ಡಿ.22ಕ್ಕೆ ಸಂಪುಟ ವಿಸ್ತರಣೆ ಇಲ್ಲ; ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದ ಹಿರಿಯ ನಾಯಕರು

ಡಿ.22 ಶೂನ್ಯ ಮಾಸವಾಗಿದ್ದು, ಸಂಪುಟ ವಿಸ್ತರಣೆಗೆ ಎಚ್​.ಡಿ ರೇವಣ್ಣ ಒಪ್ಪುವುದಿಲ್ಲ. ಈಗಾಗಿ ಈ ಬಾರಿ ಕೂಡ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಡೆಯುವುದಿಲ್ಲ

Seema.R | news18
Updated:December 6, 2018, 1:37 PM IST
ಡಿ.22ಕ್ಕೆ ಸಂಪುಟ ವಿಸ್ತರಣೆ ಇಲ್ಲ; ಮೈತ್ರಿ ಸರ್ಕಾರದ ವಿರುದ್ಧ ಬಂಡೆದ್ದ ಹಿರಿಯ ನಾಯಕರು
ರಾಮಲಿಂಗಾ ರೆಡ್ಡಿ
Seema.R | news18
Updated: December 6, 2018, 1:37 PM IST
ಚಿದಾನಂದ ಪಟೇಲ್​

ಬೆಂಗಳೂರು (ಡಿ.6): ಬಹುದಿನಗಳಿಂದ ಮುಂದೂಡಿಕೊಂಡು ಬಂದ ಮೈತ್ರಿ ಸರ್ಕಾರಕ್ಕೆ ಸಂಪುಟ ವಿಸ್ತರಣೆಗೆ ಡಿ.22ಕ್ಕೆ ಮುಹೂರ್ತ ಫಿಕ್ಸ್​ ಆಗಿದೆ ಎಂದು ಸಂತಸ ವ್ಯಕ್ತಪಡಿಸಿದ್ದ   ಹಲವು ಶಾಸಕರಿಗೆ ಕಾಂಗ್ರೆಸ್​ ಹಿರಿಯ ನಾಯಕ, ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಶಾಂಕಿಂಗ್​ ನ್ಯೂಸ್​ ನೀಡಿದ್ದು, ಮೈತ್ರಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನ್ಯೂಸ್​ 18 ಕನ್ನಡ ಜೊತೆ ಮಾತನಾಡಿದ ಅವರು, ಕಾಂಗ್ರೆಸ್​ನಲ್ಲಿ ಹಿರಿಯ ನಾಯಕರಿಗೆ ಮೂಲೆಗುಂಪು ಮಾಡಲಾಗುತ್ತಿದೆ. ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರನ್ನುಯ ಕಡೆಗಣಿಸುವುದು ತಪ್ಪು. ಹಿರಿಯ ನಾಯಕರಿಗೆ ಇಲ್ಲಿ ತಾರತಮ್ಯ ನಡೆಯುತ್ತಿದೆ. ಈ ಹಿಂದೆ ಸಚಿವರಾಗಿರುವ ಹಿರಿಯ ನಾಯಕರಿಗೆ ಮತ್ತೆ ಸಚಿವ ಸ್ಥಾನ ನೀಡುವುದಿಲ್ಲ ಎಂದು ತಿಳಿಸದ ಮೇಲೆ ಡಿಕೆ ಶಿವಕುಮಾರ್​, ಕೆಜೆ ಜಾರ್ಜ್​ ಅವರಿಗೆ ಹೇಗೆ ಸ್ಥಾನ ಸಿಕ್ಕಿತು. ಎಲ್ಲರಿಗೂ ಒಂದೇ ನ್ಯಾಯ ಸಿಗಬೇಕಲ್ಲವೇ ಎಂದು ಪ್ರಶ್ನಿಸಿದರು.

ನಾಯಕರ ವಿರುದ್ಧ ಅಸಮಾಧಾನ

ತಮಗೆ ಸಚಿವ ಸ್ಥಾನ ಕೈ ತಪ್ಪಿದ ಬಗ್ಗೆ ಮೊದಲ ಬಾರಿ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ ಅವರು, ಮಂತ್ರಿ ಸ್ಥಾನವನ್ನು ಜಾತಿ ಆಧಾರದ ಮೇಲೆ ಪರಿಗಣಿಸಬಾರದು. ಸರ್ಕಾರದಲ್ಲಿರುವ ನಾಲ್ವರು ಬ್ರಾಹ್ಮಣರಲ್ಲಿ ಮೂವರಿಗೆ ಸಚಿವ ಸ್ಥಾನ ಸಿಕ್ಕಿದೆ. ಬೇರೆ ಜಾತಿಯವರಿಗೆ ತಲಾ ಒಂದೊಂದು ಸ್ಥಾನ ಎನ್ನುವುದು ಯಾವುದು ನ್ಯಾಯ ಎಂದು ಕೇಳಿದರು.

ಡಿ 22ಕ್ಕೆ ಸಂಪುಟ ವಿಸ್ತರಣೆ ಇಲ್ಲ

ಬೆಳಗಾವಿ ಅಧಿವೇಶನದ ಬಳಿಕ ಡಿ.22ರಂದು ಸಚಿವ ಸಂಪುಟ ವಿಸ್ತರಣೆ ಮಾಡುತ್ತೇವೆ ಎಂದು ನಾಯಕರು ಈಗಾಗಲೇ ಆಶ್ವಾಸನೆ ನೀಡಿದ್ದಾರೆ. ಆದರೆ, ಈ ಬಗ್ಗೆ ನನಗೆ ನಂಬಿಕೆ ಇಲ್ಲ. ಈಗಾಗಲೇ 10 ಬಾರಿ ಈ ಮುಹೂರ್ತ ಮುಂದೂಡಲಾಗಿದೆ. ಡಿ.22 ಶೂನ್ಯ ಮಾಸವಾಗಿದ್ದು, ಸಂಪುಟ ವಿಸ್ತರಣೆಗೆ ಎಚ್​.ಡಿ ರೇವಣ್ಣ ಒಪ್ಪುವುದಿಲ್ಲ. ಈಗಾಗಿ ಈ ಬಾರಿ ಕೂಡ ಸಚಿವ ಸಂಪುಟ ವಿಸ್ತರಣೆ ಕಾರ್ಯ ನಡೆಯುವುದಿಲ್ಲ ಎಂದರು.
Loading...

ಸುಳ್ಳು ಭರವಸೆಗಳು

ಸಂಪುಟ ವಿಸ್ತರಣೆಯನ್ನು ಬೇಕೆಂದು ಮುಂದೂಡಲಾಗುತ್ತಿದೆ. ಲೋಕಸಭೆ ಬಳಿಕವೇ ಈ ಪ್ರಕ್ರಿಯೆ ನಡೆಯಲಿದೆ. ಹೈಕಮಾಂಡ್​, ಹಿರಿಯ ನಾಯಕರು ಯಾಕೆ ಈ ರೀತಿ ಸುಳ್ಳು ಭರವಸೆ ನೀಡುತ್ತಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಅವರು ಸ್ಪಷ್ಟವಾಗಿ ಸದ್ಯ ಸಂಪುಟ ವಿಸ್ತರಣೆ ನಡೆಸುವುದಿಲ್ಲ ಎಂದು ಹೇಳಬಹುದು ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಇದನ್ನು ಓದಿ: ಡಿ. 22ಕ್ಕೆ ಸಂಪುಟ ವಿಸ್ತರಣೆಗೆ ದಿನಾಂಕ ಫಿಕ್ಸ್; ಸಂಪುಟ ಸಭೆಯಲ್ಲಿ ತೆಗೆದುಕೊಂಡ ನಿರ್ಣಯಗಳೇನು?

ವೇದಿಕೆ ರಚನೆಗೆ ಯತ್ನ: 

ಪಕ್ಷಕ್ಕಾಗಿ ನಾವು ದುಡಿದ್ದಿದ್ದೇವೆ. ಆದರೆ, ನಮಗೆ ಸ್ಥಾನ ಸಿಗುತ್ತಿಲ್ಲ ಎಂದು ಈಗಾಗಲೇ ಪಕ್ಷದ ಹಿರಿಯರು ಹಾಗೂ ಹೈ ಕಮಾಂಡ್​ ವಿರುದ್ಧ ರಾಮಲಿಂಗಾ ರೆಡ್ಡಿ, ಎಚ್​.ಕೆ ಪಾಟೀಲ್​, ಎಂಬಿ ಪಾಟೀಲ್​ ಮುನಿಸು ತೋರಿದ್ದಾರೆ. ಅಲ್ಲದೇ ಹೈಕಮಾಂಡ್​ ಮಟ್ಟದಲ್ಲಿ ಸಚಿವ ಸ್ಥಾನಕ್ಕೆ ಲಾಬಿ ನಡೆಸಿದ್ದರು. ಸಂಪುಟ ವಿಸ್ತರಣೆ ಕಾರ್ಯ ನಡೆಯುತ್ತಿಲ್ಲ ಎಂದು ಗರಂ ಆಗಿರುವ ನಾಯಕರು ರಹಸ್ಯ ಸಭೆ ನಡೆಸಿದ್ದಾರೆ. ಇದಕ್ಕಾಗಿ ಕಾಂಗ್ರೆಸ್​ನ ಹಿರಿಯರ ವೇದಿಕೆ ರಚನೆ ಯತ್ನ ನಡೆದಿದ್ದು, ಇದಕ್ಕೆ ಪೂರಕ ಮಾತುಗಳನ್ನು ಹಿರಿಯ ನಾಯಕರು ಆಡಿದ್ದಾರೆ.

First published:December 6, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...