ರಾಮನಗರ ಜಿಲ್ಲೆಯ ಜನರಿಗೆ ಡಿ.ಕೆ.ಬ್ರದರ್ಸ್ ಆಸರೆ; ಕೋವಿಡ್ ಸೋಂಕಿತರಿಗೆ ಉಚಿತ ಹೈಟೆಕ್ ಹೆಲ್ತ್ ಕಿಟ್ ವಿತರಣೆ

ಈ ಬಗ್ಗೆ ಸಂಸದ ಡಿ.ಕೆ.ಸುರೇಶ್ ಅವರು ‌ಮಾತನಾಡಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಬಹುದು. ಇದು ಜಿಲ್ಲೆಯ ಜನರಿಗಾಗಿ ಮಾಡಿರುವ ಯೋಜನೆ ಎಂದು ನ್ಯೂಸ್ 18 ಗೆ ತಿಳಿಸಿದ್ದಾರೆ.

ಡಿ.ಕೆ. ಬ್ರದರ್ಸ್ ನೀಡುತ್ತಿರುವ ಹೆಲ್ತ್ ಕಿಟ್​ನಲ್ಲಿರುವ ಔಷಧಗಳು ಮತ್ತು ಪರಿಕರಗಳು.

ಡಿ.ಕೆ. ಬ್ರದರ್ಸ್ ನೀಡುತ್ತಿರುವ ಹೆಲ್ತ್ ಕಿಟ್​ನಲ್ಲಿರುವ ಔಷಧಗಳು ಮತ್ತು ಪರಿಕರಗಳು.

  • Share this:
ರಾಮನಗರ : ಕೊರೋನಾ ಮಹಾಮಾರಿ ಬಂದ ದಿನದಿಂದಲೂ ಸಹ ಡಿ.ಕೆ.ಸಹೋದರರು ಒಂದಲ್ಲ ಒಂದು ರೀತಿ ಸ್ವಕ್ಷೇತ್ರ ರಾಮನಗರ ಜಿಲ್ಲೆಯ ಜನರಿಗೆ ನೆರವಾಗುತ್ತಿದ್ದಾರೆ. ಮೊದಲನೇ ಅಲೆ ಬಂದ ಸಂದರ್ಭದಲ್ಲಿ ಕೋವಿಡ್ ಸೋಂಕಿತರಿಗೆ ಭರ್ಜರಿ ಊಟದ ವ್ಯವಸ್ಥೆ ಮಾಡಿದ್ದರು. ಜಿಲ್ಲೆಯಲ್ಲಿದ್ದ ಎಲ್ಲಾ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಜನರಿಗೆ ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್ ನಿಂದ ಬಗೆಬಗೆಯ ಗುಣಮಟ್ಟದ ಫುಡ್ ಕೊಡುವ ಮೂಲಕ ಜಿಲ್ಲೆಯ ಜನರ ಪಾಲಿಗೆ ಆಪತ್ಭಾಂಧವರಾಗಿದ್ದರು. ಇದರ ಜೊತೆಗೆ 17 ಸಾವಿರ ಲೀಟರ್ ಸ್ಯಾನಿಟೈಜರ್ ಜೊತೆಗೆ 2 ಲಕ್ಷ ಮಾಸ್ಕ್ ಗಳನ್ನ ಜಿಲ್ಲೆಯಾದ್ಯಂತ ಹಂಚುವ ಮೂಲಕ ಕೊರೋನಾ ಸಂಕಷ್ಟದ ಸಮಯದಲ್ಲಿ ಜನರಿಗೆ ನೆರವಾಗಿದ್ದರು. ಈ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದಾರೆ.

ಇನ್ನು ಕೊರೋನಾ ಎರಡನೇ ಅಲೆ ಪ್ರಾರಂಭವಾಗಿದ್ದು ಈಗಾಗಲೇ ರಾಮನಗರ ಜಿಲ್ಲೆಯಲ್ಲಿ 4 ಸಾವಿರಕ್ಕೂ ಹೆಚ್ಚು ಪಾಸಿಟಿವ್ ಕೇಸ್ ಗಳು ಪತ್ತೆಯಾಗಿವೆ. ಈ ಸಂದರ್ಭದಲ್ಲಿ ಮೊದಲನೇ ಅಲೆಗಿಂತಲೂ ಹೆಚ್ಚಾಗಿ ಎರಡನೇ ಅಲೆ ತೀರಾ ಗಂಭೀರ ಸ್ವರೂಪ ಪಡೆದುಕೊಂಡಿದೆ. ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ಬರಲು ಹೆದರುತ್ತಿದ್ದಾರೆ. ಮನೆಯಲ್ಲಿಯೇ ಸೆಲ್ಫ್ ಕ್ವಾರಂಟೈನ್ ಆಗುವ ಮೂಲಕ ಜನರು ಭಯಭೀತರಾಗಿದ್ದಾರೆ. ಈ ಹಿನ್ನೆಲೆ ಜಿಲ್ಲೆಯ ಜನರ ಆರೋಗ್ಯ ಕಾಪಾಡುವ ಸಲುವಾಗಿ ಡಿ.ಕೆ.ಎಸ್ ಚಾರಿಟೆಬಲ್ ಟ್ರಸ್ಟ್ ವತಿಯಿಂದಾಗಿ ಕೆ.ಪಿ‌.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ‌.ಸುರೇಶ್ ರವರು ಈ ಮಾಸ್ಟರ್ ಪ್ಲ್ಯಾನ್ ಮಾಡಿದ್ದು ಕೋವಿಡ್ ಸೋಂಕಿತರಿಗೆ ಟ್ರಸ್ಟ್ ನಿಂದ ಉಚಿತವಾಗಿ ಹೈಟೆಕ್ ಹೆಲ್ತ್ ಕಿಟ್ ಕೊಡಲು ನಿರ್ಧಾರ ಮಾಡಿ ಈಗಾಗಲೇ ಹಂಚುತ್ತಿದ್ದಾರೆ.

100ಕ್ಕೂ ಹೆಚ್ಚು ಜನರಿಗೆ ಕಿಟ್ ವಿತರಣೆ

ಡಿ.ಕೆ.ಬ್ರದರ್ಸ್ ಕೊಡುತ್ತಿರುವ ಹೈಟೆಕ್ ಹೆಲ್ತ್ ಕಿಟ್ ನಲ್ಲಿ ಒಂದು ಥರ್ಮಾ ಮೀಟರ್, ಪಲ್ಸ್ ಆಕ್ಸಿ ಮೀಟರ್, 2 ಮಾಸ್ಕ್, 1 ಸ್ಯಾನಿಟೈಸರ್ ಬಾಟಲ್ ಜೊತೆಗೆ ಕೊರೋನಾಗೆ ಸಂಬಂಧಿಸಿದ ಎಲ್ಲಾ ಮಾತ್ರೆಗಳನ್ನ ಉಚಿತವಾಗಿ ನೀಡಲಾಗುತ್ತಿದೆ‌. ಇನ್ನು ಈ ಒಂದು ಕಿಟ್ ಗೆ 2,500 - 3,000 ಸಾವಿರ ರೂ. ಬೆಲೆಯಾಗುತ್ತಿದ್ದು ಅದನ್ನ ಸಂಪೂರ್ಣವಾಗಿ ಡಿ.ಕೆ.ಬ್ರದರ್ಸ್ ಭರಿಸುತ್ತಿದ್ದಾರೆ. ಇನ್ನು ಡಿ.ಕೆ.ಬ್ರದರ್ಸ್ ಮಾಡುತ್ತಿರುವ ಈ ಸಮಾಜಮುಖಿ ಕಾರ್ಯಕ್ಕೆ ಈಗಾಗಲೇ ಜಿಲ್ಲೆಯ ಜನರು ವ್ಯಾಪಕವಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನು ಓದಿ: ಡಿಸಿಗಳೊಂದಿಗೆ ಸಭೆಗೆ ಅನುಮತಿ ನಿರಾಕರಣೆ; ಸಭೆ ಮಾಡಿಬಿಟ್ರೆ ಎಲ್ಲಾ ಗೊತ್ತಾಗಿ ಬಿಡುತ್ತೆ ಅನ್ನೊ ಭಯ ಇವರಿಗೆ ಎಂದ ಸಿದ್ದರಾಮಯ್ಯ

ಕೋವಿಡ್ ಹೆಲ್ಫ್ ಲೈನ್ ನಂಬರ್ ಮೂಲಕ ಕಿಟ್ ವಿತರಣೆ

ಇನ್ನು ಈ ಹೆಲ್ತ್ ಕಿಟ್ ಗಳನ್ನ ಪ್ರಮುಖವಾಗಿ ಯಾರು ಕೊರೋನಾ ಸೋಂಕಿಗೆ ಒಳಗಾಗಿರುತ್ತಾರೋ ಅಂತಹವರಿಗೆ ಉಚಿತವಾಗಿ ನೀಡಲಾಗುತ್ತಿದೆ‌. ಇದಕ್ಕಾಗಿಯೇ ಒಂದು ಫೋನ್ ನಂಬರ್ ಸಹ ಕೊಡಲಾಗಿದೆ. 080 - 37121133 ಈ ನಂಬರ್ ಗೆ ಸೋಂಕಿತರು ಕರೆ ಮಾಡಿದರೆ ವೈದ್ಯರು ನಿಮ್ಮ ಕರೆಗಳನ್ನು ಸ್ವೀಕರಿಸುತ್ತಾರೆ. ಸೋಂಕಿತರ ಜೊತೆಗೆ ಚರ್ಚೆ ನಡೆಸುವ ವೈದ್ಯರು ಅವರಿಗೆ ಯಾವ ರೀತಿ ಸಮಸ್ಯೆ ಇದೇ ಎಂದು ಆಲಿಸುತ್ತಾರೆ. ನಂತರ ಸೋಂಕಿತರಿಗೆ ಕೌನ್ಸಿಲಿಂಗ್ ಮಾಡಿದ ನಂತರ ಅವರಿಗೆ ಉಚಿತವಾಗಿ ಹೆಲ್ತ್ ಕಿಟ್ ನೀಡಿ ಮನೆಯಲ್ಲಿಯೇ ಯಾವ ರೀತಿ ತಮ್ಮ ಆರೋಗ್ಯ ಕಾಪಾಡಿಕೊಳ್ಳಬೇಕೆಂದು ವೈದ್ಯರು ಸಲಹೆ ನೀಡುತ್ತಾರೆ‌. ಇನ್ನು ಜಿಲ್ಲೆಯಾದ್ಯಂತ ಈಗಾಗಲೇ ಕರೆ ಮಾಡುವ ಸೋಂಕಿತರಿಗೆ ಡಿ‌.ಕೆ.ಬ್ರದರ್ಸ್ ಟ್ರಸ್ಟ್‌ನ ಸದಸ್ಯರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಸ್ವತಃ ಅವರ ಮನೆಗಳ ಬಳಿ ಹೋಗಿ ಕಿಟ್ ವಿತರಣೆ ಮಾಡುತ್ತಿದ್ದಾರೆ.

ಈ ಬಗ್ಗೆ ಸಂಸದ ಡಿ.ಕೆ.ಸುರೇಶ್ ಅವರು ‌ಮಾತನಾಡಿ ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ಹೆಲ್ಪ್ ಲೈನ್ ನಂಬರ್ ಗೆ ಕರೆ ಮಾಡಬಹುದು. ಇದು ಜಿಲ್ಲೆಯ ಜನರಿಗಾಗಿ ಮಾಡಿರುವ ಯೋಜನೆ ಎಂದು ನ್ಯೂಸ್ 18 ಗೆ ತಿಳಿಸಿದ್ದಾರೆ.

ವರದಿ: ಎ.ಟಿ.ವೆಂಕಟೇಶ್
Published by:HR Ramesh
First published: