Rajyotsava award 2020: ಸುಪ್ರೀಂ ಕೋರ್ಟ್ ಹಿರಿಯ ನ್ಯಾಯವಾದಿ ಕೆ.ಎನ್. ಭಟ್ ಸೇರಿದಂತೆ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗರಿ

Kannada Rajyotsava Award 2020: ನ್ಯಾಯವಾದಿ ಕೆ.ಎನ್. ಭಟ್ ಅಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಧಾರವಾಡದ ಪ್ರೋ.ಸಿ.ಪಿ. ಸಿದ್ಧಾಶ್ರಮ, ಸಂಗೀತ ಕ್ಷೇತ್ರದ ಸಾಧನೆಗಾಗಿ ರಾಯಚೂರಿನ ಹಂಬಯ್ಯ ನೂಲಿ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಚಿಕ್ಕಮಗಳೂರಿನ ಎಂ.ಎನ್. ಷಡಕ್ಷರಿ ಸೇರಿದಂತೆ ಒಟ್ಟು 65 ಜನ ಸಾಧಕರಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.

ಪ್ರಾತಿನಿಧಿಕ ಚಿತ್ರ.

ಪ್ರಾತಿನಿಧಿಕ ಚಿತ್ರ.

 • Share this:
  ಬೆಂಗಳೂರು (ಅಕ್ಟೋಬರ್​ 28); ರಾಜ್ಯ ಸರ್ಕಾರ ಪ್ರತಿಷ್ಠಿತ ರಾಜ್ಯೋತ್ಸವ ಪ್ರಶಸ್ತಿ - 2020 ಪಟ್ಟಿಯನ್ನು ಪ್ರಕಟಿಸಿದ್ದು ಈ ವರ್ಷದ ಸಾಲಿನಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ರಾಮನ ದೇವಾಲಯ ನಿರ್ಮಾಣವಾಗಬೇಕು ಎಂದು ಸತತ ಮೂರು ವರ್ಷ ಅಲಹಾಬಾದ್​ ಹೈಕೋರ್ಟ್​ನಲ್ಲಿ ವಾದ ಮಂಡಿಸಿದ್ದ ಹಿರಿಯ ನ್ಯಾಯವಾದಿ ಕೆ.ಎನ್. ಭಟ್ ಸೇರಿದಂತೆ 65 ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಲಾಗಿದೆ.

  ಈ ಪ್ರಶಸ್ತಿಗೆ 130 ಜನ ಸಾಧಕರು ಅರ್ಜಿ ಸಲ್ಲಿಸಿದ್ದರು. ಆದರೆ,. ಈ ಪೈಕಿ 26 ವಿವಿಧ ಕ್ಷೇತ್ರಗಳಲ್ಲಿ ಅನೇಕ ಸಾಧನೆಗಳನ್ನು ಮಾಡಿದ 65 ಜನಸಾಧಕರಿಗೆ ಮಾತ್ರ ಪ್ರಶಸ್ತಿಯನ್ನು ಘೋಷಿಸಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಈ ಸಂಬಂಧ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅಧೀನ ಕಾರ್ಯದರ್ಶಿ ಸುರೇಶಬಾಬು ಇಂದು ಆದೇಶವನ್ನು ಹೊರಡಿಸಿದ್ದಾರೆ.  ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಶತಮಾನಗಳ ಹಳೆಯ ಪ್ರಕರಣ ಎಂದರೆ ರಾಮಜನ್ಮ ಭೂಮಿ ವಿವಾದ. ಈ ವಿವಾದದಲ್ಲಿ ಅಯೋಧ್ಯೆಯ ರಾಮಜನ್ಮ ಭೂಮಿಯಲ್ಲಿ ರಾಮನ ದೇವಾಲಯ ನಿರ್ಮಾಣವಾಗಬೇಕು ಎಂದು ಕೆ.ಎನ್. ಭಟ್ ಅಲಹಾಬಾದ್ ಹೈಕೋರ್ಟ್ ಸತತ ಮೂರು ವರ್ಷಗಳ ಕಾಲ ವಾದ ಮಂಡಿಸಿದ್ದರು. ನಂತರ ಈ ಪ್ರಕರಣ ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಲ್ಪಟ್ಟು ಕೊನೆಗೂ ರಾಮ ಮಂದಿರ ನಿರ್ಮಾಣಕ್ಕೆ ಸುಪ್ರೀಂ ಅನುಮತಿ ನೀಡಿತ್ತು. ಈ ಪ್ರಕರಣದಲ್ಲಿ ಪ್ರಮುಖ ಪಾತ್ರವಹಿಸಿದ್ದ ಹಿಡಿಯ ವಕೀಲ ಕೆ.ಎನ್. ಭಟ್ ಕರ್ನಾಟಕದವರು ಎಂಬುದು ಉಲ್ಲೇಖಾರ್ಹ.

  ಇದನ್ನೂ ಓದಿ : ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಇದೆಯೋ ಇಲ್ಲವೋ?; ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಪ್ರಶ್ನೆ

  ನ್ಯಾಯವಾದಿ ಕೆ.ಎನ್. ಭಟ್ ಅಲ್ಲದೆ, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಸಾಧನೆಗೈದಿರುವ ಧಾರವಾಡದ ಪ್ರೋ.ಸಿ.ಪಿ. ಸಿದ್ಧಾಶ್ರಮ, ಸಂಗೀತ ಕ್ಷೇತ್ರದ ಸಾಧನೆಗಾಗಿ ರಾಯಚೂರಿನ ಹಂಬಯ್ಯ ನೂಲಿ, ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಚಿಕ್ಕಮಗಳೂರಿನ ಎಂ.ಎನ್. ಷಡಕ್ಷರಿ ಸೇರಿದಂತೆ ಒಟ್ಟು 65 ಜನ ಸಾಧಕರಿಗೆ ಈ ಪ್ರಶಸ್ತಿಯನ್ನು ಘೋಷಿಸಲಾಗಿದೆ.
  Published by:MAshok Kumar
  First published: