HOME » NEWS » State » RAMANAGARA 24 COWS DIE FROM DIESES IN RAMANAGARA DISTRICT RHHSN ATVR

ಕಾಲುಬಾಯಿ ಜ್ವರದಿಂದ ಹಸುಗಳ ಸಾವು; ಲಸಿಕೆ ಹಾಕಲು ವಿಳಂಬದ ಬಗ್ಗೆ ಜಿಲ್ಲಾಧಿಕಾರಿ ತಪ್ಪೊಪ್ಪಿಗೆ

ಜಿಲ್ಲೆಯಲ್ಲಿ ಒಟ್ಟು 3.09.000 ಸಾವಿರ ರಾಸುಗಳಿವೆ. ಪ್ರತಿ ಅಕ್ಟೋಬರ್ - ನವೆಂಬರ್‌ ನಲ್ಲಿ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗ್ತಿತ್ತು. ಆದರೆ ಈ ಬಾರಿ ಲಸಿಕೆ ನೀಡುವಲ್ಲಿ ವಿಳಂಬ ಆಗಿದೆ. ಜಿಲ್ಲೆಯಲ್ಲಿ 46 ಹಳ್ಳಿಗಳಲ್ಲಿ ಈ ಸೋಂಕು ಹೆಚ್ಚಾಗಿದೆ. ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸುತ್ತದೆ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಹೇಳಿದ್ದಾರೆ.

news18-kannada
Updated:June 24, 2021, 11:24 PM IST
ಕಾಲುಬಾಯಿ ಜ್ವರದಿಂದ ಹಸುಗಳ ಸಾವು; ಲಸಿಕೆ ಹಾಕಲು ವಿಳಂಬದ ಬಗ್ಗೆ ಜಿಲ್ಲಾಧಿಕಾರಿ ತಪ್ಪೊಪ್ಪಿಗೆ
ಮೃತ ಹಸುವಿನೊಂದಿಗೆ ರೈತ ಬಸವರಾಜ್
  • Share this:
ರಾಮನಗರ: ರಾಮನಗರದಲ್ಲಿ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿರುವ ರೈತರ ಬದುಕು ಈಗ ಚಿಂತಾಜನಕವಾಗಿದೆ. ಇತ್ತೇಚೆಗೆ ಕಾಲುಬಾಯಿ ರೋಗ ಕಾಣಿಸಿಕೊಂಡ ಪರಿಣಾಮ ಕಳೆದ ಎರಡು ತಿಂಗಳಲ್ಲಿ 24 ಹಸುಗಳು ಸಾವನ್ನಪ್ಪಿವೆ. ಹಸುಗಳನ್ನೇ ನಂಬಿಕೊಂಡಿದ್ದ ರೈತರಿಗೆ ಹಸುಗಳ ಸಾವು ಬರಸಿಡಿಲು ಬಡಿದಂತಾಗಿದೆ. ಇದಕ್ಕೆ ಜಿಲ್ಲಾಡಳಿತದ ಅವೈಜ್ಞಾನಿಕ ಕ್ರಮವೇ ಕಾರಣವಾಗಿದೆ. 

ಹೌದು, ರಾಮನಗರ ಜಿಲ್ಲೆ ಬಿಡದಿಯ ಬಾನಂದೂರು ಗ್ರಾಮದಲ್ಲಿ ಬಸವರಾಜ್​ ಎಂಬ ರೈತ ಹೈನುಗಾರಿಕೆಯನ್ನೇ ನಂಬಿಕೊಂಡು ಜೀವನ ನಡೆಸುತ್ತಿದ್ದಾರೆ. ಸುಮಾರು 30 ಹಸುಗಳನ್ನ ಇಟ್ಟುಕೊಂಡು ಅವುಗಳನ್ನ ಮಗುವಿನಂತೆ ಪೋಷಣೆ ಮಾಡುತ್ತಿದ್ದಾರೆ. ಆದರೆ ಕಾಲು ಬಾಯಿ ಜ್ವರ ಕಾಣಿಸಿಕೊಂಡ ಪರಿಣಾಮ ಎರಡೇ ದಿನಗಳಲ್ಲಿ ಮಗುವಿನಂತೆ ಸಾಕಿದ್ದ 5 ಹಸುಗಳು ಸಾವನಪ್ಪಿವೆ. ಜ್ವರ ಕಾಣಿಸಿಕೊಂಡ ತಕ್ಷಣ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಕೊಡಲಾಗಿತ್ತು. ಆದರೆ ಯಾವುದೇ ಪ್ರಯೋಜವಾಗಿಲ್ಲ. ನಿನ್ನೆ ಹಿಂದಿಂದೆಯೇ ಸುಮಾರು 4 ಹಸುಗಳು ಸಾವನಪ್ಪಿದ್ದವು. ಅಧಿಕಾರಿಗಳಿಗೆ ಮಾಹಿತಿ ಕೊಟ್ಟಿದ್ದರೂ ಸ್ಥಳಕ್ಕೆ ಭೇಟಿ ಕೊಟ್ಟು ಪರಿಶೀಲನೆ ಮಾಡಲಾಗಿಲ್ಲ ಎಂಬ ಆರೋಪವೂ ಇದೆ. ಇನ್ನು ಇವತ್ತು ಸಹ ಒಂದು ಹಸು ಮೃತಪಟ್ಟಿದೆ. ಇದರಿಂದ ಕಂಗಲಾಗಿರುವ ರೈತ ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಪ್ರತಿನಿತ್ಯವೂ ಸರಿಸುಮಾರು 90 ಲೀಟರ್​ ಹಾಲು ಕರೆದು ಹಾಲಿನ ಕೇಂದ್ರಕ್ಕೆ ರೈತ ಬಸವರಾಜ್​ ಕೊಡುತ್ತಿದ್ದಾರೆ. ವರ್ಷಗಳಿಂದ ಸಾಕಿದ್ದ ಹಸು ಇನ್ನೇನು ಫಲ ಕೊಟ್ಟು ಹಾಲು ಕೊಡಬೇಕು ಎನ್ನುವ ಸಮಯದಲ್ಲಿ ಒಂದೆರೆಡು ಹಸುಗಳಲ್ಲಿ ರೋಗ ಕಾಣಿಸಿಕೊಂಡು ಸಾವನಪ್ಪಿದೆ. ಸುಮಾರು 5 ಹಸುಗಳು ಸಾವನಪ್ಪಿರುವುದರಿಂದ ಸುಮಾರು 2.5ಲಕ್ಷ ರೂ ನಷ್ಟವಾಗಿದೆ. ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಲೇ ಹಸುಗಳು ಸಾವನ್ನಪ್ಪಿವೆ ಎನ್ನಲಾಗಿದೆ. ಸಮಯಕ್ಕೆ ತಕ್ಕಂತೆ ಲಸಿಕೆ ಹಾಕಿದ್ದರೆ ಹಸುಗಳು ಬದುಕುಳಿಯುತ್ತಿತ್ತು. ಆದ್ರೆ, ಸಮಯಕ್ಕೆ ಲಸಿಕೆ ಕೊಡದೇ ಇರುವುದೇ ಹಸುಗಳ ಸಾವಿಗೆ ಕಾರಣ ಎನ್ನಲಾಗಿದೆ. ಇನ್ನು ಈ ಬಗ್ಗೆ ಸ್ವತಃ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಒಪ್ಪಿಕೊಂಡಿದ್ದಾರೆ. ಕಳೆದ ಎರಡು ತಿಂಗಳಲ್ಲಿ ಜಿಲ್ಲೆಯಲ್ಲಿ 24 ರಾಸುಗಳು ಸಾವಾಗಿವೆ. ಕಾಲುಬಾಯಿ ಜ್ವರದಿಂದ ಸಾವನ್ನಪ್ಪಿರುವ ರಾಸುಗಳಿಗೆ ಲಸಿಕೆ ನೀಡುವಲ್ಲಿ ವಿಳಂಬ ಆಗಿದೆ. ಕೊರೋನಾ ಇರುವ ಹಿನ್ನೆಲೆ ಈ ಸಮಸ್ಯೆಯಾಗಿದೆ. ಜಿಲ್ಲೆಯಲ್ಲಿ ಒಟ್ಟು 3.09.000 ಸಾವಿರ ರಾಸುಗಳಿವೆ. ಪ್ರತಿ ಅಕ್ಟೋಬರ್ - ನವೆಂಬರ್‌ ನಲ್ಲಿ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗ್ತಿತ್ತು. ಆದರೆ ಈ ಬಾರಿ ಲಸಿಕೆ ನೀಡುವಲ್ಲಿ ವಿಳಂಬ ಆಗಿದೆ.ಜಿಲ್ಲೆಯಲ್ಲಿ 46 ಹಳ್ಳಿಗಳಲ್ಲಿ ಈ ಸೋಂಕು ಹೆಚ್ಚಾಗಿದೆ. ಈ ಕೂಡಲೇ ಜಿಲ್ಲಾಡಳಿತ ಅಗತ್ಯ ಕ್ರಮವಹಿಸುತ್ತಿದೆ ಎಂದು ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಹೇಳಿಕೆ ನೀಡಿದ್ದಾರೆ.

ಇದನ್ನು ಓದಿ: 10 ತಿಂಗಳಲ್ಲಿ 43 ಬಾರಿ ಕೊರೋನಾ ಸೋಂಕಿಗೆ ತುತ್ತಾಗಿ ಗುಣಮುಖನಾದ 72 ವರ್ಷದ ವೃದ್ಧ!

ರಾಮನಗರದಲ್ಲಿ ಹಸುಗಳ ಸಾವು ಪ್ರಕರಣ

ಕಳೆದ ಎರಡು ತಿಂಗಳಲ್ಲಿ ರಾಮನಗೆ ಜಿಲ್ಲೆಯಲ್ಲಿ 24 ರಾಸುಗಳು ಸಾವನ್ನಪ್ಪಿವೆ. ಕಾಲುಬಾಯಿ ಜ್ವರಕ್ಕೆ ಲಸಿಕೆ ನೀಡುವಲ್ಲಿ ಜಿಲ್ಲಾಡಳಿತ ವಿಫಲವಾದ ಕಾರಣ ಹಸುಗಳು ಅಸುನೀಗಿವೆ. ಜಿಲ್ಲೆಯಲ್ಲಿ ಒಟ್ಟು 3.09.000 ಸಾವಿರ ರಾಸುಗಳಿವೆ. ಪ್ರತಿ ಅಕ್ಟೋಬರ್ - ನವೆಂಬರ್‌ ನಲ್ಲಿ ಕಾಲುಬಾಯಿ ಜ್ವರದ ಲಸಿಕೆ ನೀಡಲಾಗ್ತಿತ್ತು. ಆದರೆ ಈ ಬಾರಿ ಲಸಿಕೆ ನೀಡುವಲ್ಲಿ ವಿಳಂಬ ಆಗಿದೆ. ಜಿಲ್ಲೆಯಲ್ಲಿ 46 ಹಳ್ಳಿಗಳಲ್ಲಿ ಈ ಸೋಂಕು ಹೆಚ್ಚಾಗಿದೆ
ಈ ಬಗ್ಗೆ ಜಿಲ್ಲಾಡಳಿತ ಅಗತ್ಯ ಕ್ರಮ ವಹಿಸುತ್ತದೆ ಎಂದು ರಾಮನಗರ ಜಿಲ್ಲಾಧಿಕಾರಿ ರಾಕೇಶ್ ಕುಮಾರ್ ಹೇಳಿದ್ದಾರೆ.
Youtube Video

ರಾಮನಗರ ಜಿಲ್ಲೆಯಲ್ಲಿ ಹೈನುಗಾರಿಕೆಯನ್ನೇ ನಂಬಿ ಅದೆಷ್ಟೋ ರೈತರು ಬದುಕು ಸಾಗಿಸುತ್ತಿದ್ದಾರೆ. ಜಿಲ್ಲೆಯಲ್ಲಿ ಕಾಲುಬಾಯಿ ರೋಗ ಸಹ ಉಲ್ಬಣವಾಗುತ್ತಿದೆ. ಆದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ರೈತರು ಪರಿತಪಿಸುತ್ತಿದ್ದಾರೆ. ಈ  ಕೂಡಲೇ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರ ಸಮಸ್ಯೆ ಬಗೆಹರಿಸಬೇಕಿದೆ.

ವರದಿ : ಎ.ಟಿ‌.ವೆಂಕಟೇಶ್
Published by: HR Ramesh
First published: June 24, 2021, 11:24 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories