ರಾಮನಗರ: ಚನ್ನಪಟ್ಟಣ ನಗರಸಭೆಯ (channapatna city municipality) ಅಧ್ಯಕ್ಷ, ಉಪಾಧ್ಯಕ್ಷ (president and vice president) ಸ್ಥಾನಕ್ಕೆ ಇಂದು ಚುನಾವಣೆ (election) ನಡೆಯಿತು. ಈ ಚುನಾವಣಾ ಪ್ರಕ್ರಿಯೆಯಲ್ಲಿಅಧ್ಯಕ್ಷ - ಉಪಾಧ್ಯಕ್ಷ ಸ್ಥಾನಕ್ಕೆ ಜೆಡಿಎಸ್ ನ (JDS) ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಜೆಡಿಎಸ್ನ 26 ನೇ ವಾರ್ಡ್ ನ ಪ್ರಶಾಂತ್ (prashant) ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ 19 ನೇ ವಾರ್ಡ್ ನ ಹಸೀನಾ ಫರೀನ್ ಸಹ ಅವಿರೋಧವಾಗಿ ಆಯ್ಕೆಯಾದರು. ಈ ಸಂದರ್ಭದಲ್ಲಿ ಸಿಹಿ ವಿತರಿಸಿ ಜೆಡಿಎಸ್ ಮುಖಂಡರು ಹರ್ಷವ್ಯಕ್ತಪಡಿಸಿದರು. ಈ ಚುನಾವಣೆಯಲ್ಲಿ ಬಿಜೆಪಿ - ಕಾಂಗ್ರೆಸ್ ಮೈತ್ರಿ ಗೆ ಭಂಗವಾಯಿತು. ಕಾಂಗ್ರೆಸ್ ಜೊತೆಗೆ ಕೈಜೋಡಿಸಿ ಜೆಡಿಎಸ್ ಗೆ ಟಾಂಗ್ ಕೊಡಲು ಯೋಗೇಶ್ವರ್ ಪ್ಲ್ಯಾನ್ ಮಾಡಿದ್ದರು. ಆದರೆ ಕೊನೆ ಹಂತದಲ್ಲಿ ಸಿ.ಪಿ.ಯೋಗೇಶ್ವರ್ ಪ್ಲ್ಯಾನ್ ಫೇಲ್ ಆಯಿತು.
ಸಿ.ಪಿ.ಯೋಗೇಶ್ವರ್ ಪ್ಲ್ಯಾನ್ ಫೇಲ್
ಕಾಂಗ್ರೆಸ್ - 7, ಬಿಜೆಪಿ - 7, ಜೆಡಿಎಸ್ - 16 ಸ್ಥಾನಗಳಿದ್ದವು, 1 - ಪಕ್ಷೇತರ ಇತ್ತು. ಈ ಹಿನ್ನೆಲೆ ಕಾಂಗ್ರೆಸ್ ಗೆ ಬೆಂಬಲ ಕೊಡಲು ಯೋಗೇಶ್ವರ್ ಪ್ಲ್ಯಾನ್ ಮಾಡಿದ್ದರು, ಈ ಮೂಲಕ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಗೆ ಟಾಂಗ್ ಕೊಡಲು ಯೋಗೇಶ್ವರ್ ತಂತ್ರ ರೂಪಿಸಿದ್ದರು. ಆದರೆ ಕಾಂಗ್ರೆಸ್ ನವರು ಬಿಜೆಪಿಗೆ ಬೆಂಬಲ ಕೊಡಲು ಒಪ್ಪದ ಹಿನ್ನೆಲೆ ಯೋಗೇಶ್ವರ್ ಪ್ಲ್ಯಾನ್ ಫೇಲ್ ಆಯಿತು. ಈ ಹಿನ್ನೆಲೆ ಜೆಡಿಎಸ್ ಗೆ ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಸಿಕ್ಕಿತು. ಈ ಮೂಲಕ ಚನ್ನಪಟ್ಟಣದಲ್ಲಿ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಕೈ ಮೇಲುಗೈ ಆಯಿತು.
ಕಾಂಗ್ರೆಸ್ ಗೆ ಬೆಂಬಲ ನೀಡಲು ದುಂಬಾಲು ಬಿದ್ದಿದ್ದ ಬಿಜೆಪಿ
ಚನ್ನಪಟ್ಟಣ ನಗರಸಭೆ ಜೆಡಿಎಸ್ ಪಾಲಾಗುತ್ತದೆ. ಹೆಚ್ಚಾಗಿ ಕ್ಷೇತ್ರದ ಶಾಸಕ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗೆ ಸೆಡ್ಡು ಹೊಡೆಯುವ ದೃಷ್ಟಿಯಿಂದಾಗಿ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಕಾಂಗ್ರೆಸ್ ಗೆ ಬೆಂಬಲ ಕೊಡಲು ದುಂಬಾಲು ಬಿದ್ದಿದ್ದರು. ಜೆಡಿಎಸ್ ಗೆ ಅಧಿಕಾರ ತಪ್ಪಿಸಿ ಕುಮಾರಸ್ವಾಮಿ ಗೆ ಸ್ವಕ್ಷೇತ್ರದಲ್ಲಿಯೇ ಟಕ್ಕರ್ ಕೊಡಬೇಕೆಂದು ಯೋಗೇಶ್ವರ್ ಪ್ಲ್ಯಾನ್ ಮಾಡಿದ್ದರು. ಆದರೆ ಸಂಸದ ಡಿ.ಕೆ.ಸುರೇಶ್ ಇದಕ್ಕೆ ಖಡಕ್ ಆಗಿಯೇ ನೋ ಎಂದಿದ್ದಾರೆಂದು ತಿಳಿದುಬಂದಿದೆ.
ಯೋಗೇಶ್ವರ್ಗೆ ನೋ ಎಂದ ಕಾಂಗ್ರೆಸ್ಸಿಗರು
ನಮಗೆ ಸಂಖ್ಯೆ ಇಲ್ಲ, ಜೊತೆಗೆ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆಗೆ ಹೋಗುವುದು ಬೇಡ ಎಂದು ಕಾಂಗ್ರೆಸ್ ಸದಸ್ಯರಿಗೆ ಸೂಚನೆ ನೀಡಿದ ಹಿನ್ನೆಲೆ ಈ ಪ್ಲ್ಯಾನ್ ಗೆ ತಣ್ಣೀರು ಬಿತ್ತು. ಇನ್ನು ಕಳೆದ ಮೂರು ದಿನಗಳಿಂದ ಯೋಗೇಶ್ವರ್ ಇನ್ನಿಲ್ಲದ ಪ್ರಯತ್ನ ಮಾಡಿದ್ದರು. ನಮಗೆ ಉಪಾಧ್ಯಕ್ಷ ಸ್ಥಾನ ನೀಡಿ, ಅಧ್ಯಕ್ಷ ಸ್ಥಾನ ನಿಮಗೆ ಎಂದೂ ಸಹ ಯೋಗೇಶ್ವರ್ ಕಾಂಗ್ರೆಸ್ ಗೆ ಆಫರ್ ನೀಡಿದ್ದರು. ಆದರೆ ಡಿ.ಕೆ.ಶಿವಕುಮಾರ್ ಹಾಗೂ ಸುರೇಶ್ ಯಾವುದೇ ಕಾರಣಕ್ಕೂ ಬಿಜೆಪಿ ಜೊತೆ ಸಂಬಂಧ ಬೇಡ ಎಂದ ಹಿನ್ನೆಲೆ 13 ವರ್ಷಗಳ ಬಳಿಕ ಚನ್ನಪಟ್ಟಣದಲ್ಲಿ ಜೆಡಿಎಸ್ ನಗರಸಭೆ ಗದ್ದುಗೆಗೆ ಏರಿದೆ.
ಇದನ್ನೂ ಓದಿ: ಅರಸು ನಂತರ ನಾನೊಬ್ಬನೇ 5 ವರ್ಷ ಮುಖ್ಯಮಂತ್ರಿ ಆಗಿದ್ದೆ ಅಂತ ಅವರಿಗೆಲ್ಲಾ ಹೊಟ್ಟೆಕಿಚ್ಚು: Siddaramaiah
ನಿನ್ನೆ ದೇವನಹಳ್ಳಿಯಲ್ಲಿ ಮಾತನಾಡಿದ್ದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ, ರಾಜ್ಯದಲ್ಲಿ ಇನ್ಮುಂದೆ ಯಾರೂ ರೈತರ ಸಾಲ ಮನ್ನಾಮಾಡಲ್ಲ. ನಾನು ಮುಖ್ಯಮಂತ್ರಿ ಆಗಿದ್ದಾಗ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ನಲ್ಲ, ಆದರೂ ಏನೂ ಉಪಯೋಗಕ್ಕೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಅದನ್ನ ಹೈನುಗಾರಿಕೆ, ದ್ರಾಕ್ಷಿ, ತೋಟಗಾರಿಕೆ ಬೆಳೆಗಳಿಗೆ ಕೊಟ್ರೆ ಅನುಕೂಲವಾಗುತ್ತೆ. ನಾನು ಸಹ 25 ಹಸುಗಳನ್ನ ಸಾಕಾಣಿಕೆ ಮಾಡಿ ಹೈನುಗಾರಿಕೆಯ ಕಷ್ಟ ಏನು ಅಂತ ತಿಳ್ಕೊಂಡಿದ್ದೀನಿ. ನನಗೆ ಐದು ವರ್ಷ ಸರ್ಕಾರ ಕೊಟ್ರೆ ಯಾವುದೇ ರೈತ ಒಂದು ರೂಪಾಯಿ ಸಾಲ ಮಾಡಲು ಬಿಡಲ್ಲ. ಒಂದು ವೇಳೆ ನಾನು ಅದನ್ನ ಮಾಡದಿದ್ರೆ ಜೆಡಿಎಸ್ ಬಾಗಿಲು ಮುಚ್ಚಿಸುತ್ತೇನೆ ಎಂದು ಶಪಥ ಮಾಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ