Rajya Sabha Election: ನಾಮಪತ್ರ ಹಿಂಪಡೆಯೋ ಮಾತೇ ಇಲ್ಲ; ವಿ ವಿಲ್ ನಾಟ್ ವಿಥ್ ಡ್ರಾ ಎಂದ್ರು ಸಿದ್ದರಾಮಯ್ಯ

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಅವರ ನಾಮಪತ್ರ ಹಿಂತೆಗೆತ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.

ಮಾಜಿ ಸಿಎಂ ಸಿದ್ದರಾಮಯ್ಯ

ಮಾಜಿ ಸಿಎಂ ಸಿದ್ದರಾಮಯ್ಯ

  • Share this:
ಬೆಂಗಳೂರು (ಜೂ.3): ರಾಜ್ಯಸಭೆಯ (Rajya Sabha) 4 ಸದಸ್ಯ ಸ್ಥಾನಗಳಿಗೆ ಜೂನ್​ 10 ರಂದು ಮತದಾನ (Election) ನಡೆಯಲಿದೆ. ಈಗಾಗಲೇ ಆಭ್ಯರ್ಥಿಗಳು (Candidates) ನಾಮಪತ್ರ ಸಲ್ಲಿಕೆ ಮಾಡಿದ್ದು, ಇಂದು ನಾಮಪತ್ರ (Nomination) ಹಿಂಪಡೆಯಲು ಕೊನೆಯ ದಿನವಾಗಿದೆ. ಕಾಂಗ್ರೆಸ್​ನಿಂದ 2ನೇ ಅಭ್ಯರ್ಥಿ ನಾಮಪತ್ರ ಹಿಂದಕ್ಕೆ ತೆಗೆಸೋ ಜೆಡಿಎಸ್ (JDS)​ ಪ್ರಯತ್ನ ಯಾಕೋ ಕೈ ಗೂಡಿದಂತೆ ಕಾಣ್ತಿಲ್ಲ. ಈ ಬಗ್ಗೆ ಮಾತಾಡಿದ ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) , ಕಾಂಗ್ರೆಸ್​ 2ನೇ ಅಭ್ಯರ್ಥಿ ನಾಮಪತ್ರವನ್ನು ಹಿಂಪಡೆಯೋದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ನಾವು ಏಕೆ ಎರಡನೇ ಅಭ್ಯರ್ಥಿ ನಾಮಪತ್ರ ವಾಪಸ್ ಪಡೆಯಬೇಕು. ನಾವು ಗೆಲ್ಲುವ ವಿಶ್ವಾಸದಿಂದಲೇ 2ನೇ ಅಭ್ಯರ್ಥಿಯನ್ನ ಕಣಕ್ಕಿಳಿಸಿರುವುದು ಹೀಗಾಗಿ ನಾವು ಯಾವ ಕಾರಣಕ್ಕೂ ನಾಮಪತ್ರ ಹಿಂಪಡೆಯೋದಿಲ್ಲ ಎಂದು ಹೇಳಿದ್ದಾರೆ.

ವಿ ವಿಲ್ ನಾಟ್ ವಿಥ್ ಡ್ರಾ

ಬಿಜೆಪಿ ಹಾಗೂ ಜೆಡಿಎಸ್​ಗೇನು ಪೂರ್ಣಸಂಖ್ಯೆ ಇದೆಯಾ?, ನಾವು ಆತ್ಮ ಸಾಕ್ಷಿಗೆ ಮತಹಾಕಲು ಕೇಳಿದ್ದೇವೆ. ಮಗೆ ಬೇರೆಯವರು ಕೂಡ ಆತ್ಮಸಾಕ್ಷಿಯ ಮತ ಹಾಕ್ತಾರೆ. ಯಾರು ಮತ ಹಾಕ್ತಾರೆ ಅಂತಾ ಹೇಳೋಲ್ಲ. ಎರಡನೇ ಪ್ರಾಶಸ್ತ್ಯದ 72 ಮತಗಳು ನಮಗಿದೆ. ಹೈಕಮಾಂಡ್ ಸೂಚನೆ ಮೇರೆಗೇ ನಾವು ಮನ್ಸೂರ್ ಅಲಿ ಖಾನ್ ಕಣಕ್ಕಿಳಿಸಿದ್ದೇವೆ. ವಿ ವಿಲ್ ನಾಟ್ ವಿಥ್ ಡ್ರಾ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಗಟ್ಟಿಯಾಗಿ ಹೇಳಿದ್ದಾರೆ.

ಕುಪೇಂದ್ರ ರೆಡ್ಡಿಗೆ ಬೆಂಬಲಕ್ಕೆ ಜೆಡಿಎಸ್​ ಮನವಿ

ಯಾವುದೇ ಕಾರಣಕ್ಕೂ ಕಾಂಗ್ರೆಸ್ ಎರಡನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಅವರ ನಾಮಪತ್ರ ಹಿಂತೆಗೆತ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಡಿ ಕುಪೇಂದ್ರ ರೆಡ್ಡಿ ಅವರಿಗೆ ಬೆಂಬಲ ಕೊಡಬೇಕು ಎಂದು ಜೆಡಿಎಸ್ ನಾಯಕರು ಮಾಡಿದ ಮನವಿಯನ್ನು ಕಾಂಗ್ರೆಸ್ ತಿರಸ್ಕರಿಸಿದ್ದು, ತನ್ನ ಅಭ್ಯರ್ಥಿಯನ್ನು ಕಣದಲ್ಲಿ ಉಳಿಸಿಕೊಳ್ಳುವುದಾಗಿ ಹೇಳಿದೆ.

ಇದನ್ನೂ ಓದಿ: Siddaramaiah: ರಾಜ್ಯಾದ್ಯಂತ ‘ಚಡ್ಡಿ ಸುಡುವ ಅಭಿಯಾನ’ ಶುರು ಮಾಡ್ತೇವೆ; ಸಿದ್ದರಾಮಯ್ಯ

ಜೆಡಿಎಸ್ ಅಭ್ಯರ್ಥಿಯನ್ನ ಗೆಲ್ಲಿಸುತ್ತೇವೆ ಎಂದು ಹೇಳಿಲ್ಲ

"ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್ ಆಲಿ ಖಾನ್ ಸ್ಪರ್ಧೆಯಲ್ಲಿ ಇರುತ್ತಾರೆ. ಅವರನ್ನು ಗೆಲುವು ಸಹ ಖಚಿತ. ಕಾಂಗ್ರೆಸ್ ಮತಗಳ ಜೊತೆಗೆ ಇತರೆ ಪಕ್ಷಗಳ ಶಾಸಕರೂ ನಮ್ಮ ಅಭ್ಯರ್ಥಿ ಗೆಲುವಿಗಾಗಿ ಮತ ಹಾಕುತ್ತಾರೆ. ಕಾದು ನೋಡಿ," ಎಂದು ಹೇಳಿದ್ದಾರೆ. ನಾವು ಜೆಡಿಎಸ್ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ. ಅವರೂ ಅವರ ಪಕ್ಷದ ಅಭ್ಯರ್ಥಿಯನ್ನು ಹಾಕಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ನಮ್ಮವರಾರು ಅಡ್ಡ ಮತದಾನ ಮಾಡಲ್ಲ

ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ ಬೆಂಬಲ ಬೇಕು ಎಂದು  ಮಾಜಿ ಸಚಿವ ಹೆಚ್ ಡಿ ರೇವಣ್ಣ ಈ ಹಿಂದೆ ಹೇಳಿದ್ರು. ಇಂದು ಚುನಾಣೆ ಕುರಿತು ಮಾತಾಡಿದ ಅವ್ರು, ನಮ್ಮಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯ ಇದೆ. ಕುಮಾರಸ್ವಾಮಿ, ದೇವೇಗೌಡರು ಮಾತುಕತೆ ಮಾಡ್ತಾರೆ. ಅಡ್ಡ ಮತದಾನ ಮಾಡೋ ಪ್ರಯತ್ನ ಮಾಡಿದ್ರೆ, 2023ರರ ಚುನಾವಣೆಯಲ್ಲಿ ಜನ ಉತ್ತರ ಕೊಡುತ್ತಾರೆ.

ಇದನ್ನೂ ಓದಿ:  Karnataka Textbook Row: ಪಠ್ಯ ಪುಸ್ತಕ ವಿವಾದದ ಬಗ್ಗೆ ಸಿದ್ದಗಂಗಾ ಶ್ರೀಗಳು ಹೇಳಿದ್ದಿಷ್ಟು

ನಮ್ಮವರಾರು ಅಡ್ಡ ಮತದಾನ ಮಾಡೋದಿಲ್ಲ ಎಂದು ರೇವಣ್ಣ ಹೇಳಿದ್ದಾರೆ. ಕಾಂಗ್ರೆಸ್​ ತನ್ನ 2ನೇ ಅಭ್ಯರ್ಥಿ ನಾಮಪತ್ರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯೋದಿಲ್ಲ ಎಂದು ಹೇಳಿದ್ದು, ಜೆಡಿಎಸ್​ ನಾಯಕರಿಗೆ ದೊಡ್ಡ ತಲೆ ನೋವಾಗಿದೆ. ಮಾಜಿ ಪ್ರಧಾನಿ ದೇವೇಗೌಡರು ಸಹ ಸೋನಿಯಾ ಗಾಂಧಿ ಬಳಿ ಮಾತಾಡಿದ್ರು, 2ನೇ ಅಭ್ಯರ್ಥಿ ನಾಮಪತ್ರವನ್ನು ವಾಪಸ್ ಪಡೆದು ಜೆಡಿಎಸ್​ ಅಭ್ಯರ್ಥಿಗೆ ಬೆಂಬಲಿಸುವಂತೆ ಮನವಿ ಮಾಡಿದ್ರು. ಈ ವೇಳೆ ಸೋನಿಯಾ ಗಾಂಧಿ ಸಹ ಪೂರಕವಾಗಿಯೇ ಮಾತಾಡಿದ್ದರು.
Published by:Pavana HS
First published: