ಯುಪಿ ದಲಿತ ಯುವತಿ ಅತ್ಯಾಚಾರ ಪ್ರಕರಣ; ಸಿಎಂ ಆದಿತ್ಯನಾಥ್ ರಾಜೀನಾಮೆಗೆ ಮಲ್ಲಿಕಾರ್ಜುನ ಖರ್ಗೆ ಆಗ್ರಹ

ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ‌ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ, ಅದರ ಬಗ್ಗೆ ನಮ್ಮ‌ಸಿಎಲ್ ಪಿ‌ ಲೀಡರ್ ಹೇಳಿದ್ದಾರೆ. ನಾವು ಯಾರ ಜೊತೆ ಮೈತ್ರಿ ಮಾಡಿಕೊಳ್ಳಲ್ಲ. ಪಕ್ಷದ ಸ್ಟಾಂಡ್ ಕೂಡ ಅದೇ ಆಗಿದೆ ಎಂದು ಹೇಳಿದರು.

ಮಲ್ಲಿಕಾರ್ಜುನ ಖರ್ಗೆ

ಮಲ್ಲಿಕಾರ್ಜುನ ಖರ್ಗೆ

 • Share this:
  ಬೆಂಗಳೂರು(ಅ.01): ಬಾಬ್ರಿ ಮಸೀದಿ ಧ್ವಂಸ ಪ್ರಕರಣದ ಆರೋಪಿಗಳನ್ನು ಖುಲಾಸೆಗೊಳಿಸಿದ್ದು ನಮಗೆಲ್ಲರಿಗೂ ಬೇಸರ ತರಿಸುವ ವಿಚಾರ. ಅನೇಕ ಸಾಕ್ಷಿಗಳನ್ನು ಜನರು ನೋಡಿದ್ದಾರೆ. 1992ರ ಡಿಸೆಂಬರ್ 6ರಂದು ನಡೆದ ಘಟನೆಯನ್ನು ಎಲ್ಲರೂ ನೋಡಿದ್ದಾರೆ. ಯಾರು‌ ಮಸೀದಿ ಮೇಲೆ‌ ಹತ್ತಿದ್ದರು, ಯಾರು‌ ಕೂತಿದ್ದರು ಎಲ್ಲವೂ ಗೊತ್ತಿದೆ. ನಮ್ಮ ದೇಶದ ಪತ್ರಿಕೆ ಸೇರಿದಂತೆ, ವಿಶ್ವದ ಎಲ್ಲಾ ಪತ್ರಿಕೆಗಳಲ್ಲಿ ದೃಶ್ಯ ರೂಪದ ವರದಿಯಾಗಿದೆ.  ವಿಶೇಷ ಸಾಕ್ಷಿ ಇಲ್ಲ ಅಂತ ಸಿಬಿಐ ಕೋರ್ಟ್ ಖುಲಾಸೆ ಮಾಡಿದೆ. ಇದು ನಮ್ಮೆಲ್ಲರಿಗೆ ಬೇಸರ ತರುವ ಸಂಗತಿ. ನ್ಯಾಯಾಂಗ ಕೂಡ ಸಾಕ್ಷಿ ಪರಿಗಣಿಸದೆ ತೀರ್ಪು ನೀಡಿದ್ದು ಸರಿಕಾಣುತ್ತಿಲ್ಲ. ನ್ಯಾಯಾಂಗದ ಮೇಲೆ ವಿಶ್ವಾಸ ಜನರಿಗೆ ಹೋಗುತ್ತದೆ ಕಾರ್ಯಾಂಗ, ನ್ಯಾಯಾಂಗ ಎರಡೂ ಬೇರೆ ಬೇರೆ. ಬಡ ಜನರಿಗೆ ಸಿಗುವ ತೀರ್ಪು, ಶಿಕ್ಷೆ ಮೊಟಕಾಗಿದೆ.  ಇದರಲ್ಲಿ ಪಾರದರ್ಶಕತೆ ಇಲ್ಲ ಎಂದು ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಬೇಸರ ವ್ಯಕ್ತಪಡಿಸಿದರು.

  ಬೆಂಗಳೂರಿನ ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಐ ಕೋರ್ಟ್​​​​ ತೀರ್ಪಿನ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಅಡ್ವಾಣಿಯವರು ರಾಮರಥ ಪ್ರಾರಂಭಿಸಿದರು. ಅಲ್ಲಿಂದಲೇ ನಡೆದಿದೆ.  ಬಿಜೆಪಿಯವರೇ ಇದಕ್ಕೆ ಕುಮ್ಮಕ್ಕು‌ಕೊಟ್ಟಿದ್ದು ಹೋಗಲಿ ಕರಸೇವಕರು ಎಲ್ಲಿಂದ ಬಂದರು? ಇಟ್ಟಿಗೆ, ಕಟ್ಟಡ ನಿರ್ಮಾಣ ವಸ್ತು ಎಲ್ಲಿಂದ ಬಂದವು? ಕರಸೇವಕರು ಅಲ್ಲಿ ಏಕಾಏಕಿ‌ ಹೋಗೋಕೆ ಸಾಧ್ಯವೇ? ಅದಕ್ಕೆ ಯಾರದಾದರೂ ಸಾಥ್ ಬೇಕಲ್ಲವೇ? ಹಾಗಾದರೆ ಬಾಬರಿ ಮಸೀದಿ ಹೊಡೆದಿದ್ದು ಯಾರು? ಬಾಬರಿ ಮಸೀದಿ ಬಳಿ ಕರಸೇವಕರನ್ನ ಕರೆದೊಯ್ದಿದ್ದು ಹೇಗೆ? ಕಲ್ಯಾಣ್ ಸಿಂಗ್ ಆಗ ಸಿಎಂ ಆಗಿದ್ದರು. ಕರಸೇವಕರು ಗಲಾಟೆ ಮಾಡ್ತಾರೆ ಅಂತ ಹೇಳಿದ್ದರು ಒಬ್ಬ ಮುಖ್ಯಮಂತ್ರಿಯೇ ಹೀಗೆ ಹೇಳಿದ್ರೆ ಹೇಗೆ? ಇದಕ್ಕಾಗಿಯೇ ಕರಸೇವಕರು ಅಲ್ಲಿಗೆ ಹೋಗೋಕೆ ಸಾಧ್ಯವಾಯ್ತು. ಸಿಬಿಐ ಕೋರ್ಟ್ ತೀರ್ಪಿನ ಬಗ್ಗೆ ಹೈಕೋರ್ಟ್ ಗೆ ಹೋಗ್ತಾರೆ. ಹಿಂದೆ ಯಾರು ಕೊಟ್ಟಿದ್ದರು ಅವರೇ ಹೈಕೋರ್ಟ್ ಗೆ ಹೋಗ್ತಾರೆ. ತೀರ್ಪಿನ ಬಗ್ಗೆ ಹೈಕೋರ್ಟ್ ನಲ್ಲಿ ಪ್ರಶ್ನಿಸುತ್ತಾರೆ. ಕಣ್ಣೆದುರೇ ಕಂಡ ದೃಶ್ಯಗಳನ್ನ ಸಾಕ್ಷ್ಯಗಳಾಗಿ ಪರಿಗಣಿಸಿಲ್ಲ. ಮುಂದೆ ಕೋರ್ಟ್ ತೀರ್ಪುಗಳು ಹೇಗೆ ಬರುತ್ತವೋ ಗೊತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.

  Coronavirus India Updates: ದೇಶದಲ್ಲಿ ನಿಲ್ಲದ ಕೊರೋನಾ ಉಪಟಳ; 63 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

  ಉಪ ಚುನಾವಣೆ ವಿಚಾರವಾಗಿ, ನಮ್ಮಲ್ಲಿ ಅಭ್ಯರ್ಥಿಗಳ ಕೊರತೆಯಿಲ್ಲ. ಯಾರು ಗೆಲ್ಲಬಹುದು ಎನ್ನುವುದನ್ನು ಅಧ್ಯಕ್ಷರು ನೋಡ್ತಾರೆ. ನಮ್ಮ ಸಂಸದರು ಇದರ ಬಗ್ಗೆ ಗಮನ ಇಟ್ಟಿದ್ದಾರೆ.  ಒಳ್ಳೆ ಸಪ್ರೈಸ್ ಕ್ಯಾಂಡಿಡೇಟ್ ಬರಬಹುದು ಎಂದರು.

  ಇನ್ನು, ಜೆಡಿಎಸ್ ಜೊತೆ ಕಾಂಗ್ರೆಸ್ ಮೈತ್ರಿ ‌ಮಾಡಿಕೊಳ್ಳುವ ವಿಚಾರಕ್ಕೆ ಸಂಬಂಧಿಸಿದಂತೆ, ಅದರ ಬಗ್ಗೆ ನಮ್ಮ‌ಸಿಎಲ್ ಪಿ‌ ಲೀಡರ್ ಹೇಳಿದ್ದಾರೆ. ನಾವು ಯಾರ ಜೊತೆ ಮೈತ್ರಿ ಮಾಡಿಕೊಳ್ಳಲ್ಲ. ಪಕ್ಷದ ಸ್ಟಾಂಡ್ ಕೂಡ ಅದೇ ಆಗಿದೆ ಎಂದು ಹೇಳಿದರು.

  ಉತ್ತರ ಪ್ರದೇಶದಲ್ಲಿ ದಲಿತ ಯುವತಿಯ ಅತ್ಯಾಚಾರ ವಿಷಯಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ತೀವ್ರ ಸಂತಾಪ ವ್ಯಕ್ತಪಡಿಸಿದರು. ಕಾಲೇಜು ‌ಯುವತಿಯನ್ನ ಅತ್ಯಾಚಾರ ಮಾಡಿ ನಾಲಿಗೆ ಕತ್ತರಿಸಿದ್ದಾರೆ. ಮಾತನಾಡಬಾರದು ಅಂತ ಕಟ್ ಮಾಡಿರಬಹುದು. ಪ್ರಧಾನಿ ಮೋದಿ ಬಂದ ನಂತರ ಇಂತಹ ಘಟನೆ ನಡೆಯುತ್ತಿವೆ. ಮೇಲ್ವರ್ಗದವರಾದರೆ ಕ್ರಮವನ್ನೇ ತೆಗೆದುಕೊಳ್ಳಲ್ಲ. ದೆಹಲಿಯಲ್ಲಿ ನಿರ್ಭಯಾ ಕೇಸ್ ನಲ್ಲಿ ಏನಾಯ್ತು? ಎಲ್ಲರೂ ಮೇಣದ ಬತ್ತಿ ಹಚ್ಚಿ ಪ್ರತಿಭಟಿಸಿದರು. ಆಗ ಇದ್ದವರು ಈಗ ಯಾಕೆ ಬಾಯಿ ಬಿಡ್ತಿಲ್ಲ. ಬಿಜೆಪಿ ರಾಜ್ಯಗಳಲ್ಲೇ ಇದು ಹೆಚ್ಚಾಗ್ತಿದೆ. ಆದಿತ್ಯನಾಥ್ ನೈತಿಕ‌ಹೊಣೆ ಹೊತ್ತು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.
  Published by:Latha CG
  First published: