ಯುವ ಕಾಂಗ್ರೆಸ್​ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಪದಗ್ರಹಣ; ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುವಂತೆ ಕೈ ನಾಯಕರ ಕಿವಿಮಾತು

Raksha Ramaiah: ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನ ನಾವು ಸದ್ಬಳಕೆ ಮಾಡಿಕೊಳ್ಳಬೇಕು. ಶ್ರಮವಿದ್ದರೆ ಮಾತ್ರ ಫಲ.

ರಕ್ಷಾ ರಾಮಯ್ಯ ಪದಗ್ರಹಣ ಸಮಾರಂಭ

ರಕ್ಷಾ ರಾಮಯ್ಯ ಪದಗ್ರಹಣ ಸಮಾರಂಭ

 • Share this:
  ಬೆಂಗಳೂರು (ಆ. 13): ರಾಜ್ಯ ಯುವ ಕಾಂಗ್ರೆಸ್​ ಅಧ್ಯಕ್ಷರಾಗಿ ಇಂದು ರಕ್ಷಾ ರಾಮಯ್ಯ ಅಧಿಕಾರ ಸ್ವೀಕರಿಸಿದರು. ನಗರದ ಚೌಡಯ್ಯ ಹಾಲ್​ನಲ್ಲಿ ನಡೆದ ಈ ಸಮಾರಂಭದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿಕೆ ಶಿವಕುಮಾರ್​, ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ನಾಯಕರು, ಎಐಸಿಸಿ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು. ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ, ಯುವ ಅಧ್ಯಕ್ಷರಿಗೆ ಅನೇಕ ಸಲಹೆ ನೀಡಿದರು. ಯುವಕರು ವೈಚಾರಿಕತೆ ತಿಳಿದುಕೊಳ್ಳಬೇಕು. ಕಾಂಗ್ರೆಸ್ ಸಿದ್ದಾಂತ ತಿಳಿದುಕೊಳ್ಳಬೇಕು. ಯಾಕೆ ಕಾಂಗ್ರೆಸ್ ಗೆ ಬಂದಿದ್ದೇವೆ ಅಂತ ತಿಳಿದುಕೊಳ್ಳಬೇಕು. ಕೆಲಸ ಇಲ್ಲದೇ ಬಂದಿದ್ದೇವಾ? ಯಾಕೆ ಬಿಜೆಪಿ ಹೋಗಿಲ್ಲಾ..? ಯಾಕೆ ಜೆಡಿಎಸ್ ಹೋಗಿಲ್ಲ ಎಂಬುದರ ಕುರಿತು ಚಿಂತಿಸಬೇಕು. ನೀವು ಕಾಂಗ್ರೆಸ್​​ಗೆ ಒಂದಿರುವ ಕಾರಣ ಎಂದರೆ ಇಲ್ಲಿ ಸಾಮಾಜಿಕ ನ್ಯಾಯ ಇದೆ ಎಂಬ ಕಾರಣಕ್ಕೆ. ಇದೇ ಕಾರಣಕ್ಕೆ ನೀವು ಇಲ್ಲಿಗೆ ಬಂದಿದ್ದೀರಾ ಎಂದು ಮನವರಿಕೆ ಮಾಡಿದರು.

  ಇದೇ ವೇಳೆ ರಕ್ಷಾ ರಾಮಯ್ಯಗೆ ಶುಭ ಹಾರೈಸಿ ಮಾತನಾಡಿದ ಅವರು, ಯುವಕರ ಮೇಲೆ‌ ನೀರಿಕ್ಷೆ ಜಾಸ್ತಿ ಇರುತ್ತದೆ. ಅದನ್ನು ಹುಸಿ ಮಾಡದೆ ಕೆಲಸ ಮಾಡಬೇಕು. ಅಧಿಕಾರ ಸಿಕ್ಕುವುದು ಮಜಾ ಮಾಡಲಿಕ್ಕಲ್ಲ. ಪದಾಧಿಕಾರಿ ಆಗಿದ್ದೇವೆ ಅಂದರೆ ಅದು ಜವಾಬ್ದಾರಿ. ರಕ್ಷಾ ರಾಮಯ್ಯ ಅಧ್ಯಕ್ಷ ಆಗಿದ್ದು ದೊಡ್ಡ ಜವಾಬ್ದಾರಿ. ಎಲ್ಲರಿಗೂ ಈ ದೇಶದಲ್ಲಿ ಅಧಿಕಾರ ಸಿಗಲ್ಲ. ಕೆಲವರಿಗೆ ಮಾತ್ರ ಅವಕಾಶ ಸಿಗುತ್ತದೆ. ಅವಕಾಶ ಸಿಕ್ಕ ಮೇಲೆ ಅಹಂ ಪಡಬಾರದು ಎಂದು ಕಿವಿ ಮಾತು ಹೇಳಿದರು.

  ಇದನ್ನು ಓದಿ: ಅವರ ಥರ ಕಮಿಟ್ಮೆಂಟ್ ಯಾರಿಗೂ ಇಲ್ಲ: ಸಿದ್ದರಾಮಯ್ಯರನ್ನ ಹೊಗಳಿದ ಬಿಜೆಪಿ ಶಾಸಕ

  ಕಾಂಗ್ರೆಸ್​​ ಬ್ರಿಟಿಷ್ ರನ್ನು ಓಡಿಸಿ ಸ್ವತಂತ್ರ ತಂದಿದ್ದು. ಗಾಂಧಿಜೀ ನೇತೃತ್ವದಲ್ಲಿ ಸ್ವತಂತ್ರಕ್ಕೆ ಹೋರಾಟ ಮಾಡಿದ್ದಾರೆ. ತ್ಯಾಗ ಬಲಿದಾನ ಮಾಡಿದ್ದಾರೆ. ಅವರಂತೆ ಮಹಾನ್​ ನಾಯಕರಾಗಲು ನಮಗೆ ಸಾಧ್ಯವಿಲ್ಲ. ಅವರು ಯಾವ ಮಾರ್ಗದಲ್ಲಿ ನಡೆದರೋ ಹಾಗೇ ನಾವು ನಡೆಯಬೇಕು ಎಂದು ಯುವ ನಾಯಕರ ಹುರಿದುಂಬಿಸಿದರು

  ಇದೇ ವೇಳೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಅವರು, ಆರ್ ಎಸ್ ಎಸ್ ನವರು ದೇಶದ ಹಾಗೂ ಯುವಕರನ್ನ ದಾರಿ ತಪ್ಪಿಸುತ್ತಲೇ ಬಂದಿದ್ದಾರೆ. ಬಿಜೆಪಿಗರು ಆರ್ ಎಸ್ ಎಸ್ ಸ್ವತಂತ್ರ ಹೋರಾಟದಲ್ಲಿ ಭಾಗಿಯಾಗಿಲ್ಲ. ತ್ಯಾಗ ಬಲಿದಾನ ಮಾಡಿಲ್ಲ. ಕೇವಲ ಕಾಂಗ್ರೆಸ್ ಮಾತ್ರ ತ್ಯಾಗ ಮಾಡಿದ್ದು. ಕಾಂಗ್ರೆಸ್ಸಿಗ ಎನ್ನುವುದೇ ಒಂದು ಹೆಮ್ಮೆ. ಈ ಹೆಮ್ಮೆಯನ್ನು ನೀವು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಮಾತನಾಡಿ, ಕೃಷ್ಣಾ ಆಳ್ವಾರ್ ನಿಮಗೆ ನಿರ್ದೇಶನ ನೀಡಿದ್ದಾರೆ. ಅವರ ಹಾದಿಯನ್ನು ನೀವು ಅನಸರಿಸಿದರೆ ಸಾಕು. ಅವರು ಹೇಳಿದಂತೆ ಕೆಲಸ ಮಾಡಿದರೆ ಸಾಕು. ನಿಮ್ಮ ಹಿಂದೆ ನಾವು ನಿಲ್ಲುತ್ತೇವೆ. ಅಧ್ಯಕ್ಷ ಸ್ಥಾನ ಎಲ್ಲರಿಗೂ ಸಿಗುವುದಿಲ್ಲ. ಸಿಕ್ಕ ಅವಕಾಶವನ್ನ ನಾವು ಸದ್ಬಳಕೆ ಮಾಡಿಕೊಳ್ಳಬೇಕು. ಶ್ರಮವಿದ್ದರೆ ಮಾತ್ರ ಫಲ. ಇದಕ್ಕೆ ನಿಮಗೆ ಉತ್ತಮ ಉದಾಹರಣೆ ಶ್ರೀನಿವಾಸ್ ಎಂದರು.

  ಬಿಜೆಪಿ ನಾಯಕರ ಬಗ್ಗೆ ನೀವು ಮಾತನಾಡಬೇಡಿ. ಅವರ ಬಗ್ಗೆ ನಾವು ಸಮರ್ಥವಾಗಿ ಮಾತನಾಡುತ್ತೇವೆ. ಸಿಟಿ ರವಿ, ಈಶ್ವರಪ್ಪ ಹಾಗೂ ಬಿಜೆಪಿ ಸಂಸ್ಕೃತಿ ಜನರಿಗೆ ನಾವು ತಲುಪಿಸುತ್ತೇವೆ. ನೀವು ಜನರನ್ನ ಕಾಂಗ್ರೆಸ್ ಛತ್ರಿಯ ಕೆಳಗೆ ಕರೆದುಕೊಂಡು ಬನ್ನಿ. ನೀವು ನೇರವಾಗಿ ವಿಧಾನ ಸೌಧಕ್ಕೆ ಬರಬೇಕು ಎಂದುಕೊಳ್ಳಬೇಡಿ. ನಾನು ಸಹ ಜಿಲ್ಲಾ ಪಂಚಾಯತ್ ಇಂದ ಬಂದವನು. ನೆಹರು ಸಹ ಮುನಿಸಿಪಲ್ ಅಧ್ಯಕ್ಷರು ಆಗಿದ್ದರು. ಒಂದೊಂದೇ ಮೆಟ್ಟಿಲು ಹತ್ತಿ ಮೇಲೆ ಬರಬೇಕು. ಆಗ ನಿಮಗೆ ಬೇರು ಗಟ್ಟಿಯಾಗುತ್ತದೆ. ನಿಮ್ಮ ಕೆಲಸದ ಮೇಲೆ ನಿಮ್ಮ ಭವಿಷ್ಯ ನಿರ್ಧಾರ ಆಗುತ್ತದೆ ಎಂದು ತಿಳಿಸಿದರು
  Published by:Seema R
  First published: