• Home
  • »
  • News
  • »
  • state
  • »
  • Elephant Attack: 6 ಸಾವಿರ ಟೊಮ್ಯಾಟೊ ಗಿಡ ನಾಶ ಮಾಡಿದ ಕಾಡಾನೆಗಳು; ಕಂಗಾಲಾದ ಚನ್ನಪಟ್ಟಣದ ರೈತ!

Elephant Attack: 6 ಸಾವಿರ ಟೊಮ್ಯಾಟೊ ಗಿಡ ನಾಶ ಮಾಡಿದ ಕಾಡಾನೆಗಳು; ಕಂಗಾಲಾದ ಚನ್ನಪಟ್ಟಣದ ರೈತ!

ಕಾಡಾನೆಗಳ ದಾಳಿಗೆ ನಾಶವಾಗಿರುವ ಟೊಮ್ಯಾಟೊ ಬೆಳೆ.

ಕಾಡಾನೆಗಳ ದಾಳಿಗೆ ನಾಶವಾಗಿರುವ ಟೊಮ್ಯಾಟೊ ಬೆಳೆ.

ಕಳೆದ ಒಂದು ತಿಂಗಳಿನಿಂದ ರಾಮನಗರ - ಚನ್ನಪಟ್ಟಣ ಗಡಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ನಡೆಸುತ್ತಲೇ ಬರುತ್ತಿವೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಈ ವಿಚಾರದಲ್ಲಿ ಅಸಹಾಯಕರಾಗಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಸಹ ಯಾವುದೇ ಬಿಗಿ ಕ್ರಮ ವಹಿಸುತ್ತಿಲ್ಲ ಎಂಬುದೇ ಅತ್ಯಂತ ನೋವಿನ ಸಂಗತಿ.

ಮುಂದೆ ಓದಿ ...
  • Share this:

ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣದ ನೀಲಸಂದ್ರ ಗ್ರಾಮದಲ್ಲಿ (Channapattana Neelasandra Village) ಕಳೆದ ರಾತ್ರಿ ಕಾಡಾನೆಗಳ ಹಿಂಡು (Elephant Attack) ರೈತನ ಕೃಷಿ ಭೂಮಿಗೆ ಲಗ್ಗೆಯಿಟ್ಟು ಬೆಳೆ ನಾಶಪಡಿಸಿವೆ. ಗ್ರಾಮದ ಲೋಕೇಶ್ ಬಾಬು ಎಂಬುವರ ಟೊಮ್ಯಾಟೊ ಬೆಳೆ ನಾಶ ಮಾಡಿರುವ ಕಾಡಾನೆಗಳ ಹಿಂಡು 6 ಸಾವಿರ ಟೊಮ್ಯಾಟೊ ಗಿಡಗಳನ್ನ ತುಳಿದು ಹಾಕಿವೆ. 1.5 ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದ್ದು 80 ಸಾವಿರ ಹಣ ಖರ್ಚು ಮಾಡಿದ್ದ ರೈತ ಲೋಕೇಶ್ ಬಾಬುಗೆ ಈಗ ಸಂಪೂರ್ಣ ನಷ್ಟವಾಗಿದೆ. ಇನ್ನು ಈ ಬೆಳೆಯಿಂದ 2 ರಿಂದ 3 ಲಕ್ಷ ರೂಪಾಯಿ ಆದಾಯ ನಿರೀಕ್ಷೆ ಮಾಡಲಾಗಿತ್ತು. ಆದರೆ ಒಂದೇ ಒಂದು ಕೂಯ್ಲು ಕಟಾವ್  ಮಾಡದ ರೈತ ಲೋಕೇಶ್ ಬಾಬು ಈಗ ಕಾಡಾನೆಗಳ ದಾಳಿಯಿಂದಾಗಿ ಆಘಾತ ಎದುರಿಸುವಂತಾಗಿದೆ.


ಈ ಬಗ್ಗೆ ನ್ಯೂಸ್ 18 ಕನ್ನಡದ ಜೊತೆಗೆ ಮಾತನಾಡಿದ ನೊಂದ ರೈತ ಲೋಕೇಶ್ ಬಾಬು ಕಳೆದ 6 ತಿಂಗಳಿನಿಂದ ಕಷ್ಟಪಟ್ಟು ಸಾಲ ಮಾಡಿ ಬೆಳೆ ಬೆಳೆಯಲಾಗಿತ್ತು. ಈ ಬಾರಿ ಕ್ರೇಟ್ ಟೊಮ್ಯಾಟೊಗೆ 400 ರಿಂದ 450 ರೂಪಾಯಿ ಬೆಲೆ ಇತ್ತು. ಜೊತೆಗೆ ಫಸಲು ಸಹ ಉತ್ತಮವಾಗಿ ಬಂದಿತ್ತು. ಆದರೆ ಕಾಡಾನೆಗಳ ದಾಳಿಯಿಂದಾಗಿ ನಾನು ಬೆಳೆದ ಬೆಳೆ ಸಂಪೂರ್ಣ ನಾಶವಾಗಿದೆ. ಇನ್ನು ಈ ಬಗ್ಗೆ ಅರಣ್ಯಾಧಿಕಾರಿಗಳು ಸಹ ಸೂಕ್ತ ಕ್ರಮ ವಹಿಸುತ್ತಿಲ್ಲ. ಇಷ್ಟೊಂದು ಬೆಳೆ ನಷ್ಟವಾಗಿದ್ದರೂ ಸಹ ಭಾನುವಾರದ ದಿನ ಬರಲಾಗಲ್ಲ ಎಂದು ಅಸಡ್ಡೆಯ ಉತ್ತರ ನೀಡುತ್ತಾರೆ. ರಾಜ್ಯ ಸರ್ಕಾರ ಈ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ನಷ್ಟವಾಗಿರುವ ಬೆಳೆಗೆ ಪರಿಹಾರ ಕೊಡಬೇಕೆಂದು ಒತ್ತಾಯಿಸಿದರು.


ನಾಶವಾಗಿರುವ ಬೆಳೆ ತೋರಿಸುತ್ತಿರುವ ರೈತರು.


ಇನ್ನು ಈ ಬಗ್ಗೆ ಸ್ಥಳೀಯ ರೈತರು ಸಹ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಭಾಗದಲ್ಲಿ ಕಳೆದ ಸುಮಾರು ವರ್ಷಗಳಿಂದ ಕಾಡಾನೆಗಳ ದಾಳಿ ನಿರಂತರವಾಗಿ ನಡೆಯುತ್ತಿದೆ. ರೈತರ ಕೃಷಿ ಭೂಮಿಗಳ ಮೇಲೆ ದಾಳಿ ನಡೆಸಿ ಬೆಳೆ ನಾಶ ಮಾಡುತ್ತಿವೆ. ಆದರೆ ಆಡಳಿತ ನಡೆಸುವ ಸರ್ಕಾರಗಳು ಮಾತ್ರ ರೈತರಿಗೆ ಸೂಕ್ತ ಪರಿಹಾರವನ್ನು ಕೊಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸುತ್ತಾರೆ.


ಇದನ್ನು ಓದಿ: Gauri Lankesh Murder Case: ಗೌರಿ ಲಂಕೇಶ್ ಕೊಲೆಯಾಗಿ 4 ವರ್ಷ; 10 ಸಾವಿರ ಪುಟಗಳ ಚಾರ್ಜ್​ಶೀಟ್ ಸಲ್ಲಿಕೆಯಾಗಿದ್ದರೂ ಆರಂಭವಾಗದ ವಿಚಾರಣೆ


ತೆಂಗಿನಕಲ್ಲು ಅರಣ್ಯದಿಂದ ಬಂದಿರುವ ಆನೆಗಳ ಹಿಂಡು


ಕಳೆದ ಒಂದು ತಿಂಗಳಿನಿಂದ ರಾಮನಗರ - ಚನ್ನಪಟ್ಟಣ ಗಡಿ ವ್ಯಾಪ್ತಿಯಲ್ಲಿ ಕಾಡಾನೆಗಳ ಹಿಂಡು ನಿರಂತರವಾಗಿ ದಾಳಿ ನಡೆಸುತ್ತಲೇ ಬರುತ್ತಿವೆ. ಆದರೆ ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಈ ವಿಚಾರದಲ್ಲಿ ಅಸಹಾಯಕರಾಗಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರ ಸಹ ಯಾವುದೇ ಬಿಗಿ ಕ್ರಮ ವಹಿಸುತ್ತಿಲ್ಲ ಎಂಬುದೇ ಅತ್ಯಂತ ನೋವಿನ ಸಂಗತಿ. ಇನ್ನು ಬೆಳೆ ಕಳೆದುಕೊಂಡ ರೈತರಿಗೆ ಈವರೆಗೆ ಯಾವುದೇ ರೀತಿಯ ಪರಿಹಾರದ ಹಣ ಸಹ ಸರ್ಕಾರದಿಂದ ಸಿಗುತ್ತಿಲ್ಲ. ಕೇವಲ ಬಾಯಿ ಮಾತಿಗೆ ಪರಿಹಾರಕ್ಕೆ ಅರ್ಜಿ ಹಾಕಿ ಎನ್ನುವ ಜನಪ್ರತಿನಿಧಿಗಳ ಬೊಗಳೆ ಮಾತು ಸುಳ್ಳು ಎಂಬುದು ಪದೇಪದೇ ಸಾಬೀತಾಗುತ್ತಿದೆ.


ವರದಿ : ಎ.ಟಿ.ವೆಂಕಟೇಶ್

Published by:HR Ramesh
First published: