ಬೆಂಗಳೂರು: ಮುರುಘಾ ಮಠಾಧೀಶ (Murugha Math) ಡಾ. ಶಿಮಮೂರ್ತಿ ಶರಣರ (Dr. Shivamurthy Sharanaru) ವಿರುದ್ಧ ಪೋಕ್ಸೋ ಕಾಯ್ದೆಯಡಿ (POCSO Act) ಪ್ರಕರಣ (Case) ದಾಖಲಾಗಿದೆ. ಆದರೆ ಈ ಕೇಸ್ ಅನ್ನು ಚಿತ್ರದುರ್ಗದಿಂದ (Chitradurga) ಬೇರೆ ಕಡೆಯ ಪೊಲೀಸ್ ಠಾಣೆಗೆ (Police Station) ವರ್ಗಾಯಿಸಬೇಕು ಅಂತ ಬಿಜೆಪಿ ನಾಯಕ (BJP Leader), ರಾಜ್ಯಸಭಾ ಸದಸ್ಯ (Rajyasabha Member) ಲೆಹರ್ ಸಿಂಗ್ (Leher Singh) ಒತ್ತಾಯಿಸಿದ್ದಾರೆ. ಈ ಬಗ್ಗೆ ಪತ್ರ (Letter) ಬರೆದಿರುವ ಅವರು, ಈ ಪ್ರಕರಣದಲ್ಲಿ ನಿಪ್ಷಕ್ಷಪಾತ ತನಿಖೆ (Enquiry) ಆಗಬೇಕು. ಹೀಗಾಗಿ ಪ್ರಕರಣವನ್ನು ಬೇರೆ ಪೊಲೀಸ್ ಠಾಣೆಗೆ ವರ್ಗಾಯಿಸಬೇಕು, ಈ ಸಂಪೂರ್ಣ ಪ್ರಕರಣದಲ್ಲಿ ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ದೊರಕಿಸಿ ಕೊಡಬೇಕು ಅಂತ ಅವರು ಆಗ್ರಹಿಸಿದ್ದಾರೆ.
“ಬೇರೆ ಕಡೆಗೆ ಪ್ರಕರಣ ವರ್ಗಾಯಿಸಿ” ಎಂದ ಲೆಹರ್ ಸಿಂಗ್
ಲೆಹರ್ ಸಿಂಗ್ ಅವರು ಚಿತ್ರದುರ್ಗದ ಅತ್ಯಂತ ಪ್ರಭಾವಿ ಮುರುಘಾ ಮಠದ ಮಠಾಧೀಶರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಎಫ್‌ಐಆರ್ ದಾಖಲಾಗಿದೆ. ಅಪ್ರಾಪ್ತ ಬಾಲಕಿಯರು ಲೈಂಗಿಕ ಕಿರುಕುಳದ ಗಂಭೀರ ಆರೋಪ ಮಾಡಿದ್ದು, ಇದು ಅತ್ಯಂತ ಆಘಾತಕಾರಿ ಮತ್ತು ದುಃಖದ ಬೆಳವಣಿಗೆಯಾಗಿದೆ ಎಂದಿದ್ದಾರೆ. ಪ್ರಕರಣ ಬೇರೆ ಠಾಣೆಗೆ ವರ್ಗಾಯಿಸುವಂತೆ ಅವರು ಆಗ್ರಹಿಸಿದ್ದಾರೆ.
“ನೊಂದ ಹೆಣ್ಣು ಮಕ್ಕಳಿಗೆ ನ್ಯಾಯ ಕೊಡಿಸಿ”
“ಕರ್ನಾಟಕ ಸರ್ಕಾರ ಮತ್ತು ಎಲ್ಲಾ ರಾಜಕೀಯ ಪಕ್ಷಗಳು ಈ ಪ್ರಕರಣದಲ್ಲಿ ಯಾವುದೇ ಒತ್ತಡಗಳು ಮತ್ತು ರಾಜಕೀಯ ಹಸ್ತಕ್ಷೇಪಗಳಿಲ್ಲ ಎಂಬುವುದನ್ನು ಖಚಿತಪಡಿಸಿಕೊಳ್ಳಬೇಕು. ಹೆಣ್ಣುಮಕ್ಕಳು ನ್ಯಾಯಕ್ಕೆ ಅರ್ಹರಾಗಿದ್ದಾರೆ. ಈ ಪ್ರಕರಣ ಕರ್ನಾಟಕದ ಹೊರಗೆ ವರ್ಗಾಯಿಸಿದರೆ ನ್ಯಾಯ ಸಿಗುತ್ತದೆ ಎಂದಿದ್ದರೆ ಅದನ್ನು ಕೂಡಾ ಪರಿಗಣಿಸಬೇಕು” ಎಂದು ಲೆಹರ್ ಸಿಂಗ್ ಅವರು ಹೇಳಿದ್ದಾರೆ.
Rajya sabha MP from Karnataka & senior @BJP4India leader Lahar Singh Siroya demands justice for minor girls in the Murugha Matha POCSO case. "The girls deserve nothing but justice," he says.
Comes a day after @BSYBJP backed the seer accused of sexual abuse & said case was "false" pic.twitter.com/K9ffj5QdIq
— Anusha Ravi Sood (@anusharavi10) August 29, 2022
ರಾಜ್ಯಪಾಲರಿಗೆ ಮಾನವ ಹಕ್ಕುಗಳ ಹೋರಾಟಗಾರರಿಂದ ದೂರು
ಮತ್ತೊಂದೆಡೆ ಮುರುಘಾ ಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಹೋರಾಟಗಾರ ರಾಘವೇಂದ್ರ ಎಂಬುವರು ರಾಜ್ಯಪಾಲರಿಗೆ ಮರುಘಾ ಶ್ರೀಗಳ ವಿರುದ್ಧ ದೂರು ನೀಡಿದ್ಧಾರೆ. ರಾಘವೇಂದ್ರ ಅವರು ಇಂದು ರಾಜ್ಯಪಾಲರಿಗೆ ದೂರು ಸಲ್ಲಿಸಿದ್ದು, ತಮ್ಮ ದೂರಿನಲ್ಲಿ ಮುರುಘಾ ಶ್ರೀಗಳ ವಿರುದ್ಧದ ಪ್ರಕರಣವನ್ನು ಕೇಂದ್ರ ತನಿಖಾ ಸಂಸ್ಥೆಗೆ ವರ್ಗಾಯಿಸುವಂತೆ ಮನವಿ ಮಾಡಿದ್ಧಾರೆ.
ಗೃಹಸಚಿವರ ವಿರುದ್ಧವೂ ಆಕ್ರೋಶ
ಇನ್ನು ಗೃಹ ಸಚಿವ ಆರಗ ಜ್ಞಾನೇಂದ್ರ ವಿರುದ್ಧ ಕಿಡಿಕಾರಿರುವ ರಾಘವೇಂದ್ರ ಅವರು, ಮುರುಘಾ ಮಠದ ಶ್ರೀಗಳ ಪರವಾಗಿ ಗೃಹ ಮಂತ್ರಿಗಳೇ ಮಾತಾಡಿದ್ದಾರೆ. ಅವರ ಬಂಧನ ಮಾಡೋದಕ್ಕೆ ನಿಷ್ಕಾಳಜಿ ವಹಿಸುತ್ತಿದ್ದಾರೆ. ವೈ ಕೆಟಗರಿಯ ನಾಲ್ಕು ಜನ ಅವರಿಗೆ ಭದ್ರತೆಯನ್ನೂ ನೀಡಿದ್ದಾರೆ. ಒಬ್ಬ ವಿಐಪಿಯನ್ಬ ಅರೆಷ್ಟ್ ಮಾಡೋಕೆ ಆಗಿಲ್ಲ. ಪೋಕ್ಸೋ ಪ್ರಕರಣದಲ್ಲಿ A 1 ಆರೋಪಿಯಾಗಿ ಮುರುಘಾ ಶ್ರೀ ಇದ್ದಾರೆ. ಜಾತಿ ಬಣ್ಣ ಹಚ್ಚಿ ಅವರನ್ನ ಟ್ರೀಟ್ ಮಾಡಬಾರದು. ಅಮಾಯಕ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಆರೋಪ ಕೇಳಿ ಬಂದಿದೆ. ಹೀಗಾಗಿ ಮುಖ್ಯವಾಗಿ ಕೇಂದ್ರ ತನಿಖಾ ಸಂಸ್ಥೆಗೆ ಈ ಪ್ರಕರಣ ನೀಡಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಇದನ್ನೂ ಓದಿ: Murugha Shri: ಮುರುಘಾ ಶ್ರೀಗಳ ಲೈಂಗಿಕ ಕಿರುಕುಳದ ಬಗ್ಗೆ 6 ತಿಂಗಳ ಹಿಂದೆಯೇ ಗೊತ್ತಿದ್ರೆ HDK ದೂರು ದಾಖಲಿಸಲಿಲ್ಲ ಏಕೆ?
“ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ಮಾಡಿಸುವಂತೆ ಮನವಿ”
ಇದೇ ವೇಳೆ ರಾಜ್ಯ ಸರ್ಕಾರ ತನಿಖೆ ಮೇಲೆ ಪ್ರಭಾವ ಬೀರದಂತೆ ಸೂಚಿಸಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ನೇತೃತ್ವದಲ್ಲಿ ತನಿಖೆ ಮಾಡಿಸಿ ಅಂತ ರಾಘವೇಂದ್ರ ಮನವಿ ಮಾಡಿದ್ದಾರೆ. ಮುರುಘಾ ಸ್ವಾಮೀಜಿ ಪ್ರಭಾವ ಹೊಂದಿರುವ ವ್ಯಕ್ತಿ ಹೀಗಾಗಿ ನಿಷ್ಪಕ್ಷಪಾತವಾಗಿ ತನಿಖೆಯಾಗಬೇಕಿದೆ ಎಂದು ರಾಜ್ಯಪಾಲರಿಗೆ ನೀಡಿದ ದೂರಿನಲ್ಲಿ ಮನವಿ ಮಾಡಿದ್ಧಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ