DK Suresh: ಗಂಧದನಾಡಿನ ಬದಲಾಗಿ ಬಂದೂಕಿನ ನಾಡು ಎಂದು ಬದಲಿಸಲಿ: ಬಿಜೆಪಿಗೆ ಸಂಸದ ಡಿ‌.ಕೆ.ಸುರೇಶ್ ವ್ಯಂಗ್ಯ

ಯಾರು ಏನು ಬೇಕಾದರೂ ಮಾತನಾಡಬಹುದು. ಅವರ ಅಭಿಪ್ರಾಯವನ್ನ‌ ತಿಳಿಸಬಹುದು. ಆದರೆ ರಾಮನಗರ ಕಾಂಗ್ರೆಸ್ ಗೆ ಇಕ್ಬಾಲ್ ಹುಸೇನ್ ನಾಯಕ. ಅವರ ನಾಯಕತ್ವದಲ್ಲೇ ಮುಂದಿನ ಸ್ಥಳೀಯ ಚುನಾವಣೆಗಳು ನಡೆಯಲಿವೆ. ಅವರೇ ನಮ್ಮ ಪಕ್ಷದ ಮುಂದಿನ ರಾಮನಗರ ಕ್ಷೇತ್ರದ ಅಭ್ಯರ್ಥಿ ಎಂದು ತಿಳಿಸಿದರು.

ಸಂಸದ ಡಿ.ಕೆ. ಸುರೇಶ್.

ಸಂಸದ ಡಿ.ಕೆ. ಸುರೇಶ್.

  • Share this:
ರಾಮನಗರ:  (Ramanagara) ಕೇಂದ್ರ ಸಚಿವರ ಜನ ಆಶೀರ್ವಾದ ಯಾತ್ರೆ ಕಾರ್ಯಕ್ರಮದಲ್ಲಿ ಗುಂಡು ಹಾರಿಸಿದ ವಿಚಾರವಾಗಿ ಸಂಸದ ಡಿ.ಕೆ.ಸುರೇಶ್ (DK Suresh) ಬಿಡದಿಯಲ್ಲಿ ವಾಗ್ದಾಳಿ ನಡೆಸಿದರು. ಬಿಜೆಪಿಯವರ (BJP Leaders) ಹೇಳಿಕೆಗಳನ್ನ ಗಮನಿಸಿದ್ದೇನೆ. ಅವರು ಉತ್ತರ ಪ್ರದೇಶ, ಬಿಹಾರದ ಸಂಸ್ಕೃತಿಯನ್ನ ಅನುಸರಿಸುತ್ತಿದ್ದಾರೆ. ಇವರು ಗುಂಡು ಹಾರಿಸಿದರೆ ಖುಷಿಗೆ, ಮತ್ತೊಬ್ಬರು ಹಾರಿಸಿದರೆ ದುಃಖಕ್ಕೆ.‌ ಗಂಧದ ನಾಡು ಎಂಬುದನ್ನ ಬಂದೂಕಿನ‌ ನಾಡು ಎಂದು ಬದಲಿಸಲಿ ಎಂದು ಕಿಡಿ ಕಾರಿದರು.

ಇನ್ನು ಬಿಜೆಪಿಯವರು ದೇಶವನ್ನ ಮಾರಿ ಬಿಡ್ತಾರೆ‌ಂದ ಸಂಸದ ಡಿ.ಕೆ.ಸುರೇಶ್, ಕಾಂಗ್ರೆಸ್ ಪಕ್ಷ 70 ವರ್ಷದಿಂದ ಮಾಡದಿದ್ದನ್ನ ಬಿಜೆಪಿಯವರು 7 ವರ್ಷದಲ್ಲೇ ಮಾಡ್ತಾರೆಂದು ಕಿಡಿಕಾರಿದ್ದಾರೆ. ಸರ್ಕಾರಿ ಆಸ್ತಿಗಳನ್ನ ಖಾಸಗಿಯವರಿಗೆ ಗುತ್ತಿಗೆ ನೀಡುವ ವಿಚಾರಕ್ಕೆ ವಾಗ್ದಾಳಿ ನಡೆಸಿದ ಸುರೇಶ್, ಬಿಜೆಪಿಯವರು ಎಲ್ಲವನ್ನೂ ಖಾಸಗಿಕರಣ ಮಾಡ್ತಿದ್ದಾರೆ. ನಾವು ಮುಂದೆ ಗುಲಾಮರಾಗುತ್ತೇವೆ ಎಂದರು. ಇನ್ನು ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ವಿರುದ್ಧ ವಾಗ್ದಾಳಿ ನಡೆಸಿ, ಬೆಂಗಳೂರು - ಮೈಸೂರು ಎಕ್ಸ್‌ಪ್ರೆಸ್ ಹೈವೇ ಗೆ ಇವರಿಬ್ಬರದ್ದೇ ಕೊಡುಗೆ. ಬೇರ್ಯಾರದ್ದು ಸಹ ಕೊಡುಗೆ ಇಲ್ಲ. ನಾನು ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ವ್ಯಂಗ್ಯ ಮಾಡಿದರು. ಈ ಹೆದ್ದಾರಿ ಕಾಮಗಾರಿ ನನ್ನದೇ ಕೊಡುಗೆ ಎಂದಿದ್ದ ಪ್ರತಾಪ್ ಸಿಂಹಗೆ ರಾಮನಗರ ಜಿಲ್ಲೆಯ ಬಿಡದಿಯಲ್ಲಿ ಡಿ.ಕೆ.ಸುರೇಶ್ ಟಾಂಗ್ ಕೊಟ್ಟರು‌.

ರಾಮನಗರಕ್ಕೆ ಇಕ್ಬಾಲ್ ಹುಸೇನ್ ಕಾಂಗ್ರೆಸ್ ನಾಯಕ : ಡಿ.ಕೆ.ಸುರೇಶ್

ರಾಮನಗರ ಕ್ಷೇತ್ರಕ್ಕೆ ಇಕ್ಬಾಲ್ ಹುಸೇನ್ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಎಂದೇ ಈಗಾಗಲೇ ಚರ್ಚೆಯಲ್ಲಿತ್ತು. ಆದರೆ ಕಾಂಗ್ರೆಸ್ ಎಂ ಎಲ್ ಸಿ ಸಿ.ಎಂ‌.ಲಿಂಗಪ್ಪ ಮಾತ್ರ ಜಿಯಾವುಲ್ಲಾ ಸಹ ಕಳೆದ 50 ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರಿಗೆ ಪಕ್ಷದ ಟಿಕೆಟ್ ಕೊಡಿ ಎಂದು ಕಾರ್ಯಕ್ರಮವೊಂದರಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು‌. ಈ ವಿಚಾರವಾಗಿ ಡಿ.ಕೆ.ಸುರೇಶ್ ಮಾತನಾಡಿ, ಯಾರು ಏನು ಬೇಕಾದರೂ ಮಾತನಾಡಬಹುದು. ಅವರ ಅಭಿಪ್ರಾಯವನ್ನ‌ ತಿಳಿಸಬಹುದು. ಆದರೆ ರಾಮನಗರ ಕಾಂಗ್ರೆಸ್ ಗೆ ಇಕ್ಬಾಲ್ ಹುಸೇನ್ ನಾಯಕ. ಅವರ ನಾಯಕತ್ವದಲ್ಲೇ ಮುಂದಿನ ಸ್ಥಳೀಯ ಚುನಾವಣೆಗಳು ನಡೆಯಲಿವೆ. ಅವರೇ ನಮ್ಮ ಪಕ್ಷದ ಮುಂದಿನ ರಾಮನಗರ ಕ್ಷೇತ್ರದ ಅಭ್ಯರ್ಥಿ ಎಂದು ತಿಳಿಸಿದರು.

ಇದನ್ನು ಓದಿ: Vaccine: ದಿನದ 24 ಗಂಟೆ ಕೊರೋನಾ ಲಸಿಕೆ ನೀಡುವ ಕೇಂದ್ರಗಳನ್ನು ತೆರೆದ ತಮಿಳುನಾಡು ಸರ್ಕಾರ

ಇನ್ನು ಈ ವಿಚಾರಗಳ ಬಗ್ಗೆ ಹೇಳಿಕೆ ನೀಡುವಾಗ ಪಕ್ಷದಲ್ಲಿ ಆಗುವ ಬೆಳವಣಿಗೆಗಳ ಬಗ್ಗೆ ಯೋಚನೆ ಮಾಡಬೇಕೆಂದು ಪಕ್ಷದ ಮುಖಂಡರಿಗೆ ತಿಳಿಸಿದರು. ಇನ್ನು ರಾಮನಗರದಲ್ಲಿ ಈವರೆಗೆ ಕಾಂಗ್ರೆಸ್ ಪಕ್ಷ ಬಲವಾಗಿ ಇರಲಿಲ್ಲ. ಆದರೆ ಕ್ಷೇತ್ರಕ್ಕೆ ಇಕ್ಬಾಲ್ ಹುಸೇನ್ ಬಂದ ನಂತರ ಪಕ್ಷ ಸಂಘಟನೆ ಬಹಳ ಅಚ್ಚುಕಟ್ಟಾಗಿ ನಡೆಯುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಕಾಂಗ್ರೆಸ್ ಮುಖಂಡರ ನಡುವೆ ಇರುವ ಭಿನ್ನಮತವೇ ಮುಂದಿನ ದಿನಗಳಲ್ಲಿ ಜೆಡಿಎಸ್ ಪಕ್ಷಕ್ಕೆ ಅನುಕೂಲವಾದರೂ ಸಹ ಯಾವುದೇ ಆಶ್ಚರ್ಯ ಇಲ್ಲ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು.

ವರದಿ : ಎ‌‌.ಟಿ‌.ವೆಂಕಟೇಶ್
Published by:HR Ramesh
First published: