HDK vs Siddaramaiah: ಡಿಕೆ ಶಿವಕುಮಾರ್ ಸಿಎಂ ಆಗೋಕೆ ಬಿಡ್ತಾರಾ ಇವರು?; ಸಿದ್ದರಾಮಯ್ಯ ವಿರುದ್ಧ ಎಚ್​ಡಿಕೆ ವಾಗ್ದಾಳಿ

ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು ಎಂಟಿಬಿ. ಹಾಗಿದ್ರು ಅವರು ಯಾಕೆ ಹೋದ್ರು. ನಿಮ್ಮ ಮನೆಯಿಂದಲೇ ಹೋಗಿದ್ದಲ್ವಾ? ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.

ಸಿದ್ದರಾಮಯ್ಯ - ಎಚ್​ಡಿಕೆ

ಸಿದ್ದರಾಮಯ್ಯ - ಎಚ್​ಡಿಕೆ

 • Share this:
  ರಾಮನಗರ(ಅ.13): ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ(HD Kumaraswamy) ಬಿಡದಿಯ ತೋಟದ ಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ, ವಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ‘‘ಬಹಳ ಜನರನ್ನ ನೋಡಿದ್ದೇನೆ.  ಇವರಿಗೆ ಹೆದರಬೇಕಾ‘‘ ಎಂದು ಹೇಳಿದ್ದಾರೆ.  ನಾನು ಹೆದರಿ ಎಂದು ಹೇಳಿಲ್ಲ. ನಾನು ಎಂದೂ ಸಹ ಸಿದ್ದರಾಮಯ್ಯನವರ ನೆರಳಲ್ಲಿ ರಾಜಕೀಯ ಮಾಡಿಲ್ಲ ಎಂದು ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

  ನಾನು ತಾಜ್ ಹೋಟೆಲ್ ನಲ್ಲಿ ಮಜಾ ಮಾಡಲು ಇರಲಿಲ್ಲ. ಹೋಟೆಲ್​​ನಲ್ಲಿ ಮಜಾ ಮಾಡಲು ಇದ್ದಿದ್ದರೆ ರೈತರ ಸಾಲ ಮನ್ನಾ ಆಗುತಿತ್ತಾ? ಕೃಷ್ಣಾದಲ್ಲಿ ರಾತ್ರಿ 12 ಗಂಟೆವರೆಗೆ ಕೆಲಸ ಮಾಡಿದ್ದೇನೆ. ಅಮೆರಿಕಾಗೆ ಹೋಗಿದ್ದು ನಿಜ. ಚುಂಚನಗಿರಿ ಸ್ವಾಮೀಜಿರವರು ದೇವಸ್ಥಾನದ ಉದ್ಘಾಟನೆಗೆ ಬರಲು ಹೇಳಿದ್ದರು.  ಸರ್ಕಾರ ಬೀಳ್ತಿದೆ ಬನ್ನಿ ಎಂದಿದ್ದೆ ಅಂತಾರೆ. ಅದ್ಯಾವ ಫೋನ್ ನಂಬರ್ ಕೊಡಿ ನೋಡೋಣ. ಗೃಹ ಸಚಿವ ಪರಮೇಶ್ವರ್ ಗೆ ಫೋನ್ ಮಾಡಿದ್ರೆ ಆರಾಮಾಗಿ ಬನ್ನಿ ಏನು ಆಗಲ್ಲ ಅಂದ್ರು. ಆದರೆ ಇವರೇ ಸರ್ಕಾರ ಬೀಳಿಸುವ ಹುನ್ನಾರ ಮಾಡಿದ್ರು ಅಂತ ನನಗೆ ಗೊತ್ತಿತ್ತು. ಇವರೇ ಹೇಳಿದ್ದ ಬಗ್ಗೆ ವಿಡಿಯೋ ಕೂಡ ನೋಡಿದ್ದೇವೆ.  ಸರ್ಕಾರ ಮುಂದುವರೆಯುತ್ತೋ ಇಲ್ವೋ ನೋಡೋಣ ಎಂಬುದನ್ನ ನೋಡಿದ್ದೇವೆ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ವಾಗ್ದಾಳಿ ನಡೆಸಿದ್ದಾರೆ.

  ಡಿಕೆಶಿ ಪರ ಎಚ್​ಡಿಕೆ ಬ್ಯಾಟಿಂಗ್

  ಡಿ.ಕೆ.ಶಿವಕುಮಾರ್ ಸ್ನೇಹಿತರಿದ್ದಾರೆ, ನಮ್ಮ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ಪಾಪ ಅವರು ಕಾಂಗ್ರೆಸ್ ಕಟ್ಟಲು ಓಡಾಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯನವರ ಪಟಾಲಂ ಅವರ ವಿರುದ್ಧ ಮಾತನಾಡಿದ್ದಾರೆ. ಆ ಆಡಿಯೋ ಈಗ ವೈರಲ್ ಆಗ್ತಿದೆ. ಅವರೇ ಮಾತನಾಡಿದ್ದಾರೋ, ಇವರೇ ಮಾತನಾಡಿಸಿದ್ದಾರೋ ಗೊತ್ತಿಲ್ಲ. ಕಾಂಗ್ರೆಸ್ ನ ಮುಗಿಸಲು ಇವರು ಹೊರಟಿದ್ದಾರೆ. ಡಿಕೆ ಶಿವಕುಮಾರ್​ ಸಿಎಂ ಆಗಲು ಬಿಡ್ತಾರಾ ಇವರು? ಈಗಲೂ ಸಹ ಸಿಎಂ ಆಗಬೇಕೆಂದು ಕಾಯ್ದಿದ್ದಾರೆ ಎಂದು ಡಿಕೆಶಿ ಪರ ಹೆಚ್.ಡಿ.ಕುಮಾರಸ್ವಾಮಿ ಬ್ಯಾಟಿಂಗ್ ಮಾಡಿದರು.

  ನಾನು ಸಿದ್ದರಾಮಯ್ಯನ ಹಂಗಿನಲ್ಲಿ ಬೆಳೆದಿಲ್ಲ

  ನಾನು‌ ನಿನ್ನೆ ಹೇಳಿದ್ದರ ಬಗ್ಗೆ ಸಿದ್ದರಾಮಯ್ಯ ಮಾಧ್ಯಮದ ಮುಂದೆ ಹಲವಾರು ವಿಚಾರ ಪ್ರಸ್ತಾಪಿಸಿದ್ದಾರೆ.  ನಾನು ತುಂಬಾ ಜನರನ್ನ ನೋಡಿದ್ದೇನೆ, ಹೆದರಲ್ಲ ಎಂದಿದ್ದಾರೆ. ಹೆದರಲಿ ಅಂತಾ ಏನಾದ್ರು ಹೇಳಿದ್ನಾ? ನಾನು ರಾಜಕಾರಣದಲ್ಲಿ ಸಿದ್ದರಾಮಯ್ಯ ನೆರಳಲ್ಲಿ, ಹಂಗಿನಲ್ಲಿ ರಾಜಕಾರಣಕ್ಕೆ ಬಂದವನಲ್ಲ. 1985 ರಲ್ಲಿ ಸಾತನೂರಲ್ಲಿ ದೇವೇಗೌಡರು ನಿಂತಾಗ ಚುನಾವಣೆಗಾಗಿ ಕೆಲಸ ಮಾಡಿದ್ದೇನೆ. 1994 ರಲ್ಲಿ ಜೆಡಿಎಸ್ ಕಟ್ಬೇಕಾದ್ರೆ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ಸಂಘಟನೆ ಮಾಡಿದ್ದೇನೆ.  ಹಲವು ಶಾಸಕರಿಗೆ ಶಕ್ತಿ ತುಂಬಿದ್ದೇನೆ.  1985 ರಲ್ಲಿ ರಾಜಕಾರಣದಲ್ಲಿನ ಘಟನೆ ಗಮನಿಸಿದ್ದೇನೆ. 1996 ರಲ್ಲಿ ಬಂದಿದ್ದಲ್ಲ ನಾನು ಎಂದು ಸುದ್ದಿಗೋಷ್ಟಿಯಲ್ಲಿ ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ  ವಾಗ್ದಾಳಿ ನಡೆಸಿದ್ದಾರೆ.

  ರಾಜಕಾರಣವೇ ಬೇಡ ಅಂದಿದ್ರು ಸಿದ್ದರಾಮಯ್ಯ

  ಸಿದ್ದರಾಮಯ್ಯ ಜೆಡಿಎಸ್ ನಲ್ಲಿದ್ದಾಗ 2 ಕಡೆ ಸೋತಿದ್ರು. ಆಗ ಅನುಗ್ರಹಕ್ಕೆ ಬಂದಿದ್ರು ಅವರು.  ರಾಜಕಾರಣ ಬೇಡ, ಕರಿಕೋಟು ಹಾಕಿಕೊಂಡು ಹೋಗ್ತೇನೆ ಎಂದ್ರು. ಆಗ ದೇವೇಗೌಡರು ಧೈರ್ಯ ತುಂಬಿದ್ರು. ಜನ ಸೇರಿಸುವವರು ನಾವು, ದುಡ್ಡು ನಾವು ಖರ್ಚು ಮಾಡ್ತಿದ್ವಿ,  ಕಾಲು ಅಲ್ಲಾಡಿಸಿಕೊಂಡು ಬಂದು ಮಾತಾಡಿ ಹೋಗ್ತಿದ್ರು. ಈಗಲೂ ಅದೇ ಮಾಡಿದ್ದಾರೆ ಕಾಂಗ್ರೆಸ್ ನಲ್ಲಿ. ಧರ್ಮ ಸಿಂಗ್ ಸರ್ಕಾರ ಹೋಗಲು ಕಾರಣ ಯಾರು?ಅಬಕಾರಿ ಖಾತೆ ಕೊಡಲಿಲ್ಲ ಅಂತಾ ಮಲಗಿದ್ರು ಹೋಗಿ. ಧರ್ಮಸಿಂಗ್ ಸರ್ಕಾರ ತೆಗೆಯಲು ಸಿದ್ದರಾಮಯ್ಯ ಕಾರಣ.

  ಇದನ್ನೂ ಓದಿ:Ugrappa U Turn: ಡಿಕೆಶಿ ಕಮಿಷನ್​ ರಾಜಕಾರಣಿ ಅಲ್ಲ; ಸಡನ್​ ಯೂಟರ್ನ್​ ಹೊಡೆದ ಉಗ್ರಪ್ಪ

  ನನ್ನನ್ನು ಕೆಣಕಲು ಬರಬೇಡಿ

  ಜೆಡಿಎಸ್ ಮುಗಿಸಲು ಸಿದ್ದರಾಮಯ್ಯ ಹೊರಟಿದ್ರು. ನಾವು ಉಳಿಸೊ ಕೆಲಸ ಮಾಡ್ತಿದ್ದೇವೆ. ಅಹಿಂದ ಹೆಸರಲ್ಲಿ ಜೆಡಿಎಸ್ ಮುಗಿಸಲು ಹೊರಟಿದ್ರಿ. ಎರಡ್ಮೂರು ಬಾರಿ ದೇವೇಗೌಡ ಮನವಿ ಮಾಡಿದ್ರು ನೀವು ಕೇರ್ ಮಾಡಲಿಲ್ಲ. ಆವತ್ತು ಪಕ್ಷದಿಂದ ಹೊರಹಾಕಲು ಮುಂದಾಗಿದ್ದು, ಆವತ್ತು 58 ಶಾಸಕರು ನಿಮ್ಮಿಂದ ಗೆದ್ದಿದ್ದಲ್ಲ,  ಅಹಿಂದ ಹೆಸರಿನ ಸಂಘಟನೆ ಈಗಲೂ ಮಾಡ್ತಿದ್ದೀರಾ. ಜಾತಿ ಗಣತಿ ಬಗ್ಗೆ ಡಬ್ಬಲ್ ಸ್ಟಾಂಡರ್ಡ್ ನಿಮ್ಮದು. ನಾನು ಆ ರೀತಿಯ ರಾಜಕೀಯ ಮಾಡಲ್ಲ. ನನ್ನನ್ನ ಕೆಣಕಲು ಬರಬೇಡಿ.  ನೀವು ನಿಲ್ಲಿಸಿದರೆ ನಾನು ನಿಲ್ಲಿಸುತ್ತೇನೆ. ಇಲ್ಲಾಂದ್ರೆ ನಾನು ಹಿಂದೆ ಸರಿಯುವುದಿಲ್ಲ ಎಂದು ಗುಡುಗಿದರು.

  ಕಾಂಗ್ರೆಸ್​ನವರ ಮನೆಗೆ ಬೆಂಕಿ ಇಡೋದೆ ಸಿದ್ದರಾಮಯ್ಯ

  ಶಾಸಕರನ್ನ ಎತ್ತಿಕಟ್ಟಿ ಸರ್ಕಾರ ನಡೆಸಲು ನೀವು ಬಿಡಲಿಲ್ಲ. ಇವತ್ತು ನನ್ನ ನಡವಳಿಕೆಯಿಂದ ಸರ್ಕಾರ ಹೋಯ್ತು ಅಂತೀರಾ. ನೀವು ಮುಖ್ಯಮಂತ್ರಿ ಆಗಿದ್ದಾಗ ಯಾರಿಗೆ ಸಿಗ್ತಿದ್ರಿ. ಮಧ್ಯಾಹ್ನ ಹೋಗಿ ಗಡದ್ ಆಗಿ ಮಲಗಿ 6 ಗಂಟೆಗೆ ಎಲ್ಲಿ ಹೋಗ್ತಿದ್ರಿ. 6 ಗಂಟೆ ಮೇಲೆ ನೀವು ಎಲ್ಲಿ ಹೋಗ್ತಿದ್ರಿ? ನನಗೆ ಸರ್ಕಾರಿ ಬಂಗಲೆ ಕೂಡ ನೀಡಲಿಲ್ಲ. ನಾನು ಸರ್ಕಾರಿ ವಾಹನ ಕೂಡ ಉಪಯೋಗಿಸಿಲ್ಲ. ನಿಮ್ಮ ರಾಜಕಾರಣ ನಾವು ಅರ್ಥ ಮಾಡಿಕೊಂಡಿದ್ದೇವೆ. ಕಾಂಗ್ರೆಸ್ ನವರ ಮನೆಗೆ ಬೆಂಕಿ ಇಡೋದೆ ಸಿದ್ದರಾಮಯ್ಯ ಎಂದು ವಾಗ್ದಾಳಿ ನಡೆಸಿದರು.

  ನಿಮಗೆ ಮಾತಿನ ಮೇಲೆ ನಿಗಾ ಇರಲಿ

  ಮೈತ್ರಿ ಸರ್ಕಾರದ ನಂತರ ಹೋಟೆಲ್ ನಲ್ಲಿ ಯಾರಿಗೂ ಸಿಗದೆ ಇದ್ದೆ ಎಂದರು.  ನಾನು ಮಜಾ ಮಾಡಿಕೊಂಡು ಇರಲಿಲ್ಲ. ಬೆಳಗ್ಗೆಯಿಂದ ರಾತ್ರಿವರೆಗೂ ಕೃಷ್ಣದಲ್ಲಿದ್ದು ಕೆಲಸ ಮಾಡಿದ್ದೇನೆ. ಸಹಿ ಮಾಡಲು ಇಸ್ಪೀಟ್ ಕಾರ್ಡ್ ರೀತಿ ಪತ್ರವನ್ನ ಕಾಂಗ್ರೆಸ್ ಶಾಸಕರು ಬಿಸಾಡ್ತಿದ್ರು. ಹಾಗೆಯೇ ನನಗೂ ಸಹ ಮಾಡಿದ್ರಿ. ಮಾತಿನ ಮೇಲೆ ನಿಗಾ ಇರಬೇಕು ನಿಮಗೆ. ಅಮೇರಿಕಾಗೆ ಕಾಲಭೈರವೇಶ್ವರ ಶಂಕು ಸ್ಥಾಪನೆಗೆ ಹೋಗಿದ್ದೆ. ನಾನು ಸರ್ಕಾರ ಬೀಳ್ತಿದೆ ಎಂದು ಕರೆ ಮಾಡಿದ್ದೆ ಎಂದಿದ್ದರಲ್ಲ. ನೀವು ಕರೆ ಮಾಡಿದ್ರಾ ನನಗೆ? ಪರಮೇಶ್ವರ್ ಗೆ ಕರೆ ಮಾಡಿದ್ರೆ ಏನು ಸಮಸ್ಯೆ ಇಲ್ಲ ಅಂದ್ರು. ಕರೆ ಮಾಡಿದ್ರೆ ಡೀಟೆಲ್ಸ್ ಕೊಡಿ. ಸರ್ಕಾರ ತೆಗೆಯೋ ನಿಮ್ಮ ಯೋಚನೆ ನನಗೆ ಗೊತ್ತಿತ್ತು. ನನಗೂ ಈ ಸರ್ಕಾರ ಮುಂದುವರೆಸೊ ಆಸಕ್ತಿ ಇರಲಿಲ್ಲ. ಸರ್ಕಾರ ತೆಗೆಯಲು ಸಿದ್ದವನದಲ್ಲಿ ಸಂಚು ಮಾಡಿದ್ರಿ ಎಂದು ಹರಿಹಾಯ್ದರು.

  ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು ಎಂಟಿಬಿ

  ಎದೆ ಬಗೆದ್ರೆ ಸಿದ್ದರಾಮಯ್ಯ ಕಾಣ್ತಾರೆ ಅಂತಿದ್ರು ಎಂಟಿಬಿ. ಹಾಗಿದ್ರು ಅವರು ಯಾಕೆ ಹೋದ್ರು. ನಿಮ್ಮ ಮನೆಯಿಂದಲೇ ಹೋಗಿದ್ದಲ್ವಾ? ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.

  ಧರ್ಮಸಿಂಗ್ ಸರ್ಕಾರ ಹೋಗಲು ಕಾರಣ ಸಿದ್ದರಾಮಯ್ಯ

  ಧರ್ಮಸಿಂಗ್ ಸರ್ಕಾರ ಕಾಂಗ್ರೆಸ್ ನವರ, ನಿಮ್ಮ ನಡವಳಿಕೆಯಿಂದ ಹೋಗಿದ್ದು. ನಾನು ಧರ್ಮಸಿಂಗ್ ಸರ್ಕಾರ ಹೋಗಲು ಕಾರಣ ಅಲ್ಲಾ. ಈಗ ಕಾಂಗ್ರೆಸ್ ತೆಗೆಯೋದು ಕೂಡ ನೀವೆ. ಈಗ ಓಬಿಸಿ ಹೆಸರಲ್ಲಿ ಹೊರಟಿದ್ದೀರಲ್ವಾ. ಎಷ್ಟು ಜನರನ್ನ ಇದುವರೆಗೂ ಉದ್ಧಾರ ಮಾಡಿದ್ದೀರಾ? ಮಂಡ್ಯ ಜೆಡಿಎಸ್ ವೀಕ್ ಆಗಿದ್ಯೋ ಸ್ಟ್ರಾಂಗ್ ಆಗಿದ್ಯೋ ನಿಮಗ್ಯಾಕೆ ಚಿಂತೆ? ನಮ್ಮನ್ನ ಕೆಣಕಿಕೊಂಡು ಬರೋರು ನೀವು ಎಂದು ಕಿಡಿಕಾರಿದರು.

  ಪದೇ ಪದೇ ಕೆಣಕಬೇಡಿ: ಸಿದ್ದರಾಮಯ್ಯಗೆ ವಾರ್ನಿಂಗ್

  ಮಂಡ್ಯ ಚುನಾವಣೆ ಎಲ್ಲಾ ಪಕ್ಷದವರು ಸೇರಿಕೊಂಡು ಮಾಡಿಕೊಂಡ ಚಕ್ರವ್ಯೂಹ. ಸಿದ್ದರಾಮಯ್ಯನವರೇ ಪದೇ..ಪದೇ ಕೆಣಕಬೇಡಿ.  ಉಪ ಮುಖ್ಯಮಂತ್ರಿ ಮನೆಯಿಂದ ಶಂಕರ್​​ನ್ನ ಕಳಿಸಿದರು ಇವರು. ನಿಮ್ಮ ಜೊತೆ ಇದ್ದಾನಲ್ಲ ಒಬ್ಬ ರೈಟ್ ಹ್ಯಾಂಡ್. ಐಎಂಎ ಹೆಸರಲ್ಲಿ ನಮ್ಮನ್ನ ಅರೆಸ್ಟ್ ಮಾಡಲು ಹೊರಟಿದ್ದೀರಲ್ಲ. ನಿಮ್ಮ ಸರ್ಕಾರ ತೆಗಿತಿವಿ ಅಂತಾ ಹೇಳಿದ್ರು. ಈ ಓಬಿಸಿ ಸಮಾವೇಶ ಕಾಂಗ್ರೆಸ್ ಮುಗಿಸಲಿಕ್ಕೆ ನಡೆತಿರೋದು. 2009 ರ ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ನವರನ್ನ ಸೋಲಿಸಲು ಬಿಎಸ್ ವೈ ನಿಂದ ದುಡ್ಡು ತರಿಸಿಕೊಂಡ್ರಿ. ನೀವು ಕಳಿಸಿದ್ದವರೇ ನನಗೆ ವಿಷಯ ಹೇಳಿದ್ದಾರೆ ಎಂದರು.

  ಡಿಕೆಶಿನಾ ಸಿಎಂ ಆಗೋಕೆ ಬಿಡ್ತಾರಾ?

  ಕಾಂಗ್ರೆಸ್ 130 ರಿಂದ 78 ಕ್ಕೆ ನಿಮ್ಮಿಂದ ಬಂದಿದೆ. ಶಿವಕುಮಾರ್ ಪಾರ್ಟಿ ಕಟ್ಟಲು ಓಡಾಡ್ತಿದ್ದಾರೆ. ನೀವು ಡಿಕೆಶಿ ಮುಗಿಸಲು ಹೊರಟಿದ್ದೀರಾ. ಕಾಂಗ್ರೆಸ್ ನವರೇ ಹೀಗೆ ಮಾತಾಡುವವರು. ಶಿವಕುಮಾರ್ ಸಿಎಂ ಮಾಡಲು ಬಿಡ್ತಿರಾ. ಡಿಕೆಶಿ ಮುಗಿಸಲು ಹೊರಟಿದ್ದೀರಾ. ಮಾತಾಡಿರೋರು ನಿಮ್ಮ ಪಟಾಲಂ ತಾನೆ ಎಂದು ಸಿದ್ದರಾಮಯ್ಯ ವಿರುದ್ಧ ಹೆಚ್ಡಿಕೆ ವಾಗ್ದಾಳಿ ನಡೆಸಿದರು.

  ಸೇರಿಗೆ ಸವ್ವಾ ಸೇರು

  ನೀವು ನಮ್ಮ ಸುದ್ದಿಗೆ ಬಂದ್ರೆ ನಾನು ರೆಡಿ. ಸೇರಿಗೆ ಸವ್ವಾ ಸೇರಾಗಲು ಸಿದ್ಧ. ಇಲ್ಲ ಮಾತಾಡೋದು ನಿಲ್ಲೋಸೋದಿದ್ರೆ ನಿಲ್ಲಿಸಿ. ದೇವೇಗೌಡರು ವಿರೋಧ ಪಕ್ಷದ ನಾಯಕರಿದ್ದಾಗ ಆ ಘನತೆ ಉಳಿಸಿದ್ರು. ಸಿದ್ದರಾಮಯ್ಯ ಆ ಆಸೆ ಮೇಲೆ ಹೋಗಿ ಆ ಪರಿಸ್ಥಿತಿ ತರಬೇಡಿ ಅಂದಿದ್ದು.  ವಿಪಕ್ಷ ಸ್ಥಾನಕ್ಕೆ ಆ ಪರಿಸ್ಥಿತಿ ತರಬೇಡಿ ಅಂದಿದ್ದು. ದೇವೇಗವೌಡರ ಹೋರಾಟ ಮಾಡಲು ಸಿದ್ದರಾಮಯ್ಯಗೆ ಆಗಲ್ಲ. ಆ ಸ್ಥಾನಕ್ಕೆ ಅವಮಾನ ಮಾಡಿದ್ದಲ್ಲ. ಆ ಹುದ್ದೆಯ ಮೌಲ್ಯ ಸಿದ್ದರಾಮಯ್ಯ ಹಾಳು ಮಾಡಿದ್ದಾರೆ. ಅದನ್ನು ನಾನು ಹೇಳಿರೋದು. ಡಿಕೆಶಿ ಬಗ್ಗೆ ಕಾಂಗ್ರೆಸ್ ನವರೇ ತಾನೆ ಚರ್ಚೆ ಮಾಡಿದ್ದು. ಪಾಪ ಶಿವಕುಮಾರ್ ಮುಖ್ಯಮಂತ್ರಿಯಾಗಲು ಬಿಡ್ತೀರಾ ಎಂದರು.

  ಬರೋರು ಬರಲಿ, ಹೋಗೋರು ಹೋಗಲಿ

  ಸಿದ್ದರಾಮಯ್ಯ ಸವಾಲು ಸ್ವೀಕರಿಸ್ತೇನೆ. ಜಾತಿಗಣತಿ ಬಗ್ಗೆ ಚರ್ಚೆಗೆ ಸಿದ್ಧ. ನಮ್ಮ ಪಕ್ಷಕ್ಕೆ ಕಾಂಗ್ರೆಸ್ ಬಲೆ ಹಾಕ್ತಿದೆ. ದಿನ ಕಳಿತಿದ್ದಂತೆ ಗೊತ್ತಾಗುತ್ತೆ. ಯಾರ್ಯಾರು ಯಾರ ಬಲೆಗೆ ಬಂದು ಬೀಳ್ತಾರೆ ಅಂತಾ ಗೊತ್ತಾಗುತ್ತೆ. ನಾನು ಯಾವ ಬಲೆಯೂ ಹಾಕಿಲ್ಲ. ಪ್ರೀತಿ ವಿಶ್ವಾಸದಿಂದ ಬರೋರು ಬರಲಿ. ನಮ್ಮ ಪಕ್ಷದಿಂದ ಹೋಗೋರು ಹೋಗಲಿ ಎಂದರು.
  Published by:Latha CG
  First published: