• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • R V Sudharshan: ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಆಯ್ಕೆಗೆ ಕಾಂಗ್ರೆಸ್​ನಲ್ಲೇ ವಿರೋಧ

R V Sudharshan: ರಾಜ್ಯಸಭೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್ ರಮೇಶ್ ಆಯ್ಕೆಗೆ ಕಾಂಗ್ರೆಸ್​ನಲ್ಲೇ ವಿರೋಧ

ಆರ್​ ವಿ​ ಸುದರ್ಶನ್​

ಆರ್​ ವಿ​ ಸುದರ್ಶನ್​

ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಜೈರಾಮ್​ ರಮೇಶ್ ಅಭ್ಯರ್ಥಿ ಆಗ್ತಾರಂತೆ ಅಂತಾ ಕೆಲವರು ನನ್ನ ಕೇಳಿದರು. ರಾಜ್ಯಕ್ಕೆ ಜೈರಾಮ್​ ರಮೇಶ್ ಕೊಡುಗೆ ಏನು? ರಾಜ್ಯಸಭೆಯಲ್ಲಿ ಅವರ ಪರ್ಫಾರ್ಮೆನ್ಸ್ ಕೂಡಾ ನಾವು ಕೇಳಬೇಕಾಗುತ್ತದೆ.

  • Share this:

ಬೆಂಗಳೂರು (ಮೇ 28):  ರಾಜ್ಯಸಭಾ ಚುನಾವಣೆಗೆ (Rajya Sabha Election) ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​​ ರಮೇಶ್ (Jai Ram Ramesh) ಆಯ್ಕೆಗೆ ಕಾಂಗ್ರೆಸ್​ನಲ್ಲಿ ವಿರೋಧ ವ್ಯಕ್ತವಾಗಿದೆ. ಬೆಂಗಳೂರಿನಲ್ಲಿ ಹಿರಿಯ ಕಾಂಗ್ರೆಸ್ ನಾಯಕ ವಿ.ಆರ್. ಸುದರ್ಶನ್ (V. R Sudarshan) ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ರಾಜ್ಯದ ನೆಲ ಜಲ ಮತ್ತು ಸಮಸ್ಯೆಗಳ ಬಗ್ಗೆ ಸಮರ್ಥನಾಗಿ ಪ್ರತಿಪಾದಿಸಬೇಕಾದ ಅಭ್ಯರ್ಥಿ (Candidate) ಆಯ್ಕೆಯಾಗಬೇಕಿದೆ. ಸಮಗ್ರವಾಗಿ ಕರ್ನಾಟಕದ ಅಭಿವೃದ್ಧಿಗೆ ಕೆಲಸ ಮಾಡಬಲ್ಲವರನ್ನು ಆಯ್ಕೆ ಮಾಡಬೇಕು ಎಂದು ನಾನು ಶಾಸಕರಲ್ಲಿ ಆಗ್ರಹ ಮಾಡುತ್ತೇನೆ ಎಂದ್ರು.


ರಾಜ್ಯಕ್ಕೆ ಜೈರಾಮ್​ ರಮೇಶ್ ಕೊಡುಗೆ ಏನು?


ಉದಯಪುರದಲ್ಲಿ ಕಾಂಗ್ರೆಸ್ ಶಿಬಿರದಲ್ಲಿ ಪಕ್ಷ ಸಂಘಟನೆ ಬಲಪಡಿಸುವ ಉದ್ದೇಶ ಇಟ್ಟುಕೊಳ್ಳಲಾಗಿತ್ತು. ಜನರ ನಿರೀಕ್ಷೆಗೆ ತಕ್ಕನಾಗಿ ಪಕ್ಷ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ. ಸೋಮವಾರ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಜೈರಾಮ್​ ರಮೇಶ್ ಅಭ್ಯರ್ಥಿ ಆಗ್ತಾರಂತೆ ಅಂತಾ ಕೆಲವರು ನನ್ನ ಕೇಳಿದರು. ರಾಜ್ಯಕ್ಕೆ ಜೈರಾಮ್​ ರಮೇಶ್ ಕೊಡುಗೆ ಏನು? ರಾಜ್ಯಸಭೆಯಲ್ಲಿ ಅವರ ಪರ್ಫಾರ್ಮೆನ್ಸ್ ಕೂಡಾ ನಾವು ಕೇಳಬೇಕಾಗುತ್ತದೆ.


ರಾಜ್ಯ ನಾಯಕರ ಮಾಹಿತಿ ಆಧಾರದಲ್ಲಿ ತೀರ್ಮಾನ


ಅವರು ಕರ್ನಾಟಕ ಮೂಲದವರು ಇರಬಹುದು, ಆದರೆ ಅಷ್ಟನ್ನಾದರೂ ಗಮನದಲ್ಲಿಟ್ಟುಕೊಂಡು ಅವರು ಕರ್ನಾಟಕದ ಹಿತ ನೋಡಬೇಕಿತ್ತು. ಅವರು ಅನುದಾನವನ್ನು ಎಲ್ಲಿ ಕೊಟ್ಟಿದ್ದಾರೆ ಅಂತ ಕೂಡಾ ಮಾಹಿತಿ ಇಲ್ಲ. ರಾಜ್ಯದ ನೆಲ, ಜಲ, ಜಿಎಸ್ ಟಿ‌‌ ವಿಚಾರದಲ್ಲಿ ಅವರ ಕೊಡುಗೆ ಏನು? ಅಭ್ಯರ್ಥಿ ಆಯ್ಕೆಯಾಗುವಾಗ ನಮ್ಮ ಪಕ್ಷದ ಚುನಾವಣಾ ಸಮಿತಿಯಲ್ಲಿ ಚರ್ಚೆ ಮಾಡಬೇಕಲ್ವಾ? ರಾಜ್ಯದ ಕಾಂಗ್ರೆಸ್ ನಾಯಕರು ಕೊಡುವ ಮಾಹಿತಿ ಆಧಾರದಲ್ಲಿ ಎಐಸಿಸಿ ತೀರ್ಮಾನ ತೆಗೆದುಕೊಳ್ಳುತ್ತದೆ.


ಇದನ್ನೂ ಓದಿ:Basavaraj Bommai: ಸಿದ್ದರಾಮಯ್ಯ ಆರ್ಯರಾ? ದ್ರಾವಿಡರಾ?; ಮೊದಲು ಸೋನಿಯಾ ಮೂಲ ಹುಡುಕಿ ಎಂದ್ರು ಪ್ರತಾಪ್ ಸಿಂಹ


ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನ


ಸೋಮವಾರ ನಾಮಪತ್ರ ಸಲ್ಲಿಕೆಗೆ ಕೊನೆಯ ದಿನವಾಗಿದೆ. ಹಲವು ಜನರು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ‌ ಮಾಡಿದವರು ಇದ್ದಾರೆ. ಕಾಂಗ್ರೆಸ್ ಪಕ್ಷ ಇದನ್ನು ಯೋಚನೆ ಮಾಡಬೇಕು. ಇಷ್ಟಾದರೂ ರಮೇಶ್ ಆಯ್ಕೆ ಮಾಡುತ್ತಾರೆ ಅಂತಾದರೆ ಚಿಂತನ ಶಿಬಿರದ ಅರ್ಥ ಏನು? ನಾವು ಮಾಡಿದ್ದೇ ಸರಿ ಎಂಬ ಧೋರಣೆ ಬಹಳ ಕಾಲ ನಡೆಯಲ್ಲ. ಅಭ್ಯರ್ಥಿ ಆಯ್ಕೆ ಜವಾಬ್ದಾರಿಯನ್ನು ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಸುರ್ಜೇವಾಲಾ ತೆಗೆದುಕೊಳ್ಳಬೇಕು. ಪುನರ್ ಪರಿಶೀಲನೆ ಅವರ ಜವಾಬ್ದಾರಿ ಕೂಡಾ ಆಗಿರುತ್ತೆ.


ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪ್ರಸ್ತಾಪ


ಇಷ್ಟಾದರೂ ರಮೇಶ್ ಆಯ್ಕೆಯಾದರೆ ಜೂನ್ ನಲ್ಲಿ ನಡೆಯುವ ರಾಜ್ಯ ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಇದನ್ನು ಪ್ರಸ್ತಾಪ ಮಾಡಬೇಕಾಗುತ್ತದೆ. ರಾಜ್ಯಸಭಾ ಸದಸ್ಯರಾಗಿ ರಾಜ್ಯದ ಶಾಸಕರ ಜೊತೆ ಸಂಪರ್ಕವೇ ಇಲ್ಲ. ನಾವು ಜನಪರ ಇದ್ದೇವೆ ಅಂತ ಡಿ.ಕೆ. ಶಿವಕುಮಾರ್ ಹೇಳುತ್ತಾರೆ. ಹೀಗಾದರೆ ನಿಮ್ಮ ಜನಪರ ನಿಲುವು ಇದೇನಾ ಅಂತಾ ನಾವು ಪ್ರಶ್ನೆ ಮಾಡಬೇಕಾಗುತ್ತದೆ. ಪಕ್ಷದಲ್ಲಿ ಸಾಕಷ್ಟು ಜನ ಇದೇ ಅಭಿಪ್ರಾಯ ಹೊಂದಿದ್ದಾರೆ. ಮುಂದಿನ ದಿನಗಳಲ್ಲಿ ನಾವು ಸಾರ್ವಜನಿಕ ಮಹತ್ವದ ವಿಷಯಗಳನ್ನು ಮಾತನಾಡುತ್ತಾ ಹೋಗುತ್ತೇವೆ.


ಜೈ ರಾಮ್​ ರಮೇಶ್ ​ ಹೆಸರು ಫೈನಲ್​


ರಾಜ್ಯಸಭಾ ಚುನಾವಣೆಯಲ್ಲಿ ರಾಜ್ಯದ ಕಾಂಗ್ರೆಸ್​ ಅಭ್ಯರ್ಥಿ ಯಾರ್​ ಆಗ್ತಾರೆ ಅನ್ನೋ ಕುತೂಹಲಕ್ಕೆ ತೆರೆಬಿದ್ದಿದೆ. ರಾಜ್ಯಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​ ರಮೇಶ್  ಅವರ ಹೆಸರನ್ನು ಕಾಂಗ್ರೆಸ್​  ಮೇ 30 ರಂದು ಕಾಂಗ್ರೆಸ್ ಅಭ್ಯರ್ಥಿಯಾಗಿ ಜೈರಾಮ್​ ರಮೇಶ್ ನಾಮಪತ್ರ ಸಲ್ಲಿಸಲಿದ್ದಾರೆ.  ನಾಮಪತ್ರ ವಾಪಾಸ್ ಪಡೆಯಲು  ಮೇ 31 ಕೊನೆಯ ದಿನವಾಗಿದೆ.


Ashwath Narayan: ಸಚಿವ ಅಶ್ವತ್ಥ ನಾರಾಯಣ ವಿರುದ್ಧ FIR ದಾಖಲು


2016ರಲ್ಲಿ ಕರ್ನಾಟಕದಿಂದಲೇ  ಆಯ್ಕೆ


ಜೈರಾಮ್ ರಮೇಶ್ 2016ರಲ್ಲಿ ಕರ್ನಾಟಕದಿಂದಲೇ ರಾಜ್ಯಸಭೆಯ ಸದಸ್ಯರಾಗಿ ಆಯ್ಕೆಯಾಗಿದ್ದರು. ಈಗ ಜೈರಾಮ್ ರಮೇಶ್ ಅವರೇ ಮತ್ತೊಮ್ಮೆ ಕರ್ನಾಟಕದಿಂದ ಕಾಂಗ್ರೆಸ್ ಅಭ್ಯರ್ಥಿಯಾಗ್ತಿದ್ದಾರೆ. ಈ ಹಿನ್ನೆಲೆ ಕರ್ನಾಟಕಕ್ಕೆ ಭೇಟಿ ನೀಡಿರುವ ಜೈರಾಮ್ ರಮೇಶ್ ಡಿ.ಕೆ. ಶಿವಕುಮಾರ್ ಸಹಿತ ಹಲವು ನಾಯಕರನ್ನು ಭೇಟಿಯಾಗಿ ಚರ್ಚೆ ನಡೆಸಿದರು.

Published by:Pavana HS
First published: