ಅದ್ದೂರಿಯಾಗಿ ನಡೆದ ಸಿಡಿರಣ್ಣನ ಉತ್ಸವ; ನವ ವಧು-ವರರಿಂದ ಬಾಳೆಹಣ್ಣಿನ ದವನ ಅರ್ಪಣೆ

news18
Updated:March 13, 2018, 6:16 PM IST
ಅದ್ದೂರಿಯಾಗಿ ನಡೆದ ಸಿಡಿರಣ್ಣನ ಉತ್ಸವ; ನವ ವಧು-ವರರಿಂದ ಬಾಳೆಹಣ್ಣಿನ ದವನ ಅರ್ಪಣೆ
news18
Updated: March 13, 2018, 6:16 PM IST
-ಎ.ಟಿ.ವೆಂಕಟೇಶ್, ನ್ಯೂಸ್ 18 ಕನ್ನಡ

ರಾಮನಗರ, (ಮಾ.13): ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲ್ಲೂಕಿನ ಹುಣಸನಹಳ್ಳಿ ಗ್ರಾಮದಲ್ಲಿರುವ ಪ್ರಸಿದ್ಧ ಶಕ್ತಿದೇವತೆ ಕಬ್ಬಾಳಮ್ಮನ ಸಹೋದರಿ ಶ್ರೀ ಬಿಸಿಲೇಶ್ವರಿ ಅಮ್ಮನ ಸುಪುತ್ರ ಸಿಡಿರಣ್ಣನ ಉತ್ಸವ ಅದ್ದೂರಿಯಾಗಿ ನಡೆಯಿತು.

ಕಬ್ಬಾಳಮ್ಮ ಹಾಗೂ ಬಿಸಿಲಮ್ಮ ಅಕ್ಕತಂಗಿಯರು. ಕಬ್ಬಾಳಮ್ಮನಿಗೆ ಮಕ್ಕಳಿರುವುದಿಲ್ಲ, ಆದರೆ ತನ್ನ ತಂಗಿ ಬಿಸಿಲಮ್ಮನಿಗೆ ಒಟ್ಟು 8 ಮಕ್ಕಳು. ಅದರಲ್ಲಿ 7 ಜನ ಹೆಣ್ಣು ಮಕ್ಕಳು, ಒಬ್ಬನೆ ಗಂಡು ಮಗ ಅವನೇ ಸಿಡಿರಣ್ಣ. ತಾಯಿ ಕಬ್ಬಾಳಿಗೆ ಮಕ್ಕಳಿಲ್ಲದ ಕಾರಣ ಪ್ರತಿದಿನ ಬಿಸಿಲಮ್ಮನ ಮಕ್ಕಳನ್ನ ನೋಡಲು ಬರುತ್ತಿರುತ್ತಾಳೆ. ಇದರಿಂದ ಬೇಸರಗೊಂಡ ಬಿಸಿಲಮ್ಮ ಒಂದು ದಿನ ಕಬ್ಬಾಳಮ್ಮ ಮನೆಗೆ ಬಂದು ಮಕ್ಕಳೆಲ್ಲಿ ಅಂತಾ ಕೇಳ್ತಾಳೆ, ಆಗ ಬಿಸಿಲಮ್ಮನ 7 ಜನ ಮಕ್ಕಳು ಮನೆಯಲ್ಲಿರುತ್ತಾರೆ, ಸಿಡಿರಣ್ಣ ಮಾತ್ರ ಆಟವಾಡಲು ಹೊರಗಡೆ ಹೋಗಿರುತ್ತಾನೆ. ಬಿಸಿಲಮ್ಮ ಕಬ್ಬಾಳಿಗೆ ಮಕ್ಕಳಿಲ್ಲ ಹೊರಗಡೆ ಹೋಗಿದ್ದಾರೆಂದು ಸುಳ್ಳುಹೇಳುತ್ತಾಳೆ.  ಆಗ ತನ್ನ ದಿವ್ಯಶಕ್ತಿಯಿಂದ ಸತ್ಯ ತಿಳಿದ ಕಬ್ಬಾಳಿ ಹೊರಹೋದವನು ಉಳಿಯಲಿ, ಮನೆಯಲ್ಲಿರುವವರು ಕಲ್ಲಾಗಲಿ ಎಂದಾಗ ಮನೆಯಲ್ಲೇ ಇದ್ದ 7 ಜನ ಮಕ್ಕಳು ಕಲ್ಲಾಗುತ್ತಾರೆ, ಸಿಡಿರಣ್ಣ ಮಾತ್ರ ಉಳಿಯುತ್ತಾನೆ. ಹಾಗಾಗಿ ಪ್ರತಿವರ್ಷ ತನ್ನ ತಾಯಿ ಬಿಸಿಲೇಶ್ವರಿ ಕೊಂಡ ನಡೆದ ಮರುದಿನ ಸಿಡಿರಣ್ಣನ ಉತ್ಸವ ನಡೆಯುತ್ತದೆ.

ಇನ್ನು ಸಿಡಿರಣ್ಣನ ಉತ್ಸವದಲ್ಲಿ ಪುಟ್ಟ ಮಕ್ಕಳು ಹೆಚ್ಚಾಗಿ ಭಾಗವಹಿಸಿ ಸಿಡಿರಣ್ಣನ ಆರ್ಶೀವಾದ ಪಡೆಯುತ್ತಾರೆ. ಮುಖ್ಯವಾಗಿ ನವ-ವಧುವರರು ಸಿಡಿರಣ್ಣನಿಗೆ ಬಾಳೆಹಣ್ಣಿನ ದವನವನ್ನು ಅರ್ಪಿಸಿದರೆ ಒಳಿತಾಗುತ್ತದೆ ಎಂಬುದು ಭಕ್ತರ ನಂಬಿಕೆ. ಇನ್ನು ಕಲ್ಲಿನ ರೂಪದಲ್ಲಿರುವ 7 ಜನ ಮಕ್ಕಳು ಈಗಲೂ ದೇವಸ್ಥಾನದಲ್ಲಿ ಇರುವುದು ವಿಶೇಷ.

 
First published:March 13, 2018
ಮತ್ತಷ್ಟು ಓದಿರಿ
ಮುಂದಿನ ಸುದ್ದಿ