ಕಾಡಾನೆಯ ದಾಳಿಗೆ ರೈತಮಹಿಳೆಯ ಬಾಳು ಬೀದಿಗೆ; ಸಹಾಯದ ನಿರೀಕ್ಷೆಯಲ್ಲಿ ಕುಟುಂಬ

ಕಾಡಾನೆಯ ದಾಳಿಯಿಂದ ಬದುಕಲು ಆಗದೇ, ಸಾಯಲು ಆಗದೇ ನರಕಯಾತನೆ ಅನುಭವಿಸುತ್ತಿರುವ ಈ ಮಹಿಳೆಯ ಕಷ್ಟಕ್ಕೆ ಸಹಾಯದ ಅವಶ್ಯಕತೆ ಇದೆ.

ಆನೆ ದಾಳಿಗೆ ಒಳಗಾದ ಮಹಿಳೆ

ಆನೆ ದಾಳಿಗೆ ಒಳಗಾದ ಮಹಿಳೆ

  • Share this:
ರಾಮನಗರ(ಅ.25):  ಕಷ್ಟಪಟ್ಟು ಕೂಲಿಕೆಲಸ ಮಾಡಿಕೊಂಡು ತನ್ನ ಮೂರು ಜನ ಹೆಣ್ಣುಮಕ್ಕಳನ್ನ ಸಾಕುತ್ತಿದ್ದಳು ಈ ತಾಯಿ. ಆದರೆ ಈಕೆಯೆ ಬಾಳಲ್ಲಿ ಕಾಡಾನೆಯೊಂದು ಯಮನಾಗಿ ಆಗಮಿಸಿ ಬದುಕಲು ಆಗದೇ, ಸಾಯಲು ಆಗದೇ ನರಳುತ್ತಿದ್ದಾಳೆ ಈ ರೈತ ಮಹಿಳೆ. ಆನೆಯಿಂದಾದ ದಾಳಿಗೆ ಚಿಕಿತ್ಸೆ ಪಡೆಯಲು ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡು ದಿನನಿತ್ಯ ಸಂಕಟಪಡುತ್ತಿದ್ದಾಳೆ, ಈ ಮಹಿಳೆ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕನ್ನಿದೊಡ್ಡಿ ಗ್ರಾಮದ ಸುನಂದಮ್ಮ ಎಂಬ ಮಹಿಳೆಯ ಬಾಳು ಈಗ ಸಂಪೂರ್ಣ ಕತ್ತಲಾಗಿದೆ. ದನಮೇಯಿಸಲು ಹೊಲದ ಕಡೆಗೆ ಹೋಗಿದ್ದ ಈಕೆಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ಸುನಂದಮ್ಮನ ಎಡಗಾಲು ಸಂಪೂರ್ಣ ಶಕ್ತಿ ಕಳೆದುಕೊಂಡಿದೆ. ಚಿಕಿತ್ಸೆಗೆ ಹಣವಿಲ್ಲದ ಮಹಿಳೆ ಸರ್ಕಾರದ ಪರಿಹಾರ ಎದುರು ನೋಡುತ್ತಿದ್ದಾರೆ. 

ಕಳೆದ ಜೂನ್ ತಿಂಗಳ 15 ರಂದು ಬೆಳೆಗಿನ ಜಾವ ಕಾಡಾನೆ ದಾಳಿಗೆ ಸಿಲುಕಿದ ಈ ಮಹಿಳೆಯ ಎಡಗಾಲಿನ ತೊಡೆಯ ಮೂಳೆ ಒಂದು ಬಿಟ್ಟು ಮಾಂಸವೆಲ್ಲಾ ಚಿಲ್ಲಾಪಿಲ್ಲಿಯಾಗಿದೆ. ತೀವ್ರ ರಕ್ತಸ್ರಾವದಿಂದ ಬಳಲಿದ್ದ ಸುನಂದಮ್ಮರನ್ನು ಸ್ಥಳೀಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು.  ಈ ವಿಚಾರವನ್ನ ಅರಣ್ಯಾಧಿಕಾರಿಗಳಿಗೆ ತಿಳಿಸಿ ಸರ್ಕಾರದಿಂದ ಪರಿಹಾರ ಕೊಡಿಸಿ ಎಂದು ಮನವಿಯನ್ನು ಮಾಡಲಾಗಿದೆ. ಆದರೆ ಪರಿಹಾರ ಸಿಕ್ಕಿಲ್ಲ.

Ramanagar women who survived by elephant attack looking for government compensatio
ಆನೆ ದಾಳಿಗೆ ಒಳಗಾದ ಮಹಿಳೆ ಕಾಲು


ಗಾಯ ತೀವ್ರತೆ  ಹಿನ್ನಲೆ ಸುನಂದಮ್ಮ ಅವರನ್ನು ಹೆಚ್ಚಿನ ಚಿಕಿತ್ಸೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ದಾಖಲು ಮಾಡಿ,  ಸರ್ಜರಿ ನಡೆಸಲಾಗಿದೆ. ಪ್ರಾಣ ಉಳಿಸಿಕೊಂಡ ಸುನಂದಮ್ಮ, ನಡೆಯಲು ಬಾರದ ಸ್ಥಿತಿಗೆ ತಲುಪಿದ್ದಾರೆ. ಅಲ್ಲದೇ  ಒಟ್ಟಾರೆ ಚಿಕಿತ್ಸೆಗೆ 13 ಲಕ್ಷ ವ್ಯಯವಾಗಿದೆ. ಸಾಲ ಸೋಲ ಮಾಡಿ ಚಿಕಿತ್ಸೆ ಕೊಡಿಸಿದ ಕುಟುಂಬ ಈಗ ಪರಿಹಾರಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಆದರೆ ಇಷ್ಟೊಂದು ಹಣವನ್ನು ಭರಿಸಲು ಸಾಧ್ಯವಿಲ್ಲ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬಳಿಕ  ಅರಣ್ಯ ಸಚಿವ ಆನಂದ್ ಸಿಂಗ್ ಬಳಿ ಈ ಬಗ್ಗೆ ಮನವಿ ಮಾಡಲಾಗಿದೆ. ಇದಕ್ಕೆ ಸ್ಪಂದಿಸಿದ ಸಚಿವರು ಈ ಕುರಿತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗೆ ಪತ್ರ ಬರೆದಿದ್ದು ಕೂಡಲೇ ನೊಂದ ಮಹಿಳೆಗೆ ನೆರವಾಗಬೇಕೆಂದು ಸೂಚಿಸಿದ್ದಾರೆ.

ಇದನ್ನು ಓದಿ: ಶಿವಮೊಗ್ಗದಲ್ಲಿ ಕಾಡಾನೆಗಳ ದಾಳಿಗೆ ಬಲಿಷ್ಠ ಸಾಕಾನೆ ರಂಗ ಬಲಿ; ಸಾವಿಗೆ ಕಾರಣವಾಯ್ತಾ ಸರಪಳಿ?

ಆದರೆ, ಇದುವರೆಗೂ ಯಾವುದೇ ನೆರವು ಮಾತ್ರ ಸಿಕ್ಕಿಲ್ಲ. ಸಾಲಕ್ಕೆ ಬಡ್ಡಿ ಕಟ್ಟುತ್ತಿರುವ ಕುಟುಂಬಕ್ಕೆ ಈಗ ಜೀವನವೇ ಕಷ್ಟವಾಗಿ ಹೋಗಿದೆ. ಹೇಗೋ ಕೂಲಿ ಮಾಡಿಕೊಂಡು ಮೂವರು ಹೆಣ್ಣು ಮಕ್ಕಳನ್ನು ಸಾಕುತ್ತಿದ್ದ ಸುನಂದಮ್ಮ ಬಾಳಲ್ಲಿ ಆನೆ ಸಂಕಷ್ಟ ತಂದೊಡ್ಡಿದೆ. ಕಾಡಾನೆಯ ದಾಳಿಯಿಂದ ಬದುಕಲು ಆಗದೇ, ಸಾಯಲು ಆಗದೇ ನರಕಯಾತನೆ ಅನುಭವಿಸುತ್ತಿರುವ ಈ ಮಹಿಳೆಯ ಕಷ್ಟಕ್ಕೆ ಸಹಾಯದ ಅವಶ್ಯಕತೆ ಇದೆ. ಈ ಬಗ್ಗೆ ಸರ್ಕಾರ  ಸ್ಪಂದಿಸಿ,  ಜೊತೆಗೆ ಸೂಕ್ತ ಪರಿಹಾರ  ನೀಡಬೇಕು ಎಂದು ಕುಟುಂಬ ಮನವಿ ಮಾಡಿದೆ.
Published by:Seema R
First published: