ರಾಜರನ್ನು ಮೀರಿಸಿದ ರಾಮಚಂದ್ರ; ಶೇವಿಂಗ್​ ಮಾಡಲೂ ಚಿನ್ನದ ರೇಜರ್​!

news18
Updated:June 10, 2018, 1:50 PM IST
ರಾಜರನ್ನು ಮೀರಿಸಿದ ರಾಮಚಂದ್ರ; ಶೇವಿಂಗ್​ ಮಾಡಲೂ ಚಿನ್ನದ ರೇಜರ್​!
news18
Updated: June 10, 2018, 1:50 PM IST
-ಲೋಹಿತ್ ಶಿರೋಳ ನ್ಯೂಸ್18 ಕನ್ನಡ

ಚಿಕ್ಕೋಡಿ,(ಜೂ.10): ರಾಜ– ಮಹಾರಾಜರು, ಆಗರ್ಭ  ಶ್ರೀಮಂತರು ಬೆಳ್ಳಿ– ಬಂಗಾರದ ತಟ್ಟೆಯಲ್ಲಿ ಊಟ ಮಾಡುತ್ತಾರೆ ಎನ್ನುವುದನ್ನು ಕೇಳಿರಬಹುದು. ಆದರೆ ಇಲ್ಲೊಬ್ಬ ಶೇವ್ ಮಾಡಲು ಚಿನ್ನದ ರೇಜರ್​​ನ್ನು ಬಳಿಸಿ ಅಚ್ಚರಿ ಹುಟ್ಟಿಸಿದ್ದಾನೆ. ಶೇವ್ ಮಾಡೋಕೆ ಚಿನ್ನದ ರೇಜರ್ ನಾ ಅಂತಾ ಏನಪ್ಪಾ ಇದು ವಿಚಿತ್ರ ಅಂತಿರಾ? ಹಾಗಿದ್ದರೆ ಈ ಸ್ಟೋರಿ ನೋಡಿ ನಿಮಗೆ ಗೊತ್ತಾಗುತ್ತೆ.

ಇವರೇನು ಮಹಾರಾಜ ಅಲ್ಲಾ ರಾಜ ಮನೆತನದ ವ್ಯಕ್ತಿಯು ಅಲ್ಲಾ, ಆದರೆ ಇವರು ಶೇವ್ ಮಾಡಲು ಬಳಸೋದು ಚಿನ್ನದ ರೇಜರ್. ಹೌದು, ಮಹಾರಾಷ್ಟ್ರದ ಸಾಂಗ್ಲಿಯ ಗಾಂವಬಾಗ್‌ನಲ್ಲಿರುವ ‘ಉಸ್ತ್ರಾ ಫಾರ್‌ ಮೆನ್ಸ್‌’ ಸಲೂನ್‌ ಮಾಲೀಕ ರಾಮಚಂದ್ರ ದತ್ತಾತ್ರೇಯ ಕಾಸೀದ್‌ ಇಂತಹದೊಂದು ಪ್ರಯೋಗ ಮಾಡುತ್ತಿದ್ದಾರೆ. 3.55 ಲಕ್ಷ ವೆಚ್ಚದಲ್ಲಿ 105 ಗ್ರಾಂ ನ 18 ಕ್ಯಾರೆಟ್‌ ಚಿನ್ನ ಬಳಸಿ ಈ ಸಾಧನವನ್ನು ಮಾಡಿಸಿಕೊಂಡಿದ್ದಾರೆ. ಸಾಂಗ್ಲಿಯ ಚಂದುಕಾಕಾ ಜ್ಯುವೆಲ್ಲರ್ಸ್‌ನವರು, ಪುಣೆಯ ಮಿಥುನ್‌ ರಾಣಾ ಎಂಬ ಕುಶಲಕರ್ಮಿಯಿಂದ ಈ ಶೆವರ್ ಅನ್ನ ಮಾಡಿಸಿದ್ದಾರೆ. ರಾಮಚಂದ್ರ ಅವರು, ತಿಂಗಳ ಹಿಂದೆ ನಡೆದ ತಮ್ಮ ತಂದೆ–ತಾಯಿಯ 33ನೇ ಮದುವೆ ವಾರ್ಷಿಕೋತ್ಸವದ ಸವಿನೆನಪಿನಲ್ಲಿ ಚಿನ್ನದ ರೇಜರ್ ಬಳಸುವುದಕ್ಕೆ ಶುರು ಮಾಡಿದ್ದಾರೆ. ಮೊದಲಿಗೆ ತಂದೆ ದತ್ತಾತ್ರೇಯ ಅವರಿಗೆ ಇದರಿಂದ ಕ್ಷೌರ ಮಾಡಿದ್ದಾರೆ.

ವೃತ್ತಿಯಲ್ಲಿ ವಿಶೇಷತೆ ಅಳವಡಿಸಿಕೊಳ್ಳುವ ಮೂಲಕ ಗ್ರಾಹಕರನ್ನು ಸೆಳೆಯಲು ಈ ಬಂಗಾರದ ರೇಜರ್‌ ಮಾಡಿಸಿದ್ದೇನೆ. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಇದರಿಂದ ದಾಡಿ ಮಾಡಿದರೆ ₹ 200 ಪಡೆಯುತ್ತೇನೆ. ಬಹುತೇಕರು ಇದನ್ನೇ ಬಳಸುವಂತೆ ಕೇಳುತ್ತಾರೆ. ಸಾಂಗ್ಲಿ ಸುತ್ತಮುತ್ತಲಿನ 50 ಕಿ.ಮೀ. ದೂರದಿಂದಲೂ ಯುವಕರು ಇಲ್ಲಿಗೆ ಬಂದು ಬಂಗಾರದ ರೇಜರ್‌ನಿಂದಲೇ ಶೆವ್ ಮಾಡಿಸಿಕೊಂಡು ಹೋಗುತ್ತಾರೆ. ಈ ಹೊಸ ಪ್ರಯೋಗದಿಂದಾಗಿ ಉದ್ಯೋಗದಲ್ಲಿ ವೃದ್ದಿಯಾಗಿದೆ ಎನ್ನುತ್ತಾರೆ ರಾಮಚಂದ್ರ.
First published:June 10, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...