C.P Yogeshwar: ಚನ್ನಪಟ್ಟಣದಲ್ಲಿ ಡಿ.ಕೆ ಬ್ರದರ್ಸ್​ಗೆ ಶಾಕ್; ಕಾಂಗ್ರೆಸ್ ಮುಖಂಡರು ಬಿಜೆಪಿ ಸೇರ್ಪಡೆ

ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರು ಬಿಜೆಪಿ ಗೆ ವಲಸೆಗೊಂಡಿದ್ದು ಡಿ.ಕೆ.ಬ್ರದರ್ಸ್ ರಾಜಕೀಯ ನಡೆ ವಿರೋಧಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದ ಹವಾ ದಿನದಿಂದ ದಿನಕ್ಕೆ ಕಡಿಮೆಯಾಗ್ತಿದೆ.

ಬಿಜೆಪಿ ಸೇರ್ಪಡೆ ಕಾರ್ಯಕ್ರಮ

ಬಿಜೆಪಿ ಸೇರ್ಪಡೆ ಕಾರ್ಯಕ್ರಮ

 • Share this:
  ರಾಮನಗರ (ಮೇ 14): ರಾಮನಗರ (Ramanagara) ಜಿಲ್ಲೆಯ ಚನ್ನಪಟ್ಟಣದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಗೆ (D.K Shivakumar) ಸ್ವಪಕ್ಷೀಯರೇ ಶಾಕ್ ಕೊಟ್ಟಿದ್ದಾರೆ. ರಾಮನಗರ ಜಿಲ್ಲಾ ಕಾಂಗ್ರೆಸ್ ನಾಯಕರು ಪಕ್ಷಕ್ಕೆ ರಾಜೀನಾಮೆ (Resignation) ನೀಡಿ ಕಾಂಗ್ರೆಸ್ ತೊರೆದು ಮಾಜಿ ಸಚಿವ ಸಿ.ಪಿ. ಯೋಗೇಶ್ವರ್ (Yogeshwar) ಜೊತೆಗೂಡಿ ಬಿಜೆಪಿ ಸೇರ್ಪಡೆಯಾಗಿದ್ದಾರೆ (BJP Joining).‌ ರಾಮನಗರ ಜಿಲ್ಲಾ ಪ್ರಧಾನ‌ ಕಾರ್ಯದರ್ಶಿ ಎಸ್.ಸಿ.ಶೇಖರ್, ರಾಮನಗರ ಜಿಲ್ಲಾ ಕಾರ್ಯದರ್ಶಿ ಎಂ. ಎಸ್. ಕೇಶವಮೂರ್ತಿ ಸೇರಿ ಹಲವರು ಕಾಂಗ್ರೆಸ್ ಗೆ ಗುಡ್ ಬೈ (Good bye) ಹೇಳಿ ಬಿಜೆಪಿ ಸೇರಿದ್ದಾರೆ.

  ಚನ್ನಪಟ್ಟಣದಲ್ಲಿ ಡಿ.ಕೆ ಬ್ರದರ್ಸ್​ಗೆ ಶಾಕ್​

  ಚನ್ನಪಟ್ಟಣದ ಕಾಂಗ್ರೆಸ್ ಮುಖಂಡರು ಬಿಜೆಪಿ ಗೆ ವಲಸೆಗೊಂಡಿದ್ದು ಡಿ.ಕೆ.ಬ್ರದರ್ಸ್ ರಾಜಕೀಯ ನಡೆ ವಿರೋಧಿಸಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ, ಪಕ್ಷದ ನಾಯಕರು ಚುನಾವಣೆ ಸಂದರ್ಭದಲ್ಲಿ ಮಾತ್ರ ಚನ್ನಪಟ್ಟಣಕ್ಕೆ ಬರ್ತಾರೆ. ಚುನಾವಣೆ ಮುಗಿದ ನಂತರ ಕ್ಷೇತ್ರದ ಕಡೆ ಮುಖ ಮಾಡುವುದಿಲ್ಲ.  ಕಳೆದ 5 ಚುನಾವಣೆಯಲ್ಲಿ 5 ಅಭ್ಯರ್ಥಿಗಳು ಬಂದಿದ್ದಾರೆ. ಪ್ರತಿ ಚುನಾವಣೆಗೂ ಒಬ್ಬ ಹೊಸ ಅಭ್ಯರ್ಥಿ ಬರ್ತಾರೆ.

  ಕಾಂಗ್ರೆಸ್​ನಲ್ಲಿ 4-5 ಗುಂಪುಗಳಿವೆ

  ಪಕ್ಷದ ನಾಯಕರು ನಮ್ಮ ಕಷ್ಟಸುಖ ಕೇಳುವುದಿಲ್ಲ, ಚನ್ನಪಟ್ಟಣ ಕಾಂಗ್ರೆಸ್ ನಲ್ಲಿ ನಾಲ್ಕೈದು ಗುಂಪುಗಳಿದ್ದಾವೆ. ಹಲವು ಬಾರಿ ನಾಯಕರ ಗಮನಕ್ಕೆ ತಂದಿದ್ದೇವೆ, ಯಾವುದೇ ಪ್ರಯೋಜನ ಆಗಿಲ್ಲ. ಪ್ರಮುಖವಾಗಿ ಪಕ್ಷದಲ್ಲಿ ದಲಿತ ನಾಯಕರಿಗೆ, ಮುಖಂಡರಿಗೆ, ಕಾರ್ಯಕರ್ತರಿಗೆ ಬೆಲೆಯಿಲ್ಲ. ಹಾಗಾಗಿ ನಾವು ಕಾಂಗ್ರೆಸ್ ಗೆ ರಾಜೀನಾಮೆ ನೀಡಿದ್ದೇವೆ.  ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ನಾಯಕತ್ವ ಮೆಚ್ಚಿ ಬಿಜೆಪಿ ಸೇರುತ್ತಿದ್ದೇವೆ.‌ ಮುಂದೆ ದಲಿತರ ನಡೆ ಯೋಗೇಶ್ವರ್ ಕಡೆ ಎಂಬ ಕಾರ್ಯಕ್ರಮ ಮಾಡ್ತೇವೆ.  ಕ್ಷೇತ್ರದಲ್ಲಿ ದೊಡ್ಡಮಟ್ಟದಲ್ಲಿ ದಲಿತರ ಸಮಾವೇಶ ಮಾಡ್ತೇವೆ, ಬಹಳಷ್ಟು ಜನರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಲಿದ್ದಾರೆಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

  ಇದನ್ನೂ ಓದಿ: Interim Injunction: ಪೀಠಾರೋಹಣಕ್ಕೆ ಕೋರ್ಟ್ ಬ್ರೇಕ್, ಅಡೆತಡೆಯಿಲ್ಲದೆ ಕಾರ್ಯಕ್ರಮ ನಡೆಯುತ್ತೆ-ಬಿ.ಜೆ ಪುಟ್ಟಸ್ವಾಮಿ

  ಚನ್ನಪಟ್ಟಣದಲ್ಲಿ ಬಿಜೆಪಿ ಸದೃಢ, ಸಿ.ಪಿ.ಯೋಗೇಶ್ವರ್ ಗೆ ಬೆಂಬಲ‌ 

  ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಸ್ವಕ್ಷೇತ್ರದಲ್ಲಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹವಾ ಸೃಷ್ಟಿಸುತ್ತಿದ್ದಾರೆ.‌ ದಿನದಿಂದ ದಿನಕ್ಕೆ ಕಾಂಗ್ರೆಸ್ - ಜೆಡಿಎಸ್ ಪಕ್ಷದಿಂದ ಕಾರ್ಯಕರ್ತರು, ಮುಖಂಡರು ಯೋಗೇಶ್ವರ್ ಜೊತೆಗೂಡಿ ಬಿಜೆಪಿ ಸೇರುತ್ತಿದ್ದಾರೆ. ಮತ್ತೊಂದು ಕಡೆ ಇದು ಕುಮಾರಸ್ವಾಮಿ ಗೆ ಇನ್ನಿಲ್ಲದ ಸಂಕಷ್ಟವಾಗ್ತಿದೆ.

  ಚನ್ನಪಟ್ಟಣದಲ್ಲಿ ಡಿ.ಕೆ ಬ್ರದರ್ಸ್​ ಆಪರೇಷನ್​

  ಮತ್ತೊಂದು ಕಡೆ ಡಿ.ಕೆ. ಬ್ರದರ್ಸ್ ಸಹ ಚನ್ನಪಟ್ಟಣದಲ್ಲಿ ಆಪರೇಶನ್ ಮಾಡಲು ತಯಾರಾಗಿದ್ದಾರೆ. ಆದರೆ ಡಿ.ಕೆ.ಬ್ರದರ್ಸ್ ಗೆ ಚನ್ನಪಟ್ಟಣದಲ್ಲಿ ಅಷ್ಟೇನು ಕಿಮ್ಮತ್ತಿಲ್ಲ.‌ ಯಾಕೆಂದರೆ ಕಳೆದ 4 ವರ್ಷದಿಂದ ಡಿ.ಕೆ.ಬ್ರದರ್ಸ್ ಚನ್ನಪಟ್ಟಣದ ಕಡೆಗೆ ಮುಖ ಮಾಡಲಿಲ್ಲ. ಕಾರ್ಯಕರ್ತರು, ಮುಖಂಡರು ಅವರ ಕಷ್ಟವನ್ನ ಕೇಳಲಿಲ್ಲ. ಜೊತೆಗೆ ಪ್ರತಿ ಚುನಾವಣೆಗೆ ಹೊಸ ಅಭ್ಯರ್ಥಿ ಬರ್ತಾರೆ. ಒಬ್ಬ ಖಾಯಂ ಕಾಂಗ್ರೆಸ್ ಅಭ್ಯರ್ಥಿ ಚನ್ನಪಟ್ಟಣಕ್ಕೆ ಇಲ್ಲ. ಈ ಎಲ್ಲಾ ಅಂಶಗಳಿಂದ ಡಿ.ಕೆ.ಬ್ರದರ್ಸ್ ಮೇಲಿದ್ದ ನಂಬಿಕೆ ಹುಸಿಯಾಗಿದೆ. ಈ ಹಿನ್ನೆಲೆ ಚನ್ನಪಟ್ಟಣದಲ್ಲಿ ನೀರಾವರಿ ಅಭಿವೃದ್ಧಿ ಮಾಡಿರುವ ಯೋಗೇಶ್ವರ್ ಗೆ ಭಾರೀ ಬೆಂಬಲ ವ್ಯಕ್ತವಾಗ್ತಿದೆ.

  ಇದನ್ನೂ ಓದಿ: Accused Arrest: ಕೊನೆಗೂ ಸಿಕ್ಕಿಬಿದ್ದ ಆ್ಯಸಿಡ್​ ನಾಗ; ಆಶ್ರಮದಲ್ಲಿ ಸ್ವಾಮೀಜಿ ವೇಷ ಧರಿಸಿ ಅಡಗಿ ಕುಳಿತ್ತಿದ್ದ ಆರೋಪಿ

  ಚುನಾವಣೆ ಹತ್ತಿರ ಬರುತ್ತಿರೋ ಹಿನ್ನೆಲೆ ನಾಯಕರು,  ಮುಖಂಡರು, ಕಾರ್ಯಕರ್ತರು ಪಕ್ಷದಿಂದ ಪಕ್ಷಕ್ಕೆ ವಲಸೆ ಹೋಗೋದು ಸಹಜ. ಚನ್ನಪಟ್ಟದಲ್ಲಿ ಜೆಡಿಎಸ್​ ಮುಖಂಡರು ಸಹ ಕುಮಾರಸ್ವಾಮಿಗೆ ಶಾಕ್​ ಕೊಟ್ಟು ಕಮಲ ಪಡೆ ಸೇರಿದ್ದಾರೆ. ಇದೀಗ ಚನ್ನಪಟ್ಟಣದ ಕಾಂಗ್ರೆಸ್​ ಮುಖಂಡರು ಸಹ ಯೋಗೇಶ್ವರ್​ಗೆ ಸಾಥ್​ ಕೊಡ್ತಿದ್ದಾರೆ. ಮುಂದಿನ ಎಲೆಕ್ಷನ್​ಗೆ ಭರ್ಜರಿ ಸಿದ್ಧತೆ ಮಾಡಿಕೊಳ್ತಿರೋ ಸಿ.ಪಿ ಯೋಗೇಶ್ವರ್​ ಗೆಲ್ಲೋ ಹಠದಲ್ಲಿ ಬಿಗ್​ ಫೈಟ್​ ಕೊಡಲು ರೆಡಿಯಾಗ್ತಿದ್ದಾರೆ.

  ವರದಿ - ಎ.ಟಿ.ವೆಂಕಟೇಶ್
  Published by:Pavana HS
  First published: