news18-kannada Updated:January 21, 2021, 7:41 PM IST
ಮಾಜಿ ಸಚಿವ ರಾಮಲಿಂಗಾರೆಡ್ಡಿ.
ಬೆಂಗಳೂರು (ಜ. 21): ಕಾಂಗ್ರೆಸ್ನ ಕಾರ್ಯಕಾರಿ ಅಧ್ಯಕ್ಷರಾಗಿ ಹಿರಿಯ ನಾಯಕರಾದ ಆರ್. ರಾಮಲಿಂಗರೆಡ್ಡಿ ಹಾಗೂ ಆರ್ ಧ್ರುವ ನಾರಾಯಣ ಅವರನ್ನು ನೇಮಕ ಮಾಡಿ ಹೈ ಕಮಾಂಡ್ ಆದೇಶ ಹೊರಡಿಸಿದೆ. ಈ ಮೂಲಕ ಕಾರ್ಯನಿರತ ಅಧ್ಯಕ್ಷರ ಸಂಖ್ಯೆಯನ್ನು ಐದಕ್ಕೆ ಏರಿಕೆಯಾಗಿದೆ. ಬಿಬಿಎಂಪಿ ಚುನಾವಣೆ ಹಾಗೂ ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಈ ಹೊಸ ನೇಮಕಾತಿಗಳನ್ನು ಮಾಡಲಾಗಿದೆ. ಈ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಬಲಪಡಿಸಲು ಮುಂದಾಗಲಾಗಿದೆ. ಇದೇ ಮೊದಲಬಾರಿಗೆ ರಾಜ್ಯದಲ್ಲಿ ಕಾರ್ಯಕಾರಿ ಅಧ್ಯಕ್ಷರನ್ನು ಗರಿಷ್ಠ ಸಂಖ್ಯೆಯಲ್ಲಿ ನೇಮಕ ಮಾಡಲಾಗಿದೆ. ಏಳು ಬಾರಿ ಶಾಸಕರಾಗಿರುವ ರಾಮಲಿಂಗಾ ರೆಡ್ಡಿ ಬಿಬಿಎಂಪಿ ಚುನಾವಣೆಯಲ್ಲಿ ಪ್ರಮುಖ ಪಾತ್ರವಹಿಸುವ ನಿರೀಕ್ಷೆಯಿದೆ. ಈ ಹಿಂದೆ ಹಲವು ಪ್ರಬಲ ಖಾತೆಗಳನ್ನು ಹೊಂದಿ ಸಚಿವರಾಗಿ ಸೇವೆ ಸಲ್ಲಿಸಿರುವ ಅವರ ಅನುಭವ ಹಿನ್ನಲೆ ಪ್ರಮುಖ ಹುದ್ದೆ ನೀಡಲಾಗಿದೆ.
ಅಷ್ಟೆ ಅಲ್ಲದೇ, ಬೆಂಗಳೂರು ನಗರಾಡಳಿತದಲ್ಲಿ ಅವರು ಉತ್ತಮ ಅನುಭವ ಹೊಂದಿದ್ದಾರೆ. ಬಿಜೆಪಿ ನಾಯಕರೊಂದಿಗೆ ಉತ್ತಮ ಭಾಂದವ್ಯ ಹೊಂದಿರುವುರ ಜೊತೆ ಯಾವುದೇ ವಿವಾದಗಳು ಇವರ ಬೆನ್ನಿಗೆ ಅಂಟಿಲ್ಲ. ಈ ಹಿನ್ನಲೆ ಮಾಜಿ ಬಿಬಿಎಂಪಿ ಕೌನ್ಸಿಲರ್ಗಳನ್ನು ಪಕ್ಷಕ್ಕೆ ಸೇರಿಸುವ ತಂತ್ರ ಹೆಣೆಯುವ ಮೂಲಕ ಪಕ್ಷವನ್ನು ಮತ್ತಷ್ಟು ಬಲಪಡಿಸುವ ನಿರೀಕ್ಷೆ ಇದೆ ಎಂದು ಕಾಂಗ್ರೆಸ್ ಮುಖಂಡರೊಬ್ಬರು ತಿಳಿಸಿದ್ದಾರೆ.
ಇದನ್ನು ಓದಿ: ಬಸ್ನಲ್ಲಿ ಕಿರುಕುಳ; ಮಂಗಳೂರು ಕಮೀಷನರ್ ಎದುರೇ ಕಾಮುಕನಿಗೆ ಯುವತಿಯಿಂದ ಕಪಾಳಮೋಕ್ಷ
ಸದ್ಯ ಕಾಂಗ್ರೆಸ್ನಲ್ಲಿ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ, ಸಲೀಮ್ ಅಹ್ಮದ್ ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷರಾಗಿದ್ದಾರೆ. ಖಂಡ್ರ ಕಲ್ಯಾಣ ಕರ್ನಾಟಕ ಪ್ರತಿನಿಧಿಸಿದರೆ, ಜಾರಕಿಹೊಳಿ ಮುಂಬೈ ಕರ್ನಾಟಕ ಮತ್ತು ಸಲೀಂ ಅಲ್ಪ ಸಂಖ್ಯಾತ ಸಮುದಾಯ ಪ್ರತಿನಿಧಿಸುತ್ತಿದ್ದಾರೆ.
ಕೆಪಿಸಿಸಿ ಅಧ್ಯಕ್ಷರಾಗಿರುವ ಡಿಕೆ ಶಿವಕುಮಾರ್ ಧ್ರುವ ನಾರಾಯಣ ಹಳೆ ಮೈಸೂರು ಭಾಗವನ್ನು ಬಲಗೊಳಿಸುವ ನಿಟ್ಟಿನಲ್ಲಿ ಗಮನಹರಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆ ಏಪ್ರಿಲ್ ಅಥವಾ ಮೇ ನಲ್ಲಿ ನಡೆಯುವ ಸಾಧ್ಯತೆ ಇದ್ದು, ಈ ನಾಯಕರ ನೇಮಕದಿಂದ ಪಕ್ಷಕ್ಕೆ ಮತ್ತಷ್ಟು ಲಾಭಾವಾಗಲಿದೆ ಎಂಬ ಲೆಕ್ಕಾಚಾರ ನಡೆಸಲಾಗಿದೆ.
Published by:
Seema R
First published:
January 21, 2021, 7:37 PM IST