ರಾಮನಗರ ಜಿಲ್ಲೆಯಲ್ಲಿ 2 ಸಾವಿರ ಉಚಿತ ಆರೋಗ್ಯ ಕಿಟ್ ವಿತರಣೆ ಮಾಡಿದ ಆದಿಚುಂಚನಗಿರಿ ಶ್ರೀಗಳು

ಆದಿಚುಂಚನಗಿರಿ ಮಹಾಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಂದನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಉಚಿತ ಕೋವಿಡ್ ಔಷಧ ಕಿಟ್‍ಗಳನ್ನು  ವಿತರಿಸಲಾಯಿತು

ಹೆಲ್ತ್​ ಕಿಟ್​ ನೀಡುತ್ತಿರುವ ಶ್ರೀಗಳು

ಹೆಲ್ತ್​ ಕಿಟ್​ ನೀಡುತ್ತಿರುವ ಶ್ರೀಗಳು

  • Share this:
ರಾಮನಗರ (ಮೇ. 15):  ಕೊರೋನಾ ಎರಡನೇ ಅಲೆ ಹೆಚ್ಚಾಗಿರುವ ಹಿನ್ನೆಲೆ  ಪ್ರತಿಯೊಬ್ಬರೂ ಸ್ವಯಂಪ್ರೇರಿತರಾಗಿ ನಿರ್ಬಂಧ ಹಾಕಿಕೊಂಡು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿ ಸಹಕರಿಸಿದಾಗ ಮಾತ್ರ   ಕೋವಿಡ್ ಸೋಂಕು ನಿಯಂತ್ರಣಕ್ಕೆ ಬರಲು  ಸಾಧ್ಯವಾಗುತ್ತದೆ. ಕೊರೋನಾ ಎರಡನೇ ಅಲೆಗೆ ತುತ್ತಾಗಿರುವ  ಜಿಲ್ಲೆಯ 2 ಸಾವಿರ ಜನ ಕೊರೋನಾ ಸೋಂಕಿತರು ಹೋಂ ಕ್ವಾರಂಟೈನ್ ಆಗಿರುವ ಮಂದಿಗೆ ರಾಮನಗರ ಶಾಖೆಯಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಆದಿಚುಂಚನಗಿರಿ ವೈದ್ಯಕೀಯ ಮಹಾವಿದ್ಯಾಲಯ ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವತಿಯಿಂದ ಹೆಲ್ತ್ ಕಿಟ್ ಗಳನ್ನ ವಿತರಣೆ ಮಾಡಲಾಗಿದೆ. ಮೊದಲಿಗೆ ಚನ್ನಪಟ್ಟಣ ತಾಲೂಕಿನ ಬಿ.ವಿ.ಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದ್ದ ಕೊರೋನಾ ಸೋಂಕಿತರು, ಹೋಂ ಕ್ವಾರಂಟೈನ್‍ನಲ್ಲಿರುವವರು ಮತ್ತು ಸೋಂಕಿತರ ಅನುಕೂಲಕ್ಕಾಗಿ ಉಚಿತವಾಗಿ ಕೊರೋನಾ ಔಷಧ ಕಿಟ್ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಯಿತು.

ಕೊರೋನಾ ರೋಗ ನಿಯಂತ್ರಣಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮತ್ತು ಜಿಲ್ಲಾ ಹಾಗೂ ತಾಲ್ಲೂಕು ಆಡಳಿತ ಶ್ರಮಿಸುತ್ತಿದ್ದು ಜಿಲ್ಲೆಯಲ್ಲಿನ ಸೋಂಕಿತರಿಗೆ ನೆರವಾಗುವ ನಿಟ್ಟಿನಲ್ಲಿ  ಶ್ರೀ ಆದಿಚುಂಚನಗಿರಿ ಮಹಾಪೀಠಾಧ್ಯಕ್ಷರಾದ ಡಾ. ಶ್ರೀ ನಿರ್ಮಲನಂದನಾಥ ಮಹಾಸ್ವಾಮಿಗಳ ಆಶೀರ್ವಾದದೊಂದಿಗೆ ಜಿಲ್ಲೆಯಲ್ಲಿ 2 ಸಾವಿರಕ್ಕೂ ಹೆಚ್ಚು ಉಚಿತ ಕೋವಿಡ್ ಔಷಧ ಕಿಟ್‍ಗಳನ್ನು  ವಿತರಿಸಲಾಗುತ್ತಿದೆ ಎಂದು ರಾಮನಗರ ಶಾಖೆಯ ಅನ್ನದಾನೇಶ್ವರ ಸ್ವಾಮೀಜಿಗಳು ತಿಳಿಸಿದರು.

ಇದನ್ನು ಓದಿ: ಬಸವಜಯಂತಿಯಂದು ಹೊಸ ಅತಿಥಿಗಳನ್ನು ಸ್ವಾಗತಿಸಿದ ನಿಖಿಲ್​ ದಂಪತಿ

ಚನ್ನಪಟ್ಟಣ ತಾಲೂಕಿಗೆ 536 ಉಚಿತ ಕೋವಿಡ್ ಔಷಧ ಕಿಟ್‍ಗಳನ್ನು ವಿತರಿಸಲಾಗುತ್ತಿದೆ. ತಾಲ್ಲೂಕು ಆಡಳಿತ ಮತ್ತು ಆರೋಗ್ಯಾಧಿಕಾರಿಗಳಿಂದ ಮತ್ತಷ್ಟು ಬೇಡಿಕೆ ಬಂದರೆ ಅವರೆಲ್ಲರಿಗೂ ಉಚಿತ ಕೋವಿಡ್ ಔಷಧ ಕಿಟ್‍ಗಳನ್ನು ವಿತರಿಸಲಾಗುವುದು. ತಾಲ್ಲೂಕು ಆರೋಗ್ಯಾಧಿಕಾರಿಗಳ ಮಾಹಿತಿಯ ಪ್ರಕಾರ ತಾಲ್ಲೂಕಿನ ಪ್ರತಿ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕನಿಷ್ಟ 30-40 ಮಂದಿ ಕೋವಿಡ್ ಸೋಂಕಿತರು ಇದ್ದಾರೆ. ಹಾಗಾಗಿ ಹೋಂ ಕ್ವಾರಂಟೈನ್‍ನಲ್ಲಿರುವವರಿಗೆ ಶ್ರೀ ಮಠದಿಂದ ನೀಡಿರುವ ಉಚಿತ ಕೋವಿಡ್ ಔಷಧ ಕಿಟ್‍ಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳ ಮೂಲಕ  ಕಡು ಬಡವರು, ಬಡವರಿಗೆ ಪ್ರಥಮ ಆದ್ಯತೆಯಲ್ಲಿ ವಿತರಿಸಲಾಗುವುದು. ನಂತರ ಅಗತ್ಯವುಳ್ಳವರಿಗೆ ವಿತರಿಸಲಾಗುವುದು. ಇನ್ನು ಕಿಟ್ ನಲ್ಲಿ ಒಂದು ವಾರಕ್ಕೆ ಆಗುವಷ್ಟು ಕೊರೋನಾ ನಿಯಂತ್ರಣ ಮಾತ್ರೆಗಳು, 4 ಮಾಸ್ಕ್, ಒಂದು ಸ್ಯಾನಿಟೈಜರ್ ಬಾಟಲ್‌ ಸೇರಿದಂತೆ ಯಾವ ರೀತಿ ಉಪಯೋಗಿಸಬೇಕೆಂಬ ಮಾಹಿತಿಯೂ ಇದೆ ಎಂದು ತಿಳಿಸಿದರು

ಒಟ್ಟಾರೆ ಕೊರೋನಾ ಸಂದರ್ಭದಲ್ಲಿ ಆದಿಚುಂಚನಗಿರಿ ಮಠ ಸಾರ್ವಜನಿಕರ ಸೇವೆಗೆ ನಿಂತಿರುವುದು ನಿಜಕ್ಕೂ ಶ್ಲಾಘನೀಯ. ರಾಮನಗರ ಜಿಲ್ಲೆಯಿಂದ ಪ್ರಾರಂಭವಾಗಿರುವ ಈ ಕಾರ್ಯ ಮುಂದಿನ ದಿನಗಳಲ್ಲಿ ರಾಜ್ಯದಲ್ಲೂ ಪ್ರಾರಂಭವಾಗಲಿದೆ ಎಂದು ಸ್ವಾಮೀಜಿ ತಿಳಿಸಿದರು.
Published by:Seema R
First published: