CP Yogeeshwara - ಜೈಲಿಗೆ ಹೋದವರನ್ನ ಬಿಜೆಪಿಗೆ ಸೇರಿಸಲ್ಲ: ಡಿಕೆಶಿಗೆ ಸಚಿವ ಸಿ.ಪಿ.ವೈ. ಲೇವಡಿ

ನಾನು ಒಂದು ಹೇಳಿಕೆ ಕೊಟ್ಟ ಮಾರನೆ ದಿನ ಕುಮಾರಸ್ವಾಮಿ ಸಿಎಂ ಭೇಟಿ ಮಾಡುತ್ತಾರೆ. ಬೆಳಗ್ಗೆ ಕುಮಾರಸ್ವಾಮಿ, ರಾತ್ರಿ ಡಿ.ಕೆ. ಶಿ ಮುಖ್ಯಮಂತ್ರಿಯನ್ನ ಭೇಟಿಯಾಗ್ತಾರೆ. ಹತಾಶೆ ಮನೋಭಾವ ಅಂದ್ರೆ ಇದೇ ಎಂದು ಯೋಗೇಶ್ವರ್ ಟೀಕಿಸಿದ್ದಾರೆ..

ಸಿ ಪಿ ಯೋಗೀಶ್ವರ

ಸಿ ಪಿ ಯೋಗೀಶ್ವರ

  • Share this:
ರಾಮನಗರ: ಕೆ ಪಿ ಸಿ ಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರಿಗೆ ಸಚಿವ ಸಿ ಪಿ ಯೋಗೇಶ್ವರ್ ಟಾಂಟ್ ಕೊಟ್ಟಿದ್ದಾರೆ.‌ ರಾಮನಗರ ಜಿಲ್ಲೆಯ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿ ಪಿ ಯೋಗೇಶ್ವರ್, ಕಾಂಗ್ರೆಸ್​ಗೆ ಯಾರು ಬೇಕಾದರೂ ಅರ್ಜಿ ಹಾಕಬಹುದು ಎಂದಿದ್ದ ಡಿಕೆಶಿ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.  ಜೈಲಿಗೆ ಹೋಗಿ ಬಂದವರನ್ನ ನಾವು ಬಿಜೆಪಿಗೆ ಕರೆದುಕೊಳ್ಳಲ್ಲ ಎಂದ ಯೋಗೇಶ್ವರ್ ಪರೋಕ್ಷವಾಗಿ ಡಿ. ಕೆ. ಶಿವಕುಮಾರ್ ಅವರಿಗೆ ಲೇವಡಿ ಮಾಡಿದರು.

ಇನ್ನು ಕೆ ಆರ್ ಎಸ್ ಸುತ್ತಲೂ ಕಲ್ಲು ಗಣಿಗಾರಿಕೆ ಅನೇಕ ವರ್ಷಗಳಿಂದ ನಡೆಯುತ್ತಿದೆ. ಈ ಬಗ್ಗೆ ಮಂಡ್ಯ ಸಂಸದರಿಗೆ ಆತಂಕ ಇರಬೇಕು. ಅದಕ್ಕೆ ಅವರು ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮಾತನಾಡಿರುವುದು ಸರಿ ಅಲ್ಲ. ಅವರು ಈಗಾಗಲೇ ತಮ್ಮ ವ್ಯಕ್ತಿತ್ವ ಕಳೆದುಕೊಂಡಿದ್ದಾರೆ. ಅವರ ಮಾತುಗಳು ತೂಕ ಕಳೆದುಕೊಂಡಿವೆ. ಅವರ ರಾಜಕೀಯ ನೆಲೆ ದಿನೇ ದಿನೇ ಕುಸಿಯುತ್ತಿದೆ ಎಂದು ಸಿ ಪಿ ವೈ ಟೀಕಿಸಿದರು.

ನಾನು ಒಂದು ಹೇಳಿಕೆ ಕೊಟ್ಟ ಮಾರನೆ ದಿನಕ್ಕೆ ಕುಮಾರಸ್ವಾಮಿ ಸಿಎಂ ಅವರನ್ನ ಭೇಟಿ ಮಾಡುತ್ತಾರೆ.‌ ಬೆಳಗ್ಗೆ ಕುಮಾರಸ್ವಾಮಿ, ರಾತ್ರಿ ಡಿ. ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯನ್ನ ಭೇಟಿಯಾಗ್ತಾರೆ. ಹೆಚ್ ಡಿ ಕೆಗೆ ಹತಾಶೆ ಮನೋಭಾವ ಅಂದ್ರೆ ಇದೇ. ಅಲ್ಲಿ ಅವರ ಮಗನನ್ನು ಜನ ಸೋಲಿಸಿದ್ದಾರೆ. ಉತ್ತರ ಕರ್ನಾಟದಕಲ್ಲಿ ಜೆಡಿಎಸ್​ಗೆ ನೆಲೆ ಇಲ್ಲ. ಇನ್ನು ಮಂಡ್ಯ ಬಿಡಲು ರೆಡಿ ಇಲ್ಲ‌. ಹೀಗಾಗಿ ಏನೇನೋ ಮಾತನಾಡುತ್ತಿದ್ದಾರೆ ಎಂದು ಚನ್ನಪಟ್ಟಣ ಕ್ಷೇತ್ರದ ಮಾಜಿ ಶಾಸಕರು ವ್ಯಂಗ್ಯ ಮಾಡಿದರು.

ಇನ್ನು ನಾನು ಬೇರೆಯವರ ಮಾತಿಗೆ ರಿಯಾಕ್ಟ್ ಮಾಡುವುದಿಲ್ಲ‌, ನನ್ನ ಮಾತಿಗೆ ನಾನು ಬದ್ದವಾಗಿದ್ದೇನೆ. ನೀವು ಬಯಸುವ ಉತ್ತರವನ್ನು ನಾನು ಹೇಳುವುದಿಲ್ಲ. ನನ್ನ ನಿಲುವನ್ನು ಆಗಾಗ್ಗೆ ವ್ಯಕ್ತ ಪಡಿಸುತ್ತೇನೆ. ಲೋಪಗಳ ಬಗ್ಗೆ ಗಟ್ಟಿಯಾಗಿ ಧ್ವನಿ ಎತ್ತುತ್ತಿದ್ದೇನೆ‌. ಐದು ಬಾರಿ ನಾನು ಗೆಲುವು ಸಾಧಿಸಿದ್ದೇನೆ ಎಂದರು.

ರೇಣುಕಾಚಾರ್ಯ ರಾಜಕೀಯ ಕಾರ್ಯದರ್ಶಿಯಾಗಿದ್ದಾನೆ. ಅವರಿಗೆ ಬೆಂಗಳೂರಿನಲ್ಲಿ ಐಷಾರಾಮಿ ಮನೆ ಸಿಕ್ಕಿದೆ ಎಂದರೆ ಅಲ್ಲಿ ನನ್ನ ಶ್ರಮವಿದೆ ಎಂದು ಯಡಿಯೂರಪ್ಪ ಅವರ ಅತ್ಯಾಪ್ತ ಶಾಸಕನಿಗೆ ಚಾಟಿ ಬೀಸಿದ ಸಿ ಪಿ ಯೋಗೀಶ್ವರ, ನಾನು ಸಹ ಮುಖ್ಯಮಂತ್ರಿ ಆಡಳಿತವನ್ನು ಒಪ್ಪಿದ್ದೇನೆ. ನಿನ್ನೆ ಪ್ರಧಾನಿ, ಮಂತ್ರಿ ಮಂಡಲ ವಿಸ್ತರಿಸಿದ್ದಾರೆ, ಅದೇ ರೀತಿ ಮುಖ್ಯಮಂತ್ರಿಗಳು ಮಾಡಬೇಕು ಎಂದು ಸಲಹೆ ನೀಡಿದರು.

ಇದನ್ನೂ ಓದಿ: Sumalatha Ambrish| ಅಂಬರೀಶ್ ಕಾಲದಲ್ಲಿ ಅಕ್ರಮ ನಡೆದಿದ್ದರೆ ದಾಖಲೆ ತನ್ನಿ; ಕುಮಾರಸ್ವಾಮಿಗೆ ಸಂಸದೆ ಸುಮಲತಾ ಸವಾಲು!

ಇನ್ನು ಮಂಡ್ಯ ಜಿಲ್ಲೆಗೆ ಮುಂದಿನ ದಿನಗಳಲ್ಲಿ ಭೇಟಿ ಮಾಡ್ತೇನೆ. ಅಕ್ರಮ ಕಲ್ಲು ಗಣಿಗಾರಿಕೆ ಬಗ್ಗೆ ಗಮನಹರಿಸುತ್ತೇನೆ. ನಮ್ಮ ಇಲಾಖೆಯಿಂದ ಯಾವ ಕ್ರಮ ವಹಿಸಬೇಕೋ ವಹಿಸಲಾಗುತ್ತೆ. ಡ್ಯಾಂ ಗೂ ಸಹ ಭೇಟಿ ಕೊಡುತ್ತೇನೆ ಎಂದು ಹೇಳಿದ ಅವರು ಗಣಿಗಾರಿಕೆಯಲ್ಲಿ ಜೆಡಿಎಸ್ ಪಕ್ಷದವರ ಪಾತ್ರ ಇರುವುದನ್ನು ಶಂಕಿಸಿದರು.

ಮಂಡ್ಯ ಜಿಲ್ಲೆಯಲ್ಲಿ ಅಕ್ರಮ ಕಲ್ಲುಗಣಿಗಾರಿಕೆ ನಡೆಯುತ್ತಿರಬಹುದು, ಹಳೇ ಮೈಸೂರು ಭಾಗವನ್ನ ಇವರು (ಹೆಚ್ ಡಿ ಕೆ) ಗುತ್ತಿಗೆ ಪಡೆದಿದ್ದಾರೆ. ಅವರ ಮಗನನ್ನ ಸೋಲಿಸಿರುವ ಕಾರಣ ಮಾತನಾಡ್ತಿದ್ದಾರೆ. ನಮ್ಮ ಸಿಎಂ ಸಹಕಾರ ಇವರಿಗೆ ಇಲ್ಲದಿದ್ದಿದ್ದರೆ ಇಷ್ಟೊತ್ತಿಗೆ ಜೆಡಿಎಸ್​ನ ಹಲವು ಶಾಸಕರು ಪಕ್ಷ ಬಿಡುತ್ತಿದ್ದರು ಎಂದು ಕುಮಾರಸ್ವಾಮಿ ವಿರುದ್ಧ ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಸಚಿವ ಸಿ. ಪಿ. ಯೋಗೇಶ್ವರ್ ಹೇಳಿಕೆ ನೀಡಿದರು.

ವರದಿ: ಎ.ಟಿ. ವೆಂಕಟೇಶ್
Published by:Vijayasarthy SN
First published: