• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ

Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ

ಮತದಾನ

ಮತದಾನ

ಈ ನಡುವೆ ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ (MLA CT Ravi) ಅವರು ದಿಢೀರ್ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಕೊಠಡಿಗೆ ತೆರಳಿದರು. ಕೂಡಲೇ ಬೈ ಮಿಸ್ಟೇಕ್ ಆಗಿ ಬಂದೆ ಎಂದು ಹೇಳಿ ಹೊರ ಬಂದರು.

  • Share this:

ವಿಧಾನಸಭೆಯಿಂದ ರಾಜ್ಯಸಭೆಗೆ (Rajyasabha Poll) ನಡೆಯುತ್ತಿರುವ ಚುನಾವಣೆ ತೀವ್ರ ಕುತೂಹಲ ಕೆರಳಿಸಿದೆ. ಈಗಾಗಲೇ ಮತದಾನ ಆರಂಭಗೊಂಡಿದ್ದು, ಯಾರು ಯಾರಿಗೆ ವೋಟ್ ಮಾಡ್ತಿದ್ದಾರೆ ಎಂಬ ಟೆನ್ಷನ್ ರಾಜಕೀಯ ಮುಖಂಡರ (Political Leaders) ಮುಖದಲ್ಲಿ ಕಾಣಿಸುತ್ತಿದೆ. ವಿಧಾನಸೌಧದಲ್ಲಿ ಎಲ್ಲ ಶಾಸಕರು ಜಮಾವಣೆಗೊಂಡಿದ್ದು, ಹಕ್ಕು ಚಲಾಯಿಸುತ್ತಿದ್ದಾರೆ. ಈ ನಡುವೆ ಇಂದು ಬೆಳಗ್ಗೆ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಶಾಸಕ ಸಿ.ಟಿ.ರವಿ (MLA CT Ravi) ಅವರು ದಿಢೀರ್ ಅಂತ ವಿಪಕ್ಷ ನಾಯಕ ಸಿದ್ದರಾಮಯ್ಯ (Former CM Siddaramaiah) ಕೊಠಡಿಗೆ ತೆರಳಿದರು. ಕೂಡಲೇ ಬೈ ಮಿಸ್ಟೇಕ್ ಆಗಿ ಬಂದೆ ಎಂದು ಹೇಳಿ ಹೊರ ಬಂದರು. ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸಿ.ಟಿ.ರವಿ, ಇಷ್ಟು ದಿನದ ಕುತೂಹಲಕ್ಕೆ ಇವತ್ತು ತೆರೆ ಬೀಳಲಿದೆ. ಪೊಲಿಟಿಕಲ್ ಸೀಕ್ರೆಟ್ ಹೇಳುವಂತಿಲ್ಲ. ಇಬ್ಬರು ಮೆರಿಟ್ ಮೇಲೆ ಮತ್ತು ಇನ್ನಿಬ್ಬರು ಅದೃಷ್ಟದ ಮೇಲೆ ಗೆಲ್ಲಲಿದ್ದಾರೆ. ಈ ಹಿಂದೆ ಅದೇ ಕೊಠಡಿಗೆ ಹೋಗಿ ಅಭ್ಯಾಸವಾಗಿತ್ತು. ಹಾಗಾಗಿ ಹೋಗಿ ಬಂದೆ ಎಂದು ಸಿದ್ದರಾಮಯ್ಯ ಅವರ ಕೋಣೆಗೆ ತೆರಳಿದ್ದರ ಬಗ್ಗೆ ಸ್ಪಷ್ಟನೆ ನೀಡಿದರು.


ಇನ್ನು ಎಲ್ಲಾ ಶಾಸಕರು ಬಂದು ವೋಟ್ ಹಾಕುತ್ತಿದ್ದಾರೆ. ಸಂಜೆ ವೇಳೆಗೆ ಫಲಿತಾಂಶ ಪ್ರಕಟವಾಗಲಿದೆ. ಮತ ಚಲಾಯಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ನಮ್ಮ ಮೂವರು ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಇದನ್ನೂ ಓದಿ:  HDK v/s Siddaramaiah: ಸಿದ್ದರಾಮಯ್ಯ ಪತ್ರಕ್ಕೆ ಎಚ್‌ಡಿಕೆ ಕಿಡಿಕಿಡಿ, ನಿಮಗೆ ನಾಚಿಕೆ ಆಗ್ಬೇಕು ಅಂತ ವಾಗ್ದಾಳಿ!


ಇದೇನು ಓಲೈಕೆ ರಾಜಕಾರಣ ಅಲ್ಲವೇ..?


ಬಿಜೆಪಿ ನಾಯಕರು ಸಿದ್ದರಾಮಯ್ಯನವರಿಗೆ ಅಡ್ವಾನ್ಸ್ ಕಂಗ್ರಾಜುಲೇಷನ್ ಹೇಳಿದ್ದಾರೆ. ನಮ್ಮ ಮೇಲೆ ಕಾಂಗ್ರೆಸ್ ಅಪಾದನೆ ಮಾಡ್ತಾರೆ. ಆದರೆ ಅಲ್ಪಸಂಖ್ಯಾತರನ್ನು ನಾವು ಕಣಕ್ಕಿಳಿಸಿದ್ರೆ ಓಲೈಕೆ ರಾಜಕಾರಣ ಎನ್ನುತ್ತಾರೆ. ಆದರೆ ಅವರೇ ಎರಡನೇ ಅಭ್ಯರ್ಥಿಯಾಗಿ ಅಲ್ಪಸಂಖ್ಯಾತ ರನ್ನು ಕಣಕ್ಕಿಳಿಸಿದ್ದಾರೆ. ಇದೇನು ಓಲೈಕೆ ರಾಜಕಾರಣ ಅಲ್ಲವೇ..? ಎಂದು ಮಾಜಿ ಸಿಎಂ ಹೆಚ್.ಡಿ . ಕುಮಾರಸ್ವಾಮಿ ಕಿಡಿ ಕಾರಿದ್ದಾರೆ.


ಜಾತ್ಯಾತೀತತೆ ಉಳಿಸುವ ಪ್ರಯತ್ನ ಆಗಬೇಕು ಅಂತಾರೆ. ಅವರೇ ಡೆಮಾಕ್ರಸಿಯನ್ನು ಬಿಜೆಪಿ ಸಹಾಯ ಮಾಡುವ ಮೂಲಕ ನಾಶಮಾಡಿದೆ. ಶ್ರೀನಿವಾಸ್ ಗೌಡರು ಕಾಂಗ್ರೆಸ್ ಗೆ ಹಾಕ್ತೀನಿ ಅಂತ ಹೇಳಿದ್ದಾರೆ. ನಿನ್ನೆ ರಾತ್ರಿ ಕಾಂಗ್ರೆಸ್ ನಾಯಕರ ಜೊತೆ ಡಿನ್ನರ್ ಪಾರ್ಟಿ ಮಾಡಿ ಬ್ರೈನ್ ವಾಶ್ ಮಾಡಿದ್ದಾರೆ ಎಂದು ಕುಮಾರಸ್ವಾಮಿ ಆರೋಪಸಿದರು.


ಶ್ರೀನಿವಾಸ್ ಗೌಡರಿಗೆ ಮತದಾರರೇ ಉತ್ತರ ಕೊಡ್ತಾರೆ


ಶ್ರೀನಿವಾಸ್ ಗೌಡರನ್ನು ಪಕ್ಷದಿಂದ ಉಚ್ಛಾಟನೆ ಮಾಡುವ ವಿಚಾರಕ್ಕೆ ಪ್ರತಿಕ್ರಿಯಿಸಿ,ಇದೆಲ್ಲಾ ಬಹಳ ನಾಟಕೀಯವಾದ ನಿರ್ಧಾರ. ಶ್ರೀನಿವಾಸ್ ಗೌಡರಿಗೆ ಕೋಲಾರ ಕ್ಷೇತ್ರದ ಮತದಾರರೇ ಉತ್ತರ ಕೊಡ್ತಾರೆ ಎಂದರು.


ಶ್ರೀನಿವಾಸ್ ಗೌಡ ಅಡ್ಡ ಮತದಾನ?


ನಜೀರ್ ಅಹಮದ್ ಜೊತೆಯಲ್ಲಿ ಆಗಮಿಸಿದ ಶ್ರೀನಿವಾಸ್ ಗೌಡರು ಅಡ್ಡ ಮತದಾನ ಮಾಡಿದ್ದಾರೆ. ಮತದಾನದ ಬಳಿಕ ಪ್ರತಿಕ್ರಿಯೆ ಕೇಳಲು ಹೋದ ಮಾಧ್ಯಮ ಪ್ರತಿನಿಧಿಗಳಿಗೆ ಅವಾಚ್ಯ ಪದಗಳಿಂದ ನಿಂದಿಸಿದ್ದಾರೆ. ಮತದಾನದ ಬಳಿಕ ಸಿದ್ದರಾಮಯ್ಯ ಅವರನ್ನು ಭೇಟಿಯಾದರು.


ಇದನ್ನೂ ಓದಿ:  Belagavi: ವಾಯುವ್ಯ ಪದವೀಧರ, ಶಿಕ್ಷಕರ ಕ್ಷೇತ್ರದ ಚುನಾವಣೆ- ಕೈ, ಕೇಸರಿ ನಾಯಕರ ಮತಬೇಟೆ ಜೋರು


ಮತದ ಪಾವಿತ್ರತ್ಯೆ ಕಾಪಾಡಿಕೊಂಡಿದ್ದೇನೆ


ಇನ್ನು ಶಾಸಕ ಶಿವಲಿಂಗೇಗೌಡರು ಸಹ ಅಡ್ಡ ಮತದಾನ ಮಾಡುವ ಆತಂಕ ಜೆಡಿಎಸ್ ಗೆ ಇತ್ತು. ಆದ್ರೆ ವೋಟ್ ಮಾಡಿದ ನಂತರ ಮಾತನಾಡಿದ ಶಿವಲಿಂಗೇಗೌಡರು, ನಾನು ಅಡ್ಡ ಮತದಾನ ಮಾಡಿಲ್ಲ. ನನಗೆ ಕುಮಾರಸ್ವಾಮಿ ಮೂರು ನಾಲ್ಕು ಬಾರಿ ಅವಮಾನ ಆಗುವ ರೀತಿ ನಡೆದುಕೊಂಡಿದ್ದಾರೆ. ಆದರೂ ಕ್ಷೇತ್ರದ ಜನ ನನ್ನ ಆರಿಸಿ ಕಳಿಸಿದ್ದಾರೆ. ಮತ ಪವಿತ್ರತೆ ಕಾಪಾಡಿಕೊಂಡಿದ್ದೇನೆ ಎಂದು ಹೇಳಿದರು. ಇದ ವೇಳೆ ಜೆಡಿಎಸ್ ತೊರೆಯುವ ಸುಳಿವು ಸಹ ನೀಡಿದರು.

Published by:Mahmadrafik K
First published: