• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Rajya Sabha Election: ಕೊನೇ ಕ್ಷಣದವರೆಗೂ ಕಾಂಗ್ರೆಸ್ ಬೆಂಬಲಿಸುವ ಭರವಸೆ ಇದೆ, ಸಿದ್ದರಾಮಯ್ಯರನ್ನು ಭೇಟಿಯಾಗುವ- ರೇವಣ್ಣ

Rajya Sabha Election: ಕೊನೇ ಕ್ಷಣದವರೆಗೂ ಕಾಂಗ್ರೆಸ್ ಬೆಂಬಲಿಸುವ ಭರವಸೆ ಇದೆ, ಸಿದ್ದರಾಮಯ್ಯರನ್ನು ಭೇಟಿಯಾಗುವ- ರೇವಣ್ಣ

ಹೆಚ್ ಡಿ ರೇವಣ್ಣ

ಹೆಚ್ ಡಿ ರೇವಣ್ಣ

ರಾಜ್ಯಸಭೆ ಚುನಾವಣೆ ಕಾಂಗ್ರೆಸ್ ಬೆಂಬಲಿಸುವ ವಿಶ್ವಾಸವಿದೆ. ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಬಲ ಕೋರುತ್ತೇನೆ. ಪ್ರಶಾಂತ್ ಕೊಲೆ ಪ್ರಕರಣ. ಡಿವೈ‌ಎಸ್‌ಪಿ, ಸಿಪಿಐ ಮೇಲೆ ಎಫ್‌ಐಆರ್ ದಾಖಲಿಸಿ, ಫೋನ್ ವಶಕ್ಕೆ ಪಡೆಯಿರಿ ಎಲ್ಲಾ ವಿಷಯ ಹೊರಗೆ ಬರುತ್ತೆ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಹೇಳಿದ್ದಾರೆ

ಮುಂದೆ ಓದಿ ...
  • Share this:

ಹಾಸನ (ಜೂ 6): ಕೋಮುವಾದಿಗಳನ್ನು ದೂರವಿಡಲು ನಾವೆಲ್ಲ ಒಟ್ಟಾಗಬೇಕು. ನಾನು ಸಿದ್ದರಾಮಯ್ಯ, (Siddaramaiah) ಡಿ.ಕೆ.ಶಿವಕುಮಾರ್ (D.K Shivakumar), ಮಲ್ಲಿಕಾರ್ಜುನ ಖರ್ಗೆ, ಹರಿಪ್ರಸಾದ್ ಕುಮಾರಸ್ವಾಮಿ ಅವರಲ್ಲಿ ಮನವಿ ಮಾಡುತ್ತೇನೆ, ಎಲ್ಲರೂ ಒಟ್ಟಾಗಿ ರಾಜ್ಯಸಭೆ ಚುನಾವಣೆಯಲ್ಲಿ (Rajya Sabha Election) ಜೆಡಿಎಸ್ ಪಕ್ಷದ ಕುಪೇಂದ್ರ ರೆಡ್ಡಿಯವರನ್ನು ಬೆಂಬಲಿಸಿಸುವಂತೆ ಮಾಜಿ ಸಚಿವ ಎಚ್.ಡಿ.ರೇವಣ್ಣ (H.D Revanna) ಮನವಿ ಮಾಡಿದ್ದಾರೆ.


ನನಗೆ ಬೆಂಬಲ ನೀಡೋ ಭರವಸೆ ಇದೆ


ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಾಜಕಾರಣದಲ್ಲಿ ಸಣ್ಣ ಪುಟ್ಟದ್ದು ಇದ್ದೇ ಇರುತ್ತೆ. ಈ ಸಂದರ್ಭದಲ್ಲಿ ಅದೆಲ್ಲವನ್ನೂ ಬಿಟ್ಟಾಕಬೇಕು, ದೇವೇಗೌಡರು ಎಂತಹದ್ದನ್ನೆಲ್ಲಾ ಬಿಟ್ಟಿದ್ದಾರೆ. ಪ್ರಾದೇಶಿಕ ಪಕ್ಷ ಉಳ್ಕಳ್ಳಿ, ನಾವು ಯಾವತ್ತಾದರೂ ಉಪ್ಪಿನಕಾಯಿ ತರ ಉಪಯೋಗಕ್ಕೆ ಬರ್ತಿವಿ. ಎಲ್ಲಾ ಸ್ವಲ್ಪ ಕೂಲ್ ಆಗಲಿ, ನಾನು ಹೋಗಿ ಸಿದ್ಧರಾಮಯ್ಯ ಅವರನ್ನು ಭೇಟಿ ಮಾಡಿ ಬೆಂಬಲ ಕೇಳುತ್ತೇನೆ.


ಸಿದ್ದರಾಮಯ್ಯ ನನ್ನ ನಡುವೆ ಇಲ್ಲಿಯವರೆಗೂ ವಿಶ್ವಾಸ ಚೆನ್ನಾಗಿ ಇದೆ, ಮುಂದೆಯು ಚೆನ್ನಾಗಿರುತ್ತೆ. ನನಗೆ ಕೊನೆಯವರೆಗೂ ಹೋಪ್ ಇದೆ, ಕೋಮುವಾದಿಗಳನ್ನು ದೂರವಿಡಲು ನಮಗೆ ಬೆಂಬಲ ಕೊಡುತ್ತಾರೆ ಅಂದುಕೊಂಡಿದ್ದೇನೆ  ಕೋಮುವಾದಿಗಳೇ ಇರಲಿ ಎಂದರೆ ಇರಲಿ ಎಂದರು.


ದಕ್ಷಿಣ‌ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತೇನೆ ಎಂಬ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಹೇಳಿಕೆಗೆ ತಿರುಗೇಟು ನೀಡಿದ ರೇವಣ್ಣ ಈ ಪಕ್ಷದಲ್ಲಿ ಎಲ್ಲಾ ಊಟ ಮಾಡಿ ಕಾಂಗ್ರೆಸ್‌ಗೆ ಬೆಂಬಲ ಕೊಡುತ್ತೇನೆ ಅನ್ನುತ್ತಿದ್ದಾರೆ. ಮರಿತಬ್ಬೇಗೌಡ ಉಪಸಭಾಪತಿ ಆಗಿದ್ದಾರೆ, ಎರಡು ಸಲ ಎಂಎಲ್‌ಸಿ ಮಾಡಿದ್ದೇವೆ, ಇನ್ನೇನು ಮಾಡ್ಬೇಕು, ಹಾಗೇನಾದ್ರು ಇದ್ದರೆ ಓಪನ್‌ ಆಗಿ ಹೇಳಿ, ಹಿಂದೆ ಯಾಕೆ ಹೇಳ್ತಿರಿ. ಜೆಡಿಎಸ್‌ನಿಂದ ನನಗೆ ಅನ್ಯಾಯವಾಗಿದೆ ಅಂತ ಹೇಳಿ ರಾಜೀನಾಮೆ ಕೊಟ್ಟು‌ ನಂತರ ಓಪನ್‌ ಆಗಿ ಪ್ರಚಾರ ಮಾಡಿ,  ಕಾಂಗ್ರೆಸ್ ಪಕ್ಷ ಸೇರಿ ಮತ್ತೆ ಚುನಾವಣೆಗೆ ಸ್ಪರ್ಧಿಸಿ ಗೆಲ್ಲಲಿ ಎಂದರು. ಮರಿತಿಬ್ಬೇಗೌಡರು ದೊಡ್ಡವರಿದ್ದಾರೆ, ಅನುಭವಿಗಳಿದ್ದಾರೆ, ಇಂತಹ ನಿಲುವಿಗೆ ಹೋಗಬಾರದಿತ್ತು ಎಂಬುದು ನನ್ನ ಭಾವನೆ.‌ ನಿಮಗಾಗಿ ಕುಮಾರಸ್ವಾಮಿ ಏನೇನ್‌ ಮಾಡಿದ್ದಾರೆ ಅಂತ ಗೊತ್ತಿದೆ.‌


ಬಿಜೆಪಿಯವರದ್ದು ಕೀಳುಮಟ್ಟದ ರಾಜಕಾರಣ


ಇದೆಲ್ಲ ಯಾವತ್ತಾದರೂ ಒಂದಿನ ತಿರುಗು ಬಾಣವಾಗುತ್ತೆ, ಇದು ಒಳ್ಳೆಯದಲ್ಲ ಎಂದು ಹೇಳಿದರು. ದಕ್ಷಣ ಪದವಿಧರ ಕ್ಷೇತ್ರದ ಚುನಾವಣೆಯಲ್ಲಿ ಬಿಜೆಪಿಯವರು   ಯಾವ ಮುಖ ಇಟ್ಕಂಡು ಮತ ಕೇಳ್ತಾರೆ, ಶಿಕ್ಷಣ ಕ್ಷೇತ್ರದಲ್ಲಿ ಹಾಸನ ಜಿಲ್ಲೆ ಪ್ರಥಮ ಸ್ಥಾನದಲ್ಲಿದೆ. ನಮ್ಮ ಕಾಲದಲ್ಲಿ ಸಾಕಷ್ಟು  ಕಾಲೇಜುಗಳನ್ನು ತೆರೆದಿದ್ದೇವೆ, ಶಿಕ್ಷರರನ್ನು ನೇಮಿಸಿದ್ದೇವೆ.‌ ಬಿಜೆಪಿಯವರದ್ದು ಕೀಳುಮಟ್ಟದ ರಾಜಕಾರಣ, ನಾಚಿಕೆಯಾಗಬೇಕು ಅವರಿಗೆ, ಅಶ್ವಥ್ ನಾರಾಯಣ್‌ನನ್ನು ಯಾರಾದ್ರಯ ಎಜುಕೇಶನ್ ಮಿನಿಸ್ಟರ್ ಅಂತ ಹೇಳ್ತರಾ, ಇವರು ಖಾಸಗಿಯವರ ಜೊತೆ ಕೈಜೋಡಿಸಿದ್ದಾರೆ.


ನನಗೇನು ಹೆದರಿಕೆಯಿಲ್ಲ


ನನಗೇನು ಹೆದರಿಕೆಯಿಲ್ಲ, ಇವ್ರ ಹತ್ತಿರ ಏನ್ ಹಂಗಿಲ್ಲ, ಇನ್ನೊಂದು ವರ್ಷ ಏನು ಕೆಲಸ ಮಾಡದೇ ಬೇಡ ಎಂದು ಕಿಡಿಕಾರಿದರು. ಯಾವ ಮುಖ ಬಿಟ್ಕಂಡು ಓಟು ಕೇಳ್ತಿರಾ, ನಿಮಗೇನಾದರು ನೈತಿಕತೆ ಇದೆಯಾ, ಸ್ವಾತಂತ್ರ್ಯ ಬಂದು 75 ವರ್ಷ ಕಳೆದರು ಕಾಲೇಜುಗಳಲ್ಲಿ ಉಪನ್ಯಾಸಕರಿಲ್ಲ, ಡೆಸ್ಕ್‌ಗಳಿಲ್ಲ. ನಮ್ಮ ಪಕ್ಷದ ಅಭ್ಯರ್ಥಿ ರಾಮು ಅವರಿಗೆ ಮತ ಕೊಡಬೇಕೆಂದು ಕೇಳುತ್ತೇನೆ. ರಾಜಕೀಯ ದ್ವೇಷದಿಂದ ವೀರಶೈವ ಸಮುದಾಯದ ಒಂದು ಹೆಣ್ಣು ಮಗಳನ್ನು ಹಾಸನದಿಂದ ಗದಗ್‌ಗೆ ವರ್ಗ ಮಾಡಿಸಿದ್ದಾರೆ, ಶಿಕ್ಷಣ ಮಂತ್ರಿಗಳೇ ಅವರು ಬೊಮ್ಮಯಿ ಅವರ ಜಾತಿನೆ ಸ್ವಲ್ಪ ನೋಡ್ಕಳಿ, ನಿಮಗೆ ಕೃತಜ್ಞತೆ ಇದಿಯ. ಆಕೆಯ ಪತಿಯನ್ನು ಬಿಜೆಪಿಗೆ ಸೇರು ಅಂತ ಒತ್ತಾಯ ಮಾಡಿದ್ರು, ಸೇರದಿದ್ದಕ್ಕೆ ವರ್ಗಾವಣೆ ಮಾಡಿದ್ದಾರೆ. ಇಂತಹ ಕೀಳುಮಟ್ಟದ ರಾಜಕೀಯ ಮಾಡುತ್ತಿದ್ದೀರಾ, ಜಿಲ್ಲಾ ಉಸ್ತುವಾರಿ ಸಚಿವರೆ ಹಾಸನ ಜಿಲ್ಲೆಗೆ ಕೊಡುಗೆ ಏನು, ಓಟು ಕೇಳಲು ಯಾವ ನೈತಿಕತೆ ಇದೆ ಹೇಳಿ.


ಇದನ್ನೂ ಓದಿ:  Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ


ಹಾಸನ ನಗರದಲ್ಲಿ ಐವತ್ತು ಎಣ್ಣೆ ಅಂಗಡಿ ತೆಗೆದು ಕುಡ್ಕಂಡು ಇರಿ, ಯಾರು ಬೇಕಾದ್ರು ಕದ್ದು ಮರಳು ಹೊಡಿರಿ ಅನ್ನೋ ರೀತಿ ಮಾಡಿದ್ದೀರಿ‌. ಮೂರು ಇಲಾಖೆಗಳಿಂದ ದಿನಕ್ಕೆ ಒಂದು ಲಕ್ಷ ಮಾಮೂಲಿ ವಸೂಲಿ ಮಾಡ್ತಾರೆ. ಈ ಸಿಸ್ಟಂ‌ ಸರಿ ಮಾಡಲು ಬಿಜೆಪಿ ಸರ್ಕಾರ ಹೋಗಬೇಕು, ಪ್ರಾದೇಶಿಕ ಪಕ್ಷ ಅಧಿಕಾರಕ್ಕೆ ಬರಬೇಕು. ಒಂದು ದಿನಕ್ಕೆ ಅಬಕಾರಿ, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯಿಂದ ಕನಿಷ್ಠ ಐದರಿಂದ ಹತ್ತು ಕೋಟಿ ಸರ್ಕಾರಕ್ಕೆ ಹೋಗುತ್ತಿದೆ.


ಹಾಸನ ಪೊಲೀಸ್ ಠಾಣೆಗಳು ರೌಡಿಗಳ ತಾಣ


ಅಬಕಾರಿ ಡಿಸಿ  ಕೇಸ್‌ಗಳನ್ನು ಮುಚ್ಚುವುದರಲ್ಲಿ ನಂಬರ್ ಒನ್, ಲೈಸನ್ಸ್ ರಿನಿವಲ್ ಮಾಡಲು ಗಂಡನನ್ನು ಕಳೆದುಕೊಂಡಿರುವವರ ಬಳಿ ಮೂವತ್ತು ಲಕ್ಷ ಕಿತ್ತಿದ್ದಾರೆ, ಹೆಸರು ಹೇಳಲು ಹೋಗಲ್ಲ, ಟೈಂ ಬರುತ್ತೆ, ನನ್ನ ಕೈಗೆ ಸಿಗದೆ ಎಲ್ಲಿ ಹೋಗ್ತಾರೆ. ಇದೆಲ್ಲ ಒಳ್ಳೆಯದಲ್ಲ, ದೇವರೇ ಶಿಕ್ಷೆ ಕೊಡುವ ಕಾಲ ಬರುತ್ತೆ ಎಂದು ಆಕ್ರೋಶ ವ್ಯಕ್ತಪಡಿಸಿದರು.


ಪ್ರಶಾಂತ್ ನಾಗರಾಜ್ ಕೇಸ್‌ ಸಿಐಡಿಗೆ ಹಸ್ತಾಂತರ ಕುರಿತು ಪ್ರತಿಕ್ರಿಯಿಸಿದ ರೇವಣ್ಣ, ನಾನು ಗೃಹಸಚಿವ, ಡಿಜಿ (ಎಲ್ ಅಂಡ್ ಓ), ಮೈಸೂರು ಐಜಿಯವರಿಗೆ ಮನವಿ ಮಾಡುತ್ತೇನೆ. ಮೊದಲು ಡಿವೈಎಸ್‌ಪಿ ಉದಯ್‌ ಭಾಸ್ಕರ್, ಸಿಪಿಐ ರೇಣುಕಾಪ್ರಸಾದ್‌ನನ್ನು ಅರೆಸ್ಟ್ ಮಾಡಿ, ಕಸ್ಟಡಿ ತೆಗೆದುಕೊಳ್ಳಲಿ, ಅವರ ಫೋನ್ ಪರಿಶೀಲಿಸಿದರೆ ಎಲ್ಲಾ ವಿಷಯ ಬಯಲಾಗುತ್ತೆ. ಪ್ರಶಾಂತ್ ಪತ್ನಿ ನೀಡಿದ್ದ ಕಂಪ್ಲೆಂಟ್‌ನ್ನು ಉದಯ್ ಭಾಸ್ಕರ್ ಹೇಗೆ ಬದಲಾಯಿಸಿದ. ಅವರ ಮೇಲೆ ಉನ್ನತಮಟ್ಟದ ತನಿಖೆ ನಡೆಸಿ, ಹಾಸನ ಪೊಲೀಸ್ ಠಾಣೆಗಳು ರೌಡಿಗಳ ತಾಣವಾಗಿದೆ.


ಇದನ್ನೂ ಓದಿ:  Chitradurga: ಕಾಂಗ್ರೆಸ್ ನವರೇನು ಸ್ವಾತಂತ್ರ್ಯ ಹೋರಾಟಗಾರರೇ? ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಪ್ರಶ್ನೆ


ದುಡ್ಡಿಗಾಗಿ ಈ ಅಧಿಕಾರಿಗಳು ಯಾರನ್ನು ಬೇಕಾದರೂ ಕೊಲೆ ಮಾಡಿಸುತ್ತಾರೆ. ಜೂಜು, ಮರಳುದಂದೆ, ಮಟ್ಕಾ ಆಡ್ಸದೆ ಇವರ ಕೆಲಸ, ಇದನ್ನು ಜನರೇ ಹೇಳುತ್ತಿದ್ದಾರೆ. ರೌಡಿಗಳನ್ನು ಸಾಕುವುದರಲ್ಲಿ ಉದಯ್‌ಭಾಸ್ಕರ್ ಬೆಸ್ಟ್ ಅಂಥ ಸರ್ಟಿಫಿಕೇಟ್ ಕೊಡಲಿ ಎಂದು ಕಿಡಿಕಾರಿದರು. ಕೊಲೆ ಪ್ರಕರಣವನ್ನು ಸಿಐಡಿಗೆ ಹಸ್ತಾಂತರ ಮಾಡುತ್ತಿದ್ದಾರೆ. ಮೊದಲು ಈ ಅಧಿಕಾರಿಗಳ ಮೇಲೆ ಎಫ್‌ಐಆರ್ ಹಾಕಿ.‌ ಈ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂದು ಸಿಐಡಿಗೆ ಹಸ್ತಾಂತರ ಮಾಡಿದ್ದಾರೆ.


ಧಾರವಾಡದಲ್ಲಿ ಯೋಗೀಶ್ ಹತ್ಯೆ ಪ್ರಕರಣದಲ್ಲಿ ಏನಾಯ್ತು, ರಾಜಕಾರಣಿ, ಪೊಲೀಸರನ್ನು ಬಂಧಿಸಿಲ್ವ. ಸರ್ಕಲ್ ಇನ್ಸ್‌ಪೆಕ್ಟರ್‌ಗಳ ವರ್ಗಾವಣೆ ಫಿಶ್ ಮಾರ್ಕೆಟ್ ಆಗಿದೆ. 40, 50 ಲಕ್ಷ ಕೊಟ್ಟು ಬಂದಿದ್ದೇನೆ ಅಂತಾರೆ ಎಂದರು. ಈಗೀನ ಗೃಹಮಂತ್ರಿಗಳ ಬಗ್ಗೆ ನನಗೆ ಗೌವರವಿದೆ, ಅವರು ಸಣ್ಣತನದ ವ್ಯಕ್ತಿಯಲ್ಲ. ಅವರ ಬಗ್ಗೆ ಕಾಂಗ್ರೆಸ್ ನವರ ತರ ಸಣ್ಣತನದ ಹೇಳಿಕೆಯನ್ನು ನಾನು ಕೊಡಲ್ಲ ಎಂದರು.

Published by:Pavana HS
First published: