ನೆಹರು ವಿಚಾರವಾಗಿ ಲಘುವಾಗಿ ಮಾತನಾಡೋದು ಸರಿಯಲ್ಲ: ಸಿ.ಟಿ.ರವಿಗೆ ಕುಮಾರಸ್ವಾಮಿ ತಿರುಗೇಟು

ನಮ್ಮ ದೇಶದ ಸ್ವಾತಂತ್ರ್ಯ ವಿಚಾರದಲ್ಲಿ ಅತಿ ಹೆಚ್ಚು ಜೈಲುವಾಸವನ್ನ ನೆಹರು ಅವರು ಅನುಭವಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಹಲವು ಸವಾಲುಗಳಿತ್ತು.  ಅವರು ಪ್ರಧಾನಮಂತ್ರಿಯಾದಾಗ ಹಲವು ಸವಾಲುಗಳನ್ನಎದುರಿಸಿದ್ದಾರೆ.

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

  • Share this:
ರಾಮನಗರ :  ಇಂದಿರಾ ಕ್ಯಾಂಟೀನ್​ ಹೆಸರು ಬದಲಾವಣೆ ವಿಚಾರವಾಗಿ ಕಾಂಗ್ರೆಸ್​​-ಬಿಜೆಪಿ ನಾಯಕರ ಮಧ್ಯೆ ನಡೆದ ವಾಕ್ಸಮರದ ಬಗ್ಗೆ ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಬೇಸರ ವ್ಯಕ್ತಪಡಿಸಿದರು. ಚನ್ನಪಟ್ಟಣ ತಾಲೂಕಿನ ದೊಡ್ಡವಿಠಲೇನಹಳ್ಳಿ ಗ್ರಾಮದ ಶ್ರೀ ಬಸವೇಶ್ವರ ದೇವಸ್ಥಾನ ಉದ್ಘಾಟನೆ ಬಳಿಕ ಮಾತನಾಡಿದ ಅವರು ನೆಹರು ವಿಚಾರವಾಗಿ ಸಿ.ಟಿ.ರವಿ ಹಾಗೂ ಪ್ರಿಯಾಂಕ ಖರ್ಗೆ ಹೇಳಿಕೆಗಳನ್ನು ಗಮನಿಸಿದ್ದೇನೆ.  ದೇಶಕ್ಕಾಗಿ ಹೋರಾಟ ಮಾಡಿರುವವರ ಬಗ್ಗೆ ಗೌರವದಿಂದ ಮಾತನಾಡಬೇಕು. ಅವರವರ ವಯಕ್ತಿಕ ವಿಚಾರಗಳೇ ಬೇರೆ. ಆದರೆ ನೆಹರು , ಇಂದಿರಾ ಗಾಂಧಿ, ವಾಜಪೇಯಿ ಅವರ ಬಗ್ಗೆ ಲಘುವಾಗಿ ಮಾತನಾಡಬಾರದು. ನೆಹರು ಅವರು ಈ ದೇಶಕ್ಕೆ ಅವರದ್ದೇ ಆದ  ಕೊಡುಗೆ ಕೊಟ್ಟಿದ್ದಾರೆ. 

ನಮ್ಮ ದೇಶದ ಸ್ವಾತಂತ್ರ್ಯ ವಿಚಾರದಲ್ಲಿ ಅತಿ ಹೆಚ್ಚು ಜೈಲುವಾಸವನ್ನ ನೆಹರು ಅವರು ಅನುಭವಿಸಿದ್ದಾರೆ. ಸ್ವಾತಂತ್ರ್ಯ ಬಂದ ನಂತರವೂ ಹಲವು ಸವಾಲುಗಳಿತ್ತು.  ಅವರು ಪ್ರಧಾನಮಂತ್ರಿಯಾದಾಗ ಹಲವು ಸವಾಲುಗಳನ್ನಎದುರಿಸಿದ್ದಾರೆ. ಪಾಕಿಸ್ತಾನದಿಂದ ಬಂದ ನಿರಾಶ್ರಿತರ ವಿಚಾರದಲ್ಲಿ ನೆಹರುರವರು ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಜೊತೆಗೆ ಕ್ಱಷಿ ವಲಯ, ಕೈಗಾರಿಕಾ ವಲಯದಲ್ಲಿ ಅವರ ಕೊಡುಗೆ ದೊಡ್ಡದು. ಹಾಗಾಗಿ ದೇಶದ ನಾಯಕರ ಬಗ್ಗೆ ಲಘುವಾಗಿ ಮಾತನಾಡಬೇಡಿ, ಇದರಿಂದ ನಮ್ಮ ದೇಶಕ್ಕೆ ಅಪಮಾನ ಮಾಡಬೇಡಿ ಎಂದು ಹೆಚ್.ಡಿ.ಕೆ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಅಂತಹವರಿಗೆ ದೇವರು ಒಳ್ಳೆಯದು ಮಾಡಲ್ಲ.. ರಾಮನಗರದಲ್ಲಿ ಕಣ್ಣೀರಾಕಿದ ಶಾಸಕಿ ಅನಿತಾ ಕುಮಾರಸ್ವಾಮಿ

ಸಮ್ಮಿಶ್ರ ಸರ್ಕಾರ ಇದ್ದಾಗ ಜಾತಿಗಣತಿ ವರದಿ ಸ್ವೀಕಾರ ಮಾಡಿಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು,  ಸಿದ್ದರಾಮಯ್ಯ ಗೆ ಬೇರೆ ಕೆಲಸ ಇಲ್ಲ, ಅದು ಕಾಂತರಾಜು ಕೊಟ್ಟಿರುವ ವರದಿ ಅಲ್ಲ, ಸಿದ್ದರಾಮಯ್ಯ ಕೊಟ್ಟಿರುವ ವರದಿ ಅದು ನನಗೂ ಗೊತ್ತಿದೆ.  160 ಕೋಟಿ ಖರ್ಚು ಮಾಡಿ, ಇವರೇ ವರದಿ ತಯಾರು ಮಾಡಿ, ಕಾಂತರಾಜು ಟಸ್ಸೆ ಹೊಡೆದಿದ್ದಾರೆ ಅಷ್ಟೇ.  ಸಿದ್ದರಾಮಯ್ಯ ನವರು ಈ ವಿಚಾರವಾಗಿ ಕ್ರೆಡಿಟ್ ತೆಗೆದುಕೊಳ್ಳಲು ಹೊರಟ್ಟಿದ್ದಾರೆ.  ಮುಂದೆ ಈ ವಿಚಾರದಲ್ಲಿ ದೇಶದಲ್ಲಿ ಯಾಯ್ಯಾವ ರೀತಿ ಸಮಸ್ಯೆಯಾಗುತ್ತೆ ಅದನ್ನ ಮುಂದೆ ಚರ್ಚೆ ಮಾಡ್ತೇನೆ.

ನಾನು ಸಿಎಂ ಇದ್ದಾಗ ಅವರೇ ಸಮನ್ವಯ ಸಮಿತಿ ಅಧ್ಯಕ್ಷ. ಆಗ ಯಾವಾಗಲಾದರೂ ವರದಿ ಸ್ವೀಕಾರ ಮಾಡಿ ಎಂದು ಹೇಳಿದ್ರಾ, ಏನಾದ್ರೂ ಚರ್ಚೆ ಮಾಡಿದ್ರಾ. ಈ ವಿಚಾರವನ್ನ ನನ್ನ ಗಮನಕ್ಕೆ ತಂದಿಲ್ಲ, ನಾನೇನು ಮಾಡಲಿ. ಸಿದ್ದರಾಮಯ್ಯ ಗೆ ಈಗ ರಾಜಕೀಯ ಬೇಕಿದೆ ಅಷ್ಟೇ.  ದಲಿತರ, ಹಿಂದುಳಿದವರ ಬಗ್ಗೆ ಚರ್ಚೆ ಮಾಡ್ತಾರೆ. ಆದರೆ ಅವರಿಗೆ ಎಷ್ಟು ರಕ್ಷಣೆ ಕೊಟ್ಟಿದ್ದಾರೆಂದು ವಾಸ್ತವವಾಗಿ ಚರ್ಚೆ ಮಾಡಲಿ.  ಸಿದ್ದರಾಮಯ್ಯ ಕಾಲದಲ್ಲಿ ದಲಿತರಿಗೆ ಕೊಡಬೇಕಾದ ಮನೆಗಳನ್ನ ಬೇರೆಯವರಿಗೆ ಕೊಡಲಾಗಿದೆ. ಈ ಬಗ್ಗೆ ನಾನು ದಾಖಲೆ ಇಟ್ಟಿದ್ದೇನೆ. ಇವರೊಬ್ಬರೇ ಅಲ್ಲ ದಲಿತರನ್ನ ರಕ್ಷಣೆ ಮಾಡೋರು. ಅವರ ಹೆಸರಿನಲ್ಲಿ ಏನೇನು ಅಕ್ರಮ ಎಸಗಿದ್ದಾರೆಂಬ ಮಾಹಿತಿ ಇಟ್ಟಿದ್ದೇನೆ.

ಊರ ಹೆಸರು, ಪಟ್ಟಿ ಬದಲಾವಣೆ ಆಗಿದ್ದು, ಯಾವ ಸಮಾಜದಿಂದ ಇನ್ಯಾವ ಸಮಾಜಕ್ಕೆ ಬದಲಾಯ್ತು ಎಂಬ ಮಾಹಿತಿ ಇದೇ, ಇವರೊಬ್ಬರೇ ಅಲ್ಲ ಅಹಿಂದ ಉಳಿಸೋರು.  ಅದಕ್ಕಾಗಿ ಹೋರಾಟ ಮಾಡಿದವರು ರಾಜ್ಯದಲ್ಲಿ ಬಹಳಷ್ಟು ಜನ ಇದ್ದಾರೆ , ಮುಂದೆ ಇವರ ಬಣ್ಣ ಬಯಲಾಗಲಿದೆ ಎಂದರು. ಇನ್ನುಬಮೇಕೆದಾಟು ವಿಚಾರವಾಗಿ ಹೆಚ್.ಡಿ.ಕೆ ಪ್ರತಿಕ್ರಿಯೆ ನೀಡಿಬಿಜೆಪಿಯವರ ಘೋಷಣೆಗಳು ಹೇಳಿಕೆಯಾಗಿ ಉಳಿದಿವೆ.  ಪ್ರಾರಂಭ ಮಾಡಿದ್ರೆ ಇಷ್ಟೊತ್ತಿಗೆ ಮಾಡಬೇಕಿತ್ತು.

ಈಗಾಗಲೇ ರಾಜ್ಯಪಾಲರನ್ನ ಭೇಟಿ ಮಾಡಿದ್ದೇವೆ ನಮ್ಮ ಪಕ್ಷದಿಂದ. ಸದ್ಯದಲ್ಲೇ ಮುಖ್ಯಮಂತ್ರಿಗಳನ್ನ ಭೇಟಿ ಮಾಡ್ತೇವೆ. ಎತ್ತಿನಹೊಳೆ ಯೋಜನೆ 8 ಸಾವಿರ ಕೋಟಿ ವೆಚ್ಚದಲ್ಲಿ ಆಗಬೇಕಿತ್ತು. ಈಗ ಅದು 23 ಸಾವಿರ ಕೋಟಿ ಗೆ ಏರಿಕೆ ಆಗಿದೆ. ಸರ್ಕಾರದ ಈಗಿನ ವೇಗದಲ್ಲಿ ಹೋದರೆ ಎತ್ತಿನಹೊಳೆಗೂ 50 ಸಾವಿರ ಕೋಟಿ ಬೇಕಾಗುತ್ತೆ. ಉತ್ತರಕರ್ನಾಟಕದ ನೀರಾವರಿ ಹಾಗೂ ಸಮಗ್ರ ನೀರಾವರಿ ಯೋಜನೆಗಳ ಬಗ್ಗೆ ಸಿಎಂ ಜೊತೆಗೆ ಚರ್ಚೆ ಮಾಡ್ತೇನೆಂದು ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.
Published by:Kavya V
First published: