ಶಶಿಕಲಾಗೆ ದಿಂಬು, ಹಾಸಿಗೆ ಕೊಟ್ಟರೆ ತಪ್ಪೇನು..?: ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ


Updated:March 13, 2018, 3:48 PM IST
ಶಶಿಕಲಾಗೆ ದಿಂಬು, ಹಾಸಿಗೆ ಕೊಟ್ಟರೆ ತಪ್ಪೇನು..?: ಗೃಹ ಸಚಿವ ರಾಮಲಿಂಗಾರೆಡ್ಡಿ ಪ್ರಶ್ನೆ
ಗೃಹ ಸಚಿವ ರಾಮಲಿಂಗಾರೆಡ್ಡಿ

Updated: March 13, 2018, 3:48 PM IST
-ಜನಾರ್ದನ್ ಹೆಬ್ಬಾರ್, ನ್ಯೂಸ್ 18 ಕನ್ನಡ

ಬೆಂಗಳೂರು(ಮಾ.13): ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಶಶಿಕಲಾಗೆ ವಿವಿಐಪಿ ಟ್ರೀಟ್ ಮೆಂಟ್ ಆರೋಪಕ್ಕೆ ಸಂಬಂಧಿಸಿದಂತೆ ಗೃಹ ಸಚಿವ ರಾಮಲಿಂಗಾರೆಡ್ಡಿ ಖಡಕ್ ಉತ್ತರ ಕೊಟ್ಟಿದ್ದಾರೆ. .ದಿಂಬು, ಹಾಸಿಗೆ ಕೊಟ್ರೆ ಅದು ರಾಯಲ್ ಟ್ರೀಟ್ ಮೆಂಟಾ? ಸಿಎಂ ಕೂಡ ಕಾನೂನು ಪ್ರಕಾರ ನಡೆದುಕೊಳ್ಳಿ ಅಂತಾ ಹೇಳಿದ್ದಾರಷ್ಟೇ ಎಂದು ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದಾರೆ.

ಜೈಲು ನಿಯಮದ ಪ್ರಕಾರ ನಡೆದುಕೊಳ್ಳಿ ಅಂತಾ ಸಿಎಂ ಸೂಚನೆ ಕೊಟ್ಟಿದ್ದರು. ಹೀಗಾಗಿ, ದಿಂಬು, ಹಾಸಿಗೆ ಕೊಟ್ಟಿದ್ದಾರೆ. ಇದರಲ್ಲಿ ಏನು ತಪ್ಪಿದೆ. ಸುಮ್ಮನೆ ಬಿಜೆಪಿಯವರು ಸಿಎಂ ಮೇಲೆ ಆರೋಪ ಮಾಡೋದು ಸರಿಯಲ್ಲ. ಮಾಜಿ ಜೈಲರ್ ಸತ್ಯನಾರಾಯಣ ಹಣ ಪಡೆದ ಆರೋಪದ ಕುರಿತು ತನಿಖೆ ಸಿಸಿಬಿಗೆ ನೀಡಿದ್ದೇವೆ. ಸಿಸಿಬಿ ಏನು ರಿಪೋರ್ಟ್ ಕೊಡುತ್ತೋ ನೋಡೋಣ. ಹಣ ತೆಗೆದುಕೊಂಡ ದಾಖಲಾತಿ ಇದ್ದರೆ ತಂದು ನೀಡಲಿ ಎಂದು ಗೃಹ ಸಚಿವರು ಒತ್ತಾಯಿಸಿದ್ದಾರೆ. ಚುನಾವಣೆ ಹತ್ತರಿ ಬರುತ್ತಿರುವುದರಿಂದ ಬಿಜೆಪಿಯವರು ವಾರಕ್ಕೊಂದು ಪ್ರೇಸ್ ಮೀಟ್ ಮಾಡಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಅಮಿತ್ ಶಾ ಸೂಚನೆ ಮೇಲೆ ಹೀಗೆಲ್ಲ ಆರೋಪ ಮಾಡುತ್ತಿದ್ದಾರೆ.ಎಂದು ರಾಮಲಿಂಗಾರೆಡ್ಡಿ ಆರೋಪಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಶಿಕಲಾಗೆ ರಾಜ್ಯಾತಿಥ್ಯ ನೀಡಲಾಗುತ್ತಿದೆ ಎಂಬ ವಿಚಾರ ದೇಶಾದ್ಯಂತ ಭಾರೀ ಸದ್ದು ಮಾಡಿತ್ತು. ಡಿಐಜಿ ರೂಪಾ ಬಿಡುಗಡೆಗೊಳಿಸಿದ್ದ ಸಿಸಿಟಿವಿ ದೃಶ್ಯಾವಳಿಗಳೂ ಕೂಡಾ ವೈರಲ್ ಅಗಿದ್ದವು. ಪರಪ್ಪನ ಅಗ್ರಹಾರ ಕರ್ಮಕಾಮಡದ ಬಗ್ಗೆ ಡಿಐಜಿ ರೂಪಾ ಸಾಲು ಸಾಲು ಆರೋಪ ಮಾಡಿದ್ದರು.

ಈ ವಿಚಾರವಾಗಿ ವಿಚಾರಣಾ ಸಮಿತಿ ಮುಂದೆ ಹೇಳಿಕೆ ನೀಡಿರುವ ನಿವೃತ್ತ ಡಿಐಜಿ ಸತ್ಯನಾರಾಯಣರಾವ್ ಸಿಎಂ ಸಿದ್ದರಾಮಯ್ಯ ಸೂಚನೆಯಂತೆ ಹಾಸಿಗೆ, ದಿಂಬು, ಮಂಚ ಕೊಟ್ಟಿದ್ದೆ. ಕೆಪಿಸಿ ಗೆಸ್ಟ್ ಹೌಸ್​ನಲ್ಲಿ ಸಿಎಂ ಸೂಚಿಸಿದ್ದರು, ಅದಕ್ಕೆ ವ್ಯವಸ್ಥೆಯನ್ನೂ ಮಾಡಿದ್ದೆ. ಇದಕ್ಕಾಗಿ ನಾನು ಯಾವುದೇ ಲಂಚ ಪಡೆದಿಲ್ಲ, ಶಶಿಕಲಾ ವಕೀಲರು ಕ್ಲಾಸ್-1 ಸೌಲಭ್ಯ ನೀಡುವಂತೆ ಮನವಿ ಮಾಡಿದ್ದರು. ಈ ಸಂಬಂಧ ಮುಖ್ಯ ಅಧೀಕ್ಷಕರು ಫೋನ್ ಮಾಡಿ ನನ್ನನ್ನು ಕೇಳಿದ್ದರು. ಆದರೆ ನಿಯಮಗಳ ಪ್ರಕಾರ ನಾನು ಇಂಥ ಸೌಲಭ್ಯ ನೀಡಲು ಆಗಲ್ಲ ಎಂದಿದ್ದೆ, ಹೀಗಿದ್ದರೂ ಸಾಕಷ್ಟು ಬಾರಿ ಶಶಿಕಲಾ ಲಿಖಿತ ಮನವಿ ಮಾಡಿದ್ದರು. ಬಳಿಕ ಸಿಎಂ ಆಪ್ತ ವೆಂಕಟೇಶ್​ ನನ್ನನ್ನು ಕೆಪಿಸಿ ಗೆಸ್ಟ್​ ಹೌಸ್​ಗೆ ಕರೆದೊಯ್ದಿದ್ದರು. ಶಶಿಕಲಾಗೆ ಏನೆಲ್ಲಾ ಸವಲತ್ತು ಕೊಟ್ಟಿದ್ದೀರಾ ಎಂದು ಕೇಳಿದ್ದರು. ಎಲ್ಲಾ ಮಹಿಳಾ ಕೈದಿಗಳಂತೆ ಅವರೂ ಇದ್ದಾರೆ ಎಂದು ಹೇಳಿದ್ದೆ. ಆಗ ಸಿಎಂ ಹಾಸಿಗೆ, ದಿಂಬು, ಮಂಚ ಕೊಡಲು ಸೂಚಿಸಿದ್ದರು. ಮುಖ್ಯಮಂತ್ರಿಗಳ ಸೂಚನೆಯಂತೆ ದಿಂಬು,ಹಾಸಿಗೆ ಕೊಟ್ಟಿದ್ದೆ ಎಂದು ವಿಚಾರಣೆ ವೇಲೆ ಸತ್ಯನಾರಾಯಣ ಹೇಳಿರುವುದಾಗಿ ವರದಿಯಾಗಿತ್ತು.

ಈ ಆರೋಪದ ಕುರಿತಾಗಿ ಪ್ರತಿಕ್ರಿಯಿಸಿದ್ದ ಸಿಎಂ ಸಿದ್ದರಾಮಯ್ಯ "ತಮಿಳುನಾಡಿನ ನಿಯೋಗ ಒಂದು‌‌‌ ನನ್ನನ್ನ ಭೇಟಿ ಮಾಡಿ ಚಾಪೆ, ದಿಂಬು ಕೊಟ್ಟಿಲ್ಲ ಅಂತ ಹೇಳಿದರು. ಹೀಗಾಗಿ, ಜೈಲು ನಿಯಮಾವಳಿ‌ ಪ್ರಕಾರ ಸವಲತ್ತು ನೀಡಿ ಅಂತ ಹೇಳಿದ್ದೆ ಹೊರತು ವಿವಿಐಪಿ ಟ್ರೀಟ್ ಮೆಂಟ್ ಕೊಡಿ ಅಂತ ನಾನು‌ ಹೇಳಿಲ್ಲ" ಎಂದಿದ್ದರು.
.
First published:March 13, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ