Ramadan 2020: ಎಲ್ಲೆಡೆ ಇಂದು ರಂಜಾನ್ ಹಬ್ಬ; ಈದ್ ಶುಭಾಶಯ ತಿಳಿಸಿದ ರಾಜ್ಯ ರಾಜಕೀಯ ನಾಯಕರು

Eiid Ul-Fitr 2020: ರಂಜಾನ್ ತಿಂಗಳಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಮನೆಯಲ್ಲೇ ಪ್ರಾರ್ಥನೆ ನಡೆಸಿ, ಮುನ್ನೆಚ್ಚರಿಕೆ ವಹಿಸಿ ಸಹಕರಿಸಿದ ಎಲ್ಲ ಮುಸಲ್ಮಾನ ಬಂಧುಗಳಿಗೆ ಅಭಿನಂದನೆಗಳು ಎಂದು ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

news18-kannada
Updated:May 25, 2020, 9:03 AM IST
Ramadan 2020: ಎಲ್ಲೆಡೆ ಇಂದು ರಂಜಾನ್ ಹಬ್ಬ; ಈದ್ ಶುಭಾಶಯ ತಿಳಿಸಿದ ರಾಜ್ಯ ರಾಜಕೀಯ ನಾಯಕರು
ಪ್ರಾತಿನಿಧಿಕ ಚಿತ್ರ.
  • Share this:
ಬೆಂಗಳೂರು (ಮೇ 25): ಇಂದು ರಂಜಾನ್​ ಹಬ್ಬ. ಒಂದು ತಿಂಗಳು ಉಪವಾಸ ಇಂದಿಗೆ ಕೊನೆಗೊಳ್ಳುತ್ತಿದೆ. ಈ ಹಬ್ಬಕ್ಕೆ ಗಣ್ಯಾತಿ ಗಣ್ಯರು ಶುಭಕೋರಿದ್ದಾರೆ. ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​, ಮಾಜಿ ಸಿಎಂ ಸಿದ್ದರಾಮಯ್ಯ ಶುಭಾಶಯ ಸಂದೇಶ ತಿಳಿಸಿದ್ದಾರೆ. 

"ಶಾಂತಿ, ಸೌಹಾರ್ದ ಮತ್ತು ಸಹಬಾಳ್ವೆಯ ಪ್ರತೀಕವಾಗಿರುವ  ಈ ಹಬ್ಬವು ಬದುಕಿನಲ್ಲಿ ನೆಮ್ಮದಿ, ಸಂತೋಷ ತರಲಿ. ರಂಜಾನ್ ತಿಂಗಳಲ್ಲಿ ಕೋವಿಡ್ 19 ಸೋಂಕು ನಿಯಂತ್ರಣಕ್ಕಾಗಿ ಮನೆಯಲ್ಲೇ ಪ್ರಾರ್ಥನೆ ನಡೆಸಿ, ಮುನ್ನೆಚ್ಚರಿಕೆ ವಹಿಸಿ ಸಹಕರಿಸಿದ ಎಲ್ಲ ಮುಸಲ್ಮಾನ ಬಂಧುಗಳಿಗೆ ಅಭಿನಂದನೆಗಳು," ಎಂದು ಸಿಎಂ ಬಿಎಸ್​ ಯಡಿಯೂರಪ್ಪ ತಿಳಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕೂಡ ಮುಸ್ಲಿಮರಿಗೆ ಸಂದೇಶ ರವಾನೆ ಮಾಡಿದ್ದಾರೆ. 'ಮನುಷ್ಯನನ್ನು ಎಲ್ಲಾ ವಿಧವಾದ ದೌರ್ಬಲ್ಯಗಳಿಂದ ಮುಕ್ತಗೊಳಿಸಿ ದೇಹ ಮತ್ತು ಆತ್ಮವನ್ನು ಶುದ್ಧಿಗೊಳಿಸುವ ಪವಿತ್ರ ರಂಜಾನ್ ಹಬ್ಬ ಶುಭತರಲಿ. ರಂಜಾನ್ ಎಂದರೆ ಕೇವಲ ಉಪವಾಸ ಮಾತ್ರವಲ್ಲ. ಅರ್ಹರಿಗೆ, ಅಗತ್ಯವಿರುವವರಿಗೆ ದಾನ, ಧರ್ಮ ಮಾಡಿ ಆ ಮೂಲಕ ಭಗವಂತನನ್ನು ಸಂಪ್ರೀತಗೊಳಿಸುವುದಾಗಿದೆ. ಸದ್ಯ ಜಗತ್ತಿನಲ್ಲಿ ಮಾನವಕುಲಕ್ಕೆ ಎದುರಾಗಿರುವ ದೊಡ್ಡ ಸವಾಲನ್ನು ನಾವೆಲ್ಲರೂ ಒಟ್ಟಾಗಿ ಮೆಟ್ಟಿನಿಲ್ಲಬೇಕಿದೆ. ಭಾರತ ಸರ್ವ ಧರ್ಮಗಳ ಭೂಮಿಯಾಗಿದ್ದು, ದೇಶದಲ್ಲಿ ಎಲ್ಲರೂ ಶಾಂತಿ, ಸೌಹಾರ್ದತೆಯಿಂದ ಬದುಕಲು ಈ ಹಬ್ಬ ವೇದಿಕೆಯಾಗಲಿ' ಎಂದು ಡಿ.ಕೆ. ಶಿವಕುಮಾರ್ ಅವರು ತಮ್ಮ ಶುಭಾಶಯ ಸಂದೇಶದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಇಂದಿನಿಂದ ಭಾರತದಲ್ಲಿ ವಿಮಾನ ಹಾರಾಟ; ಇಲ್ಲಿದೆ ಹೊಸ ಮಾರ್ಗಸೂಚಿ ಪಟ್ಟಿ

ಶುಭಾಶಯ ಕೋರಿ ಟ್ವೀಟ್​ ಮಾಡಿರುವ ಸಿದ್ದರಾಮಯ್ಯ, ಪವಿತ್ರ ಈದ್ ಉಲ್ ಫಿತರ್ ಹಬ್ಬ ಸಾರುವ ಸ್ನೇಹ, ತ್ಯಾಗ ಮತ್ತು ಭಾತೃತ್ವದ ಸಂದೇಶವನ್ನು ಅರಿತು ಅಳವಡಿಸಿಕೊಂಡು ನಾವೆಲ್ಲ ಬಾಳೋಣ. ನಾಡಿನ ನನ್ನ‌ ಎಲ್ಲ ಮುಸ್ಲಿಮ್ ಸಮುದಾಯದವರಿಗೆ ಹಬ್ಬದ ಶುಭಾಶಯಗಳು, ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
First published: May 25, 2020, 7:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading