ಪುನೀತ್ ರಾಜ್​ಕುಮಾರ್ ಭೌತಿಕವಾಗಿ ದೂರವಾಗಿ 5 ತಿಂಗಳು: ಕುಟುಂಬದಿಂದ ಸಮಾಧಿಗೆ ಪೂಜೆ, RGV ನಮನ

ಪುನೀತ್ ರಾಜ್​ಕುಮಾರ್ ಅವರನ್ನು ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಎರಡು ಬಾರಿ ಭೇಟಿಯಾಗಿದ್ದೆ. ಅವರ ವಿಶಾಲ ಹೃದಯದ ಅತ್ಯಂತ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು ಎಂದು ಆರ್​ಜಿವಿ ನುಡಿದರು.

ಡಾ. ಪುನೀತ್ ರಾಜ್‌ಕುಮಾರ್

ಡಾ. ಪುನೀತ್ ರಾಜ್‌ಕುಮಾರ್

 • Share this:
  ಅಭಿಮಾನಿಗಳ ಪಾಲಿನ ಅಪ್ಪು  (Appu) ಪುನೀತ್ ರಾಜ್​ಕುಮಾರ್ (Puneeth Rajkumar) ಭೌತಿಕವಾಗಿ ನಮ್ಮಿಂದ ದೂರವಾಗಿ ಇಂದಿಗೆ 5 ತಿಂಗಳು. ನೋಡನೋಡುತ್ತಿದ್ದಂತೆ ಐದು ತಿಂಗಳು ಕಳೆದೇ ಹೋಗಿದೆ. ಈ ನಿಟ್ಟಿನಲ್ಲಿ ಪುನೀತ್ ರಾಜ್​ಕುಮಾರ್ ಅವರ ಪತ್ನಿ ಅಶ್ವಿನಿ, ಮಗಳು ವಂದಿತಾ, ಅಣ್ಣ ರಾಘವೇಂದ್ರ ರಾಜ್​ಕುಮಾರ್ (Raghavendra Rajkumar) ಬೆಂಗಳೂರಿನ ಕಂಠೀರವ ಸ್ಟೂಡಿಯೋದಲ್ಲಿರುವ (Kanteerava Studio) ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಅಲ್ಲದೇ ಬಾಲಿವುಡ್ ಮತ್ತು ಟಾಲಿವುಡ್​ನ ಪ್ರಸಿದ್ಧ ಚಲನಚಿತ್ರ ನಿರ್ದೆಶಕ ರಾಮ್ ಗೋಪಾಲ್ ವರ್ಮಾ (Ram Gopal Varma) ಸಹ ಪುನೀತ್ ರಾಜ್​ಕುಮಾರ್ ಅವರ ಸಮಾಧಿಯ ದರ್ಶನ ಪಡೆದು ಅವರಿಗೆ ಗೌರವ ಸೂಚಿಸಿದರು.

  ಜೊತೆಗೆ ಪಾರ್ವತಮ್ಮ ರಾಜ್​ಕುಮಾರ್ ಅವರ ಸಮಾಧಿಯನ್ನೂ ರಾಮ್ ಗೋಪಾಲ್ ವರ್ಮಾ ದರ್ಶನ ಮಾಡಿ ಗೌರವ ಸಲ್ಲಿಸಿದ್ದಾರೆ.

  Ram Gopal Varma visited Puneeth Rajkumar grave Puneeth done 5th month pooja
  ಆರ್​ಜಿವಿ ಪುನೀತ್ ಸಮಾಧಿ ಬಳಿ


  ಪುನೀತ್ ರಾಜ್​ಕುಮಾರ್ ಅವರನ್ನು ಕಿಲ್ಲಿಂಗ್ ವೀರಪ್ಪನ್ ಸಿನಿಮಾ ಶೂಟಿಂಗ್ ಸಂದರ್ಭದಲ್ಲಿ ಎರಡು ಬಾರಿ ಭೇಟಿಯಾಗಿದ್ದೆ. ಅವರ ವಿಶಾಲ ಹೃದಯದ ಅತ್ಯಂತ ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು. ಅವರು ಕೇವಲ ಒಳ್ಳೆಯ ನಟರೊಬ್ಬರೇ ಆಗಿರಲಿಲ್ಲ, ಅವರ ಉತ್ತಮ ಮನುಷ್ಯನೂ ಆಗಿದ್ದರು ಎಂದು ರಾಮ್ ಗೋಪಾಲ್ ವರ್ಮಾ ಸಂತಾಪ ಮಿಡಿದರು.

  ಇದನ್ನೂ ಓದಿ: Puneeth Rajkumar: ನಾಳೆ ಅಧಿಕೃತವಾಗಿ ಅಪ್ಪು ಪ್ರತಿಮೆ ಲೋಕಾರ್ಪಣೆ! ಉಪ್ಪಿ ಜೊತೆ ಜೇಮ್ಸ್​ ನೋಡಿ ಮತ್ತೆ ಶಿವಣ್ಣ ಭಾವುಕ

  ಡೇಂಜರಸ್ ಅನ್ನೋ‌ ಸಿನಿಮಾದ ಪ್ರಮೋಶನ್ ಗಾಗಿ‌  ರಾಮ್​ ಗೋಪಾಲ್ ವರ್ಮಾ ಬೆಂಗಳೂರಿಗೆ ಆಗಮಿಸಿದ್ದಾರೆ. ಪುನೀತ್ ರಾಜ್​ಕುಮಾರ್ ಅವರ ಸಮಾಧಿಗೆ ರಾಮ್ ಗೋಪಾಲ್ ವರ್ಮಾ  ನಮಸ್ಕರಿಸಿದ್ದಾರೆ. ಪುನೀತ್ ಸಮಾಧಿ ಜೊತೆಗೆ ರಾಜ್ ಕುಮಾರ್ ಹಾಗೂ ಪಾರ್ವತಮ್ಮ ರಾಜ್‌ಕುಮಾರ್ ಸಮಾಧಿಗೂ ನಮಸ್ಕಾರ ಮಾಡಿದ್ದಾರೆ ರಾಮ್​ ಗೋಪಾಲ್ ವರ್ಮಾ.  ಪುನೀತ್ ನಿವಾಸಕ್ಕೂ ಭೇಟಿ ನೀಡಿ ಆರ್ ಜಿವಿ ಸಾಂತ್ವನ  ಹೇಳಲಿದ್ದಾರೆ ಎಂದು ವರದಿಯಾಗಿದೆ.

  ತಮಿಳುನಾಡು ಜಾತ್ರೆಯಲ್ಲೂ ಪವರ್​ಸ್ಟಾರ್​!
  ತಮಿಳುನಾಡಿನ ದಕ್ಷಿಣ ಜಿಲ್ಲೆಗಳಲ್ಲಿ ಮುರುಗ ದೇವರಿಗೆ ನಡೆದುಕೊಳ್ಳುವುದು ಸಾಮಾನ್ಯ. ಮುರುಗನಿಗೆ ಹೀಗೆ ಸಿಡಿ ಮಾದರಿಯಲ್ಲಿ ದೇಹಕ್ಕೆ ಇಕ್ಕಳಗಳನ್ನು ಸಿಕ್ಕಿಕೊಂಡು ದೇವರ ಆಭರಣಗಳನ್ನು ಹೊತ್ತು ಬರುವುದು ಸಂಪ್ರದಾಯ.

  ಈ ಬಾರಿಯೂ ಮುರುಗ ದೇವರ ಪೂಜಾರಿ ದೇಹಕ್ಕೆ ಇಕ್ಕಳ ಚುಚ್ಚಿಸಿಕೊಂಡು ಸಿಡಿ ಏರಿ, ದೇವರ ಬಹು ತೂಕದ ಆಭರಣಗಳ ಗಂಟನ್ನು ನೇತು ಹಾಕಿಕೊಂಡು ಜೊತೆಗೆ ಪುನೀತ್ ರಾಜ್‌ಕುಮಾರ್ ಚಿತ್ರವನ್ನೂ ಹಿಡಿದುಕೊಂಡು ದೇವಸ್ಥಾನಕ್ಕೆ ಹೋಗಿದ್ದಾರೆ. ಈ ಘಟನೆಯ ವಿಡಿಯೋ ಇದೀಗ ಬಹಳ ವೈರಲ್ ಆಗಿದೆ.

  ಎಂದಿಗೂ ನಮ್ಮ ಜೊತೆಯಲ್ಲೇ ಇದ್ದಾರೆ
  ಪುನೀತ್​​ ರಾಜ್​ಕುಮಾರ್​ ಅವರ ಹುಟ್ಟುಹಬ್ಬವನ್ನು ಮಾರ್ಚ್ 17ರಂದು ಅವರ ಅಭಿಮಾನಿಗಳು ನೋವಿನಲ್ಲೇ ಆಚರಿಸಿದ್ದಾರೆ. ಅಪ್ಪು ಇಲ್ಲದೇ ಹೋದರೂ, ಎಂದಿಗೂ ನಮ್ಮ ಜೊತೆಯಲ್ಲೇ ಇದ್ದಾರೆ ಅನ್ನೋ ಮನಸ್ಥಿತಿಯಲ್ಲಿ ಹುಟ್ಟಿದ ಹಬ್ಬವನ್ನು ಆಚರಿಸಿದ್ದಾರೆ. ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬ, ಆದರೆ, ಇನ್ನೂ ರಾಜ್ಯದಲ್ಲಿ ಆ ಸಂಭ್ರಮ ಮನೆಮಾಡಿದೆ. ಅಪ್ಪು ಹೆಸರಿನಲ್ಲಿ ಪ್ರತಿನಿತ್ಯ ಅನ್ನ ದಾಸೋಹ ಕಾರ್ಯಕ್ರಮಗಳು ನಡೆಯುತ್ತಲೇ ಇವೆ. ಹೀಗೆ ಮಾರ್ಚ್ 20ರಂದು ಬಿಎಂಎಫ್​ ಸ್ಟೇಷನ್​ ಜಿಮ್​​ ವತಿಯಿಂದ ಅಪ್ಪು ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗಿದೆ.

  ಜೇಮ್ಸ್​​ ಸಿನಿಮಾ ನೋಡಿದ ಶಿವಣ್ಣ, ಉಪೇಂದ್ರ ಸಾಥ್​
  ಮಾರ್ಚ್ 17ರಂದು ರಿಲೀಸ್​ ಆಗಿದ್ದ ಜೇಮ್ಸ್​​ ಸಿನಿಮಾವನ್ನು ಶಿವಣ್ಣ ಮೈಸೂರಿನಲ್ಲಿ ಅಂದೇ ನೋಡಿ ಅಪ್ಪು ನೆನೆದು ಕಣ್ಣೀರಿಟ್ಟಿದ್ದರು. ಇಂದು ಶಿವಣ್ಣ ದಂಪತಿ ಮತ್ತೆ ಜೇಮ್ಸ್​ಸಿನಿಮಾವನ್ನು ನೋಡಿದ್ದಾರೆ. ಬೆಂಗಳೂರಿನ ತ್ರಿವೇಣಿ ಚಿತ್ರಮಂದಿರದಲ್ಲಿ ಸಿನಿಮಾ ನೋಡಿದ್ದಾರೆ. ಶಿವಣ್ಣನಿಗೆ ರಿಯಲ್​ ಸ್ಟಾರ್​ ಉಪೇಂದ್ರ ಸಾಥ್​ ನೀಡಿದ್ದಾರೆ. ಇದೇ ವೇಳೆ ನಿರ್ಮಾಪಕ ಕಿಶೋರ್​ ಹಾಗೂ ನಿರ್ದೇಶಕ ಚೇತನ್​ ಕೂಡ ಹಾಜರಿದ್ದರು. ತೆರೆ ಮೇಲೆ ಅಪ್ಪು ನೋಡಿ ಶಿವಣ್ಣ, ಉಪೇಂದ್ರ ಮತ್ತೆ ಭಾವುಕರಾದರು.
  Published by:guruganesh bhat
  First published: