• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Raksha Bandhan: ಮಕ್ಕಳ ಕೈಯಿಂದ ರಾಖಿ ತೆಗಿಸಿದ ಶಿಕ್ಷಕರು, ಮಂಗಳೂರಿನ ಶಾಲೆಯಲ್ಲಿ ವಿವಾದ!

Raksha Bandhan: ಮಕ್ಕಳ ಕೈಯಿಂದ ರಾಖಿ ತೆಗಿಸಿದ ಶಿಕ್ಷಕರು, ಮಂಗಳೂರಿನ ಶಾಲೆಯಲ್ಲಿ ವಿವಾದ!

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಜೀವನದುದ್ದಕ್ಕೂ ತನ್ನ ರಕ್ಷಣೆಯನ್ನು ಮಾಡು ಅಂತಾ ತಂಗಿಯು ಅಣ್ಣನಿಗೆ ಪ್ರೀತಿಯಿಂದ ರಾಖಿ ಕಟ್ಟುತ್ತಾಳೆ. ಆದರೆ ಈ ರಕ್ಷಾಬಂಧನ ವಿಚಾರದಲ್ಲಿ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ವಿವಾದ ನಡೆದಿದೆ.

 • Share this:

ಅಣ್ಣ ತಂಗಿಯ (Brother Sister) ಬಾಂಧವ್ಯದ ರಕ್ಷಾಬಂಧನ (Raksha Bandhan) ಹಬ್ಬಕ್ಕೆ ಭಾರತದಲ್ಲಿ ಶ್ರೇಷ್ಠ ಸ್ಥಾನವಿದೆ. ಜೀವನದುದ್ದಕ್ಕೂ ತನ್ನ ರಕ್ಷಣೆಯನ್ನು ಮಾಡು ಅಂತಾ ತಂಗಿಯು ಅಣ್ಣನಿಗೆ ಪ್ರೀತಿಯಿಂದ ರಾಖಿ ಕಟ್ಟುತ್ತಾಳೆ. ನಿನ್ನೆ ದೇಶಾದ್ಯಂತ ಸಂಭ್ರಮದ ರಕ್ಷಾಬಂಧನ ಹಬ್ಬವನ್ನೂ ಆಚರಿಸಿಯಾಗಿದೆ. ಪ್ರಧಾನಿ ನರೇಂದ್ರ ಮೋದಿ (PM Narendra Modi) ಕೂಡ ಮಕ್ಕಳಿಂದ (Children) ರಕ್ಷೆ ಕಟ್ಟಿಸಿಕೊಂಡಿದ್ದಾರೆ. ಆದರೆ ಈ ರಕ್ಷಾಬಂಧನ ವಿಚಾರದಲ್ಲಿ ಕರಾವಳಿ ಜಿಲ್ಲೆಯಾದ ದಕ್ಷಿಣ ಕನ್ನಡದಲ್ಲಿ ವಿವಾದ (Controversy) ನಡೆದಿದೆ. ಶಾಲೆಗೆ (School) ರಕ್ಷೆ ಕಟ್ಟಿಕೊಂಡು ಬಂದ ವಿದ್ಯಾರ್ಥಿಗಳ ಕೈಯಿಂದ ರಕ್ಷಾ ದಾರವನ್ನು ತೆಗಿಸಲಾಗಿದೆ. ಕೊನೆಗೆ ಪೋಷಕರು ಶಾಲೆಗೆ ಎಂಟ್ರಿಕೊಟ್ಟು ಆಕ್ರೋಶ ಹೊರಹಾಕಿ ಅಧ್ಯಾಪಕರಿಗೆ ರಾಖಿ ಕಟ್ಟಿದ್ದಾರೆ. ಬಳಿಕ ವಿವಾದ ಸುಖಾಂತ್ಯಗೊಂಡಿದೆ.


ಭಾರತದಲ್ಲಿ ಸಹೋದರ ಮತ್ತು ಸಹೋದರಿಯ ನಡುವಿನ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ರಕ್ಷಾ ಬಂಧನ. ಶ್ರಾವಣ ಮಾಸದ ಹುಣ್ಣಿಮೆಯ ದಿನದಂದು ಈ ಹಬ್ಬವನ್ನು ಆಚರಿಸಲಾಗುತ್ತದೆ. ಕಳೆದ 3 ದಿನಗಳಿಂದಲೂ ದೇಶದಲ್ಲಿ ರಕ್ಷಾ ಬಂಧನ ಹಬ್ಬದ ಸಂಭ್ರಮ ಮನೆಮಾಡಿದೆ.


ಮಂಗಳೂರಿನ ಶಾಲೆಯಲ್ಲಿ ರಾಖಿ ವಿವಾದ!


ಮಂಗಳೂರು ನಗರ ಹೊರವಲಯದ ಕಾಟಿಪಳ್ಳದ ಇನ್ ಫ್ಯಾಂಟ್ ಮೇರಿ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ಈ ವಿವಾದ ನಡೆದಿದೆ. ನಿನ್ನೆ ನಾಡಿನೆಲ್ಲೆಡೆ ರಾಖಿ ಹಬ್ಬ ನಡೆದಿದ್ದು, ಈ ಶಾಲೆಯ ಹಲವು ಮಕ್ಕಳು ಕೂಡ ರಕ್ಷಾಬಂಧನ ಆಚರಿಸಿ ರಾಖಿ ಕಟ್ಟಿ ಸಂಭ್ರಮಿಸಿದ್ದರು. ಇಂದು ರಕ್ಷಾಬಂಧನ ಧರಿಸಿಯೇ ಶಾಲೆಗೆ ಬಂದಿದ್ದರು. ಇದು ಶಿಕ್ಷಕರ ಕಣ್ಣು ಕೆಂಪಗಾಗಿಸಿತ್ತು.


Raksha Bandhan Controversy at Mangaluru school parents oppose
ಮಂಗಳೂರಿನ ಶಾಲೆಯಲ್ಲಿ ರಕ್ಷಾಬಂಧನ ವಿವಾದ


ರಾಖಿ ತೆಗಿಸಿದ ಶಿಕ್ಷಕರು!


ನಿನ್ನೆ ರಾಖಿ ಹಬ್ಬ ಮುಗಿಸಿ ಶುಕ್ರವಾರ ಶಾಲೆಗೆ ಬಂದ ಮಕ್ಕಳಿಗೆ ಶಿಕ್ಷಕರು ಗದರಿದ್ದಾರೆ. ಅಧ್ಯಾಪಕರು ಮಕ್ಕಳ ಕೈಯಿಂದ ರಾಖಿಯನ್ನು ತೆಗಿಸಿದ್ದಾರೆ. ಶಿಕ್ಷಕರೇ ಕತ್ತರಿ ತೆಗೆದುಕೊಂಡು ಬಂದು ರಾಖಿ ಕಟ್​ ಮಾಡಿದ್ದಾರೆ ಅಂತಾ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.


ಇದನ್ನೂ ಓದಿ: ಮುಖದ ಮೇಲಿನ ಕಲೆಗಳಿಗೆ ನೊಂದು ಯುವತಿ ಆತ್ಮಹತ್ಯೆಗೆ ಶರಣು


ಶಾಲೆಗೆ ಮುತ್ತಿಗೆ ಹಾಕಿದ ಪೋಷಕರು!


ಮಕ್ಕಳ ಕೈಯಲ್ಲಿದ್ದ ರಾಖಿ ಬಿಚ್ಚಿಸಿದ್ದಕ್ಕೆ ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಘಟನೆ ಖಂಡಿಸಿ ಪೋಷಕರು ಶಾಲೆಗೆ ಮುತ್ತಿಗೆ ಹಾಕಿದ್ದಾರೆ. ಎಲ್ಲಾ ಮಕ್ಕಳು ಸಮನ್ವಯತೆಯಿಂದ ಪಾಠ ಕಲಿಯುತ್ತಿದ್ದಾರೆ. ಅಂತಹುದರಲ್ಲಿ ಶಿಕ್ಷಕರೇ ಈ ರೀತಿ ಮಾಡಿದರೆ ಹೇಗೆ ಅಂತಾ ಹೆತ್ತವರು ಪ್ರಶ್ನಿಸಿದ್ದಾರೆ.


ಫ್ರೆಂಡ್​ಶಿಪ್ ಬ್ಯಾಂಡ್ ಕಟ್ಟಿಸ್ತಾರೆ!


ಇನ್ ಫ್ಯಾಂಟ್ ಮೇರಿ ಆಂಗ್ಲಮಾಧ್ಯಮ ಪ್ರೌಢಶಾಲೆಯ ನಿಯಮದ ಪ್ರಕಾರ ಮಕ್ಕಳು ರಾಖಿ ಕಟ್ಟಿ ಸ್ಕೂಲ್​ಗೆ ಬರುವಂತಿಲ್ಲವಂತೆ. ಆದರೆ ಪೋಷಕರು ಇದಕ್ಕೆ ಕಿಡಿಕಾರಿದ್ದಾರೆ. ಶಾಲೆಯಲ್ಲಿ ಫ್ರೆಂಡ್​ಶಿಪ್ ಬ್ಯಾಂಡ್​ ಕಟ್ಟಿ ಸ್ನೇಹಿತರ ದಿನ ಆಚರಿಸ್ತಾರೆ. ಅದಕ್ಕೆ ನಾವೇನು ಆಕ್ಷೇಪ ವ್ಯಕ್ತಪಡಿಸಿಲ್ಲ. ಈಗ ರಾಖಿಯನ್ನು ಕಟ್ ಮಾಡಿದ್ಯಾಕೆ ಅಂತಾ ಆಕ್ರೋಶ ಹೊರ ಹಾಕಿದ್ದಾರೆ.ಕ್ಷಮೆ ಕೋರಿದ ಶಿಕ್ಷಕರು


ರಕ್ಷಾಬಂಧನ ವಿವಾದ ಜೋರಾಗ್ತಿದ್ದಂತೆ ನೂರಾರು ಪೋಷಕರು ಶಾಲೆಗೆ ದೌಡಾಯಿಸಿದರು. ಶಿಕ್ಷಕರ ವಿರುದ್ಧ ಹೆತ್ತವರು ಆಕ್ರೋಶ ಹೊರಹಾಕಿದ್ರು. ಶಿಕ್ಷಕರನ್ನು ತರಾಟೆಗೆ ತೆಗೆದುಕೊಂಡರು. ಪೋಷಕರ ತೀವ್ರ ಆಕ್ರೋಶಕ್ಕೆ ಮಣಿದ ಅಧ್ಯಾಪಕರು ಕೊನೆಗೆ ಕ್ಷಮೆ ಕೋರಿದರು.


ಇದನ್ನೂ ಓದಿ: ಆ್ಯಸಿಡ್ ದಾಳಿಗೆ ಒಳಗಾಗಿದ್ದ ಸಂತ್ರಸ್ತೆ ಡಿಸ್ಚಾರ್ಜ್; ನ್ಯೂಸ್ 18 ಜೊತೆ ಎಕ್ಸ್​ಕ್ಲೂಸಿವ್ ಮಾತು


ಫಾದರ್​ ಕೈಗೆ ರಾಖಿ ಕಟ್ಟಿದ ಪೋಷಕರು!


ಅಧ್ಯಾಪಕರು ಪೋಷಕರ ಬಳಿ ಕ್ಷಮೆ ಕೇಳಿದ ಬಳಿ ವಿವಾದ ತಣ್ಣಗಾಯ್ತು. ಕೊನೆಗೆ ಪೋಷಕರೆಲ್ಲಾ ಸೇರಿ ಶಾಲೆಯ ಫಾದರ್​ ಕೈಗೆ ರಕ್ಷಾ ಬಂಧನ ಕಟ್ಟಿದರು. ಫಾದರ್​ ಕೂಡ ನಗುತ್ತಲೇ ರಾಖಿ ಕಟ್ಟಿಸಿಕೊಂಡರು. ರಕ್ಷಾಬಂಧನ ವಿವಾದ ಸುರತ್ಕಲ್ ಪೊಲೀಸರ ಮಧ್ಯಪ್ರವೇಶದಿಂದ ಸುಖಾಂತ್ಯವಾಯ್ತು.

top videos


  ಶಾಲೆಯಲ್ಲಿ ಮಕ್ಕಳ ನಡುವೆ ಸಾಮರಸ್ಯ, ಸಹೋದರತ್ವದ ಭಾವ ಮೂಡಿಸಬೇಕು. ಅದು ಶಿಕ್ಷಕರ ಜವಾಬ್ದಾರಿಯೂ ಹೌದು. ಆದರೆ ಈ ವಿಚಾರದಲ್ಲೂ ವಿವಾದ ಎದ್ದಿರೋದು ಬೇಸರದ ಸಂಗತಿ.

  First published: