HOME » NEWS » State » RAJYOTSAVA AWARD FOR ACHIEVEMENT OF ILLITERATE RAMANNA BYATI SESR SKG

ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಯವರ ಅಮೋಘ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ

ಕೇವಲ ನಾಲ್ಕನೇಯ ತರಗತಿ ಓದಿರುವ ರಾಮಣ್ಣ ಬ್ಯಾಟಿ  ಸಾಹಿತ್ಯ ರಚನೆ ಮಾಡುವಾಗ ತಮ್ಮದೆಯಾದ ಶೈಲಿಯಲ್ಲಿ ಮೊದಲು ಅದನ್ನು ಬರೆಯುತ್ತಾರೆ.

news18-kannada
Updated:October 28, 2020, 10:03 PM IST
ಅನಕ್ಷರಸ್ಥ ಸಾಹಿತಿ ರಾಮಣ್ಣ ಬ್ಯಾಟಿಯವರ ಅಮೋಘ ಸಾಧನೆಗೆ ರಾಜ್ಯೋತ್ಸವ ಪ್ರಶಸ್ತಿ
ರಾಮಣ್ಣ ಬ್ಯಾಟಿ
  • Share this:
ಗದಗ (ಅ.28): ಸರ್ಕಾರ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡಿದೆ. ಈ ಪ್ರಶಸ್ತಿ ವಿಜೇತರ ಪಟ್ಟಿಯಲ್ಲಿ ಗದಗದ ಬೇಟಗೇರಿಯ ರಾಮಣ್ಣ ಬ್ಯಾಟಿಗೂ ಕೂಡ ಪ್ರಶಸ್ತಿ ಒಲಿದು ಬಂದಿದೆ. ಪ್ರಶಸ್ತಿ ಪ್ರಕಟಿಸುತ್ತಿದ್ದಂತೆ, ಗದಗ-ಬೆಟಗೇರಿ ಅವಳಿ ನಗರದಲ್ಲಿ ಸಂಭ್ರಮ ಮನೆ ಮಾಡಿತ್ತು.  ಸಾಧನೆಗೆ ಮಾನದಂಡಗಳಿಲ್ಲ ಎಂಬುದನ್ನು ಅವರು ತೋರಿಸಿದ್ದಾರೆ. ಸಾಧನೆ ಎಂಬುವುದು ಯಾರ ಸ್ವತ್ತು ಅಲ್ಲ, ಅದು ಸಾಧಿಸಿದವರ ಸ್ವತ್ತು ಎನ್ನುವಂತೆ ಅನಕ್ಷರಸ್ಥ ಕವಿ ಈಗ ಇಡೀ ಕರುನಾಡು ಮೆಚ್ಚುವಂತ ಕೆಲಸ ಮಾಡಿದ್ದಾರೆ. ಸಾಹಿತ್ಯ ವಲಯದಲ್ಲಿ ಪ್ರಶಸ್ತಿ ಪಡೆದಿರುವ ರಾಮಣ್ಣ ಬ್ಯಾಟಿ ಓದಿರುವುದು ಕೇವಲ ನಾಲ್ಕನೇ ಕ್ಲಾಸ್​ ಎಂದರೇ ಎಲ್ಲರಲ್ಲಿಯೂ ಅಚ್ಚರಿ ಮೂಡುತ್ತದೆ. ಆದರೆ, ಅದು ನಿಜ. ತಮ್ಮ ಅಮೋಘ ಶಬ್ಧ ಸಂಪತ್ತು, ನೆನಪಿನ ಶಕ್ತಿ, ವಿಷಯದ ಬಗ್ಗೆ ಇರುವ ಅವರ ಆಸಕ್ತಿಗೆ ಈಗ ಈ ಪ್ರಶಸ್ತಿ ಸಿಕ್ಕಿದೆ.

ಕೇವಲ ನಾಲ್ಕನೇಯ ತರಗತಿ ಓದಿರುವ ರಾಮಣ್ಣ ಬ್ಯಾಟಿ  ಸಾಹಿತ್ಯ ರಚನೆ ಮಾಡುವಾಗ ತಮ್ಮದೆಯಾದ ಶೈಲಿಯಲ್ಲಿ ಮೊದಲು ಅದನ್ನು ಬರೆಯುತ್ತಾರೆ. ಇದಾದ ಬಳಿಕ  ಅದನ್ನು ಬೇರೆಯವರ ಹತ್ತಿರ ಬರೆಸುತ್ತಾರೆ. ಈ ಮೂಲಕ ಸಾಹಿತ್ಯ ಚಟುವಟಿಕೆಯಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಅವರು ಬರೆದ ಗ್ರಂಥಗಳು, ದೇವರ ಮಹಾತ್ಮೆ, ಕಥೆ, ಪುಸ್ತಕ ರೂಪದಲ್ಲಿ ಪ್ರಕಟಗೊಂಡಿವೆ. ಅವರ ಅಮೋಘವಾದ ನೆನಪಿಗೆ ಶಕ್ತಿಯಿಂದ ಸಾಹಿತ್ಯ ಲೋಕದಲ್ಲಿ ಸಾಧನೆ ಮಾಡಿದ್ದು, ಅವರಿಗೆ ಈವಾಗ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಬಂದಿರೋದು ಸಂತಸ ತಂದಿದೆ ಎನ್ನುತ್ತಾರೆ

ಡಾ: ಬಿ ಆರ್ ಅಂಬೇಡ್ಕರ್ ಪುರಾಣ, ಸಿದ್ದಲಿಂಗ ಕಾವ್ಯಸುಧೆ, ಶ್ರೀ ಗೌರಿ ಶಂಕರ ಚರಿತಾಮೃತ, ಬಾದಾಮಿ ಬನಶಂಕರಿ ಮಹಾತ್ಮೆ, ಶ್ರೀ ಶಿವಾನಂದ ಪುರಾಣ, ಸಂತ ಸೇವಾಲಾಲ್ ಪುರಾಣಗಳನ್ನು ಸೇರಿದಂತೆ 50 ಕ್ಕೂ ಗ್ರಂಥಗಳು ರಚನೆ ಮಾಡಿದ್ದಾರೆ. ಭಾಮಿನಿ ಷಟ್ಪದಿ, ಚೌಪದಿ ಕಾವ್ಯ, ಸೇರಿದಂತೆ ಗದ್ಯ ಪದ್ಯ ರೂಪದಲ್ಲಿ ಗ್ರಂಥಗಳನ್ನು ರಚನೆ ಮಾಡಿದ್ದಾರೆ.

ಇದನ್ನು ಓದಿ: ತಿಂಗಳೊಳಗೆ ಲಿಂಗಾಯತ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡದಿದ್ದರೆ ಪಾದಯಾತ್ರೆ; ಬಸವಜಯ ಮೃತ್ಯುಂಜಯ ಸ್ವಾಮೀಜಿ ಎಚ್ಚರಿಕೆ

ತೋಂಟದಾರ್ಯ ಲಿಂಗೈಕೈ ಶ್ರೀ ಸಿದ್ದಲಿಂಗ ಶ್ರೀಗಳ ಮಾರ್ಗದರ್ಶನದಲ್ಲಿ ಸಾಹಿತ್ಯ ಲೋಕದಲ್ಲಿ ದೊಡ್ಡದೊಂದು ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಸರ್ಕಾರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರೋದು ಗದಗ- ಬೆಟಗೇರಿ ಅವಳಿ ನಗರಕ್ಕೆ ಸಂತಸ ತಂದಿದೆ ಅಂತಾರೆ ಸ್ಥಳೀಯ ನಿವಾಸಿ ಮಂಜುನಾಥ ಮುಳಗುಂದ.

ಸಾಹಿತ್ಯ ಕೃಷಿ ಮಾಡೋದು ಅಷ್ಟೊಂದು ಸುಲಭದ ಕೆಲಸವಲ್ಲ. ಆದರೆ ಈ ಅಪರೂಪದ ರಾಮಣ್ಣ ಬ್ಯಾಟಿ ಅವರು ಅಕ್ಷರ ಜ್ಞಾನ ಇರದಿದ್ದರು. ಅವರ ಅಪಾರವಾದ ಜ್ಞಾನ ಸಂಪತ್ತಿನಿಂದ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದಾರೆ. ಅವರ ಸಾಧನೆಯನ್ನು ಗುರುತಿಸಿ ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸುತ್ತಿರುವುದು ಜಿಲ್ಲೆಯ ಜನರಿಗೆ ಸಂತಸ ಇಮ್ಮಡಿಗೊಳಿಸಿದೆ.
Published by: Seema R
First published: October 28, 2020, 10:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories