ಕಾಂಗ್ರೆಸ್​​ನಲ್ಲಿದ್ದಾಗ ಡಿಕೆಶಿಯಿಂದ ಕಿರುಕುಳ ಆಗಿತ್ತು, 2023ಕ್ಕೆ ಕನಕಪುರದಿಂದ ಸ್ಪರ್ಧೆ: CP Yogeeshwara

ನನಗೆ ಡಿ.ಕೆ.ಶಿವಕುಮಾರ್ ರಿಂದ ಕಾಂಗ್ರೆಸ್ ನಲ್ಲಿ ಕಿರುಕುಳವಾಗಿದೆ. ಎರಡು ಬಾರಿ ನನಗೆ ಕಾಂಗ್ರೆಸ್ ನಲ್ಲಿ ಟಿಕೆಟ್‌ ತಪ್ಪಿಸಿದ್ದರು, ಹಾಗಾಗಿ ನಾನು ಮತ್ತೆ ಡಿ.ಕೆ.ಶಿವಕುಮಾರ್ ರ ಜೊತೆ ಕಾಂಗ್ರೆಸ್ ಸೇರಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದರು.

ಸಿ.ಪಿ.ಯೋಗೇಶ್ವರ್

ಸಿ.ಪಿ.ಯೋಗೇಶ್ವರ್

  • Share this:
ರಾಮನಗರ:  2023ಕ್ಕೆ ಕನಕಪುರ ಕ್ಷೇತ್ರದಿಂದ (Kanakapura Constituency) ಸ್ಪರ್ಧೆ ಮಾಡಲು ಸಿದ್ಧ ಎಂದು  ಮಾಜಿ ಸಚಿವ, ಬಿಜೆಪಿ ಮುಖಂಡ ಸಿ.ಪಿ.ಯೋಗೇಶ್ವರ್ (CP Yogeeshwara) ಅವರು ಡಿಕೆ ಬ್ರದರ್ಸ್ ಗೆ (DK Brothers) ಬಹಿರಂಗ ಸವಾಲ್ ಹಾಕಿದರು. ನ್ಯೂಸ್​​18ಗೆ ನೀಡಿದ ವಿಶೇಷ ಸಂದರ್ಶನದಲ್ಲಿ  ಮಾತನಾಡಿದ ಯೋಗೇಶ್ವರ್, ನನ್ನ ಮೊದಲ ಆಯ್ಕೆ ಚನ್ನಪಟ್ಟಣ ಕ್ಷೇತ್ರ. ಎಲ್ಲಿ ಸೋತಿದ್ದೀನೋ, ಅಲ್ಲೇ ಗೆಲ್ಲಬೇಕು. ಅದನ್ನ ಕ್ಷೇತ್ರದ ಜನರು ತೀರ್ಮಾನ ಮಾಡ್ತಾರೆ. ನನ್ನ ನೀರಾವರಿ ಅಭಿವೃದ್ಧಿ ನೋಡಿ ತೀರ್ಮಾನ ಮಾಡ್ತಾರೆ. ಆದರೆ ಪಕ್ಷ ಸೂಚಿಸಿದರೆ ರಾಮನಗರ, ಕನಕಪುರದಲ್ಲಿ ಸ್ಪರ್ಧೆ ಮಾಡ್ತೇನೆಂದರು.‌ ಕೊಟ್ಟ ಕುದುರೆ ಏರದವನು ವೀರನೂ ಅಲ್ಲ, ಶೂರನು ಅಲ್ಲ ಅಂತಾರೆ. ಹಾಗಾಗಿ ಪಕ್ಷ ಸೂಚಿಸಿದರೆ ಎಲ್ಲಿ ಬೇಕಾದರೂ ಸ್ಪರ್ಧೆ ಮಾಡ್ತೇನೆಂದರು.

ಕಾಂಗ್ರೆಸ್ ಗೆ ಹೋಗಿ ನಾನೇಕೆ ಮುಳುಗಲಿ

ಇನ್ನು ಡಿ.ಕೆ.ಶಿವಕುಮಾರ್ ಗೆ ತಂತ್ರ, ಕುತಂತ್ರ, ಪ್ರತಿತಂತ್ರ ಕರಗತವಾಗಿದೆ. ನಾನು ಯಾವುತ್ತೂ ಅವರನ್ನ ಭೇಟಿ ಮಾಡಿಲ್ಲ, ರಾಜಕೀಯ ಚರ್ಚೆ ಮಾಡಿಲ್ಲ. ನನಗೆ ಅವರಿಗೆ ಕಳೆದ 30 ವರ್ಷದಿಂದ ರಾಜಕೀಯ ಜಿದ್ದಾಜಿದ್ದಿ ಇದೇ. ನನಗೆ ರಾಜಕೀಯವಾಗಿ ಅವರ ಜೊತೆ ವಿಶ್ಚಾಸವಿಲ್ಲ.ಅವರು ನನ್ನ ಮೇಲೆ ಹಾಕಿರುವ ಕೇಸ್ ಗಳು  ನಡೆಯುತ್ತಿವೆ, ಇನ್ನು ಮುಗಿದಿಲ್ಲ. ನನ್ನನ್ನು ಬಿಜೆಪಿ ಮಂತ್ರಿ ಮಾಡಿದೆ, ಎಂ ಎಲ್ ಸಿ ಮಾಡಿದೆ. ಇನ್ನು ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ಕಟ್ಟಬೇಕಿದೆ, ಅವಕಾಶ ಇದೆ. ಮುಳುಗುತ್ತಿರುವ ಕಾಂಗ್ರೆಸ್ ಗೆ ಹೋಗಿ ನಾನೇಕೆ ಮುಳುಗಲಿ ಎಂದರು. ನಾನು ಕಾಂಗ್ರೆಸ್ ಗೆ ಹೋಗುವ ಪ್ರಶ್ನೆ ಇಲ್ಲ ಎಂದ ಯೋಗೇಶ್ವರ್ ಬಿಜೆಪಿ - ಜೆಡಿಎಸ್ ಮೈತ್ರಿ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಮಾತನಾಡಲ್ಲ, ಅದು ಪಕ್ಷದ ಹೈಕಮಾಂಡ್ ಗೆ ಬಿಟ್ಟ ವಿಚಾರ. ಸಂಕ್ರಾಂತಿ ನಂತರ ನಾನು ಮಂತ್ರಿಯಾಗುವ ಬಗ್ಗೆ ಗೊತ್ತಿಲ್ಲ, ನಿರೀಕ್ಷೆ ಇದೆ ಎಂದರು.

ಇದನ್ನೂ ಓದಿ: ಮೇಕೆದಾಟು ಬಳಿ ಹೋಟೆಲ್​​ಗಳಿಗೆ ನಿರ್ಬಂಧ ಹಾಕಿದ್ದಾರೆ, ನಾವು ನದಿ ಪಕ್ಕ ಮಲಗ್ತೀವಿ: DK Shivakumar

ಕಾಂಗ್ರೆಸ್ ಸೇರಿದರೆ ಆತ್ಮಹತ್ಯೆ ಮಾಡಿಕೊಂಡಂತೆ

‌ ಇನ್ನು‌ಮೇಕೆದಾಟು ಯೋಜನೆಗೆ ಕಾಂಗ್ರೆಸ್ ಪಾದಯಾತ್ರೆ ವಿಚಾರವಾಗಿ ಮಾತನಾಡಿ ಇದು ಪೊಲಿಟಿಕಲ್ ಮೈಲೇಜ್ ಗೆ ಮಾಡ್ತಿದ್ದಾರೆ.ನಾನು - ರಮೇಶ್ ಜಾರಕಿಹೊಳಿ ಈ ಹಿಂದೆ ಭೇಟಿ ನೀಡಿದ್ದೆವು. ಈಗಲೂ ಸಹ ನಮ್ಮ ಸರ್ಕಾರ ಬದ್ಧವಾಗಿದೆ. ಕೆಲ ತಾಂತ್ರಿಕ ಸಮಸ್ಯೆಯಿಂದಾಗಿ ತಡವಾಗ್ತಿದೆ. ಆದರೆ ಕಳೆದ 30 ವರ್ಷದಿಂದ ಡಿ.ಜೆ.ಶಿವಕುಮಾರ್ ಶಾಸಕನಾಗಿದ್ದಾನೆ, ಪವರ್ ಮಿನಿಸ್ಟರ್, ನೀರಾವರಿ ಮಿನಿಸ್ಟರ್ ಆಗಿದ್ದಾನೆ, ಅವನದ್ದೆ ಕ್ಷೇತ್ರ ಅದು.ಯಾಕೆ ಯೋಜನೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿ ನಮ್ಮ ಸರ್ಕಾರ ಮೇಕೆದಾಟು ಯೋಜನೆ ಮಾಡಲಿದೆ ಎಂದು ನ್ಯೂಸ್ 18 ಜೊತೆಗೆ ಮಾತನಾಡಿ ಸಿ.ಪಿ.ಯೋಗೇಶ್ವರ್ ಅಭಿಪ್ರಾಯವ್ಯಕ್ತಪಡಿಸಿದರು. ಇನ್ನು‌ನಾನು ಬಿಜೆಪಿ ಯಲ್ಲಿಯೇ ಇರುತ್ತೇನೆ. ಕಾಂಗ್ರೆಸ್ ಸೇರುವ ಸುದ್ದಿ ಕಪೋಲಕಲ್ಪಿತವಾದದ್ದು. ನನಗೆ ಡಿ.ಕೆ.ಶಿವಕುಮಾರ್ ರಿಂದ ಕಾಂಗ್ರೆಸ್ ನಲ್ಲಿ ಕಿರುಕುಳವಾಗಿದೆ. ಎರಡು ಬಾರಿ ನನಗೆ ಕಾಂಗ್ರೆಸ್ ನಲ್ಲಿ ಟಿಕೆಟ್‌ ತಪ್ಪಿಸಿದ್ದರು, ಹಾಗಾಗಿ ನಾನು ಮತ್ತೆ ಡಿ.ಕೆ.ಶಿವಕುಮಾರ್ ರ ಜೊತೆ ಕಾಂಗ್ರೆಸ್ ಸೇರಿದರೆ ಆತ್ಮಹತ್ಯೆ ಮಾಡಿಕೊಂಡಂತೆ ಎಂದರು.

ಇದನ್ನೂ ಓದಿ: DK Suresh-Ashwath Narayan ಜಟಾಪಟಿ: ಪೂರ್ವಯೋಜಿತ ಘಟನೆನಾ? ಪೊಲೀಸರು ದಾಖಲಿಸಿದ ಎಫ್ಐಆರ್ ನಲ್ಲಿ ಏನಿದೆ?

‌ಇನ್ನು ಸಿಎಂ ಕಾರ್ಯಕ್ರಮದಲ್ಲಿ ನಡೆದ ಗಲಾಟೆ ವಿಚಾರ  ಡಿ.ಕೆ.ಸುರೇಶ್ ಕಾರ್ಯಕರ್ತರು ಕಾರ್ಯಕ್ರಮವನ್ನ ಹಾಳು ಮಾಡಿದರು. ಅವರಿಗೆ ಕಾರ್ಯಕ್ರಮ ನಡೆಯುವುದು ಇಷ್ಟವಿರಲಿಲ್ಲ‌.ಅವರ ನಡವಳಿಕೆ ಅವರ ಹಿನ್ನೆಲೆ ತೋರಿಸುತ್ತೆ, ಅವರ ಗೂಂಡ ವರ್ತನೆ ನಿಲ್ಲಬೇಕು. ನಮ್ಮ ಸರ್ಕಾರ ಇದ್ದರೂ ಸಹ ಅವರಿಗೆ ಸಹಕಾರ ಕೊಡ್ತಾರೆ. ಹಿಂದೆ ನಾನು ಅರಣ್ಯ ಸಚಿವನಾಗಿದ್ದೆ, ಅವರ ಅಕ್ರಮ ಕಲ್ಲಿನ ಕ್ವಾರೆಗಳನ್ನ ಬಂದ್ ಮಾಡಿಸಿದ್ದೆ. ನಂತರ ಯುಪಿಎ ಸರ್ಕಾರದಲ್ಲಿ ನನ್ನ ವಿರುದ್ಧ 25 ಕೇಸ್ ಹಾಕಿಸಿದ್ದರು.‌ ವೀರಪ್ಪ ಮೋಯ್ಲಿ ರವರ ಬಳಿ ಹೋಗಿ ಕೇಸ್ ಹಾಕಿಸಿದ್ದರು. ನಾನು ಮೋಯ್ಲಿರನ್ನ ಭೇಟಿ ಮಾಡಿದ್ದೆ, ಆಗ ಅವರು ಶಿವಕುಮಾರ್ ಹೇಳಿದ್ದಾರೆ ಅಂದಿದ್ದರು ಎಂದು  ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.
 
Published by:Kavya V
First published: