• Home
  • »
  • News
  • »
  • state
  • »
  • Rakesh Tikait: ಪ್ಲ್ಯಾನ್ ಮಾಡಿದ್ದು ಒಂದು ಆಗಿದ್ದು ಮತ್ತೊಂದು; ಟಿಕಾಯತ್​ಗೆ ಮಸಿ ಹಾಕಿದ ಆರೋಪಿಗಳು ಹೇಳಿದ್ದೇನು?

Rakesh Tikait: ಪ್ಲ್ಯಾನ್ ಮಾಡಿದ್ದು ಒಂದು ಆಗಿದ್ದು ಮತ್ತೊಂದು; ಟಿಕಾಯತ್​ಗೆ ಮಸಿ ಹಾಕಿದ ಆರೋಪಿಗಳು ಹೇಳಿದ್ದೇನು?

ರಾಕೇಶ್ ಟಿಕಾಯತ್​

ರಾಕೇಶ್ ಟಿಕಾಯತ್​

ಪ್ರಕರಣದ ಅಸಲಿಯತ್ತು ಬಯಲಾಗಿದ್ದು, ಪ್ರಕರಣದಲ್ಲಿ ಉಮಾ ದೇವಿ ಎಂಬಾಕೆಯೂ ಪೊಲೀಸರ ಕೈಗೆ ಲಾಕ್ ಆಗಿದ್ದಾಳೆ. ವಿಚಾರಣೆ ವೇಳೆ ಮೂವರು ಆರೋಪಿಗಳು ಸಾಕಷ್ಟು ವಿಚಾರಗಳನ್ನು ಪೊಲೀಸರ ಮುಂದೆ ಬಾಯ್ಬುಟ್ಟಿದ್ದಾರೆ.

  • Share this:

ಬೆಂಗಳೂರು (ಜೂ 6): ಫಾರ್ಮರ್ ನ್ಯಾಷನಲ್ ಲೀಡರ್ ರಾಕೇಶ್ ಟಿಕಾಯತ್ (Rakesh Tikait) ಮೇಲೆ ಮಸಿ ಹಾಕಿ ಹಲ್ಲೆ ಪ್ರಕರಣದಲ್ಲಿ ಸಾಕಷ್ಟು ಟ್ವಿಸ್ಟ್ (Twist) ಪಡೆದುಕೊಳ್ತಿದೆ. ಮೂವರು ಆರೋಪಿಗಳನ್ನು (Accused)  ಐದು ದಿನಗಳ ಕಾಲ ವಿಚಾರಣೆ ನಡೆಸಿರೋ ಪೊಲೀಸರಿಗೆ ಅವ್ರು ಈ ಕೃತ್ಯ ಯಾಕ್ ಎಸಗಿದ್ರು ಅನ್ನೋದು ಬಯಲಾಗಿದೆ. ಪ್ಲ್ಯಾನ್​ ಮಾಡಿದ್ದೇ ಬೇರೆ ಆಗಿದ್ದೇ ಬೇರೆ ಅನ್ನೋ ಶಾಕಿಂಗ್ (Shocking) ವಿಚಾರವೂ ಹೊರ ಬಿದ್ದಿದ್ದು ಕೇಸ್ ನಲ್ಲಿ ಲೇಡಿ ಲೀಡರ್ (Lady Leader) ಒಬ್ಬಾಕೆ ಅರೆಸ್ಟ್ (Arrest) ಆಗಿದ್ದಾಳೆ.


ಟಾರ್ಗೆಟ್ ಇದ್ದಿದ್ದೇ ಒಂದು ಬಟ್ ಅಲ್ಲಿ ಆಗಿದ್ದೇ ಮತ್ತೊಂದು!


ಇನ್ನು ಆರೋಪಿಗಳನ್ನ ವಿಚಾರಣೆ ಮಾಡಿದಾಗ ಅವರು ಮಾಡಿದ್ದ ಪ್ಲ್ಯಾನ್ ಒಂದಾದ್ರೆ ಅಲ್ಲಿ ಆಗಿದ್ದು ಮತ್ತೊಂದು ಅನ್ನೋದು ತನಿಖೆ ವೇಳೆ ಬಯಲಾಗಿದೆ. ಇನ್ನು ವಿಚಾರಣ ವೇಳೆ ಯಾರಿಗೆ ಮಸಿ ಹಾಕೋ ಪ್ಲ್ಯಾನ್ ಇತ್ತು ಅನ್ನೋದನ್ನೂ ಆರೋಪಿಗಳು ಬಾಯಿಬಿಟ್ಡಿದ್ದಾರೆ.
ಇನ್ನು ರಾಜ್ಯದಲ್ಲಿ ಸಾಕಷ್ಟು ಸದ್ದು ಮಾಡಿದ್ದ ರಾಕೇಶ್ ಟಿಕಾಯತ್ ಮೇಲೆ ಮಸಿ ಹಾಕಿ ಹಲ್ಲೆ ಪ್ರಕರಣ ಒಂದಲ್ಲ ಒಂದು ತಿರುವು ಪಡೆದುಕೊಳುತ್ತಾ ಹೋಗ್ತಾ ಇತ್ತು.


ರಾಕೇಶ್ ಟಿಕಾಯತ್ ಮೇಲೆ ಮಸಿ ಹಾಕಿ ಹಲ್ಲೆಗೆ ಯತ್ನ


ಬೆಂಗಳೂರಿನ ಗಾಂಧಿಭವನದಲ್ಲಿ ಪ್ರೆಸ್ ಮೀಟ್ ಮಾಡೋಕೆ ಬಂದಿದ್ದ ರಾಕೇಶ್ ಟಿಕಾಯತ್ ಮೇಲೆ ಮಸಿ ಹಾಕಿ ಹಲ್ಲೆಗೆ ಯತ್ನಿಸಿದ್ದ ಭರತ್, ಪ್ರದೀಪ್, ಶಿವಕುಮಾರ್ ನನ್ನ ಹೈಗ್ರೌಂಡ್ಸ್ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದಾರೆ. ಅವ್ರ ವಿಚಾರಣೆ ವೇಳೆ ಕೋಡಿಹಳ್ಳಿ ಚಂದ್ರಶೇಖರ್ ಗೆ ಮಸಿ ಹಾಕೋ‌ಫ್ಲಾನ್ ಹಾಕಿದ್ದಾಗಿ ಆರೋಪಿಗಳು ಬಾಯಿಬಿಟ್ಟಿದ್ದಾರೆ. ಆದ್ರೆ ಅವತ್ತು ಪ್ರೇಸ್ ಮೀಟ್ ಗೆ ಕೋಡಿಹಳ್ಳಿ ಬಂದಿರಲಿಲ್ಲ ಹಾಗಾಗಿ ಟಿಕಾಯತ್ ಗೆ ಮಸಿ‌ ಹಾಕಿರೋದಾಗಿ ಬಾಯಿಬಿಟ್ಟಿದ್ದಾರೆ.


ಇದನ್ನೂ ಓದಿ: Hassan: ಶಾಲೆಯಲ್ಲಿ ಸೌಟು ಹಿಡಿದು ಶಿಕ್ಷಕಿಯರ ಫೈಟ್; ನಮ್ಮ ಮಕ್ಕಳ TC ಕೊಟ್ಬಿಡಿ ಅಂತಿದ್ದಾರೆ ಪೇರೆಂಟ್ಸ್​


ಉಮಾ ದೇವಿ ಎಂಬಾಕೆ ಪೊಲೀಸರ ಕೈಗೆ ಲಾಕ್


ಇನ್ನು ಪ್ರಕರಣದ ಅಸಲಿಯತ್ತು ಬಯಲಾಗಿದ್ದು, ಪ್ರಕರಣದಲ್ಲಿ ಉಮಾ ದೇವಿ ಎಂಬಾಕೆಯೂ ಪೊಲೀಸರ ಕೈಗೆ ಲಾಕ್ ಆಗಿದ್ದಾಳೆ.
ವಿಚಾರಣೆ ವೇಳೆ ಮೂವರು ಆರೋಪಿಗಳು ಸಾಕಷ್ಟು ವಿಚಾರಗಳನ್ನು ಪೊಲೀಸರ ಮುಂದೆ ಬಾಯ್ಬುಟ್ಟಿದ್ದಾರೆ. ಅಸಲು ನಾವು ಮಸಿ ಹಾಕೋ ಫ್ಲಾನ್‌ ಮಾಡಿಕೊಂಡಿದ್ದು ಕೋಡಿಹಳ್ಳಿ ಚಂದ್ರಶೇಖರ್ ಗೆ ಅನ್ನೋ ವಿಚಾರ ಬಾಯಿಬಿಟ್ಟಿದ್ದಾರೆ.


ಕೋಪಗೊಂಡಿದ್ದು ಕೃತ್ಯದ  ಪ್ಲ್ಯಾನ್


ಆದ್ರೆ ಅಲ್ಲಿ ಕೋಡಿಹಳ್ಳಿ ಬರದಿದ್ದಾಗ ಟಿಕಾಯತ್ ಗೆ ಮಸಿ ಹಾಕಿದ್ದಾಗಿ ಹೇಳಿದ್ದಾರೆ. ಕಾರಣ ಕೇಳಿದ್ರೆ ರೈತರ ಹೋರಾಟದ ಹೆಸ್ರಲ್ಲಿ ಕೋಡಿಹಳ್ಳಿ ಕೋಟಿ ಕೋಡಿ ಲೂಟಿ ಮಾಡಿದ್ದಾರೆ ಅಂತಾ ಕೋಪಗೊಂಡಿದ್ದು ಕೃತ್ಯದ  ಪ್ಲ್ಯಾನ್​ ಮಾಡಿದ್ದಾಗಿ ಹೇಳಿದ್ದಾರೆ. ‌ಇನ್ನು ಟಿಕಾಯತ್ ಗೆ ಮಸಿ ಹಾಕಿದ್ರೆ ನ್ಯಾಷನಲ್ ಲೆವೆಲ್ ಅಲ್ಲಿ ಸುದ್ದಿ ಆಗ್ತೀವಿ ಅನ್ನೋ ಪ್ಲ್ಯಾನ್ ಮಾಡಿದ್ರು.


ಇದನ್ನೂ ಓದಿ: Bengaluru: ಹೆಂಡ್ತಿ ದುಡ್ಡಲ್ಲಿ ಗಂಡನ ಪೋಲಿಯಾಟ; ಪತಿಯ ಮೊಬೈಲ್ ನೋಡಿದ ಪತ್ನಿ ಫುಲ್ ಶಾಕ್!


ಸರ್ಚ್ ವಾರೆಂಟ್ ತಗೊಂಡು ಮನೆ ಸರ್ಚ್


ಆರೋಪಿಗಳ ವಿಚಾರಣೆ ವೇಳೆ ಉಮಾ ದೇವಿ ಹೆಸರು ಬಯಲಾಗಿದೆ. ತನ್ನ ಸಹೋದರ ಶಿವಕುಮಾರ್ ನ ಹಲ್ಲೆ ಮಾಡೋಕೆ ಕರೆತಂದಿದ್ದೇ ಈ ಉಮಾದೇವಿ ಅನ್ನೋದು ಗೊತ್ತಾಗಿದೆ. ಸರ್ಚ್ ವಾರೆಂಟ್ ತಗೊಂಡು ಮನೆ ಸರ್ಚ್ ಮಾಡಿದಾಗ ಸುಮಾರು 9 ಲಾಂಗು ಮಚ್ಚುಗಳು ಸಿಕ್ಕಿದ್ದು ಆರ್ಮ್ಸ್ ಆಕ್ಟ್ ಅಡಿಯಲ್ಲಿ ಹೌಗ್ರೌಂಡ್ಸ್ ಪೊಲೀಸರು ತನಿಖೆ ಮಾಡ್ತಾ ಇಇದ್ದಾರೆವಾಯ್ಎ
ಲ್ಲಾ ಆರೋಪಿಗಳನ್ನು ಹೈಗ್ರೌಂಡ್ಸ್ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸ್ತಿದ್ದಾರೆ. ಇನ್ನೂ ತನಿಖೆ‌ ವೇಳೆ ಯಾವೆಲ್ಲ ವಿಚಾರಗಳು ಹೊರ ಬರುತ್ವೋ ಕಾದು ನೋಡಬೇಕು.

Published by:Pavana HS
First published: