ರಾಜ್ಯಸಭೆ ಟಿಕೆಟ್ ಪೈಪೋಟಿ; ಪ್ರಭಾಕರ್ ಕೋರೆ ಪರ ಬ್ಯಾಟ್ ಬೀಸಿದ ಡಿಸಿಎಂ ಲಕ್ಷ್ಮಣ ಸವದಿ

Rajyasabha Election 2020: ಹಾಲಿ ರಾಜ್ಯಸಭೆಯ ಸದಸ್ಯ ಪ್ರಭಾಕರ್ ಕೋರೆ ಪರ ಬ್ಯಾಟಿಂಗ್ ಶುರು ಮಾಡಿರುವ ಡಿಸಿಎಂ ಲಕ್ಷ್ಮಣ ಸವದಿ ಕೋರೆಯವರಿಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.

ಡಿಸಿಎಂ ಲಕ್ಷ್ಣಣ ಸವದಿ

ಡಿಸಿಎಂ ಲಕ್ಷ್ಣಣ ಸವದಿ

  • Share this:
ಚಿಕ್ಕೋಡಿ (ಜೂ. 1): ರಾಜಕೀಯ ಮೇಲಾಟಗಳಿಗೆ ಹೆಸರುವಾಸಿಯಾದ ಬೆಳಗಾವಿ ಜಿಲ್ಲೆಯಲ್ಲಿ ಈಗ ಮತ್ತೊಮ್ಮೆ ರಾಜಕೀಯ ಮೇಲಾಟದ ಆಟ ಶುರುವಾಗಿದೆ. ಈ ಹಿಂದೆ ಪಿ.ಎಲ್.ಡಿ ಬ್ಯಾಂಕ್ ವಿಚಾರದಲ್ಲಿ ಶುರುವಾದ ಗಲಾಟೆ ಒಂದು ಸರ್ಕಾರವೇ ಪತನವಾಗುವ ಮೂಲಕ ಅಂತ್ಯ ಕಂಡಿತು. ಈಗ ಮತ್ತೊಮ್ಮೆ ರಾಜ್ಯಸಭೆ ಸ್ಥಾನಕ್ಕಾಗಿ ರಾಜಕೀಯ ತಿಕ್ಕಾಟ ಶುರುವಾಗಿದೆ. ಒಂದೆಡೆ ಮಾಜಿ ಸಂಸದ ರಮೇಶ್ ಕತ್ತಿ ಪ್ರಬಲ ಆಕಾಂಕ್ಷಿಯಾಗಿದ್ದರೆ, ಇನ್ನೊಂದೆಡೆ ಹಾಲಿ ಸದಸ್ಯ ಪ್ರಭಾಕರ್ ಕೋರೆ ಮತ್ತೊಮ್ಮೆ ತನಗೆ ಅವಕಾಶ ನೀಡುವಂತೆ ಒತ್ತಡ ಹೇರುತ್ತಿದ್ದಾರೆ.

ಇತ್ತೀಚೆಗೆ ಉಮೇಶ್ ಕತ್ತಿ ತಮ್ಮ ಬೆಂಗಳೂರಿನ ನಿವಾಸದಲ್ಲಿ ಉತ್ತರ ಕರ್ನಾಟಕದ ಶಾಸಕರಿಗೆ ಭೋಜನಕೂಟ ವ್ಯವಸ್ಥೆ ಮಾಡಿ ಸಭೆ ನಡೆಸಿದ ಬೆನ್ನಲ್ಲೇ ರಾಜಕೀಯ ಚರ್ಚೆಗಳು ಜೋರಾಗಿಯೇ ಸದ್ದು ಮಾಡಿದ್ದವು. 8 ಬಾರಿ ಶಾಸಕನಾದ ನನಗೆ ಸಚಿವ ಸ್ಥಾನ ನೀಡಲೇಬೇಕು. ಜೊತೆಗೆ, ಲೋಕಸಭಾ ಚುನಾವಣೆಯಲ್ಲಿ ಸಹೋದರ ರಮೇಶ್ ಕತ್ತಿಗೆ ಟಿಕೆಟ್ ತಪ್ಪಿಸಿ ಅಣ್ಣಾಸಾಬ ಜೊಲ್ಲೆಗೆ ಟಿಕೆಟ್ ನೀಡಿದಾಗ ರಮೇಶ್ ನನ್ನ ರಾಜ್ಯ ಸಭೆಗೆ ಕಳಿಸುವುದಾಗಿ ಸ್ವತಃ ಮುಖ್ಯಮಂತ್ರಿಗಳೇ ಹೇಳಿದರೂ ಆ ಭರವಸೆ ಈಡೇರಿಸಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಾರೆ.

ಇತ್ತ ರಮೇಶ್ ಕತ್ತಿಯು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದರೂ ನಮ್ಮ ಕುಟುಂಬಕ್ಕೆ ಪದೇಪದೆ ಅನ್ಯಾಯವಾಗುತ್ತಿದೆ. ನನಗೆ ಟಿಕೆಟ್ ತಪ್ಪಿಸಿದಾಗಲೂ ಕಾರಣ ಹೇಳಲಿಲ್ಲ. ಸೋತವರಿಗೆ ಮಂತ್ರಿ ಮಾಡಿ 8 ಬಾರಿ ಆಯ್ಕೆಯಾದ ನಮ್ಮ ಅಣ್ಣನಿಗೆ ಮಂತ್ರಿ ಮಾಡಿಲ್ಲ. ನಮಗೆ ಅನ್ಯಾಯವಾಗಿದೆ, ಸ್ವತಃ ಮುಖ್ಯಮಂತ್ರಿ ರಾಜ್ಯಸಭೆಯ ಟಿಕೆಟ್ ಕೂಡುವ ಭರವಸೆ ಕೊಟ್ಟಿದ್ದಾರೆ. ನನಗೆ ಟಿಕೆಟ್ ಬೇಕೇಬೇಕು ಎಂದು ಅಸಮಾಧಾನ ಹೊರ ಹಾಕಿದರು.

ಇದನ್ನೂ ಓದಿ: ಮಹಾರಾಷ್ಟ್ರದಿಂದ ಕಳ್ಳ ದಾರಿಗಳ ಮೂಲಕ ರಾಜ್ಯಕ್ಕೆ ಹಲವರ ಪ್ರವೇಶ: ಗಡಿಭಾಗದಲ್ಲಿ ಪೊಲೀಸರ ಕಟ್ಟೆಚ್ಚರ

ಇನ್ನು, ಇದೆಲ್ಲದರ ಮಧ್ಯೆ ಕತ್ತಿ ಸಹೋದರರನ್ನು ಕಟ್ಟಿಹಾಕಲು ಡಿಸಿಎಂ ಲಕ್ಷ್ಮಣ ಸವದಿ ಮುಂದಾಗಿದ್ದಾರೆ ಎನ್ನುವ ಚರ್ಚೆ ಜಿಲ್ಲೆಯಲ್ಲಿ ಶುರುವಾಗಿದೆ. ಹಾಲಿ ರಾಜ್ಯಸಭೆಯ ಸದಸ್ಯ ಪ್ರಭಾಕರ್ ಕೋರೆ ಪರ ಬ್ಯಾಟಿಂಗ್ ಶುರು ಮಾಡಿರುವ ಸವದಿ ಕೋರೆಯವರಿಗೆ ಮತ್ತೊಮ್ಮೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ. ಬೆಳಗಾವಿ, ಬಾಗಲಕೋಟೆ, ವಿಜಯಪುರ ಸೇರಿದಂತೆ ಹಲವು ಜಿಲ್ಲೆಗಳ 30ಕ್ಕೂ ಹೆಚ್ವು ಶಾಸಕರು ಪ್ರಭಾಕರ್ ಕೋರೆ ಪರ ಸಹಾನುಭೂತಿ ತೋರಿಸುವಂತೆ ಮುಖ್ಯಮಂತ್ರಿಗಳಿಗೆ ಹೇಳಿದ್ದಾರೆ. ಕೊನೆಯದಾಗಿ ಪಕ್ಷ ಏನೂ ತೀರ್ಮಾನ ಕೈಗೊಳ್ಳುತ್ತದೆ ನೋಡಬೇಕು ಎನ್ನುವ ಮೂಲಕ ರಮೇಶ್ ಕತ್ತಿಗೆ ರಾಜ್ಯಸಭೆ ಟಿಕೆಟ್ ತಪ್ಪಿಸಲು ರಣತಂತ್ರ ಹೂಡಿದ್ದಾರೆ. ಒಟ್ಟಿನಲ್ಲಿ ಕತ್ತಿ ಹಾಗೂ ಲಕ್ಷ್ಮಣ ಸವದಿ ನಡುವೆ ರಾಜ್ಯಸಭೆಯ ಟಿಕೆಟ್ ವಿಚಾರದಲ್ಲಿ ಶೀತಲ ಸಮರ ಆರಂಭವಾಗಿದೆ. ಸವದಿ ನಡೆಯ ಮುಂದೆ ಕತ್ತಿ ಸಹೋದರರ ನಡೆ ಏನು ಅನ್ನೊದು ಕುತೂಹಲ ಮೂಡಿಸಿದೆ.
First published: