಾಬ್ದಾರಿ ಮೆರೆಯಲಿ; ನಿಖಿಲ್​ ಕಿಡಿ

    ಇನ್ನು ಇದೇ ವೇಳೆ ರಾಮನಗರದಲ್ಲಿ ಸುಮಲತಾ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್​ ಕುಮಾರಸ್ವಾಮಿ, ನಮ್ಮ ಸಂಸ್ಕ್ಱತಿಯನ್ನ ರಾಜ್ಯದ ಜನರು ಅರ್ಥ ಮಾಡಿಕೊಂಡಿದ್ದಾರೆ. ಹಾಗಾಗಿ ಬೇರೆಯವರಿಂದ ನಾವು ಕಲಿಯಬೇಕಿಲ್ಲ. ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಗಮನಿಸುತ್ತಿದ್ದೇನೆ. ಇದೇ ಸುದ್ದಿಯನ್ನ ಇಟ್ಟುಕೊಂಡು ಮುಂದಿನ ಚುನಾವಣೆಯಲ್ಲಿಯೂ ಸ್ಪರ್ಧೆ ಮಾಡುವ ರೀತಿ ಇದೆ. ಇದನ್ನೇ ಒಂದು ಅಸ್ತ್ರ ಮಾಡಿಕೊಂಡಿದ್ದಾರೆ. ಮುಂದಿನ ಚುನಾವಣೆ ಇನ್ನು ದೂರ ಇದೆ. ಅವರು ಹಾಲಿ ಸಂಸದರಾಗಿದ್ದಾರೆ, ಮೊದಲು ಆ ಜವಾಬ್ದಾರಿಯನ್ನ ನಿರ್ವಹಿಸಲಿ ಎಂದು ಕಿಡಿಕಾರಿದರು.

    ಇದನ್ನು ಓದಿ: ಕೇಂದ್ರ ಸಂಪುಟಕ್ಕೆ ಶೋಭಾ ಕರಂದ್ಲಾಜೆ? ಕೇಂದ್ರ ಸಚಿವ ಡಿವಿ ಸದಾನಂದ ಗೌಡಗೆ ಕೊಕ್?

    ಯಾರು ಏನೇ ಹೇಳಿಕೆ ನೀಡಿದರು ಕೇರ್​ ಮಾಡಲ್ಲ; ಸುಮಲತಾ

    ಈ ಟೀಕೆಗೆ ಮಂಡ್ಯದ ಇಂಡವಾಳು ಅಲ್ಲಿ ಪ್ರತಿಕ್ರಿಯಿಸಿರುವ ಸುಮಲತಾ, ಯಾರನ್ನು ನಾನು ಮೆಚ್ಚಿಸುವ ಕೆಲಸ ಮಾಡಲ್ಲ. ಯಾರು ಏನೇ ಹೇಳಿಕೆ ಕೊಟ್ಟರು ನಾನು ಕೇರ್ ಮಾಡಲ್ಲ. ಕದ್ದು ಮುಚ್ಚಿ ರಾತ್ರಿ ವೇಳೆ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಹಲವು ಬಾರಿ ಜೋರಾದ ಶಬ್ದ ಅಲ್ಲಿಂದ ಕೇಳಿಬಂದಿದೆ. ಜನ ನನ್ನನ್ನ ಕೇಳುವಾಗ ನಾನು ಕ್ರಮ ತೆಗೆದುಕೊಳ್ಳಬಾರದ ಎಂದು ಪ್ರಶ್ನಿಸಿದರು. ಶಾಸಕರು ಮಾಡಬೇಕಾದ ಕೆಲಸ ಇದು. ಅವರು ಮಾಡದೇ ಇದ್ದಾಗ ನಾನು ಮಾಡಬಾರದಾ. ಅಕ್ರಮ ಗಣಿಗಾರಿಕೆ ಬಗ್ಗೆ ಮಾತ್ರ ನನ್ನ ವಿರೋಧ ಇದೆ. ಸರ್ಕಾರದ ಮೋಸ ಮಾಡಿ ಗಣಿಗಾರಿಕೆ ಮಾಡುತ್ತಿದ್ದರೆ ಲಕ್ಷಾಂತರ ಜೀವಗಳಿಗೆ ಈ ದುಡ್ಡು ಹೋಗುತ್ತಿಲ್ಲ ಉಳ್ಳವರಿಗೆ ಹೋಗುತ್ತಿದೆ. ಪರಿಸರಕ್ಕೆ ನಷ್ಟ ಆಗುತ್ತಿದೆ. ಕೆಆರ್​ಎಸ್​ಗೆ ಅನಾಹುತ ಆಗಲು ಬಿಡಲ್ಲ. ಇದರ ಬಗ್ಗೆ ತೀರ್ಮಾನ ಆಗೋವರೆಗೂ ನನ್ನ ಹೋರಾಟ ಎಂದರು.

    ನಾನು ಹೆದರಿಸಿ ಹೋರಾಡಿದವಳು. ಸಿಎಂ ಮಗ, 8ಜನ ಎಂಎಲ್ಎ ಗಳ ವಿರುದ್ಧ ಹೋರಾಡಿ ಗೆದ್ದವಳು ನಾನು. ನಮ್ಮ ಬಳಿ ಮಿಸೈಲ್ಸ್ ಇವೆ, ಬಾಂಬ್ ಇವೆ ಅಂತೀರಾ.? ಇದು ಜನಪ್ರತಿನಿಧಿಗಳು ಆಡುವ ಮಾತಾ ಇದು. ನಿಮ್ಮ ಮಾತುಗಳಿಂದ ಜನ ಮೋಸ ಹೋಗ್ತಾರೆ ಅಂದುಕೊಂಡಿದ್ದರೆ ಸಾಧ್ಯವಿಲ್ಲ. ನನಗೆ ದೇವೇಗೌಡರ ಕುಟುಂಬ ಹೊಡೆದು ಯಾವ ಲಾಭವೂ ಇಲ್ಲ ಎಂದು ತಿಳಿಸಿದರು
    Published by:Seema R
    First published: