HOME » NEWS » State » RAJYA SABHA ELECTION JDS CANDIDATE HD DEVEGOWDA FILING NOMINATION HK

ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೆಚ್ ಡಿ ದೇವೇಗೌಡ

ರಾಜ್ಯಸಭೆ ವಿಚಾರದಲ್ಲಿ ರಾಜಕೀಯ ಬೇಡ ಜೊತೆಗೆ ದೇವೇಗೌಡರು ಹಿರಿಯರಿದ್ದು, ರಾಜ್ಯ ಸಭೆಗೆ ಪ್ರವೇಶಿಸಲಿ ಎಂಬ ಲೆಕ್ಕಾಚಾರ ಕಮಲ ಪಾಳಯದಾಗಿದೆ.

news18-kannada
Updated:June 9, 2020, 1:30 PM IST
ರಾಜ್ಯಸಭೆ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಹೆಚ್ ಡಿ ದೇವೇಗೌಡ
ನಾಮಪತ್ರ ಸಲ್ಲಿಸಿದ ಹೆಚ್​ ಡಿ ದೇವೇಗೌಡ
  • Share this:
ಬೆಂಗಳೂರು(ಜೂ.09): ರಾಜ್ಯಸಭಾ ಚುನಾವಣೆಗೆ ಜೆಡಿಎಸ್ ಅಭ್ಯರ್ಥಿಯಾಗಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ನಾಮಪತ್ರ ಸಲ್ಲಿಸಿದರು. ರಾಜ್ಯದ ನಾಲ್ಕು ಸ್ಥಾನಗಳಿಗೆ ನಡೆಯುತ್ತಿರುವ ರಾಜ್ಯಸಭೆ ಚುನಾವಣೆಗೆ ಇಂದು ಕಡೆಯ ದಿನವಾಗಿದೆ.

ನಾಮಪತ್ರ ಸಲ್ಲಿಕೆಗೂ ಮುನ್ನ ಹೆಚ್ ಡಿ ದೇವೇಗೌಡರು ಪಕ್ಷದ ಕಛೇರಿ ಜೆಪಿ ಭವನಕ್ಕೆ ಭೇಟಿ ನೀಡಿ ಬಿ. ಪಾರ್ಮ್​​ ಪಡೆದುಕೊಂಡರು. ನಾಮಪತ್ರ ಸಲ್ಲಿಕೆ ವೇಳೆ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ, ಶಾಸಕರಾದ ಹೆಚ್ ಡಿ ರೇವಣ್ಣ, ಬಂಡೆಪ್ಪ ಕಾಂಶಪೂರ, ವೆಂಕಟರಾವ್ ನಾಡಗೌಡ ಸೇರಿ ಜೆಡಿಸ್ ನಾಯಕರು ಭಾಗಿಯಾಗಿದ್ದರು. ದೇವೇಗೌಡರಿಗೆ ಬೆಂಬಲ ವ್ಯಕ್ತಪಡಿಸಿರುವ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಹಾಕಲ್ಲ ಎಂದು ಹೇಳಿದೆ. ಬಿಜೆಪಿ  ಮೂರನೇ ಅಭ್ಯರ್ಥಿಯನ್ನು ಮತ್ತು ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ದೇವೇಗೌಡರ ಆಯ್ಕೆಗೆ ಪರೋಕ್ಷ ಬೆಂಬಲಿಸಿದೆ.

ಇನ್ನು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸದೆ ಅವಿರೋಧ ಆಯ್ಕೆಗೆ ಕೇಸರಿ ಪಡೆ ಸಹಾಯ ಮಾಡುವ ಸಾಧ್ಯತೆ ಇದೆ. ಕಾರಣ ಪ್ರಬಲ ಒಕ್ಕಲಿಗ ಜನಾಂಗದ ನಾಯಕ ರಾಜ್ಯಸಭೆ ವಿಚಾರದಲ್ಲಿ ರಾಜಕೀಯ ಬೇಡ ಜೊತೆಗೆ ದೇವೇಗೌಡರು ಹಿರಿಯರಿದ್ದು, ರಾಜ್ಯ ಸಭೆಗೆ ಪ್ರವೇಶಿಸಲಿ ಎಂಬ ಲೆಕ್ಕಾಚಾರ ಕಮಲ ಪಾಳಯದಾಗಿದೆ.

ಇದನ್ನೂ ಓದಿ : ಒಂದೇ ದಿನದಲ್ಲಿ ಸುಮಾರು 10 ಸಾವಿರ ಮಂದಿಗೆ ಕೊರೋನಾ;‌ ಭಾರತದಲ್ಲಿ ಸೋಂಕಿತರ ಸಂಖ್ಯೆ 2,66,598ಕ್ಕೆ ಏರಿಕೆ

ಮತ್ತೊಂದು ಕಡೆ ಇಂದು ಬಿಜೆಪಿ ಅಭ್ಯರ್ಥಿಯಾಗಿ‌ ಈರಣ್ಣ ಕಡಾಡಿ ಹಾಗೂ ಅಶೋಕ ಗಸ್ತಿ ನಾಮಪತ್ರ ಸಲ್ಲಿಸಲಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಅಶೋಕ್​ ಗಸ್ತಿ, ಈರಣ್ಣ‌ ಕಡಾಡಿ ಹಾಗೂ ಹೆಚ್ ಡಿ‌ ದೇವೇಗೌಡರು‌ ಮಾತ್ರ ನಾಮಪತ್ರ ಸಲ್ಲಿಕೆಯಾದರೇ ಚುನಾವಣೆ ನಡೆಯುವುದು ಅನುಮಾನ. ಹಾಗಾಗಿ ಈ ನಾಲ್ವರು ಅವಿರೋಧವಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
Youtube Video
First published: June 9, 2020, 10:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories