• Home
  • »
  • News
  • »
  • state
  • »
  • 2 ಸಾವಿರ ಜನ ಕೊರೋನಾ ವಾರಿಯರ್ಸ್​ಗೆ ವಿಶೇಷ ಸನ್ಮಾನ; ಡಿ.ಕೆ.ಬ್ರದರ್ಸ್ ಕಾರ್ಯಕ್ಕೆ ಮೆಚ್ಚುಗೆ

2 ಸಾವಿರ ಜನ ಕೊರೋನಾ ವಾರಿಯರ್ಸ್​ಗೆ ವಿಶೇಷ ಸನ್ಮಾನ; ಡಿ.ಕೆ.ಬ್ರದರ್ಸ್ ಕಾರ್ಯಕ್ಕೆ ಮೆಚ್ಚುಗೆ

ಕೊರೋನಾ ವಾರಿಯರ್ಸ್​ಗೆ ಸನ್ಮಾನ ಮಾಡಿದ ಡಿ.ಕೆ. ಬ್ರದರ್ಸ್.

ಕೊರೋನಾ ವಾರಿಯರ್ಸ್​ಗೆ ಸನ್ಮಾನ ಮಾಡಿದ ಡಿ.ಕೆ. ಬ್ರದರ್ಸ್.

ಸಚಿವ ಅಶ್ವಥ್ ನಾರಾಯಣ್ ಅವರು ಕೇಂದ್ರ ಸರಕಾರ ಮೇಕೆದಾಟು ವಿಚಾರವಾಗಿ ನಮ್ಮ ಪರ ಇದೆ ಅಂತಾ ಹೇಳಿದ್ದಾರೆ. ಈ ಒಂದು ಮಾತು ಸಾಕು ತಮಿಳುನಾಡಿನ ಸರಕಾರ ಇದನ್ನೆ ಒಂದು ಗ್ರಿಪ್ ಹಿಡಿದುಕೊಂಡು ಕೋರ್ಟ್ ಗೆ ಅರ್ಜಿ ಸಲ್ಲಿಸಿಬಿಡುತ್ತಾರೆ ಎಂದು ಡಿಕೆಶಿ ಹೇಳಿದರು.

  • Share this:

ಕನಕಪುರ: ಕೊರೋನಾ ಎಮರ್ಜೆನ್ಸಿ ಸಂದರ್ಭದಲ್ಲಿ ತಮ್ಮ ಜೀವದ ಭಯವನ್ನ ಬಿಟ್ಟು ಸ್ವಯಂಪ್ರೇರಿತವಾಗಿ ಜನಸೇವೆ ಮಾಡಿದ ಸರಿಸುಮಾರು 2 ಸಾವಿರ ಜನರಿಗೆ 75 ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ವಿಶೇಷ ಸನ್ಮಾನ ಮಾಡಲಾಯಿತು. ರಾಮನಗರ ಜಿಲ್ಲೆಯ ಕನಕಪುರ ತಾಲೂಕು ಕ್ರೀಡಾಂಗಣದಲ್ಲಿ ನಡೆದ ಕಾರ್ಯಕ್ರಮದ ಉಸ್ತುವಾರಿಯನ್ನ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ ವಹಿಸಿಕೊಂಡು ಅಚ್ಚುಕಟ್ಟಾಗಿ ಕಾರ್ಯಕ್ರಮವನ್ನ ನೆರವೇರಿಸಿದರು.


ಪೊಲೀಸರು, ವೈದ್ಯರು, ಶುಶ್ರೂಷಕ, ಶುಶ್ರೂಷಕಿಯರು, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಸಂಘಸಂಸ್ಥೆಗಳು ಸೇರಿದಂತೆ ಕೊರೋನಾ ಸಂದರ್ಭದಲ್ಲಿ ಯಾರ್ಯಾರು ಜನಸೇವೆಯಲ್ಲಿ ತೊಡಗಿದ್ದರೋ ಅಂತಹ ಎಲ್ಲಾ ಕೋವಿಡ್ ವಾರಿಯರ್ಸ್ ಗೂ ವಿಶೇಷವಾಗಿ ಗೌರವ ನೀಡಲಾಯಿತು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಕೊರೋನಾ ಸಂದರ್ಭದಲ್ಲಿ ತಮ್ಮ ಜೀವದ ಭಯವನ್ನ ಬಿಟ್ಟು ನೀವೆಲ್ಲರೂ ನಮ್ಮ ಸೇವೆ ಮಾಡಿದ್ದೀರಿ. ಆ ಸೇವೆಯ ಮುಂದೆ ನಾವು ಮಾಡ್ತಿರುವ ಸನ್ಮಾನ ದೊಡ್ಡದಲ್ಲ. ಆದರೆ ನಿಮ್ಮ ದೊಡ್ಡ ತ್ಯಾಗಕ್ಕೆ ನಮ್ಮ ಚಿಕ್ಕ ಗೌರವ ಎಂದು ಕೊರೋನಾ ವಾರಿಯರ್ಸ್ ಗೆ ನೈತಿಕವಾಗಿ ಬೆಂಬಲ ಸೂಚಿಸುವ ಮೂಲಕ ನಿಮ್ಮ ಜೊತೆಗೆ ಸದಾ ನಾನಿದ್ದೇನೆಂದು ಭರವಸೆ ನೀಡಿದರು.


ಇದನ್ನು ಓದಿ: ತೆರೆದ ಮಾರುಕಟ್ಟೆಯಲ್ಲಿ ಸೂಪರ್‌ ಮಾರ್ಕೆಟ್ ರೀತಿ ನಿಯಮ ಜಾರಿ! ಜನದಟ್ಟಣೆ‌ ತಪ್ಪಿಸಲು ಬಿಬಿಎಂಪಿ ಮೆಗಾಪ್ಲಾನ್


ಮೇಕೆದಾಟು ಯೋಜನೆಯನ್ನು ಶೀಘ್ರವೇ ಪ್ರಾರಂಭ ಮಾಡಲಿ


ಮೇಕೆದಾಟು ವಿಚಾರದಲ್ಲಿ ಸಚಿವರುಗಳ ಹೇಳಿಕೆ ಪ್ರಚಾರಕ್ಕಾಗಿ. ಅವರಿಗೆ ಧೈರ್ಯ ಇದ್ರೆ ಬದ್ದತೆ ಇದ್ರೆ ಪ್ರಧಾನಮಂತ್ರಿ ಹಾಗೂ ಕೇಂದ್ರ ನೀರಾವರಿ ಸಚಿವರನ್ನ ಭೇಟಿ ಮಾಡಲಿ. ರಾಜ್ಯದ 25 ಸಂಸದರು ಹೋರಾಟ ಮಾಡಿ ಧರಣಿ ಮಾಡಿ ಮೇಕೆದಾಟು ಯೋಜನೆ ಪ್ರಾರಂಭ ಮಾಡಿಸಬೇಕು. ಬೆಂಗಳೂರಿನಲ್ಲಿರುವ 3 ಮಂದಿ ಸಂಸದರು ಹೋರಾಟ ಮಾಡಬೇಕು. ಕಾರಣ ಈ ಯೋಜನೆಯಿಂದ ಬೆಂಗಳೂರಿನ ಜನರಿಗೆ ಕುಡಿಯುವ ನೀರು ಸಿಗುತ್ತದೆ. ಈ ಯೋಜನೆಗೆ ಕ್ರೇತ್ರದ ಜನರಾಗಿ ನಾವು ತಕರಾರು ಮಾಡಬೇಕು. ಆದರೆ ನಾವೇ ಮಾಡಿ ಅಂತಾ ಹೇಳುತ್ತಿದ್ದೇವೆ. ಎಷ್ಟು ಜಮೀನು ಹೋದರು ಹೋಗಲಿ ಜನರನ್ನು ಒಪ್ಪಿಸುತ್ತೇನೆ. ಈ ಯೋಜನೆಯಲ್ಲಿ ಒಂದು ಎಕರೆಗು ನೀರು ಬಳಸಿಕೊಳ್ಳುವುದಿಲ್ಲ. ಎಲ್ಲವು ಕುಡಿಯುವ ನೀರಿಗಾಗಿ ಅಷ್ಟೇ. ಈ ಯೋಜನೆಯಲ್ಲಿ ವಿದ್ಯುತ್​ಚ್ಛಕ್ತಿ ತಯಾರು ಮಾಡಲಾಗುತ್ತೆ. ಬೇಕಿದ್ದರೆ ತಮಿಳುನಾಡಿನ ಸರಕಾರ ಖರೀದಿ ಮಾಡಲಿ. ಸಚಿವ ಅಶ್ವಥ್ ನಾರಾಯಣ್ ಅವರು ಕೇಂದ್ರ ಸರಕಾರ ಮೇಕೆದಾಟು ವಿಚಾರವಾಗಿ ನಮ್ಮ ಪರ ಇದೆ ಅಂತಾ ಹೇಳಿದ್ದಾರೆ. ಈ ಒಂದು ಮಾತು ಸಾಕು ತಮಿಳುನಾಡಿನ ಸರಕಾರ ಇದನ್ನೆ ಒಂದು ಗ್ರಿಪ್ ಹಿಡಿದುಕೊಂಡು ಕೋರ್ಟ್ ಗೆ ಅರ್ಜಿ ಸಲ್ಲಿಸಿಬಿಡುತ್ತಾರೆ. ಕೇಂದ್ರ ಹಾಗೂ ರಾಜ್ಯದಲ್ಲಿ ಡಬ್ಬಲ್ ಇಂಜಿನ್ ಸರಕಾರ ಇದ್ರೆ ಕೆಲಸ ಹಾಗುತ್ತೆ ಅಂತಾ ಅಶ್ವಥ್ ನಾರಾಯಣ್ ಹೇಳಿದ್ರಲ್ಲ ಮಾಡಿಸಲಿ. ಅಶ್ವಥ್ ನಾರಾಯಣ್ ಅವರು ಬೇಜವಾಬ್ದಾರಿ ಹೇಳಿಕೆಗಳನ್ನ ಕೊಡಬಾರದು. ಅಶ್ವಥ್ ನಾರಾಯಣ್ ಒಬ್ಬ ಸಾಮಾನ್ಯ ವ್ಯಕ್ತಿ ಅಲ್ಲಾ. ಅವರು ಸಚಿವರು. ಹೇಳಿಕೆಗಳನ್ನ ಕೊಡುವಾಗ ಜವಾಬ್ದಾರಿಯಾಗಿ ಮಾತನಾಡಬೇಕು ಎಂದು ಕನಕಪುರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿಕೆ ನೀಡಿದರು.


ಇನ್ನು ಸಂಸದರು ಹಾಗೂ ಸಚಿವರು ಪ್ರಧಾನಿ ಮೋದಿ ಮುಂದೆ ನಿಂತು ಮಾತನಾಡಲು  ಹೆದುರುತ್ತಿದ್ದಾರೆ.  ಒಂದು ವೇಳೆ ಮಾತನಾಡಿದರೆ ಎಲ್ಲಿ ನಮ್ಮ ಸ್ಥಾನ, ಅಧಿಕಾರ ಹೋಗುತ್ತೆ ಅನ್ನೊ ಭಯ ಅವರಿಗೆ. ಮಹದಾಯಿ ವಿಚಾರ ಆಗಲಿ ಯಾವುದೇ ವಿಚಾರ ಆಗಲಿ ಮೋದಿ ಮುಂದೆ ಮಾತನಾಡಲು ಬೊಮ್ಮಾಯಿ, ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್ ಅವರುಗಳ ಮಾತಿಲ್ಲ. ಉಸಿರು ನಿಂತು ಹೋಗಿದೆ. ಇನ್ನು ಸಿ.ಟಿ.ರವಿ ಯಾವುದೊ ನಶೆಯಲ್ಲಿದ್ದಾರೆ. ಅವರ ಬಗ್ಗೆ ಮಾತನಾಡುವುದು ಬೇಡ ಎಂದರು.


ವರದಿ : ಎ.ಟಿ.ವೆಂಕಟೇಶ್

Published by:HR Ramesh
First published: