ಬಿಜೆಪಿ ಹೊಡೆದಂಗೆ ಮಾಡ್ತಾರೆ, ಕಾಂಗ್ರೆಸ್ ನವರು ಅತ್ತಂಗೆ ಮಾಡ್ತಾರೆ: HD Kumaraswamy ಮಾತಿನೇಟು

ಬಿಜೆಪಿ ಹೊಡೆದಂಗೆ ಮಾಡ್ತಾರೆ, ಕಾಂಗ್ರೆಸ್ ನವರು ಅತ್ತಂಗೆ ಮಾಡ್ತಾರೆ, ಇವೆರಡು ಒಂದೇ ನಾಣ್ಯದ ಎರಡು ಮುಖಗಳು ಎಂದು ಮಾಜಿ ಸಿಎಂ HD Kumaraswamy ಟೀಕಿಸಿದರು. 

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ

  • Share this:
ರಾಮನಗರ:  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (HD Kumaraswamy) ಬಿಡದಿಯಲ್ಲಿ ಪುರಸಭಾ ಚುನಾವಣೆ ಹಿನ್ನೆಲೆ ಅಭ್ಯರ್ಥಿಗಳ ಪರವಾಗಿ ಪ್ರಚಾರ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿ,  ಕಾಂಗ್ರೆಸ್ ನಾಯಕರು (Congress Leaders) ಮತಾಂತರ ನಿಷೇಧ ಕಾಯ್ದೆ (Anti Conversion Bill) ಬಗ್ಗೆ ವೀರಾವೇಶದಿಂದ ಭಾಷಣ ಬಿಗಿದರು, ಕ್ರೈಸ್ತ ಫಾದರ್ ಗಳ ಜೊತೆಗೆ ಸಭೆ ಮಾಡಿದ್ದರು. ಈಗ ಬೆಳಗಾವಿ ಅಧಿವೇಶನದಲ್ಲಿ ಅವರ ಮುಖಕ್ಕೆ ಮಂಗಳಾರತಿಯಾಗಿದೆ ಎಂದು ವಾಗ್ದಾಳಿ ನಡೆಸಿದರು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಜಯಚಂದ್ರ ಈ ನೋಟ್ ತಂದಾಗ ಸಹಿ ಹಾಕಿದ್ದರು. ಈಗ ಯಾವ ಮುಖ ಹೊತ್ತುಕೊಂಡು ಮತಾಂತರದ ಬಗ್ಗೆ ಮಾತನಾಡ್ತಾರೆ.‌ ಇವರು ಈ ನಾಡಿನ‌ ಜನತೆಗೆ ರಕ್ಷಣೆ ಕೊಡ್ತಾರಾ, ಈಗಾಗಲೇ ಕಾಂಗ್ರೆಸ್ ನಾಯಕರು ಅಧಿಕಾರ ಹಿಡಿದೋ ಅಂತಾ ಭ್ರಮಲೋಕದಲ್ಲಿದ್ದಾರೆ. ಆ ಭ್ರಮೆಯನ್ನ ಜನರೇ ಇಳಿಸುತ್ತಾರೆ, ಸ್ವಲ್ಪ ಕಾದುನೋಡೋಣ ಎಂದರು. ‌ 

ಕಾಂಗ್ರೆಸ್​​-ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು! 

ಇನ್ನು ಈ ಕಾಯ್ದೆಯ ಬಗ್ಗೆ ಚರ್ಚೆ ಮಾಡಲು ಕಾಂಗ್ರೆಸ್ ನಾಯಕರಿಗೆ ನೈತಿಕತೆ ಇಲ್ಲ, ಯಾವ ಮುಖ ಇದೇ ಅವರಿಗೆ. ಇವರ ಸರ್ಕಾರ ಇದ್ದಾಗ ಕ್ಯಾಬಿನೆಟ್ ಮುಂದೆ ಇವರೇ ತಂದಿದ್ದರು. ಈಗ ಬಿಜೆಪಿಯವರಿಗೆ ಅಸ್ತ್ರ ಕೊಟ್ಟಿರೋದು ಇವರೇ.  ರಾಜ್ಯದ ಜನರಿಗೆ ರಕ್ಷಣೆ ಕೊಡುವ ಬಗ್ಗೆ ಈ ಮಹಾನ್ ನಾಯಕರಿಂದ ನಾನು ಕಲಿಯಬೇಕಿಲ್ಲ, 2023 ರಕ್ಕೆ ಜೆಡಿಎಸ್ ಶಕ್ತಿ ಏನೆಂದು ಜನ ತೋರಿಸುತ್ತಾರೆ. ಸಿದ್ದರಾಮಯ್ಯ ರ ನಿಜ ಬಣ್ಣ ಬಯಲಾಗಿದೆ. ಅಧಿವೇಶನದಲ್ಲಿ ಗೋಹತ್ಯೆ ನಿಷೇಧ ಕಾಯ್ದೆ ತಂದಾಗ ವಿಧಾನಪರಿಷತ್ ನಲ್ಲಿ ವಾಕ್ ಔಟ್ ಮಾಡಿದ್ದು ಇದೇ ಕಾಂಗ್ರೆಸ್ ನವರು. ಅವತ್ತು ಇವರು ವಿರೋಧವಾಗಿ ಓಟ್ ಹಾಕಲು ನಿಂತುಕೊಂಡಿದ್ದರಾ. ಬಿಜೆಪಿ ಹೊಡೆದಂಗೆ ಮಾಡ್ತಾರೆ, ಕಾಂಗ್ರೆಸ್ ನವರು ಅತ್ತಂಗೆ ಮಾಡ್ತಾರೆ, ಇವೆರಡು ಒಂದೇ ನಾಣ್ಯದ ಎರಡು ಮುಖಗಳು ಎಂದು ಟೀಕಿಸಿದರು.

ರೈತರ ಜಮೀನಿಗೆ ಒಂದು ಹನಿ ನೀರು ಬಂದಿಲ್ಲ

ಇನ್ನು ಮತಾಂತರ ನಿಷೇಧ ಕಾಯ್ದೆ ಬಗ್ಗೆ ಜೆಡಿಎಸ್ ವಿರೋಧ ಇದೆ. ನಮ್ಮ ಶಾಸಕರು ವಿರೋಧವಾಗಿ ಮತ ಹಾಕ್ತಾರೆಂದರು. ಇನ್ನು ಇದೇ ಸಂದರ್ಭದಲ್ಲಿ ಮೇಕೆದಾಟು ವಿಚಾರವಾಗಿ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿದ ಕುಮಾರಸ್ವಾಮಿ ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದು 2013 ರಲ್ಲಿ ಪಾದಯಾತ್ರೆ ಮಾಡಿದ್ರು. ಪ್ರತಿವರ್ಷ 10 ಸಾವಿರ ಕೋಟಿ ಕೊಡ್ತೇವೆಂದು ಹೇಳಿದ್ದರು. ಕಳೆದ ದಿನ ಅಧಿವೇಶನದಲ್ಲಿ ಇದರ ಬಗ್ಗೆ ಚರ್ಚೆ ಮಾಡಿದ್ದೇನೆ. ವರ್ಷಕ್ಕೆ 10 ಸಾವಿರ ಕೋಟಿ ಕೊಡ್ತೇವೆಂದಿದ್ದರು, ಆದರೆ 5 ವರ್ಷಕ್ಕೆ 8 ಸಾವಿರ ಕೋಟಿ ಕೊಟ್ಟಿದ್ದಾರೆ. 8 ಸಾವಿರ ಕೋಟಿಯಲ್ಲಿ ರೈತರ ಜಮೀನಿಗೆ ಒಂದು ಹನಿ ನೀರು ಹೋಯ್ತಾ ಎಂದು ಪ್ರಶ್ನೆ ಮಾಡಿದರು.

ನೀರಾವರಿ ಯೋಜನೆಗಳಿಗೂ ನಿಮ್ಮ ಬೂಟಾಟಿಕೆಗೂ  ವ್ಯತ್ಯಾಸವಿದೆ 

ಇನ್ನು ಮೇನ್ ಕೆನಲ್ ಮಾಡಲಿಲ್ಲ ಇವರು, ಯಾರೋ ಕಂಟ್ರಾಕ್ಟರ್ ಗಳ ಜೊತೆ ಸೇರಿ ದುಡ್ಡು ಹಂಚಿಕೊಂಡರು, ಇದು ಇವರ ಸಾಧನೆ. ಈಗ ಮೇಕೆದಾಟು ಬಗ್ಗೆ ರೌಂಡ್ ಹಾಕಿಕೊಂಡು ಬರ್ತಾರಂತೆ. ಕನಕಪುರ, ರಾಮನಗರ, ಬಿಡದಿ ಮಾರ್ಗವಾಗಿ 9 ದಿನ ಪಾದಯಾತ್ರೆ ಅಂತೆ. ಯಾವ ಪುರುಷಾರ್ಥಕ್ಕೆ ಪಾದಯಾತ್ರೆ ಮಾಡ್ತಾರೆ ಇವರು ಎಂದ ಕುಮಾರಸ್ವಾಮಿ ಜೆಡಿಎಸ್ ಕೊಟ್ಟ ನೀರಾವರಿ ಯೋಜನೆಗಳಿಗೂ ನಿಮ್ಮ ಬೂಟಾಟಿಕೆಗೂ ಬಹಳ ವ್ಯತ್ಯಾಸವಿದೆ. ಪಾದಯಾತ್ರೆ ಪ್ರಾರಂಭವಾಗಿದ್ದೆ ಮೊದಲು ದೇವೇಗೌಡರಿಂದ. ಈಗ ಅದನ್ನ ಹೈಜಾಕ್ ಮಾಡಿಕೊಂಡು ಈ ಭಾಗದ ಜನರನ್ನ ಮರಳು ಮಾಡಲು ಹೊರಟ್ಟಿದ್ದಾರೆ.

ಇದನ್ನೂ ಓದಿ: ಬ್ರಾಹ್ಮಣರನ್ನು ಮದುವೆಯಾಗಿರುವ ಸಿನಿಮಾ ನಟರನ್ನು ಜೈಲಿಗೆ ಹಾಕ್ತೀರಾ.. ಏನಿದು H Vishwanath ವರಸೆ?

ಈ ಎರಡೂ ರಾಷ್ಟ್ರೀಯ ಪಕ್ಷಗಳಿಂದ ಮೇಕೆದಾಟು ಅನುಷ್ಠಾನ ತರಲು ಸಾಧ್ಯವಿಲ್ಲ, ಅದು ಜನತಾ ದಳದಿಂದ ಮಾತ್ರ ಸಾಧ್ಯ. ನಾವು ಮೊದಲೇ ರಾಜ್ಯಪಾಲರಿಗೂ ಮನವಿ ಕೊಟ್ಟಿದ್ದೆವು, ಮುಖ್ಯಮಂತ್ರಿಗೂ ಈ ಬಗ್ಗೆ ಮನವಿ ಕೊಟ್ಟಿದ್ದೆವು. ಪಕ್ಷದ ವತಿಯಿಂದ ದೊಡ್ಡ ಹೋರಾಟ ಮಾಡ್ತೇವೆಂದು ಹೇಳಿದ್ದೆವು, ಆದರೆ ನಾವು ಪಾದಯಾತ್ರೆ ಮಾಡ್ತೇವೆಂದು ತಿಳಿದು ಈಗ ತರಾತುರಿಯಲ್ಲಿ ಹೊರಟ್ಟಿದ್ದಾರೆ. ಅವರು ಪಾದಯಾತ್ರೆ ಮಾಡ್ತಿರೋದು ಮತಕ್ಕಾಗಿ ಅಷ್ಟೇ, ದೇವೇಗೌಡರನ್ನ ಹೊರತಾಗಿ ಇನ್ಯಾವ ಕಾಂಗ್ರೆಸ್ ನಾಯಕರಿಂದ ಸಹ ನೀರಾವರಿ ಗೆ ಆದ್ಯತೆ ಸಿಕ್ಕಿಲ್ಲ. ಜೆಡಿಎಸ್ ಪಕ್ಷದ ನಿಲುವು ಮೇಕೆದಾಟು ಅಣೆಕಟ್ಟು ಕಟ್ಟಲೇಬೇಕು, ಟೆಕ್ನಿಕಲ್ ಪಾಯಿಂಟ್ ಇಟ್ಟುಕೊಂಡು ಕೆಲಸ ಶುರುಮಾಡಬೇಕು. ಆದರೆ ಇವರಿಗೆ ಪ್ರಚಾರ ಬೇಕಿದೆ ಅಷ್ಟೇ ಎಂದು ರಾಮನಗರದ ಬಿಡದಿಯಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
Published by:Kavya V
First published: