Ashwath Narayana: 'ಅದೊಂದು ಜೈಲು ಹಕ್ಕಿ ಸ್ವಾಮಿ; ಈಗ ಬೇಲ್ ಮೇಲೆ ಆಚೆ ಇದೆ, ಡಿಕೆಶಿ ಪರ್ಮನೆಂಟ್ ಜಾಗ ತಿಹಾರ್ ಸೆಲ್'

ತಿಹಾರ್​ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಬಂದ ಡಿ.ಕೆ ಶಿವಕುಮಾರ್​ ಬಗ್ಗೆ ಮಾತಾಡಿದ ಅಶ್ವತ್ಥ ನಾರಾಯಣ, ಶಿವಕುಮಾರ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಶಿವಕುಮಾರ್ ಎಂದು ಹೇಳಿದ್ದಾರೆ.

ಸಚಿವ ಅಶ್ವತ್ಥ​ ನಾರಾಯಣ್

ಸಚಿವ ಅಶ್ವತ್ಥ​ ನಾರಾಯಣ್

  • Share this:
ರಾಮನಗರ (ಮೇ 10): PSI ನೇಮಕಾತಿ ಅಕ್ರಮಕ್ಕೆ (PSI Recruitment Scam) ಸಂಬಂಧಿಸಿದಂತೆ ಬಿಜೆಪಿ ಹಾಗೂ ಸಚಿವ ಅಶ್ವತ್ಥ ನಾರಾಯಣ (Minister Ashwath Narayana) ವಿರುದ್ಧ ಕಾಂಗ್ರೆಸ್ (Congress)​ ಮುಗಿಬಿದ್ದಿದ್ದು, ಇದೇ ವಿಚಾರಕ್ಕೆ ರಾಮನಗರದಲ್ಲಿ ಮಾತಾಡಿದ ಅಶ್ವತ್ಥ ನಾರಾಯಣ ಡಿ.ಕೆ ಶಿವಕುಮಾರ್​ಗೆ (D.K Shivakumar) ತಿರುಗೇಟು ನೀಡಿದ್ದಾರೆ. ಆಗಸ್ಟ್ ನಲ್ಲಿ ಮತ್ತೆ ಬಿಜೆಪಿ ಟಾರ್ಗೆಟ್ (BJP Target) ವಿಚಾರಕ್ಕೆ ಪ್ರತಿಕ್ರಿಯಿಸಿದ ಅವ್ರು, ಸ್ವಾಮಿ‌ ಟಾರ್ಗೆಟ್ ಅಲ್ಲ, ಅದೊಂದು ಜೈಲುಹಕ್ಕಿ ಈಗ ಬೇಲ್​ನಲ್ಲಿ ಆಚೆ ಬಂದಿದೆ, ಅವರ ಕರ್ಮಕಾಂಡಕ್ಕೆ ಪರ್ಮನೆಂಟ್ ಜಾಗ ತಿಹಾರ್ ಜೈಲು, ನಮಗೆ ಗೌರವ ಹೆಚ್ಚಿಸುವ ರೀತಿ ಮೊದಲು ಕರ್ನಾಟಕದಿಂದ ತಿಹಾರ್ ಜೈಲಿಗೆ ಹೋಗಿದ್ದು ಡಿ.ಕೆ.ಶಿವಕುಮಾರ್, ಭ್ರಷ್ಟಾಚಾರಕ್ಕೆ ಇನ್ನೊಂದು ಹೆಸರೇ ಡಿ.ಕೆ ಶಿವಕುಮಾರ್ ಎಂದು ಸಚಿವ ಅಶ್ವತ್ಥ ನಾರಾಯಣ ವಾಗ್ದಾಳಿ ನಡೆಸಿದ್ದಾರೆ.

ಡಿಕೆಶಿ ಅಂದ್ರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದ್ರೆ ಡಿಕೆಶಿ

ತಿಹಾರ್​ ಜೈಲಿನಲ್ಲಿ ಸೆರೆವಾಸ ಅನುಭವಿಸಿ ಬಂದ ಡಿ.ಕೆ ಶಿವಕುಮಾರ್​ ಬಗ್ಗೆ ಮಾತಾಡಿದ ಅಶ್ವತ್ಥ ನಾರಾಯಣ, ಶಿವಕುಮಾರ್ ಅಂದರೆ ಭ್ರಷ್ಟಾಚಾರ, ಭ್ರಷ್ಟಾಚಾರ ಅಂದರೆ ಶಿವಕುಮಾರ್ ಎಂದು ಹೇಳಿದ್ದಾರೆ. ಜೈಲಿ ಹಕ್ಕಿಗೆ ಯಾವುದೇ ರೂಪುರೇಷೆ ಮಾಡಬೇಕಿಲ್ಲ, ಅವರೇ ಮಾಡಿಕೊಂಡಿದ್ದಾರೆ. ಕಾಂಗ್ರೆಸ್​​ ನಾಯಕರೇ ಸಿಕ್ಕಿದ್ದೆಲ್ಲಾ ಲೂಟಿ ಹೊಡೆಯುತ್ತಾರೆ, ಭ್ರಷ್ಟಾಚಾರವೇ ಕಾಂಗ್ರೆಸ್ ಪಕ್ಷದ ಸಂಸ್ಕೃತಿ ಆಗಿದೆ.

ನೂರು ಜನ್ಮ ಎತ್ತಿ ಬಂದ್ರೂ ಮಸಿ ಬಳಿಯಲು ಆಗಲ್ಲ

ತಾನೇ ಗಲೀಜಾಗಿದ್ದು ಇನ್ನೊಬ್ಬರ ಮೇಲೂ ಮಸಿ ಬಳಿಯಲು ಪ್ರಯತ್ನ ಮಾಡಿದ್ದಾರೆ. ಅಶ್ವಥ್ ನಾರಾಯಣ ರಾಜಕೀಯಕ್ಕೆ ಬಂದಿರೋದು ಜನರಿಗೆ ಕೊಡೋದಕ್ಕೆ ಮಾತ್ರ, ಡಿ.ಕೆ ಶಿವಕುಮಾರ್ ರೀತಿ ಎಲ್ಲವನ್ನು ಕೊಳ್ಳೆ ಹೊಡೆದು ನಂಗೆ ನನ್ನ ಸಂಸಾರಕ್ಕೆ ಎಂದು ತೆಗೆದುಕೊಂಡು ಹೋಗಲು ಅಲ್ಲ. ಇಂತಹ ನೂರು ಜನ ಹುಟ್ಟಿ ಬಂದರೂ, ಶಿವಕುಮಾರ್ ನೂರು ಜನ್ಮ ಎತ್ತಿ ಬಂದರೂ ನನ್ನ ಜೀವನಕ್ಕೆ ಮಸಿ ಬಳಿಯಲು ಆಗಲ್ಲ ಎಂದು ಅಶ್ವತ್ಥ ನಾರಾಯಣ ಚಾಲೆಂಜ್​ ಹಾಕಿದ್ದಾರೆ.

ಇದನ್ನೂ ಓದಿ: H.D Kumaraswamy: ಬಾದಾಮಿ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಘೋಷಣೆ; ಸಿದ್ದು ಕಾಲೆಳೆದ ಕುಮಾರಸ್ವಾಮಿ

ಮಾನಮರ್ಯಾದೆ ಇದ್ರೆ ದಾಖಲೆ ಬಿಡುಗಡೆ ಮಾಡಿ

ಕಾಂಗ್ರೆಸ್​ನವರಿಗೆ ಸ್ವಲ್ಪ ಮಾನಮರ್ಯಾದೆ ಇದ್ದರೆ ದಾಖಲೆ ಬಿಡುಗಡೆ ಮಾಡಲಿ ಎಂದು ಸಚಿವ ಅಶ್ವತ್ಥ ನಾರಾಯಣ ಹೇಳಿದ್ದಾರೆ.ಮಾನ ಮರ್ಯಾದೆ ಇರೋರು ಮಾಡೋ ಕೆಲಸ ನಾ ಇದು, ಪಕ್ಷಕ್ಕಾದರೂ ಮಾನಮರ್ಯಾದೆ ಬೇಡ್ವಾ ಅವರಿಗೆ ಮಾನಮರ್ಯಾದೆ ಇಲ್ಲದೆ ಒಬ್ಬ ವ್ಯಕ್ತಿಯ ತೇಜೋವಧೆ ಮಾಡಲು ಹೊರಟ್ಟಿದ್ದಾರೆ ಇದು ಎಷ್ಟು ಸರಿ ಎಂದು ಕಿಡಿಕಾರಿದ್ದಾರೆ.

ಅವರ ಅಧ್ಯಕ್ಷನೇ ಜೈಲಿಗೆ ಹೋಗಿ ಬಂದಿದ್ದಾನೆ

ಸಿದ್ದರಾಮಯ್ಯ ನಮ್ಮ ಪಕ್ಷದವರನ್ನು ಜೈಲಿಗೆ ಹೋದವರು ಅಂತಾರೆ ಅವರ ಅಧ್ಯಕ್ಷನೇ ಜೈಲಿಗೆ ಹೋದವನು. ಹಣಕ್ಕೆ, ಅಧಿಕಾರಕ್ಕೆ, ಕುಟುಂಬ ರಾಜಕಾರಣಕ್ಕೆ ಬಂದಿಲ್ಲ ನಾನು  ನಾನು ಜನರಿಗಾಗಿ ಬಂದಿರುವವನು, ರಾಜಕಾರಣಿ ಎಂದ್ರೆ, ನಿತ್ಯ  ಬೆಳಗ್ಗೆ ಎದ್ರೆ ಏನ್ ಸಿಗುತ್ತೆ ಅದನ್ನು ಬಾಚಿಕೊಳ್ಳೋಣ, ಜೇಬಿಗೆ ಕೈ ಹಾಕೋಣ, ಲೂಟಿ ಮಾಡೋಣ ಅಂತಾ ಇರಬಾರದು ರಾಜಕಾರಣಿ ಅಂದರೆ ಸ್ವಲ್ಪವಾದರೂ ಗೌರವ ಇರಬೇಕು ಎಂದ್ರು.

ಇದನ್ನೂ ಓದಿ:  Karnataka Politics: ಸೋಲಿನಿಂದ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿತಿ ಕಳ್ಕೊಂಡಿದ್ದಾರೆ- ಸಿ.ಟಿ ರವಿ

ಜೈಲುಹಕ್ಕಿ ಮಾತನ್ನು ಯಾರು ನಂಬಲ್ಲ

ಜೈಲುಹಕ್ಕಿ ಡಿ.ಕೆ ಶಿವಕುಮಾರ್ ಮಾತನ್ನು ಯಾರು ನಂಬೋದು ಇಲ್ಲ, ಕೇಳೋದು ಇಲ್ಲ, ಡಿಕೆಶಿ, ಎಲ್ಲಿದ್ದರೂ, ಹೇಗಿದ್ದರೂ ಅಂತಾ ಎಲ್ಲರಿಗೂ ಗೊತ್ತಿದೆ. ಜೈಲುಹಕ್ಕಿ ಆಗಿರೋದು ಎಲ್ಲರ ಮನೆ ಮನೆ ಮಾತಾಗಿದೆ. ನಮ್ಮ ಪಕ್ಷದಲ್ಲಿ ನನ್ನ ವಿರುದ್ಧ ಇರೋರು ಯಾರು ಇಲ್ಲ , ಸಿಎಂ ಸ್ಥಾನಕ್ಕೆ ಅರ್ಜಿ ಹಾಕಿಲ್ಲ, ಈಗ ಖಾಲಿಯೂ ಇಲ್ಲ ಎಂದು ರಾಮನಗರದಲ್ಲಿ ಸಚಿವ ಅಶ್ವತ್ಥ ನಾರಾಯಣ ಡಿ.ಕೆ.ಶಿವಕುಮಾರ್​ಗೆ ತಿರುಗೇಟು ನೀಡಿದ್ದಾರೆ.
Published by:Pavana HS
First published: