Ramanagara: ಕುಮಾರಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ! ಸಿಎಂಗೆ ಪತ್ರ ಬರೆದ ಯೋಗೇಶ್ವರ್

ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಖುದ್ದು ಸಿಎಂ ಬಸವರಾಜ ಬೊಮ್ಮಾಯಿರನ್ನ ಭೇಟಿ ಮಾಡಿ ರಾಮನಗರ ಭ್ರಷ್ಟಾಚಾರದ ಬಗ್ಗೆ ಪತ್ರ ನೀಡಿದ್ದಾರೆ. ಇದು ಬಹಳ ದೊಡ್ಡ ಹಗರಣವಾಗಿದೆ. ಈ ಪ್ರಕರಣದ ತನಿಖೆಯನ್ನ ಸಿಒಡಿಗೆ ವಹಿಸಬೇಕು ಎಂದು ತಿಳಿಸಿದ್ದಾರೆ.‌ ಇನ್ನು ಸಿಎಂ ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ಕುಮಾರಸ್ವಾಮಿ, ಯೋಗೇಶ್ವರ್​

ಕುಮಾರಸ್ವಾಮಿ, ಯೋಗೇಶ್ವರ್​

  • Share this:
ರಾಮನಗರ(ಜೂ.09): ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ (H.D Kumaraswamy) ಸ್ವಕ್ಷೇತ್ರ ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣದಲ್ಲಿ ಸರ್ಕಾರಿ ಅಧಿಕಾರಿಗಳೇ (Govt Officials) ಸರ್ಕಾರದ ಗೋಮಾಳ ಜಾಗವನ್ನ ನುಂಗಿ ಪೊಲೀಸರ ಅತಿಥಿಗಳಾಗಿರುವ ಘಟನೆ ನಡೆದಿದೆ. ಚನ್ನಪಟ್ಟಣ ತಾಲೂಕಿನ ಕೋಲೂರು ಗ್ರಾಮದ ಸರ್ವೇ ನಂ.118 ರಲ್ಲಿ ಒಟ್ಟು 198 ಎಕರೆ ಸರ್ಕಾರಿ ಗೋಮಾಳ ಇದ್ದು, ಇದರಲ್ಲಿ ಅರ್ಹ ಫಲಾನುಭವಿಗಳಿಗೆ ಸಾಗುವಳಿ ಚೀಟಿ ಕೊಡಬೇಕಿತ್ತು. ಆದರೆ 25 ಕೋಟಿ ಬೆಲೆಬಾಳುವ 23.10 ಎಕರೆ ಸರ್ಕಾರಿ ಗೋಮಾಳ ಜಾಗದ ನಕಲಿ ದಾಖಲೆ ಪತ್ರ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಮಾರಾಟ ಮಾಡಿದ್ದು ಈಗ ಕಂದಾಯ ಇಲಾಖೆಯ ಸಿಬ್ಬಂದಿಗಳು ಪೊಲೀಸರ (Police)ಅತಿಥಿಯಾಗಿದ್ದಾರೆ.

ಸಿ.ಪಿ.ಯೋಗೇಶ್ವರ್ ಸಿಎಂ ಭೇಟಿ, ಸಿಒಡಿ ಗೆ ವಹಿಸಲು ಪತ್ರ :

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಖುದ್ದು ಸಿಎಂ ಬಸವರಾಜ ಬೊಮ್ಮಾಯಿರನ್ನ ಭೇಟಿ ಮಾಡಿ ಪತ್ರ ನೀಡಿದ್ದಾರೆ. ಇದು ಬಹಳ ದೊಡ್ಡ ಹಗರಣವಾಗಿದೆ. ಈ ಪ್ರಕರಣದ ತನಿಖೆಯನ್ನ ಸಿಒಡಿಗೆ ವಹಿಸಬೇಕು ಎಂದು ತಿಳಿಸಿದ್ದಾರೆ.‌ ಇನ್ನು ಸಿಎಂ ಸಹ ಇದಕ್ಕೆ ಒಪ್ಪಿಗೆ ನೀಡಿದ್ದಾರೆ ಎನ್ನಲಾಗಿದೆ.

ರೆಕಾರ್ಡ್ ಸೆಕ್ಷನ್ ನಲ್ಲಿ ಭಾರೀ ಗೋಲ್ ಮಾಲ್

02-06-2022 ರಂದು ಚನ್ನಪಟ್ಟಣದ ಉಪತಹಶೀಲ್ದಾರ್ ಲಕ್ಷ್ಮೀದೇವಮ್ಮ ಚನ್ನಪಟ್ಟಣದ ನಗರ ಪೊಲೀಸ್ ಠಾಣೆಗೆ ದೂರು ನೀಡಿ ಕಂದಾಯ ಇಲಾಖೆಯ ರೆಕಾರ್ಡ್ ಸೆಕ್ಷನ್ ನಲ್ಲಿ ಭಾರೀ ಗೋಲ್ ಮಾಲ್ ಆಗಿದೆ ಎಂದು ದೂರು ನೀಡಿರುತ್ತಾರೆ.

50 ಪುಟಗಳ ನಕಲಿ

ಈ ದೂರಿನ ಆಧಾರದ ಮೇಲೆ ಪೊಲೀಸರು ಹಾಗೂ ತಹಶೀಲ್ದಾರ್ ಹರ್ಷವರ್ಧನ್ ತನಿಖೆ ನಡೆಸಿದ ಹಿನ್ನೆಲೆ ಈ 23.10 ಎಕರೆ ಭೂಮಿಗೆ ಸಂಬಂಧಿಸಿದಂತೆ 50 ಪುಟಗಳ ನಕಲಿ ಮಾಡಿರುವುದು ಕಂಡುಬಂದ ಹಿನ್ನೆಲೆ ಕಂದಾಯ ಇಲಾಖೆ ಎಸ್ಡಿಎ ಹರೀಶ್ ಕುಮಾರ್, ರೆಕಾರ್ಡ್ ಸೆಕ್ಷನ್ ನಾಗರಾಜು ರನ್ನ ಅಮಾನತ್ತು ಮಾಡಿ ಪೊಲೀಸರಿಗೆ ಒಪ್ಪಿಸುತ್ತಾರೆ.

ಇದನ್ನೂ ಓದಿ: Ramanagara: ಹಳಿತಪ್ಪಿದ ಆಡಳಿತ ವ್ಯವಸ್ಥೆ, ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ!

ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಗುಮಾಸ್ತನಾಗಿರುವ ಚಿಕ್ಕಸಿದ್ದಯ್ಯ ತಲೆಮರೆಸಿಕೊಂಡಿದ್ದಾನೆ. ಲೋಕೇಶ್, ಬೋರಲಿಂಗಯ್ಯರನ್ನ ಅರೆಸ್ಟ್ ಮಾಡಲಾಗಿದೆ. ಕಾಣದ ಕೈಗಳು ಇನ್ನು ಹತ್ತು ಹಲವಿದ್ದಾವೆ ಎನ್ನಲಾಗ್ತಿದೆ. ಈ ಬಗ್ಗೆ ಜಿಲ್ಲಾಧಿಕಾರಿ ಅವಿನಾಶ್ ಮೆನನ್ ರಾಜೇಂದ್ರನ್ ನ್ಯೂಸ್ 18 ಜೊತೆಗೆ ಮಾತನಾಡಿ ತನಿಖೆ ಮಾಡಲಾಗ್ತಿದೆ ಸೂಕ್ತ ಕ್ರಮವಹಿಸುತ್ತೇವೆ ಎಂದಿದ್ದಾರೆ.

ಎಸ್ಪಿ ಸಂತೋಷ್ ಬಾಬು ಸಹ ಮಾತನಾಡಿ ಯಾರೇ ತಪ್ಪು ಮಾಡಿದ್ದರೂ ಸಹ ಕಾನೂನು ಕ್ರಮ ಎಂದು ನ್ಯೂಸ್ 18 ಮೂಲಕ ಎಚ್ಚರಿಕೆ ನೀಡಿದ್ದಾರೆ. ಇನ್ನು ಮಾಜಿ ಸಿಎಂ ಕುಮಾರಸ್ವಾಮಿ ಕ್ಷೇತ್ರದ ಬಗ್ಗೆ ಕಾಳಜಿ ವಹಿಸದ ಹಿನ್ನೆಲೆ ಇಂತಹ ಘಟನೆಗಳು ನಡೆಯುತ್ತಿವೆ ಎಂದು ಕ್ಷೇತ್ರದ ಜನರು ಆಕ್ರೋಶಹೊರಹಾಕಿದ್ದಾರೆ.

ಕ್ಷೇತ್ರದಲ್ಲಿ ಕೈತಪ್ಪಿದ ಕುಮಾರಸ್ವಾಮಿ ಹಿಡಿತ, ಭ್ರಷ್ಟರದ್ದೇ ಆಡಳಿತ :

ಚನ್ನಪಟ್ಟಣದಲ್ಲಿ ಸರ್ಕಾರಿ ಗೋಮಾಳಕ್ಕೆ ಸರ್ಕಾರಿ ಅಧಿಕಾರಿಗಳೇ ಕತ್ತರಿ ಹಾಕಿರುವ ಘಟನೆ ಈಗ ಮಾಜಿ ಸಿಎಂ ಕುಮಾರಸ್ವಾಮಿ ಆಡಳಿತದ ವೈಖರಿಯನ್ನ ಎತ್ತಿ ತೋರಿಸುತ್ತಿದೆ.ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕ್ಷೇತ್ರದಲ್ಲಿ ಭಾರೀ ಅಕ್ರಮ ಬಯಲಾಗಿದ್ದು ನಕಲಿ ದಾಖಲೆ ಸೃಷ್ಟಿಸಿ ಸರ್ಕಾರಿ ಗೋಮಾಳಕ್ಕೆ ಕನ್ನ ಹಾಕಲಾಗಿದೆ.‌ ಕೋಲೂರು ಗ್ರಾಮದ ಸರ್ವೆ ನಂ.118 ರಲ್ಲಿ ಒಟ್ಟು 198 ಎಕರೆ ಸರ್ಕಾರಿ ಗೋಮಾಳ ಜಾಗ ಇದ್ದು, ಅದರಲ್ಲಿ 23.10 ಎಕರೆ ಜಾಗಕ್ಕೆ ನಕಲಿ ದಾಖಲೆ ಸೃಷ್ಟಿಸಿ ನಕಲಿ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ.

ಲಂಚ ಪಡೆದು ನಕಲಿ ಫಲಾನುಭವಿಗಳಿಗೆ ಮಂಜೂರು

ಅರ್ಹ ಫಲಾನುಭವಿಗಳಿಗೆ ಕೊಡದೇ ಲಂಚ ಪಡೆದು ನಕಲಿ ಫಲಾನುಭವಿಗಳಿಗೆ ಮಂಜೂರು ಮಾಡಲಾಗಿದೆ.  ಚನ್ನಪಟ್ಟಣದ ತಾಲೂಕು ಕಚೇರಿಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ. ಕಂದಾಯ ಇಲಾಖೆಯ SDA ಆಗಿದ್ದ ಹರೀಶ್ ಕುಮಾರ್, ರೆಕಾರ್ಡ್ ಸೆಕ್ಷನ್ ನಾಗರಾಜು ಅಕ್ರಮ ಬಯಲಿಗೆ ಬಂದಿದೆ. ಇಬ್ಬರನ್ನು ಅಮಾನತ್ತು ಮಾಡಿದ ಚನ್ನಪಟ್ಟಣ ತಹಶೀಲ್ದಾರ್ ಹರ್ಷವರ್ಧನ್ ಈಗ ಈ ಇಬ್ಬರೂ ಚನ್ನಪಟ್ಟಣ ನಗರ ಪೊಲೀಸರ ವಶಕ್ಕೆ ಪಡೆದಿದ್ದಾರೆ.‌

ಇದನ್ನೂ ಓದಿ: Morning Digest: ಪಿಯು ಕಾಲೇಜುಗಳು ಪುನಾರಂಭ: ಇಂದಿನ ಚಿನ್ನ-ಬೆಳ್ಳಿ ಬೆಲೆ, ಪೆಟ್ರೋಲ್-ಡಿಸೇಲ್ ದರ ಎಷ್ಟಿದೆ? ಇಂದಿನ ಪ್ರಮುಖ ಸುದ್ದಿಗಳು

02-06-2022 ರಂದು ಉಪತಹಶೀಲ್ದಾರ್ ಲಕ್ಷ್ಮೀದೇವಮ್ಮ ದೂರು ನೀಡಿದ್ದರು. ‌ಚನ್ನಪಟ್ಟಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು.ಈ ಹಿನ್ನೆಲೆ ತನಿಖೆ ಮಾಡಿದಾಗ ಅಕ್ರಮ ಬಯಲಾಗಿದೆ.‌ಈ ಪ್ರಕರಣದಲ್ಲಿ ಬೋರಲಿಂಗಯ್ಯ, ಲೋಕೇಶ್ ಸಹ ಬಂಧಿತರಾಗಿದ್ದು, ತನಿಖೆ ಮುಂದುವರೆಸಿರುವ ಚನ್ನಪಟ್ಟಣ ನಗರ ಪೊಲೀಸರು ಮತ್ತಷ್ಟು ಜನರನ್ನ ಹುಡುಕುತ್ತಿದ್ದಾರೆ. ಒಟ್ಟಾರೆ ಕುಮಾರಸ್ವಾಮಿ ಕ್ಷೇತ್ರದ ಕಡೆಗೆ ಗಮನಹರಿಸದ ಕಾರಣ ಇಷ್ಟೆಲ್ಲ ಅವಾಂತರಗಳು ನಡೆಯುತ್ತಿವೆ.
Published by:Divya D
First published: