• Home
  • »
  • News
  • »
  • state
  • »
  • Rajyotsava Award: ದತ್ತಣ್ಣ, ಅವಿನಾಶ್ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ನವೆಂಬರ್ 1ರಂದೇ ಸಾಧಕರಿಗೆ ಸನ್ಮಾನ

Rajyotsava Award: ದತ್ತಣ್ಣ, ಅವಿನಾಶ್ ಸೇರಿ 67 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ, ನವೆಂಬರ್ 1ರಂದೇ ಸಾಧಕರಿಗೆ ಸನ್ಮಾನ

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ

ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ

ಈ ಬಾರಿ 67 ಸಾಧಕರನ್ನು ಗುರುತಿಸಿ ಈ ಬಾರಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗ್ತಿದೆ. ನವೆಂಬರ್ 1 ರಂದು ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

  • News18 Kannada
  • Last Updated :
  • Karnataka, India
  • Share this:

ರಾಜ್ಯೋತ್ಸವ ಪ್ರಶಸ್ತಿಯ (Rajyotsava Award) ಅಂತಿಮ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈ ಬಾರಿ 67 ಸಾಧಕರನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡಲಾಗ್ತಿದೆ. ನವೆಂಬರ್ 1 ರಂದು (November) ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.  ಹಿರಿಯ ನಟರಾದ ದತ್ತಣ್ಣ (Dattanna), ಅವಿನಾಶ್​ (Avinash), ಮುಖ್ಯಮಂತ್ರಿ ಚಂದ್ರು  ಅವರಿಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.


2022 ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ


ಚಿತ್ರನಟರಾದ ದತ್ತಾತ್ರೇಯ (ದತ್ತಣ್ಣ), ಅವಿನಾಶ್‌, ಸಿಹಿಕಹಿ ಚಂದ್ರು, ಸೋಲಿಗರಲ್ಲಿ ಸಹಕಾರ ಸಂಸ್ಥೆಗಳ ಕುರಿತು ಅರಿವು ಮೂಡಿಸಿದ ಸೋಲಿಗರ ಮಾದಮ್ಮ, ರಾಮನಗರದ ಸಾಲುಮರದ ನಿಂಗಣ್ಣ, ಉಡುಪಿ ಜಿಲ್ಲೆಯ ದೈವ ನರ್ತಕ ಗುಡ್ಡ ಪಾಣಾರ, ಯಕ್ಷಗಾನ ಕಲಾವಿದರಾದ ಎಂ. ಪ್ರಭಾಕರ ಜೋಷಿ, ಸುಬ್ರಹ್ಮಣ್ಯ ಧಾರೇಶ್ವರ, ಪತ್ರಕರ್ತರಾದ ಎಚ್‌.ಆರ್‌. ಶ್ರೀಶ, ಜಿ.ಎಂ. ಶಿರಹಟ್ಟಿ ಪುರಸ್ಕೃತರಲ್ಲಿ ಸೇರಿದ್ದಾರೆ.


Rajyotsava Award Final List Released; Award presentation on November 1
ರಾಜ್ಯೋತ್ಸವ ಪ್ರಶಸ್ತಿ ಪಟ್ಟಿ


ಸಂಕೀರ್ಣ ಕ್ಷೇತ್ರ :


ಸುಬ್ಬರಾಮ ಶೆಟ್ಡಿ - ಬೆಂಗಳೂರು


ವಿದ್ವಾನ್ ಗೋಪಾಲ ಕೃಷ್ಣ ಶರ್ಮಾ - ಬೆಂಗಳೂರು


ಶ್ರೀಮತಿ ಸೋಲಿಗರ ಮಾದಮ್ಮ - ಚಾಮರಾಜನಗರ


ಕೃಷಿ‌ ಕ್ಷೇತ್ರ


ಗಣೇಶ್ ತಿಮ್ಮಯ್ಯ - ಕೊಡಗು


ಚಂದ್ರಶೇಖರ್ ನಾರಯಣಪುರ - ಚಿಕ್ಕಮಗಳೂರು


ವಿಜ್ಞಾನ ತಂತ್ರಜ್ಞಾನ


ಕೆ.ಶಿವನ್ - ಬೆಂಗಳೂರು


ಡಾ.ಡಿ.ಆರ್.ಬಳೂರಗಿ - ರಾಯಚೂರು


ಇದನ್ನೂ ಓದಿ: Mann Ki Baat: ಕನ್ನಡಿಗನಿಗೆ ನಮೋ ಎಂದ ಪ್ರಧಾನಿ, ಬೆಂಗಳೂರಿನ ಪರಿಸರ ಪ್ರೇಮಿ ಬಗ್ಗೆ ಮನ್ ಕಿ ಬಾತ್‌ನಲ್ಲಿ ಮೆಚ್ಚುಗೆ!


ಪತ್ರಿಕೋದ್ಯಮ


ಎಚ್ ಆರ್ ಶ್ರೀಶಾ - ಬೆಂಗಳೂರು


ಜಿ.ಎಂ.ಶಿರಹಟ್ಟಿ ‌- ಗದಗ


ಸೈನಿಕ ಕ್ಷೇತ್ರ


ಸು‌ಬೇದಾರ್ ಬಿ.ಕೆ ಕುಮಾರಸ್ವಾಮಿ - ಬೆಂಗಳೂರು


ಯಕ್ಷಗಾನ ಕ್ಷೇತ್ರ


ಸುಬ್ರಹ್ಮಣ್ಯ ಧಾರೇಶ್ವರ - ಉತ್ತರ ಕನ್ನಡ


ಸಿಎಂ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ಶುಕ್ರವಾರ ಪ್ರಶಸ್ತಿ ಆಯ್ಕೆ ಕುರಿತಂತೆ ಅಂತಿಮ ಸಭೆ ನಡೆದಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಆಯ್ಕೆ ಸಲಹಾ ಸಮಿತಿ ನಾನಾ ಕ್ಷೇತ್ರಗಳ ಗಣ್ಯರನ್ನು 1:2 ಅನುಪಾತದಲ್ಲಿ 134 ಜನರ ಪಟ್ಟಿ ಸಿದ್ಧಪಡಿಸಿ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿತ್ತು.


ಸಲಹಾ ಸಮಿತಿ ನೇಮಕ ಮಾಡಿದ್ರು


2022ನೇ ಸಾಲಿನ ಕನ್ನಡ ರಾಜೋತ್ಸವ ಪ್ರಶಸ್ತಿಗೆ ಅರ್ಹ ಮಹನೀಯರನ್ನುಆಯ್ಕೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಯ್ಕೆ ಸಲಹಾ ಸಮಿತಿಯನ್ನು ರಚಿಸಿತ್ತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಪ್ರಸಕ್ತ ಸಾಲಿನ ರಾಜೋತ್ಸವ ಪ್ರಶಸ್ತಿಗೆ ನಾನಾ ಕ್ಷೇತ್ರದ ಸಾಧಕರನ್ನು ಆಯ್ಕೆ ಮಾಡಲು ಸಮಿತಿಯನ್ನು ರಚಿಸಲಾಗಿತ್ತು.


ಇದನ್ನೂ ಓದಿ: Puneeth Rajkumar: ಕರ್ನಾಟಕ ರತ್ನ ಪ್ರದಾನ ಮಾಡಲು ಬರ್ತಿದ್ದಾರೆ ರಜನಿಕಾಂತ್! ಕರುನಾಡಿನ ಬಗ್ಗೆ ಸೂಪರ್‌ ಸ್ಟಾರ್ ಹೇಳಿದ್ದೇನು?

 ತಲಾ ₹ 5 ಲಕ್ಷ ನಗದು, 25 ಗ್ರಾಂ. ಚಿನ್ನ


ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಹತ್ತು ಸಂಘ ಸಂಸ್ಥೆಗಳಿಗೆ ವಿಶೇಷ ಪ್ರಶಸ್ತಿ ಪ್ರಕಟಿಸಲಾಗಿದೆ. ಪುರಸ್ಕೃತರಿಗೆ ತಲಾ ₹ 5 ಲಕ್ಷ ನಗದು, 25 ಗ್ರಾಂ. ಚಿನ್ನ ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುವುದು ಎಂದು ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.


ಪುನೀತ್ ರಾಜಕುಮಾರ್​ಗೆ ಕರ್ನಾಟಕ ರತ್ನ


ಸ್ಯಾಂಡಲ್​ವುಡ್​ ನಟ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ಕನ್ನಡ ರಾಜ್ಯೋತ್ಸವ ದಿನದಂದು ಪ್ರದಾನ ಮಾಡುವುದಾಗಿ ಹಿಂದೆಯೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಈ ಕಾರ್ಯಕ್ರಮಕ್ಕೆ ಜೂನಿಯರ್ ಎನ್‍ಟಿಆರ್ (NTR) ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಅಲ್ಲದೇ ಸೂಪರ್ ಸ್ಟಾರ್ ರಜನಿಕಾಂತ್  (Rajinikanth) ಸಹ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ.


ಕರ್ನಾಟಕ ರತ್ನ ಪ್ರಶಸ್ತಿ ಪ್ರದಾನ ಕಾರ್ಯಕ್ರಮ


ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ಸರ್ಕಾರ ತೀರ್ಮಾನಿದೆ. ಅದರ ಕನ್ನಡ ರಾಜ್ಯೋತ್ಸವದ ದಿನ. ವಿಧಾನಸೌಧದಲ್ಲಿ ಸಕಲ ತಯಾರಿಗಳು ನಡೆದಿವೆ. ಕಾರ್ಯಕ್ರಮಕ್ಕೆ ಸರ್ಕಾರ ಹಲವು ಗಣ್ಯರಿಗೆ  ಆಹ್ವಾನ ನೀಡಿದೆ. ಜೂನಿಯರ್ ಎನ್‍ಟಿಆರ್ ಅವರು ಕಾರ್ಯಕ್ರಮಕ್ಕೆ ಬರಲು ಒಪ್ಪಿದ್ದಾರೆ. ಈಗ ರಜನಿಕಾಂತ್ ಸಹ ಕಾರ್ಯಕ್ರಮಕ್ಕೆ ಬರುವುದಾಗಿ ಸಿಎಂ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

Published by:ಪಾವನ ಎಚ್ ಎಸ್
First published: