ಪತ್ರಕರ್ತರಿಗೆ ಸಿಪಿವೈ ನೆರವು; ಚನ್ನಪಟ್ಟಣದ ಪತ್ರಕರ್ತರು ಅತ್ಯಂತ ಕ್ರಿಯಾಶೀಲರು ಎಂದ ಸೈನಿಕ

ಚನ್ನಪಟ್ಟಣದ ಪತ್ರಕರ್ತರ ಅಭಿವೃದ್ಧಿಗಾಗಿ ಮಾಜಿ ಸಚಿವ ಸಿ ಪಿ ಯೋಗೇಶ್ವರ್ ಅವರು 10 ಲಕ್ಷ ರೂ ಹಣವನ್ನು ಕೊಡುಗೆಯಾಗಿ ನೀಡಿದ್ದಾರೆ. ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಅವರು ಈ ಘೋಷಣೆ ಮಾಡಿದ್ಧಾರೆ.

ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್

ಕಾರ್ಯನಿರತ ಪತ್ರಕರ್ತರ ಸಂಘ ಆಯೋಜಿಸಿದ ಕಾರ್ಯಕ್ರಮದಲ್ಲಿ ಸಿಪಿ ಯೋಗೇಶ್ವರ್

  • Share this:
ಚನ್ನಪಟ್ಟಣ: ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಪತ್ರಿಕಾ ದಿನಾಚರಣೆಯನ್ನ ಅದ್ದೂರಿಯಾಗಿ ಆಚರಣೆ ಮಾಡಲಾಯಿತು. ಚನ್ನಪಟ್ಟಣ ನಗರದ ಮಹೇಶ್ವರ ಕನ್ವೆನ್ಷನ್ ಹಾಲ್ ನಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.‌ ಚನ್ನಪಟ್ಟಣ ಕಾರ್ಯನಿರತ ಪತ್ರಕರ್ತರ ಸಂಘದಿಂದ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮದಲ್ಲಿ ಪತ್ರಕರ್ತರು ಸಾಂಪ್ರದಾಯಿಕ ಉಡುಗೆ ಪಂಚೆ, ಶಲ್ಯವನ್ನ ತೊಡಲಾಗಿತ್ತು. ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತರು, ಪತ್ರಕರ್ತರ ಮಕ್ಕಳು ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಲಾಯಿತು. ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ರಾಜಕೀಯ ಮುಖಂಡರು ಆಗಮಿಸಿದ್ದರು. ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ ಅವರು ಕಾರ್ಯಕ್ರಮವನ್ನ ಉದ್ಘಾಟನೆ ಮಾಡಿದರು. ಇದೇ ಸಂದರ್ಭದಲ್ಲಿ ಜಿಲ್ಲೆಯಲ್ಲಿ ಸಾವನ್ನಪ್ಪಿದ ಪತ್ರಕರ್ತರಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.

ಪತ್ರಕರ್ತರ ಅಭಿವೃದ್ಧಿಗೆ 10 ಲಕ್ಷ ರೂ ಹಣ ಕೊಡುಗೆ: ಕಾರ್ಯಕ್ರಮವನ್ನ ಉದ್ಘಾಟಿಸಿದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರು ಇದೇ ಸಂದರ್ಭದಲ್ಲಿ ಚನ್ನಪಟ್ಟಣ ಪತ್ರಕರ್ತರ ಅಭಿವೃದ್ಧಿಗಾಗಿ 10 ಲಕ್ಷ ರೂಪಾಯಿ ಹಣವನ್ನ ಕೊಡುಗೆಯಾಗಿ ನೀಡಿದರು. ಈ ವೇಳೆ ಮಾತನಾಡಿದ ಯೋಗೇಶ್ವರ್, ನಾನು ಕಳೆದ 20 ವರ್ಷಗಳ ಕಾಲ ಚನ್ನಪಟ್ಟಣ ಕ್ಷೇತ್ರದಲ್ಲಿ ರಾಜಕೀಯ ಕ್ಷೇತ್ರದಲ್ಲಿ ಕೆಲಸ ಮಾಡಿದ್ದೇನೆ. ಚನ್ನಪಟ್ಟಣ ಕ್ಷೇತ್ರದ ಪತ್ರಕರ್ತರು ಅತ್ಯಂತ ಕ್ರಿಯಾಶೀಲ ಪತ್ರಕರ್ತರು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಇದನ್ನೂ ಓದಿ: Fact Check: ತಾಲಿಬಾನ್​ನ ಹೆಲಿಕಾಪ್ಟರ್ ಕೆಳಗೆ ನೇತಾಡುತ್ತಿರುವ ದೇಹ; ವೈರಲ್ ಆದ ವಿಡಿಯೋ

ಯಾವುದೇ ವಿಚಾರಗಳಿದ್ದರೂ ಸಹ ನೇರವಾಗಿ ಬರೆಯುವ ಪತ್ರಕರ್ತರು ಚನ್ನಪಟ್ಟಣದಲ್ಲಿ ಇದ್ದಾರೆ. ಹಾಗೆಯೇ ಚನ್ನಪಟ್ಟಣ ಪತ್ರಕರ್ತರು ನನ್ನ ಬಳಿ ಒಂದು ಮನವಿ ಮಾಡಿದ್ದರು. ನಮ್ಮ ಭದ್ರತೆಗಾಗಿ ಸಹಕಾರ ನೀಡಿ ಎಂದಿದ್ದರು. ಈ ಹಿನ್ನೆಲೆ 10 ಲಕ್ಷ ರೂ ಹಣವನ್ನ ಪತ್ರಕರ್ತರಿಗೆ ನೀಡಿದ್ದೇನೆ. ಈ ಹಣದಲ್ಲಿ ಪತ್ರಕರ್ತರು ಅವರ ಜೀವನಕ್ಕೆ ಭದ್ರತೆ ಕಲ್ಪಿಸಿಕೊಳ್ಳಬಹುದು. ಇನ್ನೂ ಹೆಚ್ಚಿನ ನೆರವನ್ನ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಮಾಡುತ್ತೇನೆ ಎಂದು ಸಮಾರಂಭದಲ್ಲಿಯೇ ತಮ್ಮ ಭಾಷಣದ ವೇಳೆ ಸಿಪಿವೈ ತಿಳಿಸಿದರು.

ಪ್ರಸ್ತುತ ಮಾಧ್ಯಮ ವ್ಯವಸ್ಥೆ ಸಂಪೂರ್ಣ ಬದಲಾಗಿದೆ – ಸಿಪಿವೈ

ಇನ್ನು ತಮ್ಮ ಭಾಷಣದಲ್ಲಿ ಮಾತನಾಡಿದ ಯೋಗೇಶ್ವರ್ ನಾವು ಕಳೆದ 20 ವರ್ಷದ ಹಿಂದೆ ನೋಡುತ್ತಿದ್ದ ಮಾಧ್ಯಮ ವ್ಯವಸ್ಥೆಗೂ, ಈಗಿನ ಮಾಧ್ಯಮ ವ್ಯವಸ್ಥೆಗೂ ಸಹ ಸಂಪೂರ್ಣ ವ್ಯತ್ಯಾಸವಿದೆ ಎಂದರು. ನಾವು ಈ ಹಿಂದೆ ನೋಡುತ್ತಿದ್ದಾಗ ಕೇವಲ ಪ್ರಿಂಟ್ ಮೀಡಿಯಾ ಇತ್ತು. ದೂರದರ್ಶನ ಟಿವಿ ಇತ್ತು. ನಂತರ ಎಲೆಕ್ಟ್ರಾನಿಕ್ ಮೀಡಿಯಾಗಳ ಯುಗ ಪ್ರಾರಂಭವಾಯ್ತು. ಆದರೆ ಈಗ ಸೋಶಿಯಲ್ ಮೀಡಿಯಾ ಬಹಳಷ್ಟು ದೊಡ್ಡಮಟ್ಟದಲ್ಲಿ ಬೆಳೆದುನಿಂತಿವೆ ಎಂದರು.‌

ಇದನ್ನೂ ಓದಿ: ಶೂಟೌಟ್ ಪ್ರಕರಣ: ರಾಜಸ್ಥಾನದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನ ಹುಡುಕಿ ಹಿಡಿದ ಚಿತ್ರದುರ್ಗ ಪೊಲೀಸರು

ಈ ವ್ಯವಸ್ಥೆಯಲ್ಲಿ ಸುದ್ದಿಗಳನ್ನ ಬಿತ್ತರಿಸುವ ಆತುರದಲ್ಲಿ ಸುಳ್ಳು ಸುದ್ದಿಗಳನ್ನ ಬಿತ್ತರ ಮಾಡಲಾಗ್ತಿದ್ದು ಇದು ಒಳ್ಳೆಯ ಬೆಳವಣಿಗೆ ಅಲ್ಲ ಎಂದೂ ಯೋಗೇಶ್ವರ್ ಕಳವಳ ವ್ಯಕ್ತಪಡಿಸಿದರು. ಈಗಿನ ಮಾಧ್ಯಮಗಳು ಕಾರ್ಪೊರೇಟ್ ಸೆಕ್ಟರ್​ನ ಅಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಸಮಾಜದ ಸ್ವಾಸ್ಥ್ಯವನ್ನ ಕಾಪಾಡಲು ವಿಫಲವಾಗಿವೆ ಎಂದರು.

ಸಮಾರಂಭದಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು, ಪಂಚಮಿ ಪಿ. ಪ್ರಸನ್ನ, ಗೋವಿಂದಹಳ್ಳಿ ನಾಗರಾಜ್, ಹಾಪ್ ಕಾಮ್ಸ್ ದೇವರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

(ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರೂ ಕೈ ಜೋಡಿಸಬೇಕು.)

ವರದಿ: ಎ.ಟಿ.ವೆಂಕಟೇಶ್
Published by:Vijayasarthy SN
First published: