• Home
  • »
  • News
  • »
  • state
  • »
  • Murder: ಗೆಳೆಯನ ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದವ ಹೆಣವಾದ! ಆ್ಯಕ್ಸಿಡೆಂಟ್ ನಾಟಕವಾಡಿದ್ದ ಸ್ನೇಹಿತರು ಅಂದರ್

Murder: ಗೆಳೆಯನ ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದವ ಹೆಣವಾದ! ಆ್ಯಕ್ಸಿಡೆಂಟ್ ನಾಟಕವಾಡಿದ್ದ ಸ್ನೇಹಿತರು ಅಂದರ್

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

ಅವರೆಲ್ಲ ಸ್ನೇಹಿತರು. ಅಲೆಲ್ಲೋ ಕುಳಿತು ಕುಡಿಯುತ್ತಾ ಇದ್ದರು, ಆಗ ಆತ ಸ್ನೇಹಿತನ ಹೆಂಡತಿ ಬಗ್ಗೆ ಕೆಟ್ಟದ್ದಾಗಿ ಮಾತನಾಡಿದ್ದೇ ಯಡವಟ್ಟಾಯ್ತು! ಕೊಲೆ ಮಾಡಿ ಆ್ಯಕ್ಸಿಡೆಂಟ್ ಅಂತ ನಂಬಿಸಲು ಹೋದ ಸ್ನೇಹಿತರು ಈಗ ಸಿಕ್ಕಿಬಿದ್ರು!

  • Share this:

    ರಾಮನಗರ: ಆತ ಮೂಲತಃ ರೌಡಿ ಶೀಟರ್ (Rowdy Sheeter) ಆಗಿದ್ದ. ಆತನನ್ನ ಸ್ನೇಹಿತರೆ (Friends) ಸೇರಿ ಕೊಲೆ (Murder) ಮಾಡಿ ಆ್ಯಕ್ಸಿಡೆಂಟ್ (Accident) ಎಂದು ಬಿಂಬಿಸುವ ಪ್ಲಾನ್ (Plane) ಮಾಡಿದ್ರು. ಆದ್ರೆ ಈ ಪ್ಲಾನ್ ಅನ್ನ ಪೊಲೀಸರು (Police) ಭೇದಿಸಿ, ಅದು ಕೊಲೆ ಎಂದು ಪತ್ತೆ ಮಾಡಿ 5 ಮಂದಿಯನ್ನ ಹೆಡೆಮುರಿ ಕಟ್ಟಿದ್ದಾರೆ. ಹೌದು ಸ್ನೇಹಿತರೆ ಸೇರಿ ಸ್ನೇಹಿತನೊಬ್ಬನನ್ನ ಕೊಲೆ ಮಾಡಿ ಅಪಘಾತದಲ್ಲಿ ಮೃತಪಟ್ಟ ರೀತಿಯಲ್ಲಿ ಬಿಂಬಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಕಳೆದ 24ರ ರಾತ್ರಿ ತಾವರೆಕೆರೆ (Tavarekere) ಪೊಲೀಸ್ ಠಾಣ ವ್ಯಾಪ್ತಿಯ ಕೆಂಗೇರಿ- ತಾವರೆಕೆರೆ ರಸ್ತೆಯ ಯಲಚಗುಪ್ಪೆ ಕೆರೆಯ ಬಳಿಯ ರಸ್ತೆಯಲ್ಲಿ ಅಪಘಾತ ವಾದ ಸ್ಥಿತಿಯಲ್ಲಿ ಮೃತ ದೇಹ ಪತ್ತೆಯಾಗಿತ್ತು. ಅಲ್ಲಿ ಮೃತಪಟ್ಟ ವ್ಯಕ್ತಿ  28 ವರ್ಷದ ನವೀನ್ ಆಗಿದ್ದ.


    ರೌಡಿ ಶೀಟರ್‌ ಆಗಿದ್ದ ನವೀನ್


    ಈತ ಮೂಲತಃ ರೌಡಿ ಶೀಟರ್ ಆಗಿದ್ದ. ಮಾದನಾಯನಹಳ್ಳಿ ಪೋಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ರೌಡಿಶೀಟ್ ಓಪನ್ ಆಗಿತ್ತು. ನವೀನ್ ವೃತ್ತಿಯಲ್ಲಿ ಬಾರ್ ಬೆಂಡಿಂಗ್ ಕೆಲಸ ಮಾಡಿಕೊಂಡು ತನ್ನ ಪಾಡಿಗೆ ಇದ್ದ. ಈತನ ಮೇಲೆ ಹೇಳಿಕೊಳ್ಳುವಂತಹ ದ್ವೇಷ ಯಾರ ಮೇಲು ಇರಲಿಲ್ಲಾ ಇಂತಹ ನವೀನ್ ನನ್ನ ಆತನ ಕುಚುಕು ಸ್ನೇಹಿತರೆ ಕೊಲೆ ಮಾಡಿದ್ದಾರೆ. 5 ಮಂದಿ ಸೇರಿ ನವೀನ್ ನನ್ನ ಕೊಲೆ ಮಾಡಿದ್ದಾರೆ.


    “ಹೋಗಿ ಬರುತ್ತೇನೆ” ಅಂತ ಹೇಳಿದವ ಬರಲೇ ಇಲ್ಲ


    24 ರ ರಾತ್ರಿ ಮನೆಯಲ್ಲಿದ್ದ ನವೀನ್ ಹೊರ ಹೋಗಿ ಬರುತ್ತೇನೆ ಅಂತಾ 8 ಗಂಟೆಗೆ ಮನೆಯಲ್ಲಿ ಹೆಂಡತಿಗೆ ಹೇಳಿ ಹೊರ ಬಂದಿದ್ದ. ಸ್ನೇಹಿತ ಸಂತೋಷ್ ಜತೆಗೆ ಸ್ಪೂರ್ತಿ ಲೇಔಟ್ ನಲ್ಲಿ ಮದ್ಯ ಸೇವನೆ ಮಾಡುತ್ತಿದ್ದ.


    ಇದೇ ವೇಳೆಗೆ ಅಲ್ಲಿಗೆ ನವೀನ್ ಸ್ನೇಹಿತರಾದ ಹೇಮಂತ್, ವಿನೋದ್, ಪಟೇಲಾ ಸೀನಾ, ಮಧು ಅವರುಗಳು ಅಲ್ಲೆ ಪಕ್ಕದಲ್ಲಿ ಕುಳಿತು ಅವರು ಸಹ ಮದ್ಯ ಸೇವನೆ ಮಾಡುತ್ತಿದ್ರು. ಈ ವೇಳೆ ಕ್ಷುಲ್ಲಕ ವಿಚಾರವಾಗಿ ಹೇಮಂತ್ ಅಲಿಯಾಸ್ ಟೋನಿ ನಡುವೆ ಗಲಾಟೆ ನಡೆದಿತ್ತು.


    ಇದನ್ನೂ ಓದಿ: Crime: 70ರ ಮುದುಕನಿಗೆ 20ರ ಹುಡುಗಿಯೇ ಬೇಕಂತೆ! ಚಪಲ ತೀರಿಸಿಕೊಳ್ಳಲು ಕಳ್ಳತನ ಮಾಡ್ತಿದ್ದವನಿಗೆ 2 ಮದುವೆ!


    ಸ್ನೇಹಿತನ ಹೆಂಡತಿ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ನವೀನ್


    ಅಂದಹಾಗೇ ಕೊಲೆಯಾದ ನವೀನ್ ಹೇಮಂತ್ ಹೆಂಡತಿಯ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ ಇದೇ ವಿಚಾರವಾಗಿ ಗಲಾಟೆ ನಡೆಯುತಿತ್ತು ಈ ವೇಳೆ ಪುಟ್ಟಿ ಎಂಬುವನಿಗೆ ಸಂತೋಷ್ ಗಲಾಟೆ ವಿಚಾರ ತಿಳಿಸಿದ್ದ, ಸ್ಥಳಕ್ಕೆ ಬಂದ ಪುಟ್ಟಿ ಇಬ್ಬರಿಗೆ ಬುದ್ದಿವಾದ ಹೇಳಿ ಮನೆಗೆ ಕಳುಹಿಸಿದ್ದ. ಇತ್ತ ನವೀನ್ ಸಂತೋಷ್ ಜತಗೆ ಅಲ್ಲಿಂದ ಬಂದು ಸಂತೋಷ್ ನನ್ನ ಮನೆಗೆ ಬಿಟ್ಟು ಮತ್ತೆ ಗಲಾಟೆ ನಡೆದ ಜಾಗಕ್ಕೆ ಬಂದಿದ್ದ.


    ಕಂಠಪೂರ್ತಿ ಕುಡಿದು ಕುಚುಕು ಗೆಳೆಯನ ಕೊಲೆ


    ಅಷ್ಟರಲ್ಲಾಗಲೇ ಹೇಮಂತ್ ತನ್ನ ಸಹಚರರೊಂದಿಗೆ ನವೀನ್ ನನ್ನ ಕೊಲೆ ಮಾಡುವ ಪ್ಲಾನ್ ಮಾಡಿ ಗಲಾಟೆ ನಡೆದ ಜಾಗದಲ್ಲೆ ಮದ್ಯ ಸೇವನೆ ಮಾಡುತ್ತಿದ್ದ. ಮತ್ತೆ ಅದೇ ಜಾಗಕ್ಕೆ ನವೀನ್ ನನ್ನ ಕರೆಸಿಕೊಂಡಿದ್ರು ರಾಜಿ ಮಾಡುವ ನೆಪದಲ್ಲಿ ಕಂಠ ಪೂರ್ತಿ ನವೀನ್ ಗೆ ಕುಡಿಸಿದ್ರು, ಅದಾದ ನಂತರ ನವೀನ್ ನನ್ನ ಕಾರಿನಲ್ಲಿ ಕೂರಿಸಿಕೊಂಡು ಸೀಗೆಹಳ್ಳಿಯ ಸ್ಫೂರ್ತಿ ಲೇಔಟ್ ಗೆ ಕರೆದುಕೊಂಡು ಹೋಗಿ ಅಲ್ಲಿ ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.


    ಕೊಲೆಯನ್ನು ಆ್ಯಕ್ಸಿಡೆಂಟ್ ಅಂತ ಬಿಂಬಿಸಲು ಯತ್ನ


    ನವೀನ್ ಶವದ ಜತೆಗೆ ಆತನ ಬೈಕ್ ನನ್ನ ಎತ್ತಿಕೊಂಡು ಕೆಂಗೇರಿ- ತಾವರೆಕೆರೆ ರಸ್ತೆಯ ಯಲಚಗುಪ್ಪೆ ಕೆರೆ ಬಳಿಯಲ್ಲಿ ಬೈಕ್ ಗೆ ಕಾರಿನಲ್ಲಿ ಗುದ್ದಿ ನಂತರ ನವೀನ್ ಮೃತದೇಹದ ಮೇಲೆ ಕಾರನ್ನ 3-4 ಬಾರಿ ಹತ್ತಿಸಿ ಅಪಘಾತದಿಂದ ನವೀನ್ ಮೃತಪಟ್ಟಿರುವ ಹಾಗೆ ಬಿಂಬಿಸಿದ್ದಾರೆ. ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದವರು ಮೃತ ದೇಹ ನೋಡಿ ತಾವರೆಕೆರೆ ಪೊಲೀಸರಿಗೆ ವಿಷಯ ಮುಟ್ಟಿಸಿದ್ರು.


    ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಬಂದು ಮೃತ ದೇಹವನ್ನ ಪರಿಶೀಲನೆ ಮಾಡಿದ್ರು ಈ ವೇಳೆ ಪೊಲೀಸರಿಗೆ ನವೀನ್ ದೇಹದಲ್ಲಿ ಆಗಿದ್ದ ಗಾಯದ ಗುರುತು ಕಂಡು ಅನುಮಾನ ಬಂದಿತ್ತು. ತಕ್ಷಣ ಮೃತದೇಹವನ್ನ ರಾಜರಾಜೇಶ್ವರಿ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ಅಂತಾ ರವಾನೆ ಮಾಡಿದ್ರು.


    ತನಿಖೆ ವೇಳೆ ಬಯಲಾಯ್ತು ಹಂತಕರ ನಾಟಕ


    ಇತ್ತ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಪೊಲೀಸರಿಗೆ ಇದು ಅಪಘಾತ ಅಲ್ಲಾ ಕೊಲೆ ಎಂಬುದು ತಿಳಿದುಬಂದಿತ್ತು. ತಕ್ಷಣ ಪೊಲೀಸರು ತನಿಖೆ ಚುರುಕು ಗೊಳಿಸಿ 5 ಮಂದಿಯನ್ನ ಬಂಧಿಸಿದ್ದಾರೆ.


    ಇದನ್ನೂ ಓದಿ: Murder: ಗಂಡ-ಹೆಂಡತಿ ಜಗಳಕ್ಕೆ ಬಲಿಯಾದ ಗ್ರಾಮದ ಮುಖಂಡ, ಸಂಧಾನ ಮಾಡಲು ಹೋಗಿದ್ದೆ ತಪ್ಪಾಯ್ತಾ?


    ಒಟ್ಟಾರೆ ಸ್ನೇಹಿತರೆ ಸೇರಿ ರೌಡಿ ಶೀಟರ್ ನವೀನನ್ನ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಹೋಗಿ ಇದೀಗ ಪೊಲೀಸರ ಅತಿಥಿಯಾಗಿದ್ದಾರೆ. ಆದರೆ ಕುಡಿದ ಮತ್ತಲ್ಲಿ ಏನು ಬೇಕಾದರೂ ಆಗುತ್ತೆ ಎನ್ನೋದಕ್ಕೆ ಈ ಪ್ರಕರಣವೇ ಸಾಕ್ಷಿ.


    ವರದಿ: ಎ.ಟಿ.ವೆಂಕಟೇಶ್

    Published by:Annappa Achari
    First published: