ನಾಪತ್ತೆಯಾಗಿದ್ದ ಮಾಗಡಿ ಯುವತಿ ಶವವಾಗಿ ಪತ್ತೆ; ತನಿಖೆಗೆ ಮಾಜಿ ಶಾಸಕ ಎಚ್​ಸಿ ಬಾಲಕೃಷ್ಣ ಆಗ್ರಹ

ಈ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಪೊಲೀಸರು ಕ್ರಮಕ್ಕೆ ಮುಂದಾಬೇಕು ಎಂದು ಆಗ್ರಹಿಸಿ  ಮಾಜಿ ಶಾಸಕ ಎಚ್​ ಸಿ ಬಾಲಕೃಷ್ಣ ಟ್ವೀಟರ್​ ಮೂಲಕ ಆಗ್ರಹಿಸಿದ್ದಾರೆ.

news18-kannada
Updated:October 10, 2020, 8:52 PM IST
ನಾಪತ್ತೆಯಾಗಿದ್ದ ಮಾಗಡಿ ಯುವತಿ ಶವವಾಗಿ ಪತ್ತೆ; ತನಿಖೆಗೆ ಮಾಜಿ ಶಾಸಕ ಎಚ್​ಸಿ ಬಾಲಕೃಷ್ಣ ಆಗ್ರಹ
ಯುವತಿ ಹೂತ್ತಿಟ್ಟ ಸ್ಥಳ
ರಾಮನಗರ (ಅ.10): ಕಳೆದ ಎರಡು ದಿನದ ಹಿಂದೆ ನಾಪತ್ತೆಯಾಗಿದ್ದ ಮಾಗಡಿಯ ಯುವತಿ ಇಂದು ತನ್ನ ದೊಡ್ಡಪ್ಪನ ಜಮೀನಿನಲ್ಲಿ ಶವವಾಗಿಪತ್ತೆಯಾಗಿದ್ದಾಳೆ. ತಾಲೂಕಿನ ಬೆಟ್ಟಹಳ್ಳಿ ಗ್ರಾಮ ಗ್ರಾಮದ ಹೇಮಲತಾ  ಮೃತ ಯುವತಿ. ಯುವತಿಯ ಸಾವಿಗೆ ಆಕೆಯ ಪ್ರಿಯಕರ ಪುನೀತ್​ ಕಾರಣ ಎಂಬ ಅನುಮಾನ ವ್ಯಕ್ತವಾಗಿದೆ. ಈ ಶಂಕೆ ಹಿನ್ನಲೆ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಆರಂಭಿಸಿದ್ದಾರೆ. ಕಳೆದ ಎರಡು ದಿನದ ಹಿಂದೆ 8ನೇ ತಾರೀಖಿನಿಂದ ಮನೆಯಿಂದ ಹೊರ ಹೋಗಿದ್ದ ಹೇಮಲತಾ ತಿರುಗಿ ಬಂದಿರಲಿಲ್ಲ. ಈ ವೇಳೆ ಯುವತಿ ಮನೆಗೆ ಕರೆ ಮಾಡಿದ ಪಕ್ಕದ ಮನೆಯಲ್ಲಿದ್ದ ಪುನೀತ್​  ವಿಚಾರಿಸಿದಾಗ ನಮಗೇನು ಗೊತ್ತಿಲ್ಲ, ರಾತ್ರಿ ಅಲ್ಲಿ ಕಾಪಾಡಿ ಕಾಪಾಡಿ ಎಂದು ಶಬ್ದಬರುತ್ತಿತ್ತು ಎಂದಿದ್ದಾನೆ.

ಮಗಳು ನಾಪತ್ತೆಯಾದ ಕುರಿತು ಹೇಮಲತಾ ಪೋಷಕರು ಕುದೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇದಾಗುತ್ತಿದ್ದಂತೆ ವರಸೆ ಬದಲಾಯಿಸಿದ ಪುನೀತ್​ ತಾಯಿ, ನಿಮ್ಮ ಮಗಳು ಮದುವೆಯಾಗಿ ಚೆನ್ನಾಗಿದ್ದಾಳೆ, ಆಕೆಯನ್ನ ಹುಡುಕಬೇಡಿ, ಸ್ವಲ್ಪ ದಿನಗಳ ನಂತರ ವಾಪಸ್ ಬರುತ್ತಾಳೆ. ನನ್ನ ಮೇಲೆ ದೇವರು ಬರುತ್ತದೆ.  ದೈವಿ ಶಕ್ತಿಯಿಂದ ಇದನ್ನೆಲ್ಲಾ ಹೇಳುತ್ತಿದ್ದೇನ ಎಂದಿದ್ದಾನೆ.

ಇದನ್ನು ಓದಿ: ಮಕ್ಕಳಿಗೆ ಪಾಠ ಮಾಡಿದ ಕೊರೋನಾ ಸೋಂಕಿತ ಶಿಕ್ಷಕ; ಜಿಲ್ಲೆಯಲ್ಲಿ ಆತಂಕ

ಇಂದು ಮುಂಜಾನೆ ಪೋಷಕರು ಹುಡುಕಾಟ ಮುಂದುವರೆಸಿದಾಗ ಮನೆಯ ಹಿಂದಿನ ಜಮೀನಿನಲ್ಲಿ  ಏನನ್ನೊ ಎಳೆದಾಡಿರುವ ಕುರುಹುಗಳು ಪತ್ತೆಯಾಗಿದೆ. ಮುಂದುವರೆದು ಹುಡುಕಾಟ ನಡೆಸಿದಾಗ ಯುವತಿಯ ದೊಡ್ಡಪ್ಪ ರವೀಂದ್ರ ಕುಮಾರ್ ಜಮೀನಿನಲ್ಲಿ ಅನುಮಾನಾಸ್ಪದ ಗುಂಡಿಯೊಂದು ಪತ್ತೆಯಾಗಿ, ತಕ್ಷಣಯುವತಿಯ ಪೊಷಕರು ಕುದೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಯುವತಿಯ ಪೋಷಕರ ಮಾಹಿತಿ ಆಧಾರಿಸಿ ಸ್ಥಳಕ್ಕೆ ಪೊಲೀಸರು, ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಮೃತದೇಹ ಹೊರತೆಗೆದಿದ್ದಾರೆ.  ಮರಣೋತ್ತರ ಪರೀಕ್ಷೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಮೃತ ದೇಹ ರವಾನಿಸಿದ್ದಾರೆ.

ತನಿಖೆಗೆ ಆಗ್ರಹಿಸಿದ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ

ಯುವತಿಯನ್ನು ಯಾರೋ ದುಷ್ಕರ್ಮಿಗಳು ತಲೆಗೆ ಹಲ್ಲೆ ಮಾಡಿ ಕೊಲೆ ಮಾಡಿರುವಂತಿದೆ. ಈ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ಪೊಲೀಸರು ಕ್ರಮಕ್ಕೆ ಮುಂದಾಬೇಕು ಎಂದು ಆಗ್ರಹಿಸಿ  ಮಾಜಿ ಶಾಸಕ ಎಚ್​ ಸಿ ಬಾಲಕೃಷ್ಣ ಟ್ವೀಟರ್​ ಮೂಲಕ ಆಗ್ರಹಿಸಿದ್ದಾರೆ.
Published by: Seema R
First published: October 10, 2020, 8:52 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading