ರಾಮನಗರದಲ್ಲಿ ಯೂರಿಯಾಗಾಗಿ ರೈತರ ಮಧ್ಯೆಯೇ ಕುಸ್ತಿ; ಯಾವುದೇ ಕ್ರಮ ವಹಿಸದ ಆಡಳಿತ

ರಾಮನಗರ ಜಿಲ್ಲೆಯಲ್ಲಿ ರೈತರಿಗೆ ಅಗತ್ಯ ಇರುವ ಯೂರಿಯದ ಪೂರೈಕೆ ಇಲ್ಲದ ಕಾರಣ ಹಲವೆಡೆ ಗೊಬ್ಬರಕ್ಕಾಗಿ ರೈತರ ಮಧ್ಯೆಯೇ ಜಗಳವಾಗುತ್ತಿರುವ ಘಟನೆ ವರದಿಯಾಗಿದೆ. ಯೂರಿಯಾ ಪೂರೈಕೆ ಮಾಡದಿದ್ದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುವುದಾಗಿ ರೈತರು ಎಚ್ಚರಿಕೆ ನೀಡಿದ್ದಾರೆ.

ರಾಮನಗರದಲ್ಲಿ ಯೂರಿಯಅಗಾಗಿ ರೈತರ ಹತಾಶೆ ಪ್ರಯತ್ನ

ರಾಮನಗರದಲ್ಲಿ ಯೂರಿಯಅಗಾಗಿ ರೈತರ ಹತಾಶೆ ಪ್ರಯತ್ನ

  • Share this:
ರಾಮನಗರ: ಯೂರಿಯಗಾಗಿ ರೈತರು ಗಲಾಟೆ ಮಾಡಿಕೊಂಡಿರುವ ಘಟನೆ ರಾಮನಗರ ಜಿಲ್ಲೆಯ ಚನ್ನಪಟ್ಟಣದ ಬ್ರಹ್ಮಣಿಪುರದಲ್ಲಿ ಗ್ರಾಮದಲ್ಲಿ ನಡೆದಿದೆ. ಒಂದು ಲೋಡ್ ಯೂರಿಯಗಾಗಿ ಮುತ್ತಿಕೊಂಡ ರೈತರು ನಡುವೆ ಮಾತಿನ ಚಕಮಕಿ ನಡೆದಿದೆ. ಈ ಬಗ್ಗೆ ಮಾತನಾಡಿರುವ ರೈತರು, ರಾಜ್ಯ ಸರ್ಕಾರ ರೈತರಿಗೆ ಅಗತ್ಯವಾಗಿ ಬೇಕಾಗಿರುವ ಗೊಬ್ಬರವನ್ನ ಸಮರ್ಪಕವಾಗಿ ಪೂರೈಕೆ ಮಾಡುವಲ್ಲಿ ವಿಫಲವಾಗಿದೆ. ಈ ಹಿನ್ನೆಲೆ ಹಳ್ಳಿಗಳಲ್ಲಿ ರೈತರು ಗಲಾಟೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ರೈತರಿಗೆ ಅಗತ್ಯ ಇರುವ ಗೊಬ್ಬರವನ್ನ ಸೂಕ್ತ ರೀತಿಯಲ್ಲಿ ಪೂರೈಕೆ ಮಾಡಬೇಕು. ಇಲ್ಲವಾದರೆ ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.

ಮಧ್ಯವರ್ತಿಗಳ ಹಾವಳಿ, ರೈತರು ಕಂಗಾಲು: ರಾಮನಗರ ಜಿಲ್ಲೆಯಲ್ಲಿ ಈಗ ಉತ್ತಮ ಮಳೆಯಾಗುತ್ತಿದ್ದು ರೈತರು ವ್ಯವಸಾಯದ ಕಡೆಗೆ ಮುಖ ಮಾಡಿದ್ದಾರೆ. ಪ್ರತಿದಿನವೂ ಸಹ ಭೂಮಿಯನ್ನ ಸಿದ್ಧಪಡಿಸುತ್ತಿರುವ ರೈತರು ರಾಗಿ, ಭತ್ತದ ಜೊತೆಗೆ ಹಲವು ಬೆಳೆಗಳನ್ನ ಬೆಳೆಯಲು ತಯಾರಿ ನಡೆಸಿದ್ದಾರೆ. ಆದರೆ ರೈತರಿಗೆ ಸಿಗಬೇಕಾದ ಸೂಕ್ತ ಗೊಬ್ಬರ ಮಾತ್ರ ಸರಿಯಾದ ಸಮಯಕ್ಕೆ ಸಿಗುತ್ತಿಲ್ಲ. ಇದರ ಮಧ್ಯೆ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ದಿನನಿತ್ಯ ರೈತರು ಗೊಬ್ಬರಕ್ಕಾಗಿ ಗುದ್ದಾಡುತ್ತಿದ್ದಾರೆ. ಗೊಬ್ಬರದಲ್ಲಿ ನಾಲ್ಕು ವಿಧಗಳಿದ್ದು ಅದರಲ್ಲಿ ಪ್ರಮುಖವಾಗಿ DAPಗೆ 1220 ರೂ ಬೆಲೆಯಿದೆ. UREAಗೆ 280 ರೂ ಬೆಲೆಯಿದೆ, 20:20ಗೆ 1085 ರೂ ಬೆಲೆಯಿದೆ, 10:26ಗೆ 1250 ರೂ ಬೆಲೆ ಇದೆ. ಆದರೆ ಇದರಲ್ಲಿ ಪ್ರಮುಖವಾಗಿ ರೈತರಿಗೆ ಅಗತ್ಯವಿರುವ ಯೂರಿಯ ಮಾತ್ರ ರೈತರಿಗೆ ಸೂಕ್ತವಾಗಿ ಸಿಗುತ್ತಿಲ್ಲ. ಕೆಲ ಮಧ್ಯವರ್ತಿಗಳು ಮೂಟೆಗಳನ್ನ ರೈತರಿಗೆ ಕೊಡದೇ ಮಾರಿಕೊಳ್ಳುತ್ತಿದ್ದಾರೆ. ಹಣ ಕೊಟ್ಟರೂ ಯೂರಿಯಾ ಸಿಗುತ್ತಿಲ್ಲ. ರಾಮನಗರ ಜಿಲ್ಲೆಯ ನಾಲ್ಕು ಜಿಲ್ಲೆಯಲ್ಲಿ ಇದೇ ಸಮಸ್ಯೆ ಕಾಡುತ್ತಿದೆ.

ಇದನ್ನೂ ಓದಿ: Siddaramaiah - ಜಿಟಿಡಿ ಸೇರ್ಪಡೆ, ಹೆಚ್​ಡಿಕೆ, ಈಶ್ವರಪ್ಪ ಹೇಳಿಕೆಗಳಿಗೆ ಸಿದ್ದರಾಮಯ್ಯ ಕೊಟ್ಟ ಪ್ರತಿಕ್ರಿಯೆ ಇದು

ದಿನಪೂರ್ತಿ ಕಾದರೂ ಯೂರಿಯ ಇಲ್ಲ, ಕಾದುಕಾದು ಸುಸ್ತಾದ ಅನ್ನದಾತ:

ಸೊಸೈಟಿಗಳ ಭಾಗಿಲಲ್ಲಿ ನೂರಾರು ಜನ ರೈತರು ದಿನನಿತ್ಯ ಕಾಯ್ದು ಸುಸ್ತಾಗುತ್ತಿದ್ದಾರೆ. ಇದರ ಜೊತೆಗೆ ರೈತರು ಸಹ ಕೆಲವೊಮ್ಮೆ ತಾಳ್ಮೆ ಕಳೆದುಕೊಂಡು ಜಗಳವಾಡಿಕೊಂಡಿರುವ ಘಟನೆಗಳು ಸಹ ನಡೆದಿವೆ.‌ ಯೂರಿಯಗಾಗಿ ಕಿ.ಮೀ ಗಟ್ಟಲೇ ತಿರುಗಾಡುತ್ತಿರುವ ರೈತರು ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದಾರೆ.‌ ರಾಮನಗರದ ರೈತರು ಚನ್ನಪಟ್ಟಣದಲ್ಲಿ ಯೂರಿಯ ಖರೀದಿಗೆ ಮುಂದಾಗಿದ್ದಾರೆ. ಇದರಲ್ಲಿ ಕೆಲವರು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಮೂಟೆಗಳನ್ನ ಖರೀದಿ ಮಾಡಿದರೆ. ಇನ್ನು ಕೆಲವೆಡೆ ರೈತರು ರೈತರ ನಡುವೆಯೇ ಕುಸ್ತಿ ನಡೆಯುತ್ತಿದೆ.‌ ಇದನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವರು ಒಂದು ಮೂಟೆಗೆ 50-80 ರೂ ಹಣವನ್ನ ಹೆಚ್ಚುವರಿಯಾಗಿ ತೆಗೆದುಕೊಳ್ಳುತ್ತಿರುವ ಘಟನೆಗಳು ಸಹ ನಡೆದಿವೆ. ಇನ್ನು ಈ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರ ಹೆಚ್ಚಿನದಾಗಿ ಗಮನಹರಿಸಬೇಕಿದೆ. ಇಲ್ಲವಾದರೆ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡಲಾಗುತ್ತದೆ ಎಂದು ರೈತರು ನ್ಯೂಸ್ 18 ಮೂಲಕ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ನಮ್ಮದು ವಿಶ್ವದ ಅತಿ ದೊಡ್ಡ ರಾಜಕೀಯ ಪಕ್ಷ, ನಾವು ಯಾರೊಂದಿಗೂ ಮೈತ್ರಿ ಮಾಡಿಕೊಳ್ಳಲ್ಲ; ಅರುಣ್ ಸಿಂಗ್

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: