ಸಿ.ಟಿ. ರವಿಗೆ ಅವರ ಪಕ್ಷದವರು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಬೇಕು: ಸಂಸದ ಡಿ.ಕೆ. ಸುರೇಶ್

Karnataka Politics: ಸಿ.ಟಿ. ರವಿ ಯಾವುದೇ ಲಂಗು ಲಗಾಮು ಇಲ್ಲದೇ ಮಾತನಾಡುತ್ತಾರೆ. ಅವರನ್ನ ವಿಲ್ಸನ್ ಗಾರ್ಡನ್ ಬಳಿ ಇರುವ ಆಸ್ಪತ್ರೆಗೆ ಕಳುಹಿಸಬೇಕು ಎಂದು ಕಾಂಗ್ರೆಸ್ ಸಂಸದ ಡಿಕೆ ಸುರೇಶ್ ಲೇವಡಿ ಮಾಡಿದ್ಧಾರೆ.

ಡಿಕೆ ಸುರೇಶ್

ಡಿಕೆ ಸುರೇಶ್

  • Share this:
ರಾಮನಗರ, ಡಿ. 21: ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಸಂಸದ ಡಿ.ಕೆ. ಸುರೇಶ್ (Bengaluru Rural MP DK Suresh) ಅವರು ಎಂ.ಇ.ಎಸ್ ಸಂಘಟನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.‌ ಪುರಸಭೆ ಚುನಾವಣೆ ಪ್ರಚಾರದಲ್ಲಿ ಭಾಗಿಯಾಗಿದ್ದ ಡಿ.ಕೆ. ಸುರೇಶ್ ಮಾತನಾಡಿ, ಕರ್ನಾಟಕದ ವಿರುದ್ಧ ಮಾತನಾಡುವವರು, ಕರ್ನಾಟಕದ ಹಕ್ಕನ್ನ ಪ್ರಶ್ನೆ ಮಾಡುವವರ ವಿರುದ್ಧ ಕಠಿಣ ಕಾನೂನು ಕ್ರಮವಹಿಸಬೇಕು. ಈ ಬಗ್ಗೆ ಸಿಎಂ ಈಗಾಗಲೇ ತಿಳಿಸಿದ್ದಾರೆ. ಆದರೆ ಅದನ್ನ ತ್ವರಿತವಾಗಿ ಕ್ರಮವಹಿಸಬೇಕು, ಅದು ನಮ್ಮ ಧರ್ಮ ಎಂದರು.

ಇನ್ನು ಎಂ.ಇ.ಎಸ್ ಸಂಘಟನೆ ಬ್ಯಾನ್ (Ban of MES organization) ವಿಚಾರವಾಗಿ ನಾನು ಮಾತನಾಡಲ್ಲ. ಆದರೆ ಯಾವುದೇ ಸಂಘಟನೆ ನಮ್ಮ ನಾಡಿನ ವಿರುದ್ಧ ಇದ್ದರೆ ಸರ್ಕಾರ ಕ್ರಮವಹಿಸಲಿ. ಯಾವುದೇ ಸಂಘಟನೆ ಇರಲಿ, ಯಾರೇ ಇರಲಿ ಅದರ ವಿರುದ್ಧ ಸರ್ಕಾರ ಕ್ರಮವಹಿಸಲಿ ಎಂದರು.

ಸಿ.ಟಿ. ರವಿ (CT Ravi) ವಿರುದ್ಧ ಸಂಸದ ಡಿ.ಕೆ. ಸುರೇಶ್ ಅವರು ಇದೇ ವೇಳೆ ಕೆಂಡಕಾರಿದರು. ಸಿ.ಟಿ. ರವಿ ಮಾನಸಿಕವಾಗಿ ಅಸ್ವಸ್ಥರಿದ್ದಾರೆ. ಅವರನ್ನ ನಿಮ್ಹಾನ್ಸ್ ಆಸ್ಪತ್ರೆಗೆ ಸೇರಿಸಬೇಕೆಂದು ಪರೋಕ್ಷವಾಗಿ ಹೇಳಿ ಲೇವಡಿ ಮಾಡಿದರು.

ಸಿ.ಟಿ. ರವಿ ಅವರಿಗೆ ಒಂದು ರಾತ್ರಿ ಏನೋ ಅನಿಸುತ್ತದೆ, ಮತ್ತೊಂದು ರಾತ್ರಿ ಇನ್ನೇನೋ ಅನಿಸುತ್ತದೆ. ಹಾಗಾಗಿ ಅವರನ್ನ ಪಕ್ಷದ ನಾಯಕರು ಆಸ್ಪತ್ರೆಗೆ ತೋರಿಸಬೇಕಿದೆ. ಅವರು ರಾಷ್ಟ್ರೀಯ ನಾಯಕರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ. ಅವರ ಘನತೆಗೆ ತಕ್ಕಂತೆ ಮಾತನಾಡಬೇಕಿದೆ. ಅವರಿಗೆ ಯಾವುದೇ ಕೀ ಇಲ್ಲ, ಕೀ ಇಲ್ಲದೇ ಆಡ್ತಾರೆ. ಕೀ ಇಲ್ಲದವರ ಬಗ್ಗೆ ಏನು ಹೇಳಲು ಸಾಧ್ಯ. ಅವರನ್ನ ವಿಲ್ಸನ್ ಗಾರ್ಡನ್ ಗೆ ಕಳುಹಿಸಬೇಕಷ್ಟೇ ಎಂದು ಬೆಂಗಳೂರು ಗ್ರಾಮಾಂತರ ಸಂಸದರೂ ಆಗಿರುವ ಡಿ.ಕೆ. ಸುರೇಶ್ ವ್ಯಂಗ್ಯ ಮಾಡಿದರು.

ಇನ್ನು ಕಾಂಗ್ರೆಸ್ ಪಕ್ಷ ನನಗೆ ಒಂದು ಜವಾಬ್ದಾರಿ ಕೊಟ್ಟಿದೆ. ಹಾಗಾಗಿ ಶ್ರೀಮತಿ ಸೋನಿಯಾ ಗಾಂಧಿಯವರಿಗೆ ಅಭಿನಂದನೆ ತಿಳಿಸುತ್ತೇನೆ ಎಂದವರು ಹೇಳಿದರು.

ಇದನ್ನೂ ಓದಿ: ಕದ್ದುಮುಚ್ಚಿ 2ನೇ ಮದುವೆಗೆ ಸಿದ್ಧತೆ: ಮೊದಲ ಹೆಂಡತಿ, ಎಂಗೇಜ್​​ಮೆಂಟ್​​ ಆದ ಹುಡುಗಿ ಒಂದಾಗಿ ಕೊಟ್ರು ಶಾಕ್!

ಜನವರಿ 9 ರಿಂದ ಮೇಕೆದಾಟು ಹೋರಾಟ ಪ್ರಾರಂಭ ಮಾಡಲಾಗುತ್ತದೆ. ಈ ಬಗ್ಗೆ ಕಾಂಗ್ರೆಸ್ ನಾಯಕರು ಇಂದು ಬೆಳಗಾವಿಯಲ್ಲಿ ಘೋಷಣೆ ಮಾಡಿದ್ದಾರೆ. ಇದು ಪಕ್ಷಾತೀತವಾಗಿ ನಡೆಯುವ ಹೋರಾಟ. ಯಾರು ಬೇಕಾದರೂ ಹೋರಾಟದಲ್ಲಿ ಭಾಗವಹಿಸಬಹುದು ಎಂದು ಕರೆ ನೀಡಿದರು.

ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡಿರುವ ಬಗ್ಗೆ ಮಾತನಾಡಿ, ಸಮಾಜದಲ್ಲಿ ಬದಲಾವಣೆಗಳು ಆಗಬೇಕು, ತೃತೀಯ ಲಿಂಗಿಗಳಿಗೆ ಪೊಲೀಸ್ ಇಲಾಖೆಯಲ್ಲಿ ಅವಕಾಶ ನೀಡಲಾಗಿದೆ. ಕೇಂದ್ರ ಸರ್ಕಾರ ಕೂಡ ಅವರ ಪರವಾಗಿ ನಿಂತಿದೆ. ಸರ್ಕಾರದ ಈ ಕ್ರಮವನ್ನ ಅಭಿನಂದಿಸುತ್ತೇನೆ ಎಂದು ಸಂಸದ ಡಿ.ಕೆ. ಸುರೇಶ್ ಬಿಡದಿಯಲ್ಲಿ ಪ್ರತಿಕ್ರಿಯೆ ನೀಡಿದರು.

ಇದನ್ನೂ ಓದಿ: ರಾಜಕೀಯ ಯುದ್ಧ: DK ಶಿವಕುಮಾರ್ ಮುಂದಿನ ಟಾರ್ಗೆಟ್ ರಮೇಶ್ ಜಾರಕಿಹೊಳಿ ಸ್ವಕ್ಷೇತ್ರ ‘ಗೋಕಾಕ್’!?

ಮೇಕೆದಾಟು ವಿಚಾರವಾಗಿ ಈ ಹಿಂದೆಯೂ ಸಹ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಅವರ ಸಹೋದರ, ಸಂಸದ ಡಿ.ಕೆ. ಸುರೇಶ್ ಇಬ್ಬರೂ ಸಹ ರಾಜ್ಯ ಹಾಗೂ ಕೇಂದ್ರ ಸರ್ಕಾರದ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದರು. ಈ ಯೋಜನೆ ಅನುಷ್ಠಾನವಾದರೆ ರಾಮನಗರ ಜಿಲ್ಲೆಯ ಜೊತೆಗೆ ಬಯಲುಸೀಮೆ ಜಿಲ್ಲೆಗಳಿಗೆ, ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡಬಹುದಾಗಿದೆ.‌ ಹಾಗಾಗಿ ಡಿ.ಕೆ. ಶಿವಕುಮಾರ್ ಈ ಹಿಂದೆ ಜಲಸಂಪನ್ಮೂಲ ಸಚಿವರಾಗಿದ್ದಾಗಲೂ ಸಹ ಮೇಕೆದಾಟು ವಿಚಾರವಾಗಿ ವಿಶೇಷ ಗಮನವಹಿಸಿದ್ದರು. ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: