HDD ಕರೆ ಬೆನ್ನಲ್ಲೇ ಧರ್ಮ ಸಂಕಟದಲ್ಲಿ ಜೆಡಿಎಸ್ ಶಾಸಕರು; ಇತ್ತ ಕಾಂಗ್ರೆಸ್, ಬಿಜೆಪಿಗೆ ಶುರುವಾಯ್ತು ತಲೆನೋವು

ಜೆಡಿಎಸ್ ಶಾಸಕರ ಕುದುರೆ ವ್ಯಾಪಾರ ಆತಂಕ ಎದುರಾಗಿದ್ದು, ಹಾಗಾಗಿ ತಮ್ಮ  ಮತಗಳನ್ನು ಉಳಿಸಿಕೊಳ್ಳಲು ದಳಪತಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆ ಶಾಸಕರಿಗೆ ದೇವೇಗೌಡರು ಕೆರೆ ಮಾಡಿ ಮಾತನಾಡಿದ್ದಾರೆ.

ಮಾಜಿ ಪ್ರಧಾನಿ ದೇವೇಗೌಡ

ಮಾಜಿ ಪ್ರಧಾನಿ ದೇವೇಗೌಡ

  • Share this:
ಜೂನ್ 10ರಂದು ವಿಧಾನಸಭೆಯಿಂದ ರಾಜ್ಯಸಭೆಗೆ ಚುನಾವಣೆಗೆ (Rajyasabha Elections) ನಡೆಯಲಿದೆ. ಮತಗಳ ಕೊರತೆ ನಡುವೆ ಜೆಡಿಎಸ್ (JDS) ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಇತ್ತ ಕಾಂಗ್ರೆಸ್ (Congress) ಎರಡನೇ ಅಭ್ಯರ್ಥಿ ಮತ್ತು ಬಿಜೆಪಿ (BJP)ಅಭ್ಯರ್ಥಿಯನ್ನು ಕಣಕ್ಕಿಳಿಸಿವೆ. ಹಾಗಾಗಿ ರಾಜ್ಯಸಭಾ ಚುನಾವಣೆ ತೀವ್ರ ಕುತೂಹಲವನ್ನುಂಟು ಮಾಡಿದೆ. ಕಾಂಗ್ರೆಸ್ ತಾನು ಜೆಡಿಎಸ್ ಮತಗಳ ಮೇಲೆ ಕಣ್ಣಿಟ್ಟಿರುವ ಬಗ್ಗೆ ಸುಳಿವು ಬಿಟ್ಟುಕೊಟ್ಟಿದೆ. ಇನ್ನೂ ಕಾಂಗ್ರೆಸ್ ಮತ್ತು ಜೆಡಿಎಸ್ ಜಗಳವನ್ನು ಲಾಭವನ್ನಾಗಿ ಮಾಡಿಕೊಳ್ಳಲು ಪ್ಲಾನ್ ಮಾಡಿಕೊಂಡಿದೆ, ಇತ್ತ ಮಾಜಿ ಸಿಎಂ ಸಿದ್ದರಾಮಯ್ಯನವರು (Former CM Siddaramaiah) ಆತ್ಮಸಾಕ್ಷಿ ಮತಗಳು ಕಾಂಗ್ರೆಸ್ ಗೆ ಸಿಗಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಜೆಡಿಎಸ್ ಶಾಸಕರಿಂದ (JDS MLAs) ಅಡ್ಡ ಮತದಾನ ಆಗದಂತೆ ತಡೆಯಲು ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡರೇ (Former PM HD Devegowda) ಕಣಕ್ಕಿಳದಿದ್ದಾರೆ. ರಾಜ್ಯಸಭಾ ಚುನಾವಣೆ ಸಂಬಂಧ ಕ್ರಾಸ್ ವೋಟಿಂಗ್ ಮಾಡಬಹುದಾದ ಎನ್ನಲಾದ  ಶಾಸಕರ ಜೊತೆ ದೇವೇಗೌಡರೇ ಮಾತನಾಡಿರುವ ಮಾಹಿತಿ ನ್ಯೂಸ್ 18 ಕನ್ನಡಕ್ಕೆ ಲಭ್ಯವಾಗಿದೆ.

ಜೆಡಿಎಸ್ ಶಾಸಕರ ಕುದುರೆ ವ್ಯಾಪಾರ ಆತಂಕ ಎದುರಾಗಿದ್ದು, ಹಾಗಾಗಿ ತಮ್ಮ  ಮತಗಳನ್ನು ಉಳಿಸಿಕೊಳ್ಳಲು ದಳಪತಿಗಳು ಮುಂದಾಗಿದ್ದಾರೆ. ಈ ಹಿನ್ನೆಲೆ ಶಾಸಕರಿಗೆ ದೇವೇಗೌಡರು ಕೆರೆ ಮಾಡಿ ಮಾತನಾಡಿದ್ದಾರೆ.

ಜೆಡಿಎಸ್ ಶಾಸಕರಿಗೆ ದೇವೇಗೌಡರ ಸೂಚನೆ

ನಮ್ಮ ಅಭ್ಯರ್ಥಿ ಗೆಲ್ಲದಿದ್ದರೂ ಪರವಾಗಿಲ್ಲ. ಅಡ್ಡ ಮತದಾನ ಆಗಬಾರದು. ಅಡ್ಡ ಮತದಾನವದರೆ ಪಕ್ಷದ ಇಮೇಜಿಗೆ ಡ್ಯಾಮೇಜ್ ಆಗೋ ಸಾಧ್ಯತಗಳಿವೆ. ಅಡ್ಡ ಮತದಾನ ಆಗದಂತೆ ನೋಡಿಕೊಳ್ಳಿ ಎಂದು ಶಾಸಕರಿಗೆ ದೇವೇಗೌಡರು ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ:  Karnataka Politics: ಬಿಜೆಪಿಗೆ ಬಿಸಿತುಪ್ಪವಾದ ಈಶ್ವರಪ್ಪ ಮಾಜಿ ಪಿಎ; ಗೆಲುವಿಗಾಗಿ ಕಮಲ ಹರಸಾಹಸ

ಸಣ್ಣಪುಟ್ಟ ಗೊಂದಲಗಳು, ಅಸಮಾಧಾನಗಳು ಸಹಜ. ಹಾಗಂತ ಪಕ್ಷಕ್ಕೆ ಅನ್ಯಾಯ ಮಾಡಬೇಡಿ. ಮತದಾರರು ಹಾಗೂ ರಾಜ್ಯದ ಜನರ ಮುಂದೆ ವಿಲನ್ ಗಳಾಗಬೇಡಿ. ನನ್ನ ಮರ್ಯಾದೆ ಉಳಿಸಿ ಎಂದು ಶಾಸಕರ ಬಳಿ ದೇವೇಗೌಡರೇ ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

ಸಿಎಂ, ಮಾಜಿ ಸಿಎಂ ಹೇಳಿಕೆ ಬೆನ್ನಲ್ಲೇ HDD ಅಲರ್ಟ್

ವಿಪಕ್ಷ‍ ನಾಯಕ ಸಿದ್ದರಾಮಯ್ಯ ಮಾತ್ರ ಆತ್ಮಸಾಕ್ಷಿ ಮತದ ಹೇಳಿಕೆ ನೀಡುತ್ತಿದ್ದಾರೆ. ನಾವು ಹೇಗೋ ಗೆಲ್ತೀವಿ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಗಳ ಬೆನ್ನಲ್ಲೇ ದೇವೇಗೌಡರು ಅಲರ್ಟ್ ಆಗಿದ್ದಾರೆ.

ಹೆಚ್ ಡಿ ದೇವೇಗೌಡರ ಕರೆ ಬೆನ್ನಲ್ಲೇ ಬಿಜೆಪಿ ಹಾಗೂ ಕಾಂಗ್ರೆಸ್ ಸಖ್ಯದಲ್ಲಿರೋ ಶಾಸಕರಿಗೆ ಧರ್ಮಸಂಕಟ ಶುರುವಾಗಿದೆ. ದೇವೇಗೌಡರ ಜೊತೆ ಮಾತನಾಡಿದ ಬಳಿಕ ಬಿಜೆಪಿ ಹಾಗೂ ಕೈ ನಾಯರ ಕರೆಯನ್ನು ಜೆಡಿಎಸ್ ಶಾಸಕರು ಸ್ವೀಕರಿಸುತ್ತಿಲ್ಲ ಎಂಬ ಮಾತುಗಳು ರಾಜಕೀಯ ಅಂಗಳದಲ್ಲಿ ಕೇಳಿ ಬರುತ್ತಿವೆ.

ಕಾಂಗ್ರೆಸ್, ಬಿಜೆಪಿಗೆ ಕೈ ಕೊಡ್ತಾರಾ ಇವರು?

ಪಕ್ಷ ಬಿಡುವ ಸಮಯದಲ್ಲಿ ಕೆಟ್ಟ ಹೆಸರು ಬರೋದು ಬೇಡ. ಕುದುರೆ ವ್ಯಾಪಾರ ಆದೆವೆಂಬ ಅಪವಾದ ನಮ್ಮ ಮೇಲೆ ಬಂದ್ರೆ ಮುಂದಿನ ರಾಜಕೀಯ ಜೀವನದಲ್ಲಿ ಪರಿಣಾಮ ಬೀರಬಹುದು. ಇಳಿ ವಯಸ್ಸಿನ  ದೇವೇಗೌಡರು ಕಾಲ್ ಮಾಡಿ ಮನವಿ ಮಾಡಿಕೊಳ್ಳುತ್ತಿದ್ದಾರೆ. ದೇವೇಗೌಡರಿಗೆ ನೋವು ಉಂಟು ಮಾಡೋಕೆ ಮನಸು ಬರ್ತಿಲ್ಲ ಎಂದು ಜೆಡಿಎಸ್ ಮನೆಯಿಂದ ಒಂದು ಹೆಜ್ಜೆ ಹೊರಗಿರಿಸಿರುವ ಶಾಸಕರು ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತಿದ್ದರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Chaddi War: ಚಡ್ಡಿಗಳು ಚಡ್ಡಿ ಕೆಲಸ ಮಾಡದೇ ಮತ್ತೇನು ಮಾಡ್ತಾರೆ? ಸಿದ್ದರಾಮಯ್ಯ ಪ್ರಶ್ನೆ

ಇತ್ತ ಜೆಡಿಎಸ್ ಶಾಸಕರು ಅಂತರ ಕಾಯ್ದುಕೊಳ್ಳುತ್ತಿರೋದು ಬಿಜೆಪಿ ಮತ್ತು ಕಾಂಗ್ರೆಸ್ ಗೆ ತಲೆ ನೋವಾಗಿದೆ. ಈಗ ಮತ್ತೊಮ್ಮೆ ಜೆಡಿಎಸ್ ಶಾಸಕರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದಾರೆ.
Published by:Mahmadrafik K
First published: