• Home
  • »
  • News
  • »
  • state
  • »
  • ಸಿದ್ದರಾಮಯ್ಯರಿಂದ ನಾನು ಕಲಿಯಬೇಕಾದದ್ದು ಏನೂ ಇಲ್ಲ: HD Kumaraswamy ಸಿಡಿಮಿಡಿ

ಸಿದ್ದರಾಮಯ್ಯರಿಂದ ನಾನು ಕಲಿಯಬೇಕಾದದ್ದು ಏನೂ ಇಲ್ಲ: HD Kumaraswamy ಸಿಡಿಮಿಡಿ

ಸಿದ್ದರಾಮಯ್ಯ, ಹೆಚ್​.ಡಿ ಕುಮಾರಸ್ವಾಮಿ

ಸಿದ್ದರಾಮಯ್ಯ, ಹೆಚ್​.ಡಿ ಕುಮಾರಸ್ವಾಮಿ

ಕಾಂಗ್ರೆಸ್ಸಿಗರ ಮೇಕೆದಾಟು 2ನೇ ಹಂತದ ಪಾದಯಾತ್ರೆಗೆ HDK ಗರಂ ಆಗಿ ಪ್ರತಿಕ್ರಿಯಿಸಿದರು.  ಈ ಪಾದಯಾತ್ರೆಯಿಂದ ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ. ಬಿರಿಯಾನಿ, ಬಾಳೆಕಾಯ್ ಬಜ್ಜಿ, ಜ್ಯೂಸ್ ಇಟ್ಟುಕೊಂಡು ಮಾಡೋದು ಪಾದಯಾತ್ರೆನಾ ಎಂದು ವ್ಯಂಗ್ಯವಾಡಿದರು.

  • Share this:

ರಾಮನಗರ (ಚನ್ನಪಟ್ಟಣ) : ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ವಿರುದ್ಧ ಮಾಜಿ ಸಿಎಂ ಹೆಚ್‌.ಡಿ.ಕುಮಾರಸ್ವಾಮಿ (Former CM HD Kumaraswamy) ಚನ್ನಪಟ್ಟಣದಲ್ಲಿ (channapatna) ವಾಗ್ದಾಳಿ ನಡೆಸಿದ್ದಾರೆ. ಚನ್ನಪಟ್ಟಣದ ತಗಚಗೆರೆ ಗ್ರಾಮದಲ್ಲಿ ನಡೆದ ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮದಲ್ಲಿ  ಭಾಗಿಯಾಗಿ ಮಾತನಾಡಿದ ಅವರು, ರಾಷ್ಟ್ರಧ್ವಜಕ್ಕೆ ಗೌರವ ಕೊಡೋದನ್ನ ಇವರಿಂದ ನಾನು ಕಲಿಯಬೇಕಾ ಎಂದು ಸಿದ್ದರಾಮಯ್ಯ ವಿರುದ್ಧ ಕಿಡಿಕಾರಿದರು. ಶ್ರೀನಗರದಲ್ಲಿ ಬಾವುಟ ಹಾರಿಸಲು ಹೋಗಿ 12 ಜನರನ್ನ ಸಾಯಿಸಿದರು ಅಂದಿದ್ದರು,  ಬಿಜೆಪಿಯವರ ಕೈಯಲ್ಲಿ ಉಗಿಸಿಕೊಳ್ತಿದ್ದರು, ಆಗ ರಾಷ್ಟ್ರಧ್ವಜ ಕಾಣಲಿಲ್ವಾ?‌ ರಾಜ್ಯದ ಜನರ ಬಗ್ಗೆ ನಾವು ಎಲ್ಲಿ ಚರ್ಚೆ ಮಾಡೋದು. ರೈತರ ಸಮಸ್ಯೆಗಳ ಬಗ್ಗೆ ಎಲ್ಲಿ ಚರ್ಚೆ ಮಾಡೋದು, ರಾಷ್ಟ್ರಧ್ವಜದ ಬಗ್ಗೆ ಇವರೊಬ್ಬರೇ ಅಲ್ಲ ಗೌರವ ಇಟ್ಟಿರೋದು. ಬೀದಿಲಿ ಹೋರಾಟ ಮಾಡಿ, ಅದಕ್ಕೆ ಹೇಳಿದ್ದೇನೆ ಸದನ ಮುಂದೂಡಿ, ಇಲ್ಲ ಅಮಾನತ್ತು ಮಾಡಿ ಎಂದಿದ್ದೇನೆ.  ಪ್ರತಿನಿತ್ಯ ಒಂದುವರೆ ಕೋಟಿ ರಾಜ್ಯದ ಜನರ ಹಣ ಸದನಕ್ಕಾಗಿ ಖರ್ಚಾಗುತ್ತಿದೆ.  ಆದರೆ ಅದನ್ನ ಇವರು ವೇಸ್ಟ್ ಮಾಡ್ತಿದ್ದಾರೆ, ಇದು ನೀವು ದೇಶ ಕಟ್ಟೋರಾ ಎಂದು ಕಿಡಿಕಾರಿದರು.


ಇದನ್ನೂ ಓದಿ: Karnikavani: ಮಳೆಬೆಳೆ ಸಂಪಾತಲೆ ಪರಾಕ್: ಕುಬೇರ ಮೂಲೆಯಲ್ಲಿರೋ 'ಆ' ವ್ಯಕ್ತಿ ಮುಂದಿನ CM ಅಂತೆ


ಬಿರಿಯಾನಿ, ಬಜ್ಜಿ, ಜ್ಯೂಸ್​ ಇಟ್ಟುಕೊಂಡು ಪಾದಯಾತ್ರೆ ಮಾಡೋದಾ? 


ಇನ್ನು ಮೇಕೆದಾಟು 2 ನೇ ಹಂತದ ಪಾದಯಾತ್ರೆಗೆ HDK ಗರಂ ಆಗಿ,  ಈ ಪಾದಯಾತ್ರೆಯಿಂದ ಅಧಿಕಾರ ಹಿಡಿಯಲು ಹೊರಟ್ಟಿದ್ದಾರೆ. ಇದರಿಂದ ಮೇಕೆದಾಟು ಆಗುತ್ತಾ, ಲೀಗಲ್ ನಲ್ಲಿ ನಾವು ಗೆಲ್ಲಬೇಕಿದೆ.‌ ರಾಜ್ಯದಲ್ಲಿ ಎಷ್ಟು ಡ್ಯಾಂ ಗಳ ಕೆಲಸ ನಿಂತಿವೆ. ರಾಜ್ಯದ ನೀರಾವರಿ ಯೋಜನೆ ಬಳಕೆಗೆ 2 ರಿಂದ 5 ಲಕ್ಷ ಕೋಟಿ ಹಣ ಬೇಕು. ನಿಮ್ಮ ಹೋರಾಟದಿಂದ ಆಗೋದಾದ್ರೆ ನಾನು ನಿಮ್ಮ ಜೊತೆ ಬರ್ತೇನೆ.‌ ನನ್ನ ಕರ್ಮಭೂಮಿಯಲ್ಲಿ ಇವರು ಏನು ಮಾಡಲು ಆಗಲ್ಲ.ಈ ಜನರು ಇರುವವರೆಗೆ ನನ್ನನ್ನ ಅಲ್ಲಾಡಿಸಲು ಆಗಲ್ಲ, ನನ್ನನ್ನ ಓಡಿಸಬೇಕೆಂದು ಪ್ರಯತ್ನ ಮಾಡ್ತಿದ್ದಾರೆ.‌ ಇನ್ನು ಹತ್ತು ಪಾದಯಾತ್ರೆ ಮಾಡಲಿ, ಜನರ ಒಳ್ಳೆಯದಕ್ಕೆ ಮಾಡಿದ್ರೆ ಸರಿ.‌  ದಿ‌ನ ಬಿರಿಯಾನಿ, ಬಾಳೆಕಾಯ್ ಬಜ್ಜಿ, ಜ್ಯೂಸ್ ಇಟ್ಟುಕೊಂಡು ಮಾಡೋದು ಪಾದಯಾತ್ರೆನಾ ಎಂದು ವ್ಯಂಗ್ಯವಾಡಿದರು.


ಯಾವುದೇ ಸಮಾಜಕ್ಕೆ, ಧರ್ಮಕ್ಕೆ ಅಪಚಾರ ಮಾಡಲ್ಲ


ಇನ್ನು ನಾನು ಮಂಡ್ಯದಲ್ಲಿ ಮಾತನಾಡುವಾಗ ಮಕ್ಕಳ ಜತೆ ಚೆಲ್ಲಾಟ ಆಡಬೇಡಿ ಎಂದಿದ್ದೇನೆ.  ಮಾತನಾಡುವಾಗ ಹಿಜಾಬ್ ಅಂದರೂ ಆಗ ನಾನು ಹಿಜಾಬ್ - ಗಿಜಾಬ್ ಗೊತ್ತಿಲ್ಲ, ಮಕ್ಕಳ ಭವಿಷ್ಯ ಮುಖ್ಯ ಅಂದಿದ್ದೇನೆ. ಮಾತನಾಡುವಾಗ ಮದುವೆ ಗಿದುವೆ ಅಂತೇವೆ. ಅದನ್ನೇ ಹಿಜಾಬ್ ಬಗ್ಗೆ ಕುಮಾರಸ್ವಾಮಿ ಅಗೌರವವಾಗಿ ಮಾತನಾಡಿದರು ಎಂದು ವಾಟ್ಸ್ ಅಪ್ ನಲ್ಲಿ ಹಾಕಿಕೊಳ್ಳುತ್ತಿದ್ದಾರೆ. ನಾನು ಯಾವುದೇ ಸಮಾಜಕ್ಕೆ, ಧರ್ಮಕ್ಕೆ ಅಪಚಾರ ಮಾಡಲ್ಲ, ನಾನು ಎಲ್ಲರನ್ನು ಗೌರವಿಸುವವನು‌. ಅದರೆ ಜನ ಅರ್ಥ ಮಾಡಿಕೊಳ್ಳಬೇಕು. ದೇಶವನ್ನ ಲೂಟಿ ಹೊಡೆದುಕೊಂಡು ಇರೋರು, ಈಗ ರಾಷ್ಟ್ರಧ್ವಜ, ರಾಷ್ಟ್ರ ಭಕ್ತಿ ಇದೆಯಾ. ಹಿಂದೆ ಹೋರಾಟ ಮಾಡಿದ ಕಾಂಗ್ರೆಸ್‌ ಸತ್ತೋಗಿದೆ, ಈಗಿರುವ ಕಾಂಗ್ರೆಸ್‌ ಬೇರೆ. ದೇಶಕ್ಕೆ ಸ್ವಾತಂತ್ರ್ಯ ಬರುವಾಗ ಕಟ್ಟಿದ ಕಾಂಗ್ರೆಸ್‌ ಬೇರೆ. ಮಹಾತ್ಮ ಗಾಂಧಿ ಹೇಳಿದ್ದರು ಕಾಂಗ್ರೆಸ್‌ ಪಕ್ಷ ಮುಚ್ಚಬೇಕು, ಮತ್ತೆ ಬಳಕೆ ಮಾಡಬಾರದು ಎಂದಿದ್ದರು.


ಇದನ್ನೂ ಓದಿ: Hijab Row: ಕುಂಕುಮ, ಬಳೆ, ಸರಸ್ವತಿ ಪೂಜೆ ಬಗ್ಗೆ ಮಾತನಾಡಿದರೆ ನಾಲಿಗೆ ಸೀಳುತ್ತೇವೆ ಹುಷಾರ್: Muthalik


 ಜೆಡಿಎಸ್ ಎಲ್ಲಿದೆ ಅನ್ನೋದನ್ನ ಜನ ತೋರಿಸುತ್ತಾರೆ


ನಾನು 1959 ರಲ್ಲಿ ಹುಟ್ಟಿದ್ದೇನೆ, ನನ್ನದು ಏನು ಕೊಡುಗೆ ಇಲ್ಲ ಸ್ವಾತಂತ್ರ್ಯ ಕ್ಕೆ, ಈಗ ಇತಿಹಾಸ ಹೇಳುವವರು ಯಾರು ಹುಟ್ಟಿದ್ದರು. ಹಿಂದೆ ರಕ್ತಪಾತವೇ ಆಗಿತ್ತು, ಈಗ ಧರ್ಮದ ಹೆಸರಿನಲ್ಲಿ ಮತ್ತೆ ಬೇಕಾ ಎಂದರು.‌ ಇನ್ನು 2023 ಕ್ಕೆ ಕನ್ನಡನಾಡಿನ ಜನತೆಯ ಆರ್ಶೀವಾದದಿಂದ ಜನತಾ ದಳ ಸರ್ಕಾರ ನಡೆಸುತ್ತೆ. ಈ ಹಿಂದೆಯೂ 7 ಜನ‌ ಪಕ್ಷ ಬಿಟ್ಟು ಹೋಗಿದ್ದರು.  ಯಾರು ಎಷ್ಟೇ ಪ್ರಯತ್ನ ಪಟ್ಟರು ಪಕ್ಷ ನಿರ್ನಾಮ ಮಾಡಲು ಆಗಲ್ಲ.ಚನ್ನಪಟ್ಟಣದ ಜನ ನೂರು ವಾಹನಗಳಲ್ಲಿ ಬರುತ್ತಿದ್ದರು ದೇವೇಗೌಡರ ಹೋರಾಟಕ್ಕೆ.ಜೆಡಿಎಸ್ ಎಲ್ಲಿದೆ ಅನ್ನೋದನ್ನ 2023 ಕ್ಕೆ ಜನ ತೋರಿಸುತ್ತಾರೆ.  ಜೆಡಿಎಸ್ - ಬಿಜೆಪಿ ಮೈತ್ರಿ ಬಗ್ಗೆ ಯಾವುದೇ ಆಹ್ವಾನ ಬಂದಿಲ್ಲ ನಮಗೆ. ಪ್ರಧಾನಿ ಮೋದಿಯವರು ದೇವೇಗೌಡರನ್ನ ಹೊಗಳಿರುವುದು ವೈಯಕ್ತಿಕ ಸಂಬಂಧ. ಆದರೆ ಅದಕ್ಕೆ ಯಾವುದೇ ರಾಜಕೀಯ ಇಲ್ಲ.  ಇನ್ನು ಒಂದು ವರ್ಷ ಟೈಮ್ ಇದೇ, ಮುಂದೆ ಯಾವ ಬೆಳವಣಿಗೆ ನಡೆಯಲಿದೆಯೋ. ಈಗ ಬಿಜೆಪಿಯವರು ನಮ್ಮ ಬಳಿ ಬರುವ ಪ್ರಮೇಯ ಇಲ್ಲ. ಈಗ ಅವರು ಕ್ಲಿಯರ್ ಮೆಜಾರಿಟಿ ಇದ್ದಾರೆ.


ಜೆಡಿಎಸ್ ಶಾಸಕರ ಬ್ರೈನ್ ವಾಷ್ ಮಾಡ್ತಿದ್ದಾರೆ


ನಾವು ಹಗಲು ಕಂಡ ಬಾವಿಗೆ ರಾತ್ರಿ ಬೀಳೋಕೆ ಆಗುತ್ತ, ಕಾಂಗ್ರೆಸ್‌ ಅಲೆ ಎಲ್ಲಿದೆ, ಅವರದ್ದು 70 ಸೀಟ್ ಅಷ್ಟೇ, ಅದರ ಮೇಲೆ ಹೋಗಲ್ಲ. ಜೆಡಿಎಸ್ ಶಾಸಕರ ಬ್ರೈನ್ ವಾಷ್ ಮಾಡ್ತಿದ್ದಾರೆ. ನಾವು ರಾಜಕೀಯ ಮಾಡಿದ್ದೇವೆ, ನಮಗೆ ಎಲ್ಲವೂ ಗೊತ್ತಿದೆ. ನನಗೆ ಯಾವ ಶಾಕ್ ಇಲ್ಲ, ಯಾರ್ಯಾರು ಹೋಗ್ತಾರೆಂದು ಗೊತ್ತು. ಇವರ ಹಣೆಬರಹ ಗೊತ್ತಿದೆ, ಯಾರ್ಯಾರು ಡಬ್ಬಲ್ ಗೇಮ್ ಮಾಡ್ತಿದ್ದಾರೆಂದು ಗೊತ್ತು. ಮತ್ತಷ್ಟು ಜನ ಹೋಗ್ತಾರೆ, ಕಾಲ ಉತ್ತರ ಕೊಡುತ್ತೆ, ಮುಖಂಡರನ್ನ ತಯಾರು ಮಾಡುವ ಪಕ್ಷ ನಮ್ಮದು.  ಹರಕಲು ಬಟ್ಟೆ ಹಾಕುವ ರೈತರು ಕಟ್ಟಿರುವ ಪಕ್ಷ ಇದು, ನಾವು ಯಾವ ಆಪರೇಷನ್ ಮಾಡಲ್ಲ, ಅದರ ಅವಶ್ಯಕತೆ ಇಲ್ಲ‌ ಎಂದರು.‌

Published by:Kavya V
First published: