ಬೆಂಗಳೂರು: ಇಂದು ನಡೆದ ರಾಜ್ಯಸಭಾ ಚುನಾವಣಾ ಫಲಿತಾಂಶ (Rajya Sabha Election Result) ಘೋಷಣೆಯಾಗಿದೆ. ನಿರೀಕ್ಷೆಯಂತೆಯೇ ಕೇಂದ್ರ ಹಣಕಾಸು ಸಚಿವೆ (Central Finance Minister) ನಿರ್ಮಲಾ ಸೀತಾರಾಮನ್ (Nirmala Sitharaman) ಹಾಗೂ ನಟ ಜಗ್ಗೇಶ್ (Actor Jaggesh) ಬಿಜೆಪಿಯಿಂದ (BJP) ಸ್ಪರ್ಧಿಸಿ, ಗೆದ್ದು (Win) ಬೀಗಿದ್ದಾರೆ. ಕಾಂಗ್ರೆಸ್‌ನಿಂದ (Congress) ಸ್ಪರ್ಧಿಸಿದ್ದ ಮಾಜಿ ಕೇಂದ್ರ ಸಚಿವ (Ex Central minister) ಜೈರಾಮ್ ರಮೇಶ್ (Jairam Ramesh) ಕೂಡ ಗೆಲುವು ಸಾಧಿಸಿದ್ದಾರೆ.
ಮೇಲ್ಮನೆ ಮಹಾಯುದ್ಧದಲ್ಲಿ ಬಿಜೆಪಿ ಜಯಭೇರಿ
ಇಂದು ನಡೆದ ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಮೂವರು ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಬಿಜೆಪಿಯ ನಿರ್ಮಲಾ ಸೀತರಾಮನ್, ಜಗ್ಗೇಶ್, ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ.
ಗೆದ್ದ ಅಭ್ಯರ್ಥಿಗಳಿಗೆ ಬಂದ ಮತಗಳೆಷ್ಟು?
ಮೊದಲ ಪ್ರಾಶಸ್ತ್ಯದಲ್ಲಿ ಬಿಜೆಪಿ ಯ ನಿರ್ಮಲಾ ಸೀತಾರಾಮನ್ ಗೆ 46 ಮತಗಳು ಹಾಗೂ ಜಗ್ಗೇಶ್ ಗೆ 44 ಮತಗಳು ಬಂದಿವೆ. ಇನ್ನು ಲೆಹರ್ ಸಿಂಗ್ ಗೆ 33, ಕುಪೇಂದ್ರ ರೆಡ್ಡಿಗೆ - 30, ಮನ್ಸೂರ್ ಆಲಿ ಖಾನ್ ಗೆ -25 ಮತಗಳು ಬಂದಿವೆ.
ಇದನ್ನೂ ಓದಿ: Explained: ರಾಜ್ಯಸಭಾ ಚುನಾವಣೆ ನಡೆಯುವುದು ಹೇಗೆ? ಇಲ್ಲಿದೆ ಓದಿ ಪಿನ್ ಟು ಪಿನ್ ಮಾಹಿತಿ
ಕಾಂಗ್ರೆಸ್‌ನಿಂದ ಜೈರಾಮ್ ರಮೇಶ್ ಗೆಲುವು
ಇನ್ನು ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಮಾಜಿ ಕೇಂದ್ರ ಸಚಿವ ಜೈರಾಮ್ ರಮೇಶ್ ಕೂಡ ಗೆಲುವು ಸಾಧಿಸಿದ್ದಾರೆ. ಮೊದಲ ಪ್ರಾಶಸ್ತ್ಯದಲ್ಲಿ ಜೈರಾಮ್ ರಮೇಶ್ ಅವರಿಗೆ 46 ಮತಗಳು ಸಿಕ್ಕಿವೆ.
ನಾಲ್ಕನೆ ಸ್ಥಾನದಲ್ಲಿ ಲೆಹರ್ ಸಿಂಗ್ ಜಯಭೇರಿ
ನಿರ್ಮಲಾ ಸೀತಾರಾಮ್, ಜಗ್ಗೇಶ್ ಹಾಗೂ ಜೈರಾಮ್ ರಮೇಶ್ ಗೆಲುವು ಸಾಧಿಸುವುದು ಪಕ್ಕಾ ಆಗಿತ್ತು. ಆದರೆ ನಾಲ್ಕನೇ ಸ್ಥಾನಕ್ಕಾಗಿ ಭಾರೀ ಪೈಪೋಟಿ ಎದುರಾಗಿತ್ತು. ಆದರೆ ಕೊನೆಗೂ ನಾಲ್ಕನೇ ಸ್ಥಾನದಲ್ಲಿ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ಗೆಲುವು ಸಾಧಿಸಿದ್ದಾರೆ.
ಕುಪೇಂದ್ರ ರೆಡ್ಡಿ, ಮನ್ಸೂರ್ ಅಲಿಖಾನ್‌ಗೆ ಸೋಲು
ಇನ್ನು 4ನೇ ಸ್ಥಾನಕ್ಕಾಗಿ ಬಿಜೆಪಿಯ ಲೆಹರ್ ಸಿಂಗ್, ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಹಾಗೂ ಕಾಂಗ್ರೆಸ್‌ನ ಮನ್ಯೂರಲ್ ಖಾನ್ ನಡುವೆ ಭಾರೀ ಪೈಪೋಟಿ ಇತ್ತು. ಆದರೆ ಜೆಡಿಎಸ್ ಹಾಗೂ ಕಾಂಗ್ರೆಸ್‌ಗೆ ಅಗತ್ಯ ಮತಗಳು ಇರಲಿಲ್ಲ. ಹೀಗಾಗಿ ಮೈತ್ರಿ ಮಾತು ಕೇಳಿ ಬರುತ್ತಿತ್ತು. ಆದರೆ ಎರಡೂ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರಿಂದ ಬಿಜೆಪಿಗೆ ಅದೇ ವರವಾಯಿತು. ಕಾಂಗ್ರೆಸ್ ಹಾಗೂ ಜೆಡಿಎಸ್ ಪೈಪೋಟಿಯಲ್ಲಿ ಬಿಜೆಪಿ ಅಭ್ಯರ್ಥಿ ಲೆಹರ್ ಸಿಂಗ್ ನಿರಾಯಾಸವಾಗಿ ಗೆದ್ದಿದ್ದಾರೆ.
ಬಿಜೆಪಿ ಪಾಳೆಯದಲ್ಲಿ ಸಂಭ್ರಮಾಚರಣೆ
ಇನ್ನು ಬಿಜೆಪಿಯಲ್ಲಿ ಮೂವರ ಗೆಲುವಿಗೆ ರಾಜ್ಯ ನಾಯಕರು ಭರ್ಜರಿ ಸಂಭ್ರಮ, ವಿಜಯೋತ್ಸವ ಆಚರಿಸಿದರು. ವಿಧಾನಸೌಧದ ಬಿಜೆಪಿ ಶಾಸಕಾಂಗ ಪಕ್ಷದ ಕೊಠಡಿಯಲ್ಲಿ ಸಂಭ್ರಮಾಚರಣೆ ನಡೆಯಿತು. ರಾಜ್ಯಸಭೆಗೆ ಆಯ್ಕೆಯಾದ ಮೂವರನ್ನು ಸಿಎಂ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸೇರಿದಂತೆ ಹಲವರು ಅಭಿನಂದಿಸಿದ್ರು.
ಜೆಡಿಎಸ್ ಶಾಸಕರಿಂದ ಅಡ್ಡ ಮತದಾನ
ಜೆಡಿಎಸ್‌ನ ಇಬ್ಬರು ಶಾಸಕರು ಈ ಬಾರಿ ಅಡ್ಡ ಮತದಾನ ಮಾಡಿರುವುದು ಸ್ಪಷ್ಟವಾಗುತ್ತಿದೆ. ಗುಬ್ಬಿ ಶಾಸಕ ಶ್ರೀನಿವಾಸ್ ಹಾಗೂ ಕೋಲಾರ ಶಾಸಕ ಶ್ರೀನಿವಾಸ್ ಗೌಡ ಜೆಡಿಎಸ್ ಅಭ್ಯರ್ಥಿ ಬದಲು ಕಾಂಗ್ರೆಸ್ ಅಭ್ಯರ್ಥಿಗೆ ವೋಟ್ ಮಾಡಿದ್ದು ಸ್ಪಷ್ಟವಾದಂತೆ ತೋರುತ್ತಿದೆ. ಇನ್ನು ಮತ ಎಣಿಕೆ ವೇಳೆ ಯಾವುದೇ ಖಾಲಿ ಮತಪತ್ರ ಸಿಗಲಿಲ್ಲ. ಹೀಗಾಗಿ ಜೆಡಿಎಸ್ ಶಾಸಕ ಗುಬ್ಬಿ ಶ್ರೀನಿವಾಸ್ ವೋಟ್ ಮಾಡಿರೋದು ಸ್ಪಷ್ಟವಾಗಿದೆ.
ಇದನ್ನೂ ಓದಿ: Rajyasbha Polls: ಸಿದ್ದರಾಮಯ್ಯ ಕೊಠಡಿಗೆ ಸಿ ಟಿ ರವಿ; JDS ಶ್ರೀನಿವಾಸ್ ಗೌಡರಿಂದ ಅಡ್ಡ ಮತದಾನ
ಕಾಂಗ್ರೆಸ್‌ಗೆ ವೋಟ್ ಹಾಕಿರೋದಾಗಿ ಹೇಳಿದ್ದ ಜೆಡಿಎಸ್ ಶಾಸಕ
ಇನ್ನು ಮತದಾನ ಮುಗಿಯುತ್ತಿದ್ದಂತೆ ಕೋಲಾರದ ಜೆಡಿಎಸ್ ಶಾಸಕ ಶ್ರೀನಿವಾಸ ಗೌಡ ಕಾಂಗ್ರೆಸ್‌ಗೆ ತಾವು ವೋಟ್ ಮಾಡಿದ್ದಾಗಿ ಹೇಳಿದ್ದರು. ಕಾಂಗ್ರೆಸ್ ಅಂದ್ರೆ ನಂಗೆ ಇಷ್ಟ, ಅದಕ್ಕಾಗಿ ವೋಟ್ ಮಾಡಿದ್ದೆ ಅಂತ ಹೇಳಿದ್ದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ