Kiccha Sudeep: ಗೌಡಗೆರೆ ಚಾಮುಂಡೇಶ್ವರಿ ದರ್ಶನ ಪಡೆದ ಕಿಚ್ಚ ಸುದೀಪ್; ನೂರಾರು ಅಭಿಮಾನಿಗಳು ಜಮಾವಣೆ

Chamundeshwari Devi ಸುದೀಪ್ ಕಳೆದ 10 ದಿನದ ಹಿಂದೆಯೇ ಗೌಡಗೆರೆಗೆ ಆಗಮಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಇನ್ನು ಸೆಪ್ಟೆಂಬರ್‌ 2 ರಂದು ಸುದೀಪ್ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಇವತ್ತು ಶುಕ್ರವಾರದ ಪೂಜೆಯ ಜೊತೆಗೆ ಹುಟ್ಟುಹಬ್ಬದ ಅಚರಣೆಯೂ ಆಗುತ್ತೆ ಎಂದು ಗೌಡಗೆರೆಗೆ ಅಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ.

ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಗೆ ಆಗಮಿಸಿದ ನಟ ಕಿಚ್ಚ ಸುದೀಪ್.

ಗೌಡಗೆರೆ ಚಾಮುಂಡೇಶ್ವರಿ ಸನ್ನಿಧಿಗೆ ಆಗಮಿಸಿದ ನಟ ಕಿಚ್ಚ ಸುದೀಪ್.

  • Share this:
ಚನ್ನಪಟ್ಟಣ: (Channapattana) ತಾಲೂಕಿನ ಗೌಡಗೆರೆ (Gowdagere) ಗ್ರಾಮಕ್ಕೆ ನಟ ಕಿಚ್ಚ ಸುದೀಪ್ (Actor Kiccha Sudeep) ಆಗಮಿಸಿ ತಾಯಿ ಚಾಮುಂಡೇಶ್ವರಿ (Chamundeshwari Devi) ದರ್ಶನ ಪಡೆದರು.‌ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದಲ್ಲಿರುವ 68 ಅಡಿ ವಿಶ್ವದ ಅತಿ ಎತ್ತರದ ಚಾಮುಂಡೇಶ್ವರಿ ವಿಗ್ರಹ ವೀಕ್ಷಣೆಗಾಗಿ ಸುದೀಪ್ ಆಗಮಿಸಿದ್ದರು. ನಿನ್ನೆ ಹುಟ್ಟು ಹಬ್ಬ ಆಚರಿಸಿಕೊಂಡು ದೇವಿ ದರ್ಶನ ಪಡೆಯಲು‌ ಬಂದಿದ್ದ ಕಿಚ್ಚನಿಗೆ ನೂರಾರು ಅಭಿಮಾನಿಗಳು ಶುಭ ಹಾರೈಸಿದರು.

ಮೈಸೂರು ಚಾಮುಂಡೇಶ್ವರಿ ದೇವಿ ದರ್ಶನ ಪಡೆದ ಬಳಿಕ ಚನ್ನಪಟ್ಟಣಕ್ಕೆ ಆಗಮಿಸಿದ್ದ ನಟ ಸುದೀಪ್ 15 ನಿಮಿಷಗಳ ಕಾಲ ಇದ್ದರು. ತಾಯಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿದರು. ಆನಂತರ ಸುದೀಪ್ ಅವರಿಗೆ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ಅವರು ಸನ್ಮಾನ ಮಾಡಿ ಗೌರವಿಸಿದರು. ಈ ಬಗ್ಗೆ ಮಾತನಾಡಿದ ಮಲ್ಲೇಶ್ ಅವರು, ನಟ ಸುದೀಪ್ ಅವರು ಇಲ್ಲಿಗೆ ಬಂದಿರುವುದು ನಿಜಕ್ಕೂ ಸಂತೋಷದ ವಿಚಾರ. ಅವರು ಸಹ ನಮ್ಮ ದೇವಸ್ಥಾನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಮ್ಮನ್ನು ಮನೆಗೆ ಬರಲು ತಿಳಿಸಿದ್ದಾರೆಂದು ಹೇಳಿದರು. ಚನ್ನಪಟ್ಟಣದ ಗೌಡಗೆರೆ ಶ್ರೀ ಚಾಮುಂಡೇಶ್ವರಿ ತಾಯಿಯ ದರ್ಶನ ಪಡೆದ ಸುದೀಪ್ ಸಿನಿಪಯಣ ಮುಂದೆ ಸುಖವಾಗಿರಲಿ ಎಂದು ಮಲ್ಲೇಶ್ ಹಾರೈಸಿದ್ದಾರೆ.

ಗೌಡಗೆರೆ ಚಾಮುಂಡೇಶ್ವರಿಗೆ ಮರುಳಾದ ಕನ್ನಡದ ಕಿಚ್ಚ

ಹೌದು, ಚನ್ನಪಟ್ಟಣ ತಾಲೂಕಿನ ಗೌಡಗೆರೆ ಗ್ರಾಮದ ಶಕ್ತಿದೇವತೆ ಶ್ರೀ ಚಾಮುಂಡೇಶ್ವರಿ ತಾಯಿಯ ವಿಗ್ರಹ ಉದ್ಘಾಟನೆಯಾದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ತಾಯಿಯ ವಿಗ್ರಹದ ವಿಡಿಯೋ ವೈರಲ್ ಆಗಿತ್ತು. ಸಾಮಾಜಿಕ ‌ಜಾಲತಾಣದಲ್ಲಿ ಈ ವಿಡಿಯೋ ವೀಕ್ಷಿಸಿದ್ದ ಸುದೀಪ್ ತಕ್ಷಣವೇ ತಮ್ಮ ಆಪ್ತ ಚನ್ನಪಟ್ಟಣದ ಜೆಡಿಎಸ್ ಮುಖಂಡ ಕರಿಯಪ್ಪನವರ ಪುತ್ರ ಚಂದೂ ಕರಿಯಪ್ಪಗೆ ದೂರವಾಣಿ ಕರೆ ಮಾಡಿ ವಿಚಾರಿಸಿದ್ದಾರೆ. ನಂತರ ಚಂದೂ ಕರಿಯಪ್ಪ ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರೊಂದಿಗೆ ಮಾತನಾಡಿದ್ದಾರೆ. ಹೀಗೆ ಸುದೀಪ್ ಅವರು ದೇವಸ್ಥಾನಕ್ಕೆ ಬರಬೇಕೆಂದು ತಿಳಿಸಿದ್ದಾರೆ. ವಿಗ್ರಹವನ್ನು ನೋಡಲು ಬರುವುದಾಗಿ ತಿಳಿಸಿದ್ದಾರೆ. ಈ ಹಿನ್ನೆಲೆ ತಾವು ದಿನಾಂಕ ನಿಗಧಿ ಮಾಡಿದರೆ ಆ ದಿನಾಂಕದಂದು ಸುದೀಪ್ ರವರು ಬರಲಿದ್ದಾರೆಂದು ತಿಳಿಸಿದ್ದಾರೆ. ಇನ್ನು ಸುದೀಪ್ ಕಳೆದ 10 ದಿನದ ಹಿಂದೆಯೇ ಗೌಡಗೆರೆಗೆ ಆಗಮಿಸಬೇಕಿತ್ತು. ಆದರೆ ಕಾರಣಾಂತರಗಳಿಂದ ಬರಲು ಸಾಧ್ಯವಾಗಲಿಲ್ಲ. ಇನ್ನು ಸೆಪ್ಟೆಂಬರ್‌ 2 ರಂದು ಸುದೀಪ್ ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಇವತ್ತು ಶುಕ್ರವಾರದ ಪೂಜೆಯ ಜೊತೆಗೆ ಹುಟ್ಟುಹಬ್ಬದ ಅಚರಣೆಯೂ ಆಗುತ್ತೆ ಎಂದು ಗೌಡಗೆರೆಗೆ ಅಗಮಿಸಿ ತಾಯಿಯ ದರ್ಶನ ಪಡೆದಿದ್ದಾರೆ.

ಇದನ್ನು ಓದಿ: Mysuru Dasara 2021: ಅ.7ರಂದು ಮೈಸೂರು ದಸರಾ ಉದ್ಘಾಟನೆ, ಸರಳ ಆಚರಣೆಗೆ 6 ಕೋಟಿ ಹಣ ನಿಗದಿ

ಸುದೀಪ್ ಅವರು ವಿಗ್ರಹದ ಬಗ್ಗೆ ಸಾಕಷ್ಟು ಮಾಹಿತಿ ಪಡೆದುಕೊಂಡಿದ್ದು ಮುಂದಿನ ತಮ್ಮ ಚಿತ್ರದ ಶೂಟಿಂಗ್ ಸಹ ಇಲ್ಲಿ ಮಾಡುವುದಾಗಿ ತಮ್ಮ ಆಪ್ತರ ಜೊತೆಗೆ ಹೇಳಿಕೊಂಡಿದ್ದಾರೆಂಬ ಮಾಹಿತಿ ನ್ಯೂಸ್ 18 ಗೆ ಲಭ್ಯವಾಗಿದೆ. ಇನ್ನು ದೇವಸ್ಥಾನದ ಧರ್ಮದರ್ಶಿಗಳಾದ ಮಲ್ಲೇಶ್ ರನ್ನು ಒಮ್ಮೆ ತಮ್ಮ ಮನೆಗೆ ಕರೆಸಿಕೊಂಡು ಮಾತನಾಡಬೇಕೆಂದು ಸಹ ಸುದೀಪ್ ತಮ್ಮ ಬಯಕೆಯನ್ನ ಅಪ್ತರಲ್ಲಿ ತಿಳಿಸಿದ್ದಾರೆ ಎನ್ನಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಅನಗತ್ಯವಾಗಿ ಯಾರೂ ಮನೆಯಿಂದ ಹೊರಗೆ ಬಾರದೆ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕಿದೆ.

ವರದಿ : ಎ.ಟಿ.ವೆಂಕಟೇಶ್
Published by:HR Ramesh
First published: