ಕುಮಾರಸ್ವಾಮಿ ಎದುರಿನ‌ ಸೋಲಿನ‌ ನೋವು ತೋಡಿಕೊಂಡ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್

CP Yogeshwar Latest News: ಮೂಲಗಳ ಪ್ರಕಾರ ಯೋಗೇಶ್ವರ್​ 2023ರ ಚುನಾವಣೆಯಲ್ಲೂ ಚೆನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವುದು ನಿಶ್ಚಿತ. 

ಸಿಪಿ ಯೋಗೇಶ್ವರ್

ಸಿಪಿ ಯೋಗೇಶ್ವರ್

  • Share this:
ಚನ್ನಪಟ್ಟಣ: ವೇದಿಕೆ ಕಾರ್ಯಕ್ರಮದಲ್ಲಿ ಸೋಲಿನ ನೋವು ತೋಡಿಕೊಂಡಿದ್ದಾರೆ ಮಾಜಿ ಸಚಿವ  ಸಿ.ಪಿ.ಯೋಗೇಶ್ವರ್. ರಾಮನಗರ ಜಿಲ್ಲೆಯ ಚನ್ನಪಟ್ಟಣದ ನಗರದ ತಾಲೂಕು ಕಚೇರಿಯಲ್ಲಿ ಸರ್ಕಾರಿ ನೌಕರರ ಸಂಘದ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಯೋಗೇಶ್ವರ್ ಭಾಗವಹಿಸಿದ್ದರು.  ವೇದಿಕೆಯಲ್ಲಿ ಮಾತನಾಡಿದ ಯೋಗೇಶ್ವರ್ ಇವತ್ತು ಬಹಳಷ್ಟು ಜನಪ್ರತಿನಿಧಿಗಳು ಕಾರ್ಯಕ್ರಮಕ್ಕೆ ಬಂದಿಲ್ಲ. ಹಾಗಾಗಿಯೇ ನಾನು ಕಾರ್ಯಕ್ರಮಕ್ಕೆ ಬಂದೆ. ಯಾರು ಬರಲ್ಲ ಅಂತಾ ಗೊತ್ತಿತ್ತು ನನಗೆ. ಸುಮ್ಮನೆ ನಾನು ಬರಲ್ಲ ಅಂತಿದ್ದೆ, ಆದರೆ ಬರಲು ನನಗೆ ಆಸೆಯಿತ್ತು ಎಂದು ಹೇಳಿದ್ದಾರೆ. 

ಇನ್ನು ಕಾರ್ಯಕ್ರಮಕ್ಕೆ ಬಂದಿದ್ದರಲ್ಲಿ ಸ್ವಾರ್ಥವೂ ಇದೇ ಎಂದ ಯೋಗೇಶ್ವರ್ ವೇದಿಕೆಗೆ ಬಂದು ಕುಳಿತಾಗ ಮುಖವೆಲ್ಲ ಕೆಂಪಾಯ್ತು ನನಗೆ.‌ ಜನ ಕೂಡ ಯೋಗೇಶ್ವರ್ ಏನೋ ಮಾತನಾಡ್ತಿದ್ದಾನೆಂದು ನೋಡ್ತಿದ್ದರು. ಇನ್ನು ನಾನು ಸಹ 2-3 ವರ್ಷದಿಂದ ತಾಲೂಕಿಗೆ ಬಂದಿರಲಿಲ್ಲ. ಅಪರೂಪಕ್ಕೆ ಯೋಗೇಶ್ವರ್ ಬಂದಿದ್ದಾನೆಂದು ಜನ ನೋಡ್ತಿದ್ದರು. ನಾನು 1 ಲೀಟರ್​ ನೀರು ಕುಡಿದೆ, ಆದರೂ ಸಮಾಧಾನ ಆಗಲಿಲ್ಲ, ಕಾರಲ್ಲಿಯೂ 1 ಲೀ. ನೀರು ಕುಡಿದಿದ್ದೆ. ಮನಸ್ಸಿನ ಒಳಗೆ ಗುದ್ದುತಿತ್ತು ನನಗೆ, ಎಲ್ಲೋ ಒಂದು ಕೊಂಡಿ ಬಿಟ್ಟು ಹೋಗಿದೆ ಎಂದು ಅನಿಸಿತು.  ಆದರೆ ಆಮೇಲೆ ನಾನೇ ಸಮಾಧಾನ ಮಾಡಿಕೊಂಡೆ, ಇಲ್ಲ ಎಮೋಷನ್ ಆಗೋದು ಬೇಡ ಎಂದು ನಾನೇ ಸಮಾಧಾನ ಮಾಡಿಕೊಂಡೆ ಎಂದು ವೇದಿಕೆ ಕಾರ್ಯಕ್ರಮದಲ್ಲಿ ತಮ್ಮ ಸೋಲಿನ ನೋವನ್ನ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತೋಡಿಕೊಂಡರು.

ಭಾವನಾತ್ಮಕ ಅಸ್ತ್ರ ಬಿಡುವ ಮೂಲಕ ಸಿಪಿವೈ ತಂತ್ರ:

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ರಾಜಕೀಯ ತಂತ್ರ ಹೆಣೆಯುವುದರಲ್ಲಿ ಎತ್ತಿದಕೈ. ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಚುನಾವಣೆಯಲ್ಲಿ ಸೋತ ಬಳಿಕ ಮರೆಯಾಗಿದ್ದ ಯೋಗೇಶ್ವರ್ ನಂತರ ಯಡಿಯೂರಪ್ಪ ಸರ್ಕಾರದಲ್ಲಿ ವಿಧಾನ ಪರಿಷತ್​ ಸದಸ್ಯರಾಗಿ ನಂತರ ಸಚಿವ ಸಂಪುಟ ಸೇರಿದರು. ಆ ಸಂದರ್ಭದಲ್ಲಿ ಯೋಗೇಶ್ವರ್ ಪದೇಪದೇ ಮಾತನಾಡುತ್ತ ಜನ ನನ್ನನ್ನ ತಿರಸ್ಕಾರ ಮಾಡಿದ್ದರೂ ಕೂಡ ಪಕ್ಷ ನನ್ನ ಕೈಬಿಡಲಿಲ್ಲ, ಅಧಿಕಾರ ಕೊಟ್ಟಿದೆ ಎಂಬ ಹೇಳಿಕೆ ನೀಡಿದ್ದರು. ಜತೆಗೆ, ಜನರ ಅನುಕಂಪವನ್ನೂ ಈ ಮೂಲಕ ಪಡೆದುಕೊಂಡಿದ್ದರು.

ಇದನ್ನೂ ಓದಿ: ಮೂಡಿಗೆರೆಯಲ್ಲಿ ಹಿಂದೂಪರ ಸಂಘಟನೆಗಳಿಂದ ಸಂಸದ ಪ್ರತಾಪ್​ ಸಿಂಹ, ತೇಜಸ್ವಿ ಸೂರ್ಯಗೆ ಮುತ್ತಿಗೆ

ಆದರೆ ಈಗ ಭಾವನಾತ್ಮಕವಾಗಿ ಸೆಳೆಯಲು ಯೋಗೇಶ್ವರ್ ಮುಂದಾಗಿದ್ದಾರೆ. ಬದಲಾದ ರಾಜಕೀಯ ಸನ್ನಿವೇಶದಲ್ಲಿ ಯಡಿಯೂರಪ್ಪ ಸಿಎಂ ಪಟ್ಟದಿಂದ ಕೆಳಗಿಳಿದರು. ನಂತರ ಯೋಗೇಶ್ವರ್ ಸಹ ಮಂತ್ರಿಸ್ಥಾನದಿಂದ ಕೆಳಗಿಳಿದರು. ಆದರೆ ಮತ್ತೆ ಮಂತ್ರಿಯಾಗ್ತೀನಿ ಎಂಬ ಮಾತನ್ನ ಅಲ್ಲಲ್ಲಿ ಹೇಳಿದ್ದರೂ ಸಹ ಇನ್ನು ಆ ಬೆಳವಣಿಗೆ ಯಶಸ್ಸು ಕಂಡಿಲ್ಲ. ಆದರೆ ಈ ಮಧ್ಯೆ ಚನ್ನಪಟ್ಟಣ ಕಡೆಗೆ ಹೆಚ್ಚಿನದಾಗಿ ಗಮನಹರಿಸುತ್ತಿರುವ ಯೋಗೇಶ್ವರ್ ಮುಂದಿನ 2023 ರ ಚುನಾವಣೆ ತಯಾರಿಯನ್ನ ಮಾಡಿಕೊಳ್ಳುತ್ತಿದ್ದಾರೆ. ಈ ಮೂಲಕ ಎಚ್​ ಡಿ ಕುಮಾರಸ್ವಾಮಿ ಅವರ ವಿರುದ್ಧ ಗೆಲ್ಲುವ ಆಶಯ ಅವರು ಹೊಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಾಜಿ ಶಾಸಕ ಮಾನಪ್ಪ ವಜ್ಜಲ್​ ಮಗನ ಪುಂಡಾಟಿಕೆ; ಉದ್ಯಮಿ ಮಗನ ಮೇಲೆ ಹಲ್ಲೆ ನಡೆಸಿದ ದೃಶ್ಯ ಸಿಸಿಟಿವಿಯಲ್ಲಿ ದಾಖಲು

ಇನ್ನು ಕುಮಾರಸ್ವಾಮಿ ವಿರುದ್ಧ ಹೋರಾಡಬೇಕಿರುವ ಯೋಗೇಶ್ವರ್ ಗೆ ಚನ್ನಪಟ್ಟಣ ಕ್ಷೇತ್ರದ ಜನರ ಜೊತೆಗೆ ಬಹಳ ದೊಡ್ಡ ಅಂತರವಾಗಿದೆ ಎನ್ನುತ್ತಾರೆ ಕ್ಷೇತ್ರದ ಜನ. ಸ್ವತಃ ಯೋಗೇಶ್ವರ್ ಹೇಳಿದಂತೆ ಕಳೆದ 2-3 ವರ್ಷದಿಂದ ಯೋಗೇಶ್ವರ್ ಚನ್ನಪಟ್ಟಣದಲ್ಲಿ ಕಾಣಿಸಿಕೊಂಡಿಲ್ಲ. ಆದರೆ ಮುಂದಿನ ದಿನಗಳಲ್ಲಿ ಯೋಗೇಶ್ವರ್ ನಡೆ ಹೇಗಿರಲಿದೆ ಎಂಬುದನ್ನು ಕಾಲವೇ ಉತ್ತರಿಸಬೇಕು. ಮೂಲಗಳ ಪ್ರಕಾರ ಯೋಗೇಶ್ವರ್​ 2023ರ ಚುನಾವಣೆಯಲ್ಲೂ ಚೆನ್ನಪಟ್ಟಣ ಕ್ಷೇತ್ರದಿಂದ ಸ್ಪರ್ಧಿಸುವುದು ನಿಶ್ಚಿತ.
Published by:Sharath Sharma Kalagaru
First published: