• Home
  • »
  • News
  • »
  • state
  • »
  • Ram Mandir: ಕನ್ನಡಿಗ ಗೋಪಾಲ್ ನಾಗರಕೆಟ್ಟೆ ಉಸ್ತುವಾರಿಯಲ್ಲಿ ರಾಮ ಮಂದಿರ ನಿರ್ಮಾಣ ಕೆಲಸ! 2024ಕ್ಕೆ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ

Ram Mandir: ಕನ್ನಡಿಗ ಗೋಪಾಲ್ ನಾಗರಕೆಟ್ಟೆ ಉಸ್ತುವಾರಿಯಲ್ಲಿ ರಾಮ ಮಂದಿರ ನಿರ್ಮಾಣ ಕೆಲಸ! 2024ಕ್ಕೆ ಬಾಲ ರಾಮನ ಮೂರ್ತಿ ಪ್ರತಿಷ್ಠಾಪನೆ

ಗೋಪಾಲ್ ನಾಗರಕಟ್ಟೆ

ಗೋಪಾಲ್ ನಾಗರಕಟ್ಟೆ

2014ರ ಮಕರ ಸಂಕ್ರಮಣದ ನಂತರ ಒಳ್ಳೆಯ ಮೂಹೂರ್ತದಲ್ಲಿ ಬಾಲ ರಾಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಮೂಲ ಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಜನರಿಗೆ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ ಎಂದು ಗೋಪಾಲ್ ನಾಗರಕಟ್ಟೆ ಹೇಳಿದ್ದಾರೆ.

  • News18
  • Last Updated :
  • Share this:

ಬೆಳಗಾವಿ (ಅ.5) ಅಯೋಧ್ಯಯಲ್ಲಿ (Ayodhya) ರಾಮ ಮಂದಿರ (Ram Mandira) ನಿರ್ಮಾಣ ಆಗಬೇಕು ಎನ್ನುವುದು ಬಹು ವರ್ಷಗಳ ಹಿಂದೂಗಳ ಕನಸು ಇದಕ್ಕಾಗಿ ಹೋರಾಟ, ಸಂಘರ್ಷ ನಡೆದಿರೋದು ಇತಿಹಾಸ. ಈಗ ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ರಾಮ ಮಂದಿರ ನಿರ್ಮಾಣ ಕಾರ್ಯ ಆರಂಭವಾಗಿದೆ. ಮಂದಿರ ನಿರ್ಮಾಣ ಭೂಮಿ ಪೂಜೆಗೆ ಬೆಳಗಾವಿಯ ಖ್ಯಾತ ಜ್ಯೋತಿಷಿಗಳು ಮೂಹುರ್ತ ನಿಗದಿ ಮಾಡಿದ್ದರು. ಈಗ ಮಂದಿರ ನಿರ್ಮಾಣ ಸಂಪೂರ್ಣ ಉಸ್ತುವಾರಿಯನ್ನು ಕನ್ನಡಿಗರೊಬ್ಬರು ವಹಿಸಿಕೊಂಡಿದ್ದಾರೆ. ಈಗ ಅಯೋಧ್ಯಯಲ್ಲಿ ಮಂದಿರ ನಿರ್ಮಾಣ ಕಾರ್ಯ ಭರದಿಂದ ನಡೆದಿದೆ. ಜತೆಗೆ ಕರ್ನಾಟಕದ ಗ್ರೈನೆಟ್ ಕಲ್ಲನ್ನು ಬಳಸಿ 16 ಎತ್ತರ ಕಟ್ಟೆಯನ್ನು ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಅಂತಿಮ ಹಂತದಲ್ಲಿ ಇದೆ ಎಂದು ನ್ಯೂಸ್ 18 ಕನ್ನಡಕ್ಕೆ ದೇವಸ್ಥಾನ ನಿರ್ಮಾಣ  (Temple Construction) ಉಸ್ತುವಾರಿ ವಿ ಎಚ್ ಪಿ ಕೇಂದ್ರೀಯ ಕಾರ್ಯದರ್ಶಿ ಗೋಪಾಲ್ ನಾಗರಕಟ್ಟೆ (Gopal Nagarkatte) ಹೇಳಿದ್ದಾರೆ.


ರಾಮ ಮಂದಿರ ನಿರ್ಮಾಣ ಕೆಲಸ ನಡೀತಿದೆ


ಬೆಳಗಾವಿಯ ಶಾಸ್ತ್ರೀ ನಗರದ ವಿಎಚ್ ಪಿ ಕಟ್ಟಡದ ಆಯುಧ ಪೂಜೆಯಲ್ಲಿ ಗೋಪಾಲ್ ನಾಗರಕಟ್ಟೆ ಪಾಲ್ಗೊಂಡಿದ್ದರು. ಬಳಿಕ ನ್ಯೂಸ್ 18 ಕನ್ನಡದ ಜತೆಗೆ ಮಾತನಾಡಿದ ಅವರು, 2020ರ ಆಗಷ್ಟ್ 5 ರಂದು ಪ್ರಧಾನಿ ನರೇಂದ್ರ ಮೋದಿ ಮಂದಿರ ನಿರ್ಮಾಣಕ್ಕಾಗಿ ಅಡಿಗಲ್ಲ ಹಾಕಿದ್ದರು. ರಾಮ ಮಂದಿರ ನಿರ್ಮಾಣ ಕೆಲಸ ಕಳೆದ ಎರಡು ವರ್ಷಗಳಿಂದ ನಡೆಯುತ್ತಿದೆ.


ಹಗಲು, ರಾತ್ರಿ ಎನ್ನದೆ ದುಡಿಯುತ್ತಿದ್ದಾರೆ ಜನ


ಮಂದಿರ ನಿರ್ಮಾಣ ಕಾರ್ಯ ನೆಲಮಟ್ಟದಿಂದ 16 ಅಡಿ ಮೇಲಕ್ಕೆ ಕಾಮಗಾರಿ ಬಂದಿದೆ. ಕರ್ನಾಟಕದ ಗ್ರೈನೆಟ್ ಕಲ್ಲಿನಿಂದ ಕಟ್ಟೆ ಕಟ್ಟುವ ಕಾರ್ಯ ಮುಕ್ತಾಯ ಹಂತದಲ್ಲಿ ಇದೆ. ಬನಸಿ ಪಹಾಡ್ ಪುರದ ಕೆಲಸ ಜೂನ್ 1 ರಿಂದ ಆರಂಭವಾಗಿದೆ. ಸುಮಾರು 2 ಅಡಿ ಮೇಲಕ್ಕೆ ಬಂದಿದ್ದು700 ಕಲ್ಲು ಜೋಡಿಸಲಾಗಿದೆ. ಈ ಕೆಲಸ ಅಯೋಧ್ಯೆಯಲ್ಲಿ ಹಗಲು, ರಾತ್ರಿ ಎನ್ನದೇ ನಡೆಯುತ್ತಿದೆ.


Ayodhya Ram Mandir- Ram Mandir construction work in charge of Kannadiga Gopal Nagarakette! In
ಗೋಪಾಲ್ ನಾಗರಕಟ್ಟೆ


ಬಾಲ ರಾಮ ಮೂರ್ತಿ ಪ್ರತಿಷ್ಠಾಪನೆ


2014ರ ಮಕರ ಸಂಕ್ರಮಣದ ನಂತರ ಒಳ್ಳೆಯ ಮೂಹೂರ್ತದಲ್ಲಿ ಬಾಲ ರಾಮ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗುವುದು. ಮೂಲ ಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿ ಜನರಿಗೆ ದರ್ಶನಕ್ಕೆ ಅವಕಾಶ ನೀಡಲು ನಿರ್ಧರಿಸಲಾಗಿದೆ. ರಾಮ ಮಂದಿರ ನಿರ್ಮಾಣದಲ್ಲಿ ರಾಜ್ಯ ಅಷ್ಟೇ ಅಲ್ಲದೇ ದೇಶದ ಜನರ ಸೇವೆ ಇದೆ. 1992 ಕರ ಸೇವೆಯಲ್ಲಿ ಕರ್ನಾಟಕದ ಸಾವಿರಾರು ಜನ ಪಾಲ್ಗೊಂಡಿದ್ದರು. ಕಾನೂನು ಹೋರಾಟದಲ್ಲಿ ರಾಜ್ಯದ ಹೋರಾಟದಲ್ಲಿ ಪಾಲ್ಗೊಂಡಿದ್ದರು.


ಇದನ್ನೂ ಓದಿ: Sonia Gandhi: ರಿಲ್ಯಾಕ್ಸ್ ಮೂಡ್​ನಲ್ಲಿ ಸೋನಿಯಾ ಗಾಂಧಿ; ಭೀಮನಕೊಲ್ಲಿಯ ಮಾದೇಶ್ವರ ದೇವಾಲಯಕ್ಕೆ ಭೇಟಿ


ನನಗೂ ರಾಮನ ಸೇವೆ ಮಾಡಲು ಒಂದು ಅವಕಾಶ ಸಿಕ್ಕಿದೆ


ಉಡುಪಿ ಪೇಜಾವರ ಮಠದ ಶ್ರಿಗಳು ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಗುಮ್ಮಜ್ ಬಿದ್ದ ಬಳಿಕ ಮೂರ್ತಿಪೂಜೆ ಸರಿಯಾಗಿ ನಡೆಯುತ್ತದೆ ಎನ್ನುವ ಖಾತರಿ ಪಡಿಸಿ ಅಲ್ಲಿಂದ  ಪೇಜಾವರ ಶ್ರೀಗಳು ಹೋರಟ್ಟಿದ್ದರು. ಟ್ರಸ್ಟ್ ನಲ್ಲಿ ಈಗೀನ ಉಡುಪಿಯ ವಿಶ್ವಪ್ರಸನ್ನ ತೀರ್ಥರು ಟ್ರಸ್ಟಿರಗಳಲ್ಲಿ ಒಬ್ಬರು ಇದ್ದಾರೆ. ರಾಮ ಮಂದಿರದ ಬುನಾದಿಗೆ ಕರ್ನಾಟಕದ ಗ್ರೈನೆಟ್ ಕಲ್ಲನ್ನು ಬಳಸಲಾಗಿದೆ. ನನಗೂ ರಾಮನ ಸೇವೆ ಮಾಡಲು ಒಂದು ಅವಕಾಶ ಸಿಕ್ಕಿದೆ ಎಂದರು.


3200 ಕೋಟಿ ರೂಪಾಯಿ ದೇಣಿಗೆ ಹಣ ಬಂದಿದೆ


ಮಂದಿರ ನಿರ್ಮಾಣಕ್ಕಾಗಿ ನಿಧಿ ಸಮರ್ಪಣಾ ಅಭಿಯಾನವನ್ನು ಇಡೀ ದೇಶದಲ್ಲಿ ನಡೆಸಲಾಗಿದೆ. ದೇಶದಲ್ಲಿ 3200 ಕೋಟಿ ರೂಪಾಯಿ ಹಣ ದೇಣಿಗೆ ರೂಪದಲ್ಲಿ ಬಂದಿದೆ. ಮಂದಿರ ನಿರ್ಮಾಣಕ್ಕೆ ಬೇಕಾದ ಎಲ್ಲಾ ಸೌಕರ್ಯ ನಮ್ಮ ಬಳಿ ಇದೆ. ಶೀಘ್ರದಲ್ಲಿಯೇ ದೇವಸ್ಥಾನ ನಿರ್ಮಾಣ ಕಾರ್ಯ ಪೂರ್ಣಗೊಳಿಸಲು ಎಲ್ಲಾ ರೀತಿಯ ಪ್ರಯತ್ನ ನಡೆದಿದೆ ಎಂದರು.

Published by:ಪಾವನ ಎಚ್ ಎಸ್
First published: