• Home
  • »
  • News
  • »
  • state
  • »
  • Exclusive: ರಾಜ್ಯಸಭಾ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿ ಗೆಲುವು ಕಂಡಿದ್ದು ಹೇಗೆ? ನ್ಯೂಸ್ 18 ಜೊತೆ ಸಿ ಟಿ ರವಿ ಮಾತು

Exclusive: ರಾಜ್ಯಸಭಾ ಚುನಾವಣೆಯಲ್ಲಿ ಮೂರನೇ ಅಭ್ಯರ್ಥಿ ಗೆಲುವು ಕಂಡಿದ್ದು ಹೇಗೆ? ನ್ಯೂಸ್ 18 ಜೊತೆ ಸಿ ಟಿ ರವಿ ಮಾತು

ಸಿ ಟಿ ರವಿ

ಸಿ ಟಿ ರವಿ

ರಾಜ್ಯಸಭಾ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರು, ಒಬ್ಬರು ಜೆಡಿಎಸ್ ಮತ್ತು ಇಬ್ಬರು ಪಕ್ಷೇತರರು ಬಿಜೆಪಿ ಪರವಾಗಿ ಮತ ಚಲಾಯಿಸಿದರು. ಆದ್ದರಿಂದ ನಮ್ಮ ಮೂರನೇ ಅಭ್ಯರ್ಥಿ ಗೆಲುವಯ ಸರಳವಾಯ್ತು ಎಂದು ಸಿ.ಟಿ.ರವಿ ಅವರೇ ಹೇಳುತ್ತಾರೆ.

  • Share this:

ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆ (Rajyasabha Poll) ಈ ಬಾರಿ ಕುತೂಹಲ ಕೆರಳಿಸಿತ್ತು. ಮಹಾರಾಷ್ಟ್ರ (Maharashtra) ಮತ್ತು ಕರ್ನಾಟಕದಲ್ಲಿ (Karnataka) ಬಿಜೆಪಿ ರಾಜಕೀಯ ತಂತ್ರಗಾರಿಗೆ (BJP Political Strategy) ಸಕ್ಸಸ್ ಕಂಡಿದೆ. ಕರ್ನಾಟಕದಲ್ಲಿ ನಾಲ್ಕು ಸ್ಥಾನಗಳ ಪೈಕಿ ಮೂರರಲ್ಲಿ ಗೆದ್ದು ಬೀಗಿದೆ. ಕೇವಲ  ಎರಡು ಸ್ಥಾನಗಳಿಗೆ ಮಾತ್ರ ಬಹುಮತ ಹೊಂದಿದ್ದರೂ ಬಿಜೆಪಿಯ ಮೂರನೇ ಅಭ್ಯರ್ಥಿ (BJP Third Candidate) ಗೆಲುವು ಕಂಡರು. ಸಿಎಂ ಬಸವರಾಜ್ ಬೊಮ್ಮಾಯಿ (CM Basavaraj Bommai), ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel) ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಟೀಂ ರಣತಂತ್ರ ಗೆಲುವನ್ನು ತನ್ನದಾಗಿಸಿಕೊಂಡಿದೆ. ನ್ಯೂಸ್ 18 ಜೊತೆ ಮಾತನಾಡಿರುವ ಸಿ.ಟಿ.ರವಿ (CT Ravi) ಹಲವು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಬಿಜೆಪಿ ಗೆಲುವಿಗೆ ವಿಪಕ್ಷಗಳ ನಡುವಿನ ಕಲಹವೇ ಕಾರಣ, ಅವರೇ ನಮ್ಮ ಗೆಲುವಿಗೆ ಕಾರಣ ಎಂದು ಹೇಳಿದರು. ರಾಜ್ಯಸಭಾ ಚುನಾವಣೆಗಾಗಿ ಬಿಜೆಪಿ ಯಾವುದೇ ಪ್ರಮುಖ ತಂತ್ರಗಳನ್ನು ಮಾಡಿರಲಿಲ್ಲ. ವಿಪಕ್ಷಗಳ ನಡುವಿನ ಕದನವನ್ನು ಲಾಭವಾಗಿದ್ದರಿಂದ ನಮ್ಮ ಮೂರನೇ ಅಭ್ಯರ್ಥಿಯೂ ಸಹ ರಾಜ್ಯಸಭೆ ಪ್ರವೇಶ ಮಾಡಲಿದ್ದಾರೆ ಎಂದರು.


ಕರ್ನಾಟಕದಲ್ಲಿ ವಿಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ ಒಬ್ಬರನ್ನೊಬ್ಬರು ಸೋಲಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದವು. ಇದನ್ನು ಗಮನಿಸಿದ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿತು. ನಮ್ಮ ಗೆಲುವ ನಿಶ್ಚಿತವಾಗಿತ್ತು. ನಮಗೆ ಎಷ್ಟು ಮತಗಳು ಬರಲಿವೆ ಎಂಬುದನ್ನು ತಿಳಿಯಲು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪಕ್ಷ ನಿರ್ಧರಿಸಿತು.


ನಮ್ಮ ತಂತ್ರ ಸಂಪೂರ್ಣ ಫಲಪ್ರದವಾಯ್ತು!


ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ನಟ, ಪಕ್ಷದ ವಕ್ತಾರ ಆಗಿರುವ ಜಗ್ಗೇಶ್ ಗೆಲುವು ನಿಶ್ಚಿತವಾಗಿತ್ತು. ಇಬ್ಬರ ಗೆಲುವಿನ ನಂತರ 32 ಮತಗಳು ಮಾತ್ರ ನಮ್ಮಲ್ಲಿ ಇದ್ದರೂ, ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಅಪಾಯವನ್ನು ಪಕ್ಷ ತೆಗೆದಕೊಂಡಿತು. ಚುನಾವಣೆ ಸಮಯದಲ್ಲಿ ನಮ್ಮ ತಂತ್ರ ಸಂಪೂರ್ಣ ಫಲಪ್ರದವಾಯ್ತು ಎಂದು ಸಿ.ಟಿ.ರವಿ ಸಂತೋಷ ವ್ಯಕ್ತಪಡಿಸುತ್ತಾರೆ.


ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ಇಬ್ಬರೂ ಸ್ಪಷ್ಟ ಬಹುಮತವನ್ನು ಹೊಂದಿದ್ದರು. ಮೂರನೇ ಅಭ್ಯರ್ಥಿ ಲೆಹರ್ ಸಿಂಗ್ ಸಿರೋಯಾ  ಬಳಿ 31 ಮತಗಳಿದ್ದವು. ಕಾಂಗ್ರೆಸ್ ಹತ್ರ ಹೆಚ್ಚುವರಿಯಾಗಿ 25 ಮತ್ತು ಜೆಡಿಎಸ್ ಬಳಿ 32 ಮತಗಳಿದ್ದವು. ಅಡ್ಡ ಮತದಾನಲ ಲೆಹರ್ ಸಿಂಗ್ ಅವರಿಗೆ ವರವಾಗಿ ಬದಲಾಯ್ತು ಎಂದು ಸಿ.ಟಿ.ರವಿ ಹೇಳ್ತಾರೆ.


ಇದನ್ನೂ ಓದಿ:  Basavaraj Horatti: ಪಶ್ಚಿಮ ಶಿಕ್ಷಕರ ಕ್ಷೇತ್ರದಲ್ಲಿ 8ನೇ ಬಾರಿಗೆ ಗೆದ್ದು ದಾಖಲೆ ಬರೆದ ಬಸವರಾಜ ಹೊರಟ್ಟಿ


ಜಾತಿ ಲೆಕ್ಕಾಚಾರ


ನಿರ್ಮಲಾ ಸೀತಾರಾಮನ್ ಅವರಿಗೆ ಒಂದು ಟಿಕೆಟ್ ಫಿಕ್ಸ್ ಆಗಿತ್ತು. ಜಾತಿ ಲೆಕ್ಕಾಚಾರದಲ್ಲಿ ಒಕ್ಕಲಿಗರಾಗಿರುವ ಜಗ್ಗೇಶ್ ಅವರಿಗೆ ಟಿಕೆಟ್ ನೀಡಲಾಯ್ತು. ಇನ್ನೂ ಮೂರನೇ ಅಭ್ಯರ್ಥಿಯ ಆಯ್ಕೆಯಲ್ಲಿ ಲೆಹರ್ ಸಿಂಗ್ ಮತ್ತು ಪ್ರಕಾಶ್ ಶೆಟ್ಟರ್ ಹೆಸರು ಸ್ಪರ್ಧೆಯಲ್ಲಿತ್ತು. ಕೊನೆ ಕ್ಷಣದಲ್ಲಿ ಪ್ರಕಾಶ್ ಶೆಟ್ಟರ್ ಹಿಂದೆ ಸರಿದ ಪರಿಣಾಮ ಲೆಹರ್ ಸಿಂಗ್ ಮೂರನೇ ಅಭ್ಯರ್ಥಿಯಾದರು.


ಡಾರ್ಕ್ ಹಾರ್ಸ್​ ಲೆಹರ್ ಸಿಂಗ್ ಯಾರು?


ಜೈನ ಸಮುದಾಯಕ್ಕೆ ಸೇರಿರುವ 74 ವರ್ಷದ ಲೆಹರ್ ಸಿಂಗ್ ಕಳೆದ ಮೂರು ದಶಕಗಳಿಂದ ಬಿಜೆಪಿಯಲ್ಲಿ ತಮ್ಮನ್ನು ಗುರುತಿಸಿಕೊಂಡಿದ್ದಾರೆ. 2010ರಲ್ಲಿ ಮೊದಲ ಬಾರಿಗೆ ಎಂಎಲ್ ಸಿ ಆಗಿ ವಿಧಾನ ಪರಿಷತ್ ಪ್ರವೇಶಿಸಿದ್ದರು. ಮಾಜಿ ಸಿಎಂ ಯಡಿಯೂರಪ್ಪ ಆಪ್ತ ವಲಯದಲ್ಲಿ ಲೆಹರ್ ಸಿಂಗ್ ಗುರುತಿಸಿಕೊಂಡಿದ್ದರು.


ಲೆಹರ್ ಸಿಂಗ್ ಅವರು ಕರ್ನಾಟಕ ವಿಧಾನ ಪರಿಷತ್ತಿನಲ್ಲಿ ಎರಡು ಅವಧಿಗೆ ಸೇವೆ ಸಲ್ಲಿಸಿದ್ದಾರೆ. ಪಕ್ಷ ಸಂಘಟನೆ ಮತ್ತು ಆಂತರಿಕ ಕೆಲಸಗಳಿಂದಾಗಿ ಕೇಂದ್ರ ನಾಯಕರ ಜೊತೆ ಉತ್ತಮ ಬಾಂದವ್ಯ ಸಹ ಹೊಂಡಿದ್ದಾರೆ. ಇನ್ನು ಲೆಹರ್ ಸಿಂಗ್ ರಾಜ್ಯ ಮತ್ತು ಕೇಂದ್ರ ನಾಯಕರು ನಡುವಿಮ ಹಿಂದಿ ಸಂವಾದಕರಾಗಿದ್ದರು. ರಾಜ್ಯಸಭಾ ಚುನಾವಣೆಯ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಲೆಹರ್ ಸಿಂಗ್ ಸಿರೋಯಾ ಅವರ ಹೆಸರನ್ನು ಯಡಿಯೂರಪ್ಪ ಅವರೇ ಪ್ರಸ್ತಾಪಿಸಿದ್ದರು ಎಂದು ಬಿಜೆಪಿ ನಾಯಕರೊಬ್ಬರು ಖಚಿತಪಡಿಸಿದ್ದಾರೆ.


ಪ್ರತಿಪಕ್ಷಗಳ ಹೋರಾಟ, ಬಿಜೆಪಿಗೆ ಜಯ


ಕರ್ನಾಟಕದಲ್ಲಿಯ ಪ್ರತಿಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಭಿನ್ನಾಭಿಪ್ರಾಯ ಹೊಂದಿವೆ. ಎರಡೂ ಪಕ್ಷಗಳು ಪರಸ್ಪರರನ್ನು ಸೋಲಿಸಲು ಪ್ರಯತ್ನಿಸುತ್ತಿವೆ. ಜೈರಾಮ್ ರಮೇಶ್ ಮತ್ತು ಮನ್ಸೂರ್ ಖಾನ್ ಅವರನ್ನು ಕಾಂಗ್ರೆಸ್ ಕಣಕ್ಕಿಳಿಸಿತ್ತು. ಇತ್ತ ಜೆಡಿಎಸ್ ನಿಂದ ಕುಪೇಂದ್ರ ರೆಡ್ಡಿ ಸ್ಪರ್ಧೆ ಮಾಡಿದ್ದರು. ಕುಪೇಂದ್ರ ರೆಡ್ಡಿ ಕಾಂಗ್ರೆಸ್ ಬೆಂಬಲ ಕೇಳಿದ್ದರು. ಆದ್ರೆ ಸಿಕ್ಕಿರಲಿಲ್ಲ.


ರಾಜ್ಯಸಭಾ ಚುನಾವಣೆಯಲ್ಲಿ ಇಬ್ಬರು ಕಾಂಗ್ರೆಸ್ ನಾಯಕರು, ಒಬ್ಬರು ಜೆಡಿಎಸ್ ಮತ್ತು ಇಬ್ಬರು ಪಕ್ಷೇತರರು ಬಿಜೆಪಿ ಪರವಾಗಿ ಮತ ಚಲಾಯಿಸಿದರು. ಆದ್ದರಿಂದ ನಮ್ಮ ಮೂರನೇ ಅಭ್ಯರ್ಥಿ ಗೆಲುವಯ ಸರಳವಾಯ್ತು ಎಂದು ಸಿ.ಟಿ.ರವಿ ಅವರೇ ಹೇಳುತ್ತಾರೆ.


ಇದನ್ನೂ ಓದಿ:  Kannada: ಕನ್ನಡ, ಕರ್ನಾಟಕ ಎರಡೂ ಕಟುಕರ ಕೈಯಲ್ಲೇ ಸಿಕ್ಕಿಬಿದ್ದಿವೆ; ಶಿಕ್ಷಣ ಇಲಾಖೆಯ ಆದೇಶಕ್ಕೆ HDK ಕೆಂಡಾಮಂಡಲ


ಮಹಾರಾಷ್ಟ್ರದಲ್ಲಿ ಅತೃಪ್ತ ಶಾಸಕರು


ಮಹಾರಾಷ್ಟ್ರದಲ್ಲಿ ಶಿವಸೇನೆ, ಎನ್‌ಸಿಪಿ ಮತ್ತು ಕಾಂಗ್ರೆಸ್‌ ಅವರ ನಡುವಿನ ಮೈತ್ರಿ ಅಸ್ವಾಭಾವಿಕವಾಗಿದ್ದು, ಕೇವಲ  ರಾಜಕೀಯ ಲಾಭಕ್ಕಾಗಿ ಒಂದಾಗಿ ಆಡಳಿತ ನಡೆಸುತ್ತಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಹಲವು ಅಸಮಧಾನಿತರಿದ್ದು, ಮೈತ್ರಿ ಪತನಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಮೈತ್ರಿ ಪಕ್ಷಗಳಲ್ಲಿ ಸಾಕಷ್ಟು ಅತೃಪ್ತರು ನಮ್ಮ ಸಂಪರ್ಕದಲ್ಲಿದ್ದಾರೆ. ಆ ಅವಕಾಶವನ್ನು ಲಾಭವಾಗಿ ನಾವು ಬಳಸಿಕೊಳ್ಳಲಿದ್ದೇವೆ ಎಂದು ಸ್ಫೋಟಕ ವಿಚಾರವನ್ನು ರಿವೀಲ್ ಮಾಡಿದರು.

Published by:Mahmadrafik K
First published: